ಜೀವ ವೈವಿಧ್ಯಗಳ ನಾಶ – ಭಾರತದ ಕೃಷಿಗೆ ಅತೀ ದೊಡ್ಡ ಆತಂಕ

ಜೀವ ವೈವಿಧ್ಯಗಳ ನಾಶ – ಭಾರತದ ಕೃಷಿಗೆ ಅತೀ ದೊಡ್ಡ ಆತಂಕ.

ನೈಸರ್ಗಿಕ ವಿಕೋಪಗಳು, ಮಾನವನ ಕೃತ್ಯಗಳಿಂದ  ಸ್ಥಳೀಯ ಜೀವ ವೈವಿಧ್ಯಗಳ ನಾಶ ಅವ್ಯಾಹತವಾಗುತ್ತಿದೆ. ಇದು ನಮ್ಮ ದೇಶದ ಕೃಷಿ, ಮಳೆ, ಇತ್ಯಾದಿಗಳಿಗೆ ಭಾರೀ ತೊಂದರೆಯನ್ನು ಉಂಟುಮಾಡಲಿದೆ. ಸೂಕ್ಷ್ಮವಾಗಿ ಗಮನಿಸಿದವರಿಗೆ ಇದರ ಅರಿವು ಆಗಿರಬಹುದು. ಅರಿವು ಆಗದವರಿಗೆ ಕೆಲವೇ ವರ್ಷಗಳಲ್ಲಿ ಅರಿವಿಗೆ ಬರಲಿದೆ.  ಕಾಸರಕನ ಮರ ಗೊತ್ತಾ ? ಈ ಪ್ರಶ್ನೆಯನ್ನು ಯಾರಲ್ಲಿಯಾದರೂ ಕೇಳಿದರೆ ಹಿಂದೆ ಹೇರಳವಾಗಿತ್ತು. ಈಗ ಹುಡುಕಿದರೆ ಮಾತ್ರ ಸಿಗುತ್ತದೆ ಎನ್ನುತ್ತಾರೆ. ಹಾಗೆಯೇ ಇನ್ನೊಂದು ಮರ ಇತ್ತು. “ಕನಪ್ಪಡೆ” ಎಂಬ ಹೆಸರಿನ ಈ ಮರ ಗುಡ್ಡ, ಕಾಡುಗಳಂಚಿನಲ್ಲಿ…

Read more
Municipal Waste as Good Organic Manure

Municipal Waste as Good Organic Manure

Our farmland requires a maximum quantity of organic matter. Bio degradeble Municipal waste or city waste is the most important and cheap organic material available in the present situation. The lifestyle of our generation is changing. For different purposes, people are migrating to cities. Now, household waste in the city area is systematically collected and…

Read more
ಕೃಷಿ ಮತ್ತು ಮನುಕುಲಕ್ಕೆ ಆತಂಕ ಉಂಟುಮಾಡುತ್ತಿದೆ ಪ್ರಕೃತಿಯ ಮುನಿಸು

ಕೃಷಿ ಮತ್ತು ಮನುಕುಲಕ್ಕೆ ಆತಂಕ ಉಂಟುಮಾಡುತ್ತಿದೆ ಪ್ರಕೃತಿಯ ಮುನಿಸು.

ಪ್ರಕೃತಿ ಅನುಕೂಲಕರವಾಗಿದ್ದರೆ ಮಾತ್ರ ಮನುಕುಲ ಕ್ಷೇಮದಿಂದ ಇರಲು ಸಾಧ್ಯ. ಈಗ ಪ್ರಕೃತಿ ಮುನಿಸಿಕೊಂಡಂತಿದೆ. ಹವಾಮಾನ ಬದಲಾಗುತ್ತಿದೆ. ನಾವು ಹೊಟ್ಟೆ ಹೊರೆಯಲು ಬೆಳೆಸುವ ಬೆಳೆಗಳ ಮೇಲೆ ಹಾಗೂ ನಮ್ಮೆಲ್ಲರ ಆರೋಗ್ಯದ ಮೇಲೆ ಇದರ ದುಶ್ಪರಿಣಾಮ ಉಂಟಾಗಲಾರಂಭಿಸಿದೆ. ಮುಂದಿನ ದಿನಗಳಲ್ಲಿ ಕೃಷಿ ಉತ್ಪಾದನೆ ಕುಂಠಿತವಾಗಲಿದೆ ಎಂಬುದಾಗಿ ತಜ್ಞರು ಸರಕಾರಕ್ಕೆ ವರದಿ ನೀಡಿದ್ದಾರೆ. ಜನ ಆನಾರೋಗ್ಯ ಸಮಸ್ಯೆಯಿಂದ  ಬಳಲು ಸ್ಥಿತಿ ಉಂಟಾಗಿದೆ. ಹವಾಮಾನ ಬದಲಾವಣೆಯ ಬಿಸಿ ಈ ವರ್ಷ ಕೃಷಿ ಕ್ಷೇತ್ರಕ್ಕೆ ವಿಪರೀತವಾಗಿ ಬಾಧಿಸುವ ಸಾಧ್ಯತೆ ಇದೆ. ಶಿವರಾತ್ರೆ ಕಳೆದ ಮೇಲೆ…

