sugarcane seedligs

ಕಬ್ಬು ಸಸ್ಯೋತ್ಪಾದನೆ – ಉತ್ತಮ ಆದಾಯದ ವೃತ್ತಿ.

ಕಬ್ಬು ಬೆಳೆಯುವ ಪ್ರದೇಶದಲ್ಲಿ  ಕಣ್ಣು ಸಸಿಯ ನರ್ಸರಿ ಮಾಡುವರೇ ಅವಕಾಶ ಹೇರಳವಾಗಿದ್ದು, ಇದು ಉತ್ತಮ ಆದಾಯವನ್ನೂ ಕೊಡಬಲ್ಲದು. ತಂತ್ರಜ್ಞಾನ ಬಹಳ ಹಿಂದೆಯೇ ಬಂದಿದೆಯಾದರೂ ಇತ್ತೀಚಿನ ದಿನಗಳಲ್ಲಿ ರೈತರು ಇಂತಹ ಸಸಿಗಳನ್ನು ಹೆಚ್ಚು ಹೆಚ್ಚು ಬಳಸಲು ಪ್ರಾರಂಭಿಸಿದ್ದಾರೆ. ಸಸಿ ಮಾಡಿಕೊಡುವವರ ಕೊರತೆಯೂ ಇದೆ. ಆದ ಕಾರಣ ಇದು ಆಸಕ್ತರಿಗೆ ಆದಾಯದ ವೃತ್ತಿಯಾಗಬಹುದು.   ಕಬ್ಬು ನಾಟಿ ಮಾಡುವವರಿಗೆ ತಕ್ಷಣ ಉತ್ತಮ ಗುಣಮಟ್ಟದ ಸಸಿಯೇ ಲಭ್ಯವಾದರೆ ಅವರ ಖರ್ಚು ತುಂಬಾ ಉಳಿತಾಯವಾಗುತ್ತದೆ. ಬಿತ್ತನೆ ಕಡ್ಡಿಗೆ ಹುಡುಕಾಡುವ ಸಮಸ್ಯೆ ಇರುವುದಿಲ್ಲ. ಹೊಲದ ಸಿದ್ದತೆ…

Read more
sugarcane crop

ಕಬ್ಬು ಬೆಳೆಯಲ್ಲಿ ಕೂಳೆ ಬೆಳೆ ನಿರ್ವಹಣೆ ಹೀಗೆ.

ಕೂಳೆ ಬೆಳೆ ಬೆಳೆದರ ಖರ್ಚು ತುಂಬಾ ಕಡಿಮೆಯಾಗುತ್ತದೆ. ಸರಿಯಾದ ಕಾಳಜಿ ವಹಿಸಿದರೆ ಇಳುವರಿ ಚೆನ್ನಾಗಿಯೇ ಬರುತ್ತದೆ. ನಮ್ಮ ದೇಶದಲ್ಲಿ ಕೆಲವು ರೈತರು ಕೂಳೆ ಬೆಳೆಯಲ್ಲಿ ಉತ್ತಮ ಇಳುವರಿ ಪಡೆದರೆ ಬಹಳ ಜನ ಕಡಿಮೆ ಇಳುವರಿ ಪಡೆಯುತ್ತಾರೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮುಂತಾದ ದೇಶಗಳಲ್ಲಿ ಕೂಳೆ ಬೆಳೆಯಲ್ಲಿ ಮೂಲ ಬೆಳೆಗಿಂತ ಹೆಚ್ಚು ಇಳುವರಿ ಪಡೆಯುತ್ತಾರೆ. ನಮಗೂ ಸರಿಯಾದ ಬೇಸಾಯ ಕ್ರ ಮ ಅನುಸರಿಸಿದರೆ 2-3 ಕೂಳೆ ಬೆಳೆಯನ್ನು ಬೆಳೆಸಲು ಸಾಧ್ಯವಿದೆ. ನಮ್ಮಲ್ಲಿ ಸಾಮಾನ್ಯವಾಗಿ ತುಂಬಾ ಸೋಮಾರಿಗಳು ಮಾತ್ರ ಕೂಳೆ…

Read more
ಕಬ್ಬು ಸಸ್ಯ -sugarcane plants

ಕಬ್ಬು ಬೆಳೆಯಲ್ಲಿ ದಂಟು ಕೊರಕ ಕೀಟದ ನಿಯಂತ್ರಣ ಹೇಗೆ?

