Lighting effected coconut palm

ತೆಂಗಿನ ಮರಗಳಿಗೆ ಸಿಡಿಲು ಬಡಿದರೆ ಏನು ಮಾಡಬೇಕು?

ಈಗಾಗಲೇ ಮುಂಗಾರು ಪೂರ್ವ ಮಳೆ ಬರಲಾರಂಭಿಸಿದೆ. ಮಿಂಚು ಸಿಡಿಲಿನ ಅಬ್ಬರದಲ್ಲಿ ಬಹಳಷ್ಟು ಕಡೆ ಅಡಿಕೆ, ತೆಂಗಿನ ಮರಗಳು ಬಲಿಯಾಗುತ್ತಿವೆ. ಮಳೆಗಾಲ ಪ್ರಾರಂಭದಲ್ಲಿ ಮತ್ತು ಮಳೆಗಾಲ ಕೊನೆಯಲ್ಲಿ ಮಿಂಚು ಸಿಡಿಲಿನ ಆರ್ಭಟ ಅಧಿಕ. ಮಳೆ ಬಾರದಿದ್ದರೂ ಪ್ರಭಲವಾದ ಈ ಗುಡುಗು ಸಿಡಿಲಿನ ಆರ್ಭಟ ಇದ್ದೇ ಇರುತ್ತದೆ. ಈ ಸಿಡಿಲು ಮೋಡಗಳ ಅಪ್ಪಳಿಸುವಿಕೆಯಿಂದ ಉತ್ಪಾದನೆಯಾಗುವ ಒಂದು ವಿದ್ಯುತ್ ಶಕ್ತಿ. ಇದು ಉತ್ಪಾದನೆಯಾಗಿ  ಅರ್ಥಿಂಗ್ ಆಗಬೇಕು. ಅದು ಎತ್ತರದ ಮರಗಳು, ಅಥವಾ ಕೆಲವು ಮಿಂಚು ಆಕರ್ಶಕಗಳ ಕಡೆಗೆ ಹೆಚ್ಚಿನ ಪ್ರಮಾಣದಲ್ಲಿ  ತಲುಪುತ್ತದೆ….

Read more
ನೆಲದ ಮೇಲೆ ಹುಲುಸಾಗಿ ಬೆಳೆದ ಹಾವಸೆ

ನೆಲದಲ್ಲಿ ಹಾವಸೆ ಬೆಳೆದರೆ ತೆಗೆಯಬೇಡಿ- ಇದರಿಂದ ಭಾರೀ ಲಾಭವಿದೆ.

ಕೆಲವು ರೈತರ ತೋಟದ ನೆಲದಲ್ಲಿ  ಹಾವಸೆ  ಸಸ್ಯ ಬೆಳೆಯುತ್ತದೆ. ಈ ಸಸ್ಯ ಬೆಳೆಯುವುದು ಯಾಕೆ ಮತ್ತು ಇದರ ಅನುಕೂಲ ಏನು? ನಿಮ್ಮ ತೋಟದಲ್ಲಿ, ಮನೆಯ ಕಂಪೌಂಡ್ ಗೊಡೆಯಲ್ಲಿ, ಅಡಿಕೆ, ತೆಂಗಿನ ಮರದ ಕಾಂಡದಲ್ಲಿ ಅಂಟಿಕೊಂಡಿರುವ ಒಂದು ಹಾವಸೆ ಸಸ್ಯ ನಮಗೆಷ್ಟು ಉಪಕಾರಿ ಎಂಬುದನ್ನು ಪ್ರತೀಯೊಬ್ಬರೂ ತಿಳಿದಿರಬೇಕು. ಮಳೆಗಾಲ ಬಂತೆಂದರೆ ಸಾಕು ಹಾವಸೆ ಸಸ್ಯಗಳು ಜೀವತುಂಬಿಕೊಂಡು ಎಲ್ಲೆಡೆ ಆವರಿಸುತ್ತವೆ. ಬೇಸಿಗೆಯಲ್ಲಿ ಸಾಕಷ್ಟು ತೇವಾಂಶ ಲಭ್ಯವಿರುವಲ್ಲಿ ಬೆಳೆಯುತ್ತದೆ. ಒಟ್ಟಿನಲ್ಲಿ ತೇವಾಂಶವನ್ನು ಬಳಸಿ ಬದುಕುವ ಈ ಸಸ್ಯ ವರ್ಗ ಕೃಷಿಕನ ಮಿತ್ರ…

Read more
ಪೌಷ್ಟಿಕ ಸೊಪ್ಪು ಕೊಡಿ

ಕುರಿ – ಮೇಕೆ ಗೊಬ್ಬರ ಯಾಕೆ ಉತ್ತಮ?