Read more
ಜೀವವೈವಿಧ್ಯಗಳಿಗೆ ಉರುಳಾಗುತ್ತಿರುವ ರಬ್ಬರ್ ತೋಟದ ಬಳ್ಳಿಗಳು

ಜೀವವೈವಿಧ್ಯಗಳಿಗೆ ಉರುಳಾಗುತ್ತಿರುವ  ರಬ್ಬರ್ ತೋಟದ ಬಳ್ಳಿಗಳು.

ರಬ್ಬರ್ ತೋಟ ಇರುವ ಕಡೆ ಸಂಚರಿಸುವಾಗ ಕಂಡುಬರುವ ಬಳ್ಳಿ ಸಸ್ಯ ಜೀವವೈವಿಧ್ಯಗಳನ್ನು ಸಾಕಷ್ಟು ನಾಶ ಮಾಡಿವೆ, ಇನ್ನೂ ಮಾಡುತ್ತಿವೆ. ರಬ್ಬರ್ ಬೆಳೆಯುವಾಗ ಮೊದಲ ಮೂರು ನಾಲ್ಕು ವರ್ಷ ಮಣ್ಣು ಸವಕಳಿ ತಡೆಗೆ ಅಗತ್ಯವೆಂದು ಬೆಳೆಸಿದ  ಈ ಬಳ್ಳಿ ಮರ ಬೆಳೆದ ನಂತರ  ತೋಟದಿಂದ ಹೊರಬಂದು ಇಡೀ ಸಸ್ಯವರ್ಗಗಳನ್ನು ಆಪೋಶಣ ತೆಗೆದುಕೊಳ್ಳುತ್ತಿದೆ. ಅದು ರಸ್ತೆ ಬದಿ, ಸಾರ್ವಜನಿಕ ಸ್ಥಳಗಳಲ್ಲಿ ಹಬ್ಬಿ ಅಲ್ಲಿನ ಸಸ್ಯಗಳು, ಮರಗಳ ಮೇಲೆ ಏರಿ ಅದರ ಬೆಳವಣಿಗೆಯನ್ನು ಹತ್ತಿಕ್ಕುವ ಮೂಲಕ ಜೀವವೈವಿಧ್ಯಕ್ಕೆ ಕುತ್ತು ತರುತ್ತದೆ. ಸರಕಾರ,…

Read more
ಫಲವತ್ತಾದ ಫಲ್ಗುಣಿ ನದಿಯ ಮುಖಜ ಭೂಮಿಯಲ್ಲಿ ಬೆಳೆದ ರುಚಿಕಟ್ಟಾದ ಕಲ್ಲಂಗಡಿ.

ಮಣ್ಣು ಫಲವತ್ತತೆ ಇದ್ದಾಗ ಅಲ್ಲಿ ಬೆಳೆದ ಫಸಲಿಗೆ ರುಚಿ ಹೆಚ್ಚು.

ಜನ ಒಬ್ಬೊಬ್ಬರು ಒಂದೊಂದು ಹೇಳುತ್ತಾರೆ, ಮುಖ್ಯವಾಗಿ ರಸ ಗೊಬ್ಬರ, ಹೈಬ್ರೀಡ್ ಬೀಜಗಳಿಂದ ತಾವು ಬಳಸುವ ಹಣ್ಣು ತರಕಾರಿಗಳಲ್ಲಿ ರುಚಿ ಹೋಗಿದೆ ಎಂದು. ವಾಸ್ತವವಾಗಿ ಇದು ಸತ್ಯವಲ್ಲ. ಸತ್ಯ ಸಂಗತಿ ಬೇರೆಯೇ ಇದೆ. ಅದು ಮಣ್ಣಿನ ಫಲವತ್ತತೆ. ರುಚಿ ಎನ್ನುವುದು ಹಸಿದವನ ನಾಲಗೆಗೆ ಹೆಚ್ಚು, ಹಸಿವು ಇಲ್ಲದವನಿಗೆ ಕಡಿಮೆ. ಹಾಗೆಂದು ಕೆಲವೊಮ್ಮೆ ಬದಲಾವಣೆ ರುಚಿ ಕೊಡುತ್ತದೆ. ಆದರೆ ಪ್ರತೀಯೊಂದು  ಆಹಾರ ವಸ್ತುವಿಗೂ ಅದರದ್ದೇ ಆದ ರುಚಿ ಗುಣ ಇರುತ್ತದೆ. ಅದು ಬರುವುದು ಆ ನಿರ್ದಿಷ್ಟ ಪ್ರದೇಶದ ಹವಾಗುಣ, ಮಣ್ಣು…