ಕಬ್ಬಿನ ಬೆಳೆ ಉಳಿದೆಲ್ಲಾ ವಾಣಿಜ್ಯ ಬೆಳೆಗಳಿಗಿಂತ ಸುಲಭದ ಬೆಳೆ.ಆದಾಗ್ಯೂ ಇದಕ್ಕೆ ಕೆಲವು ಕೀಟ ರೋಗ ಸಮಸ್ಯೆಗಳು ಇಲ್ಲದಿಲ್ಲ. ಬೇರು ಹುಳದಂತ ಸಮಸ್ಯೆ ಕೆಲವು ಭಾಗಗಳಲ್ಲಿ ಕಬ್ಬು ಬೆಳೆಯಲೇ ಸಾಧ್ಯವಿಲ್ಲ ಎಂಬ ಮಟ್ಟಕ್ಕೆ ಬಂದರೆ, ಗಂಟು ಕೊರೆಯುವ ಹುಳವೂ (Internode borer) ಬಹುತೇಕ ಎಲ್ಲಾ ಕಡೆ ಇದೆ. ನಿಯಂತ್ರಣ ಮಾಡದಿದ್ದರೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಹೋಗುತ್ತದೆ. ಕರ್ನಾಟಕದ ಬಹುತೇಕ ಕಬ್ಬು ಬೆಳೆಯುವ ಭಾಗಗಳಲ್ಲಿ ಈ ಕೀಟದ ತೊಂದರೆ ಹೆಚ್ಚಾಗಿದ್ದು, ಗಂಟುಗಳು ಹತ್ತಿರವಾಗಿ(ಕಿರಿದಾಗಿ), ಗುಣಮಟ್ಟ ಕುಂಠಿತವಾಗಿ ಕಬ್ಬಿನ ರಿಕವರಿ ನಷ್ಟ…

Read more
ಹತ್ತಿ ಕೋಡು- Cotton bulb

ಹತ್ತಿಯ ಎಲೆ ಕೆಂಪಗಾಗುವುದಕ್ಕೆ ಕಾರಣ ಮತ್ತು ಪರಿಹಾರ.

ಉತ್ತರ ಕರ್ನಾಟಕದ ಬಹುತೇಕ ಹತ್ತಿ ಬೆಳೆಯಲಾಗುವ ಪ್ರದೇಶಗಳಲ್ಲಿ ಎಲೆ ಕೆಂಪಾಗುವ ಸಮಸ್ಯೆ  ಹೆಚ್ಚುತಿದ್ದು, ರೈತರು ಇದು ರೋಗವೇ , ಯಾವ ರೋಗ ಎಂಬ ಆತಂಕದಲ್ಲಿ ಸ್ಥಳೀಯ ಬೀಜ, ಕೀಟನಾಶಕ ಮಾರಾಟಗಾರರ ಸಲಹೆ ಮೇರೆಗೆ ಅನವಶ್ಯಕ ಕೀಟ, ರೋಗನಾಶಕ ಬಳಸುತ್ತಿದ್ದಾರೆ. ವಾಸ್ತವವಾಗಿ ಇದು ರೋಗ , ಕೀಟ ಯಾವುದೂ ಅಲ್ಲ. ಬೇಸಾಯ ಕ್ರಮದಲ್ಲಿ ಇದನ್ನು ಸರಿ ಮಾಡಬಹುದು. ನಿರಂತರವಾಗಿ ಬೆಳೆ ಬೆಳೆಯುತ್ತಾ ಇರುವ ಪ್ರದೇಶಗಳಲ್ಲಿ ಸಹಜವಾಗಿ ಕೆಲವು ಪೊಷಕಾಂಶಗಳ ಕೊರತೆ ಕಂಡು ಬರುತ್ತದೆ. ಇದು ಆ ಬೆಳೆ ಈ…

Read more

ಕೊರೋನಾ ಪರಿಣಾಮ- ಶೇಂಗಾ ಬೆಳೆಯ ಸುಗ್ಗಿ.

ಒಂದು ಕಾಲದಲ್ಲಿ ದೇಶದಲ್ಲೇ ಚಿತ್ರದುರ್ಗ ಶೇಂಗಾ ಬೆಳೆಯಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಯಾಗಿತ್ತು. ಇಲ್ಲಿನ ಚಳ್ಲಕೆರೆ ತಾಲೂಕಿನಲ್ಲಿ ಎಲ್ಲಿ ನೋಡಿದರಲ್ಲಿ  ಶೇಂಗಾ ಹೊಲಗಳು, ಮತ್ತು ದೇಶದಲ್ಲೇ ಅತ್ಯಧಿಕ ಪ್ರಮಾಣದ ಶೇಂಗಾ ಎಣ್ಣೆ ಮಿಲ್ಲುಗಳಿದ್ದ ಈ ತಾಲೂಕು ಕ್ರಮೇಣ ತನ್ನ ವೈಭವವನ್ನು ಗತ ಕಾಲಕ್ಕೆ ಸೇರಿಸಿತ್ತು. ಈಗ ಮತ್ತೆ ಈ ವೈಭವ ಮರುಕಳಿಸಿದೆ. ಚಿತ್ರದುರ್ಗದ  ಚಳ್ಳಕೆರೆಯಲ್ಲಿ ಈ ವರ್ಷ 95 % ಕ್ಕೂ ಹೆಚ್ಚು ಶೆಂಗಾ ಬಿತ್ತನೆಯಾಗಿದೆ. ಎಲ್ಲೆಲ್ಲಿ ನೋಡಿದರೂ ಶೇಂಗಾ ಹೊಲಗಳೇ ಕಾಣಿಸುತ್ತಿವೆ.ಅದರ ಸೌಂದರ್ಯವನ್ನು ನೋಡುವುದೇ ಒಂದು ಅನಂದ. ಪ್ರಕೃತಿಯ…