ಹೆಚ್ಚಿನ ರೈತರು ಸಾವಯವ ಗೊಬ್ಬರವಾಗಿ ಬಳಸುವ  ಕುರಿ, ಮೇಕೆ ಹಿಕ್ಕೆಯಲ್ಲಿ ಏನು ಇದೆ ಎಂಬುದರ ಪೂರ್ಣ ಮಾಹಿತಿ ಇಲ್ಲಿದೆ. ಕುರಿ, ಮೇಕೆಗಳ ಹಿಕ್ಕೆ ಒಂದು ಉತ್ತಮ ಬೆಳೆ ಪೋಷಕ ಗೊಬ್ಬರ ಮಾತ್ರವಲ್ಲ ,ಮಣ್ಣಿನ ತರಗತಿಯನ್ನು  ಉತ್ತಮ ಪಡಿಸುವ ಸಾವಯವ ವಸ್ತು ಎಂದರೆ ಅತಿಶಯೋಕ್ತಿಯಲ್ಲ. ಸಾವಯವ ಗೊಬ್ಬರ ಎಂದರೆ ಅದು ದೊಡ್ದ ಪ್ರಮಾಣದ್ದಾಗಿರಬೇಕು. ಹೆಚ್ಚು ಸಮಯ ಮಣ್ಣಿನಲ್ಲಿ ಉಳಿದು, ಸೂಕ್ಷ್ಮಾಣು ಜೀವಿಗಳಿಗೆ ಆಹಾರವಾಗಿ ನಿಧಾನವಾಗಿ ಲಭ್ಯವಾಗುತ್ತಾ ಇರಬೇಕು. ಇಂತಹ ಗೊಬ್ಬರಗಳಲ್ಲಿ ಕೊಟ್ಟಿಗೆ ಗೊಬ್ಬರ, ಸೊಪ್ಪು ಸದೆಗಳನ್ನು ಒಟ್ಟು ಸೇರಿಸಿ…

Read more

ಇಳುವರಿ ಕಡಿಮೆಯಾಗಲು ಕಾರಣ ಏನು ಗೊತ್ತೇ?

ಕೆಲವು ದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮ ಯಾವುದೇ ಬೆಳೆಯ ಇಳುವರಿ 50% ಕ್ಕೂ ಕಡಿಮೆ. ಬೇಸಾಯದ ಖರ್ಚು 50% ಹೆಚ್ಚು. ಇದು ಯಾಕೆ ಹೀಗಾಗುತ್ತಿದೆ ಎಂಬುದರ ಮಾಹಿತಿ ಇಲ್ಲಿದೆ. ವಿಯೆಟ್ನಾಂ ದೇಶದ ಕೃಷಿಯ ಮುಂದೆ ನಮ್ಮ ಕೃಷಿ ಏನೂ ಅಲ್ಲ. ಮಲೇಶಿಯಾದಲ್ಲಿ ತೆಂಗಿನ ಮರದಲ್ಲಿ 200 ಕ್ಕೂ ಹೆಚ್ಚು ಕಾಯಿಗಳಾಗುತ್ತವೆ. ಬ್ರೆಝಿಲ್ ನ ಕಾಫಿಯ ಇಳುವರಿ ನಮ್ಮದಕ್ಕಿಂತ ದುಪ್ಪಟ್ಟು. ಅದೇ ರೀತಿಯಲ್ಲಿ ಚೀನಾ ದೇಶದಲ್ಲೂ ನಮ್ಮಲ್ಲಿ ಬೆಳೆಯಲಾಗುವ ಎಲ್ಲಾ ನಮೂನೆಯ ಬೆಳೆಗಳಲ್ಲಿ ಇಳುವರಿ ತುಂಬಾ ಹೆಚ್ಚಾಗಿದೆ. ಎಲ್ಲಾ…

Read more
ತೆಂಗಿನ ಸಸಿ ಆರೋಗ್ಯವಾಗಿದ್ದರೆ ಹೀಗೆ ಇರುತ್ತದೆ.