Read more
ಚೆನ್ನಾಗಿ ಬಿಸಿಲು ಪಡೆಯುವ ತೆಂಗಿನ ಮರಗಳು.

ಗೊಬ್ಬರ ನಂತರ ಕೊಡಿ- ಉಚಿತವಾಗಿ ಸಿಗುವ ಇದನ್ನು ಮೊದಲು ಒದಗಿಸಿ.

ನಾವು ಬೆಳೆ ಬೆಳೆಸುವಾಗ ಯಾವ ಗೊಬ್ಬರ ಕೊಡಬೇಕು, ಎಷ್ಟು ಕೊಡಬೇಕು. ಮತ್ತೆ ಏನೇನು ಕೊಡಬೇಕು ಎಂದು ಕೇಳುತ್ತೇವೆ. ಅದೆಲ್ಲಾ ನಂತರ. ಮೊದಲು ಉಚಿತವಾಗಿ ಸಿಗುವ ಬಿಸಿಲು ಪೂರ್ಣವಾಗಿ ಸಿಗುವಂತೆ ಮಾಡಿ. ದಾರಿ  ಬದಿಯ ತೆಂಗಿನ ಮರದಲ್ಲಿ ಫಸಲು ಯಾಕೆ ಹೆಚ್ಚು, ತೋಟದೊಳಗಿನ ಅಡಿಕೆ ಮರಳು ಉದ್ದುದ್ದ ಬೆಳೆಯುವುದೇಕೆ? ಬೆಳಗ್ಗಿನಿಂದ ಸಂಜೆ ತನಕ ಬಿಸಿಲು ಪಡೆಯುವ ದೊಡ್ಡ ಮರಗಳಲ್ಲಿ ಫಸಲು ಹೆಚ್ಚು ಏಕೆ? ಎತ್ತರ  ಬೆಳೆದ ಮರದಲ್ಲಿ ಫಸಲು ಹೆಚ್ಚು ಯಾಕೆ? ಇದಕ್ಕೆಲ್ಲಾ ಪ್ರಮುಖ ಕಾರಣ ಸೂರ್ಯನ ಬೆಳಕಿನ ಲಭ್ಯತೆ….

Read more

ಬೇಗ ಮಳೆ ಬರುವ ಸೂಚನೆ ಇದೆ- ಎಚ್ಚರ.

ಕಳೆದ ಕೆಲವು ದಿನಗಳಿಂದ ಸುಡುಬಿಸಿಲಿನ ಪ್ರಭಾವ ಹೆಚ್ಚಾಗಿದ್ದು, ಇದು ಮಳೆ ಬರುವ ಮುನ್ಸೂಚನೆಯಾಗಿದೆ. ವಾತಾವರಣದಲ್ಲಿ ಬಿಸಿ ಹೆಚ್ಚಾದಂತೆ ಮಳೆ ಬರುವ ಸಾಧ್ಯತೆ ಹೆಚ್ಚು. ನಮ್ಮ  ಹಿರಿಯರು  ಕೆಲವು  ಹವಾಮಾನ ಮುನ್ಸೂಚನೆಗಳನ್ನು ಹೇಳಿದ್ದಾರೆ. ಗಣಪತಿ ಜಾತ್ರೆಯ ಓಕುಳಿಯಂದು ಮಳೆ ಬರುತ್ತದೆ. ಧರ್ಮಸ್ಥಳ ದೀಪೋತ್ಸವದಂದು ಮಳೆ ಬರುತ್ತದೆ. ಹಾಗೆಯೇ ಇನ್ನೂ ಕೆಲವು ವಿಷೇಶ ದಿನಗಳ ಸಂಧರ್ಭದಲ್ಲಿ ಮಳೆ ಬರುವ ಸೂಚನೆಯನ್ನು ಕೊಟ್ಟಿದ್ದಾರೆ. ಅದು ಸುಮ್ಮನೆ ಅಲ್ಲ. ಸಾಮಾನ್ಯವಾಗಿ ಅಥವಾ ಹೆಚ್ಚಿನ ಸಂದರ್ಭಗಳಲ್ಲಿ  ಇದು ನಿಜವಾಗುತ್ತದೆ. ಮಳೆಯ ಈ ಮುನ್ಸೂಚನೆಯು ಹವಾಮಾನಕ್ಕೂ…

Read more

ನಯಾ ಪೈಸೆ ಖರ್ಚಿಲ್ಲದ ಕೃಷಿ ಹೀಗೆ.