Read more
cotton

ಹತ್ತಿ ಬೆಳೆಯ ಗುಲಾಬಿ ಕಾಯಿ ಕೊರಕ ನಿಯಂತ್ರಣ.

ಹತ್ತಿ ಬೆಳೆಗಾರರಿಗೆ ಗಣನೀಯ ಬೆಳೆ ನಷ್ಟ ಮಾಡುವ ಕೀಟ ಎಂದರೆ  ಗುಲಾಬಿ ಕಾಯಿ ಕೊರಕ. ಹತ್ತಿಯ ಕಾಯಿಗಳು ಬೆಳೆಯುತ್ತಿದ್ದಂತೆ ಇದು ಪ್ರವೇಶವಾಗಿ  ಒಳಗಿನ ಹತ್ತಿಯ ಅರಳನ್ನು ಹಾನಿ ಮಾಡುತ್ತದೆ. ಮಾರುಕಟ್ಟೆಯಲ್ಲಿ ಈ ಹತ್ತಿಗೆ ಬೆಲೆಯೇ ಇರುವುದಿಲ್ಲ.  ಈ ಕೀಟದ ನಿಯಂತ್ರಣಕ್ಕಾಗಿ ಅತ್ಯಧಿಕ ಕೀಟನಾಶಕ ಬಳಕೆ ಮಾಡಲಾಗುತ್ತದೆ. ಇದರಿಂದಾಗಿಯೇ ಕಳೆದ ವರ್ಷ ಕೆಲವು ರೈತರು ಜೀವ ಕಳೆದುಕೊಂಡದ್ದೂ ಇದೆ.  ಸರಳ ಮತ್ತು ಮಿತವ್ಯಯದ ಬೇಸಾಯ ಕ್ರಮದಲ್ಲಿ ಇದನ್ನು ಗಣನೀಯ ಪ್ರಮಾಣದಲ್ಲಿ ನಿಯಂತ್ರಣ ಮಾಡಬಹುದು. ಜೀವನ ಚಕ್ರ ಹೀಗಿರುತ್ತದೆ: ಗುಲಾಬಿ…

Read more
ಮೈದಾನ ಪ್ರದೇಶಕ್ಕೆ ಹೊಂದುವ ನೀರಾವರಿ ಬೇಕಾಗದ ಗೋಡಂಬಿ ತಳಿಗಳು.

ಮೈದಾನ ಪ್ರದೇಶಕ್ಕೆ ಹೊಂದುವ ನೀರಾವರಿ ಬೇಕಾಗದ ಗೋಡಂಬಿ ತಳಿಗಳು.

ಅರೆ ಮಲೆನಾಡು ಮತ್ತು ಬಯಲು ಸೀಮೆಗಳಾದ ತುಮಕೂರು, ಶಿರಾ, ಕೊಲಾರ, ರಾಮನಗರ, ಹಾಗೆಯೇ ಬಾಗಲಕೋಟೆ, ಬೆಳಗಾವಿಯ ಕೆಲವು ಭಾಗಗಳಲ್ಲಿ  ರೈತರು ಈಗಾಗಲೇ ಗೇರು ಬೆಳೆಸುತ್ತಿದ್ದು, ಇಲ್ಲಿನ ಹವಾಮಾನದಲ್ಲಿ ಉತ್ತಮ ಇಳುವರಿ ಬರುತ್ತಿದೆ. ಇಲ್ಲಿನ ಒಣ ಭೂಮಿಗೆ ಇದು ಚೆನ್ನಾಗಿ ಹೊಂದಿಕೊಂಡು ನೀರಾವರಿ ಮಾಡುವುದಿದ್ದರೂ ಅತೀ ಕಡಿಮೆ ನೀರಾವರಿ ಸಾಕು. ಬಾಗಲಕೋಟೆಯ ತೋಟಗಾರಿಕಾ ವಿಶ್ವವಿಧ್ಯಾನಿಲಯ, ಹುಲಕೋಟಿಯ ಕೃಷಿ ಸಂಶೋಧನಾ ಕೇಂದ್ರ, ಚಿಂತಾಮಣಿಯ ತೋಟಗಾರಿಕಾ ಸಂಶೋಧನಾ  ಕೇಂದ್ರಗಳು ಗೋಡಂಬಿ ಬೆಳೆಯನ್ನು  ಬೆಳೆಸುವ ರೈತರಿಗೆ ಮನವರಿಕೆ ಮಾಡಿಕೊಡಲು ಶ್ರಮಿಸುತ್ತಿದ್ದಾರೆ. ಮೈದಾನ ಪ್ರದೇಶಕ್ಕೆ…