ತೆಂಗಿನ ಸಸಿ ಬೇಗ ಫಲಕೊಡಬೇಕಾದರೆ ಮಾಡಬೇಕಾದ ಅಗತ್ಯ ಕೆಲಸ.

ತೆಂಗಿನ ಸಸಿ ಹಾಗೂ ತಾಳೆ ಜಾತಿಯ ಎಲ್ಲಾ ಮರಗಳಿಗೂ ಕುರುವಾಯಿ ದುಂಬಿ ಕಾಟ ಇಲ್ಲದಿದ್ದರೆ, ಸಸಿ ಆರೋಗ್ಯವಾಗಿ ಬೆಳೆದು ಬೇಗ ಫಲ ಕೊಡುವುದರಲ್ಲಿ ಅನುಮಾನ ಇಲ್ಲ. ತೆಂಗು ಜಾತಿಯ ಮರಗಳಲ್ಲಿ ಒಂದೇ ಮೊಳಕೆ (Bud) ಇರುವುದು. ಇವುಗಳ ತಲೆ ಕಡಿದರೆ ಅವು ಮತ್ತೆ ಇತರ ಮರಗಳಂತೆ ಚಿಗುರಿ ಬೆಳೆಯಲಾರದು. ಆದರೆ ಇತರ ಮರ ಮಟ್ಟುಗಳ  ಎಲ್ಲಾ ಎಲೆ ಗೆಲ್ಲು ಕಡಿದರೂ ಅದು ಮತ್ತೆ ಚಿಗುರಿ ಬೆಳೆಯುತ್ತದೆ. ಆದ ಕಾರಣ ತೆಂಗಿನಂತಹ ಮರಗಳಿಗೆ ಎಲೆಯೇ ಆಧಾರ. ಕೆಲವು ಸಂದರ್ಭಗಳಲ್ಲಿ…

Read more

ಹೈನುಗಾರಿಕೆ- ನೊಣಗಳ ನಿಯಂತ್ರಣಕ್ಕೆ ಸುರಕ್ಷಿತ ಉಪಾಯ.

ಹಟ್ಟಿ, ಮನೆ, ಬೆಳೆ ಮುಂತಾದ ಕಡೆಗಳಲ್ಲಿ ತುಂಬಾ ಕಿರಿ ಕಿರಿ ಉಂಟುಮಾಡುವ ಹಾರುವ ಕೀಟಗಳ ನಿಯಂತ್ರಣಕ್ಕೆ ಈ ವ್ಯವಸ್ಥೆ ಯನ್ನು ಮಾಡಿಕೊಂಡರೆ ಯಾವ ಕೀಟನಾಶಕವೂ ಬೇಕಾಗಿಲ್ಲ. ಬಹುತೇಕ ರೈತರು ತಿಳಿದಿರುವಂತೆ ಹಾರುವ ಕೀಟಗಳನ್ನು ನಿಯಂತ್ರಿಸಲು ವಿಷ ರಾಸಾಯನಿಕ ಫಲಕೊಡುವುದಕ್ಕಿಂತ ಹೆಚ್ಚು, ಕೆಲವು ಉಪಾಯಗಳು ಫಲ ಕೊಡುತ್ತವೆ. ಹಾರುವ ನೊಣ, ಪತಂಗಗಳಿಗೆ ಕೀಟನಾಶಕ  ಸರಿಯಾಗಿ ತಗಲುವುದಿಲ್ಲ. ಅವು  ತಪ್ಪಿಸಿಕೊಳ್ಳುತ್ತವೆ. ಅವುಗಳನ್ನು ಬಂಧಿಸಲು ಕೆಲವು ಸುರಕ್ಷಿತ ಉಪಾಯಗಳಿವೆ. ಇದರ ಬಳಕೆಯಿಂದ ಯಾರಿಗೂ ಯಾವ ಹಾನಿಯೂ ಇರುವುದಿಲ್ಲ. ನಾವು ಯಾವಾಗಲೂ ಕೈಯಿಂದ…