ದೇಸೀ ಹಸುವೊಂದಿದ್ದರೆ  ನೀವು ಯಾವ ಗೊಬ್ಬರದಂಗಡಿಯವನನ್ನೂ  ಸಾಕಬೇಕಾಗಿಲ್ಲ.  ಹಸುವಿನ ಸಗಣಿ, ಅದರ ಮೂತ್ರ, ಮಜ್ಜಿಗೆ, ಹಾಲು, ಶುಂಠಿ ರಸ, ಬ್ರಹ್ಮಾಸ್ತ್ರ, ಅಗ್ನ್ಯಾಸ್ತ್ರ, ನೀಮಾಸ್ತ್ರ ಮುಂತಾದ ಸ್ಥಳೀಯವಾಗಿ ದೊರೆಯುವ ಮೂಲ ವಸ್ತುಗಳಿಂದ ಬೆಳೆಯ ಸರ್ವಾಂಗೀಣ ಅವಶ್ಯಕತೆಯನ್ನೂ ಪೂರೈಸಬಹುದು. ಎಲ್ಲವೂ ಬದಲಾಗಲಿದೆ : ಕೆಲವೇ ವರ್ಷಗಳಲ್ಲಿ ಈ ದೇಶದಲ್ಲಿರುವ ಸರಕಾರೀ ಸ್ವಾಮ್ಯದ ರಸಗೊಬ್ಬರ  ತಯಾರಿಕಾ  ಸಂಸ್ಥೆಗಳು ಬಾಗಿಲು ಹಾಕಲಿವೆ. ಲಕ್ಷಾಂತರ ಜನ ನಿರುದ್ಯೋಗಿಗಳಾಗಲಿದ್ದಾರೆ. ಕೊಟ್ಯಾಂತರ ರೂಪಾಯಿ ವ್ಯವಹಾರದ  ರಸಗೊಬ್ಬರ, ಕೀಟ ನಾಶಕ, ರೋಗನಾಶಕ ಹಾಗೂ ಇನ್ನಿತರ ಬೆಳೆ  ಸಂರಕ್ಷಕ ತಯಾರಕರು…

Read more

ಖರ್ಚು ಇಲ್ಲದ ಕೀಟ ನಿಯಂತ್ರಣ ಮತ್ತು ಅಧಿಕ ಫಲ.

ಇದು ಪ್ರಾಕೃತಿಕ ಕೃಷಿ ಪದ್ದತಿ. ಪ್ರಕೃತಿಯ ನಡೆಗೆ ಸರಿಯಾಗಿ ನಮ್ಮ ಹೆಜ್ಜೆ. ಇದಕ್ಕೆ ಖರ್ಚು ಇಲ್ಲ. ನಿಮ್ಮ ಆರೋಗ್ಯಕ್ಕೂ ಇದು ಒಳ್ಳೆಯದು. ಬೆಳೆಗಳು ಇದಕ್ಕೆ ತ್ವರಿತವಾಗಿ ಸ್ಪಂದಿಸಿ ನಿಮಗೆ ಅಧಿಕ ಇಳುವರಿಯ ಮೂಲಕ ಪ್ರತಿಫಲ ಕೊಡುತ್ತವೆ. ತೀರ್ಥಹಳ್ಳಿಯ ಶ್ರೀ. ಪುರುಷೋತ್ತಮರಾಯರು ಎಲ್ಲಾ ಕಡೆ ಹೇಳುತ್ತಿದ್ದ ಮಾತು ಇದು, “ನೀವು ನಿಮ್ಮ ಹೊಲದ ಮೂಲೆ ಮೂಲೆಗೂ ಹೋಗಿದ್ದೀರಾ?, ಮರಗಳ ಬಳಿ ಹೋಗಿ ಮಾತನಾಡಿದ್ದೀರಾ” ಇದನ್ನು ಕೇಳಿ ಜನ ನಗೆಯಾಡಿದ್ದೂ ಇರಬಹುದು. ಆದರೆ ಈ ವಿಚಾರ ತಿಳಿಯದೆ ಆಡಿದ ಮಾತು…

Read more
error: Content is protected !!