Read more

ಕರಾವಳಿ ಮಲೆನಾಡಿಗೆ ಹೊಂದುವ ಉತ್ತಮ ಗೇರು ತಳಿಗಳು

ಗೇರು ಒಂದು ವಿದೇಶಿ ವಿನಿಮಯ ಗಳಿಸುವ ವಾಣಿಜ್ಯ ಬೆಳೆ. ನಮ್ಮ ದೇಶದಲ್ಲಿ ಇದನ್ನು ಕೇರಳ, ಮಹಾರಾಷ್ಟ್ರ, ಗೋವಾ, ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಒರಿಸ್ಸಾ ಈಶಾನ್ಯ ರಾಜ್ಯಗಳು ಹಾಗೂ ಪಶ್ಚಿಮ ಬಂಗಾಳದಲ್ಲೆಲ್ಲಾ ಬೆಳೆಯಲಾಗುತ್ತಿದೆ. ಹೆಚ್ಚು ಪ್ರೊಟೀನ್ ಹಾಗೂ ಕಡಿಮೆ ಪ್ರಮಾಣದ ಶರ್ಕರ ಹೊಂದಿರುವ ಗೇರುಬೀಜಕ್ಕೆ ಪಾಶ್ಚಿಮಾತ್ಯ ದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಇದು ನಮ್ಮ ರಾಜ್ಯದ ಕರಾವಳಿ, ಮಲೆನಾಡು ಅರೆ ಮಲೆನಾಡು ಪ್ರದೇಶಗಳಿಗೆ  ಚೆನ್ನಾಗಿ ಹೊಂದಿಕೆಯಾಗುವ ಬೆಳೆಯಾಗಿದೆ. ಕಡಿಮೆ ನೀರಿನಲ್ಲಿ ಬೆಳೆದು ಆದಾಯ ಕೊಡಬಲ್ಲ ಬೆಳೆ ಎಂದು…

Read more
ಕ್ಯಾಲ್ಸಿಯಮ್ ಸಮೃಧ ಕಬ್ಬು ಬೆಳೆ

ಕಬ್ಬು ಬೆಳೆಗೆ ಕ್ಯಾಲ್ಸಿಯಂ ಪೋಷಕ ಅಗತ್ಯ.

ಕ್ಯಾಲ್ಸಿಯಂ ಎಲ್ಲಾ ಸಸ್ಯಗಳ ಬೆಳವಣಿಗೆ ಮುಖ್ಯವಾದ ಆಹಾರವಾಗಿದೆ. ಇದು ಮಣ್ಣು ಹಾಗು ಬೆಳೆಯಲ್ಲಿನ ಹುಳಿ ಆಂಶವನ್ನು ತಟಸ್ಥ ಮಾಡುವುದು.  ಕಬ್ಬಿನ ಬೆಳೆಗೆ ಕ್ಯಾಲ್ಸಿಯಂ ಅಥವಾ ಸುಣ್ಣವನ್ನು ಹಾಕುವುದರಿಂದ ಇಳುವರಿ ಹೆಚ್ಚುತ್ತದೆ. ಕಬ್ಬಿನ ಗುಣಮಟ್ಟ ಉತ್ತಮವಾಗುತ್ತದೆ.ಮಣ್ಣಿನ ಗುಣವೂ ಉತ್ತಮವಾಗುತ್ತದೆ. ಯಾವುದೇ ಬೆಳೆ ಇರಲಿ ಅದಕ್ಕೆ ಬರೇ ಮುಖ್ಯ ಪೋಷಕಾಂಶಗಳಾದ ಸಾರಜನಕ , ರಂಜಕ ಮತ್ತು ಪೊಟ್ಯಾಶ್ ಮಾತ್ರ ಸಾಲದು. ಈ ಮೂರು ಪೋಷಕಗಳು ಸಮರ್ಪಕವಾಗಿ ಬೆಳೆಗೆ ದೊರೆಯಲು ದ್ವಿತೀಯ ಪೋಷಕಾಂಶಗಳಾದ ಕ್ಯಾಲ್ಸಿಯಂ, ಮೆಗ್ನೀಶಿಯಂ ಮತ್ತು ಗಂಧಕ ಅಂಶ ಬೇಕು. …

Read more
error: Content is protected !!