Read more
ಮಣ್ಣಿನ ಬಣ್ಣ ಮತ್ತು ಅದರ ಫಲವತ್ತತೆ

ಮಣ್ಣಿನ ಬಣ್ಣ ಮತ್ತು ಅದರ ಫಲವತ್ತತೆ

ಮಣ್ಣಿನಲ್ಲಿ ಬೆಳೆ ಬೆಳೆಯುವ ಪ್ರತೀಯೊಬ್ಬ ರೈತನೂ ಮಣ್ಣಿನ ಬಣ್ಣದ ಮೇಲೆ ಅದರ ಉತ್ಪಾದನಾ ಶಕ್ತಿಯನ್ನು ತಿಳಿಯಬಹುದು. ಮಣ್ಣಿನ ಉತ್ಪಾದನಾ ಶಕ್ತಿ ( ಬೆಳೆ ಬೆಳೆದಾಗ ಅದರ ಬೆಳವಣಿಗೆ ಮತ್ತು ಅದರಲ್ಲಿ ಫಸಲು) ಅದರ ಭೌತಿಕ ಗುಣಧರ್ಮದ ಮೇಲೆ ಅವಲಂಭಿತವಾಗಿರುತ್ತದೆ.  ಜಮೀನಿನ ಮಣ್ಣು ಜೇಡಿಯಿಂದ ಕೂಡಿದೆಯೇ, ಮರಳಿನಿಂದ ಕೂಡಿದೆಯೇ, ಬಣ್ಣ ಹೇಗಿದೆ ಎಂಬುದನ್ನು ಪರಿಶೀಲಿಸಿ ಅದರ ಉತ್ಪಾದಕತೆಯನ್ನು ನಿರ್ಧರಿಸಬಹುದು. ಕೆಲವರು ಮಣ್ಣು ನೋಡಿಯೇ ಈ ಮಣ್ಣಿನಲ್ಲಿ ಕೃಷಿ ಮಾಡುವಾಗ ಎಷ್ಟು ಹಾಕಿದರೂ ಸಾಲದು ಎನ್ನುತ್ತಾರೆ. ಇನ್ನು ಕೆಲವರು ಜಮೀನು…

Read more

ನಿಮ್ಮ ಬೋರ್ ವೆಲ್ ನಲ್ಲಿ ನೀರು ಎಷ್ಟು ಇದೆ ಎಂದು ತಿಳಿಯುವುದು ಹೇಗೆ?

ಹೆಚ್ಚಿನ ರೈತರು ಕೃಷಿ ನೀರಾವರಿಗೆ  ಬೋರ್ ವೆಲ್ ನೀರಿನ ಮೂಲವನ್ನು ಆಶ್ರಯಿಸಿದ್ದಾರೆ. ಕೊಳವೆ ಬಾವಿಯಲ್ಲಿ  ನೀರು ಎಷ್ಟು ಇದೆ, ಪಂಪು ಎಷ್ಟು ಆಳಕ್ಕೆ ಇಳಿಸಬೇಕು ಎಂದು ತಿಳಿಯುವುದು ಹೀಗೆ. ಕೊಳವೆ ಬಾವಿ ಎಂದರೆ ಅದು ಶಿಲಾ ಪದರದಲ್ಲಿ ಜಿನುಗುವ ನೀರು. ಇದನ್ನು ಬರಿಗಣ್ಣಿನಿಂದ  ಎಷ್ಟು ಇದೆ ಎಂದು ನೋಡುವುದು ಅಸಾಧ್ಯ. ಕೆರೆ, ಬಾವಿಯ ನೀರನ್ನು ಎಷ್ಟು  ಇದೆ, ಎಷ್ಟು ತೆಗೆಯಬಹುದು ಎಂದು ಕರಾರುವಕ್ಕಾಗಿ ತಿಳಿಯಬಹುದು. ಆದರೆ ಕೊಳವೆ ಬಾವಿಯ ನೀರಿಗೆ ಅದು ಸಾಧ್ಯವಿಲ್ಲ. ಕೆಲವು ಪಳಗಿದವರು ಸ್ವಲ್ಪ…

Read more
Zink deficiency in plant

ಝಿಂಕ್ ಬಳಸಿದರೆ ಸಸ್ಯ ಆರೋಗ್ಯ ಮತ್ತು ಫಸಲು ಹೆಚ್ಚುತ್ತದೆ.

ಬೆಳೆಗಳು ಆರೋಗ್ಯವಾಗಿದ್ದು, ಫಲಧಾರಣಾ ಶಕ್ತಿ ಉತ್ತಮವಾಗಿ, ಪೌಷ್ಟಿಕ ಫಲ ಕೊಡಲು ಸತು ಎಂಬ ಸೂಕ್ಷ್ಮ ಪೊಷಕಾಂಶ ಅಗತ್ಯವಾಗಿ ಬೇಕು ಎನ್ನುತ್ತಾರೆ ಬೆಳೆ ತಜ್ಞರು. ಇತ್ತೀಚೆಗೆ ಬೆಳೆ ತಜ್ಞರುಗಳು ಸತುವಿನ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಕೆಲವು ಗೊಬ್ಬರ ತಯಾರಕರು ತಮ್ಮ ಕೆಲವು ಗೊಬ್ಬರಗಳನ್ನು (ವಿಶೇಷವಾಗಿ ಡಿಎಪಿ) ಸತುವಿನ ಮೂಲಕ ಬ್ಲೆಂಡ್ ಮಾಡಿ ಕೊಡುತ್ತಾರೆ. ಕರ್ನಾಟಕ ಸರಕಾರದ  ಕೃಷಿ ನಿಯಮಾವಳಿ ಪ್ರಕಾರ ಇಲ್ಲಿನ ಮಣ್ಣಿಗೆ ಸೂಕ್ಷ್ಮ ಪೋಷಕಾಂಶಗಳ ಜೊತೆಗೆ ಗರಿಷ್ಟ ಪ್ರಮಾಣ (3%) ದಲ್ಲಿ ಸತು ಸೇರಿಸಿರಬೇಕು. ಕರ್ನಾಟಕದ…

Read more

ಈ ಕಳೆ ಸಸ್ಯ ನಿಯಂತ್ರಿಸಲು ಕೆಲವು ಸರಳ ಉಪಾಯ.

ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ಮಾತಿನಂತೆ ಕಳೆ ಗಿಡವನ್ನು ಇನ್ನೊಂದು ಗಿಡದ ಸಹಾಯದಿಂದ ತೆಗೆಯಲು ಸಾಧ್ಯ. ಅಂಥಹ ಗಿಡಗಳು ನಮ್ಮಲ್ಲಿ ಹಲವು ಇವೆ. ಒಂದು ಸಸ್ಯವನ್ನು ಮತ್ತೊಂದು ಸಸ್ಯದಿಂದ ನಿಯಂತ್ರಿಸಬಹುದು ಎಂಬುದು ಮನಗೆಲ್ಲಾ ಗೊತ್ತಿದೆ. ರಬ್ಬರ್ ಬೆಳೆಗಾರರು  ತೋಟದಲ್ಲಿ ಇತರ ಸಸ್ಯಗಳು ಬೆಳೆಯದೆ ಇರುವ ಸಲುವಾಗಿ ಮುಚ್ಚಲು ಬೆಳೆಯನ್ನು ಬೆಳೆಸುತ್ತಾರೆ. ಅದೇ ಸಿದ್ದಾಂತದಲ್ಲಿ  ಹಳದಿ ಸೇವಂತಿಕೆ ಹೂವಿನ ಸಸ್ಯ (Singapore daisy) Scientific name : Sphagneticola trilobata  ವನ್ನು ನಿಯಂತ್ರಿಸಬಹುದು. ದ್ವಿದಳ ಜಾತಿಯ ಸಸ್ಯಗಳನ್ನು ಹಳದಿ ಹೂವಿನ…

Read more
error: Content is protected !!