tulasi tip

ತುಳಿಸಿ ಗಿಡ ಈಗ ಒಣಗುವುದೇಕೆ?

ತುಳಿಸಿ ಗಿಡಕ್ಕೆ ಸುತ್ತು ಬರಬೇಕು ಎನ್ನುತ್ತಾರೆ ಹಿರಿಯರು. ಬೆಳೆಗಳ ಬುಡಕ್ಕೆ ದಿನಾ ಹೋಗಬೇಕು ಎನ್ನುತ್ತಾರೆ  ಕೃಷಿ ವಿಜ್ಞಾನಿಗಳು. ಇದಕ್ಕೆ ಕಾರಣ ಇಲ್ಲಿದೆ. ತುಳಸಿ ಗಿಡದ ಸುತ್ತ ಒಂದು ಸುತ್ತು ಬಂದಾಗ ಎಲೆಗಳೆಲ್ಲಾ ಕಳೆಗುಂದಿರುವುದು ಕಂಡರೆ , ಎರಡನೇ ಸುತ್ತಿಗೆ ಎಲೆಯಲ್ಲಿ ಏನೋ ಇರುವುದೂ, ಮೂರನೇ ಸುತ್ತಿಗೆ ಮತ್ತೂ ಸ್ಪಷ್ಟತೆ, ಹೀಗೇ ಹತ್ತು ಸುತ್ತು ಬರುವಾಗ ಅಲ್ಲಿ ಏನಾಗಿದೆ ಎಂಬುದರ ಪೂರ್ಣ ಚಿತ್ರಣ ನಮಗೆ  ತಿಳಿಯುತ್ತದೆ. ತುಳಸಿ ಗಿಡಕ್ಕೆ ಸುತ್ತು ಬಂದಾಗ ಅದಕ್ಕೆ ಏನಾಗಿದೆ ಎಂಬುದನ್ನು ನೀವೇ ತಿಳಿದುಕೊಳ್ಳಬಹುದು. ತುಳಸಿ…

Read more
hibiscus flower

ತೋಟದ ಬೇಲಿಯಲ್ಲಿ ದಾಸವಾಳ ನೆಟ್ಟರೆ ಭಾರೀ ಅನುಕೂಲ.

ಹಿಂದಿನವರು ತಮ್ಮ ಅಡಿಕೆ ತೋಟದ ಬೌಂಡ್ರಿಯ ಸುತ್ತ ದಾಸವಾಳದ ಗಿಡ ನೆಡುತ್ತಿದ್ದರು. ಇದರ ಹಿಂದೆ ಸಾಕಷ್ಟು ವೈಜ್ಞಾನಿಕತೆ ಅಡಗಿದೆ.  ವಿಟ್ಲ, ಪುತ್ತೂರು, ಸುಳ್ಯ , ಕಾಸರಗೋಡು, ಹಾಗೆಯೇ ಶ್ರಿಂಗೇರಿ, ಕೊಪ್ಪ, ಸಾಗರ, ಶಿರಸಿ  ಕಡೆಯ  ಹಳೆಯ ಅಡಿಕೆ ಕೃಷಿಕರ ತೋಟದ ಸುತ್ತ ಬೇಲಿಗಳಲ್ಲಿ ದಾಸವಾಳದ ಸಸ್ಯ ಇರುತ್ತದೆ. ದಾಸವಾಳ ಸಸಿ ಬೆಳೆಸುವುದು ಸುಲಭ. ಅಂದಕ್ಕೆ ಹೂವೂ ಆಗುತ್ತದೆ. ಬೇಲಿ ಧೀರ್ಘ ಕಾಲದ ತನಕ ಹಾಳಾಗುವುದಿಲ್ಲ. ಇದು ಬೇಲಿ ಮಾಡುವವರಿಗೆ ತಿಳಿದಿರುವ ಸಂಗತಿ. ತಮ್ಮ ಹಿರಿಯರು ಇದನ್ನು ಅನುಸರಿಸುತ್ತಿದ್ದರು….

Read more
ಇವರಿಗೆ ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗಿಲ್ಲ

ಬೇಸಿಗೆಯಲ್ಲಿ ನೀರಿನ ಕೊರತೆಗೆ ಪರಿಹಾರ ಕಂಡುಕೊಂಡ ಕೃಷಿಕ.

ಬೇಸಿಗೆಯ ಕಾಲದಲ್ಲಿ ಎಲ್ಲರೂ ನೀರಿನ ಕೊರತೆ ಅನುಭವಿಸುತ್ತಾರೆ. ಆದರೆ ಇಲ್ಲೊಬ್ಬರು ರೈತರು ಮಳೆಗಾಲದಲ್ಲಿ ಮಳೆ ನೀರನ್ನು  ಒಂದೆಡೆ ಕೂಡಿಹಾಕಿದ್ದಾರೆ. ಅದನ್ನು ಮಣ್ಣು ಸ್ಪಂಜಿನಂತೆ ಹೀರಿಕೊಂಡು ಬೇಸಿಗೆಯ ಸಮಯದುದ್ದಕ್ಕೂ ತಗ್ಗು ಪ್ರದೇಶಕ್ಕೆ ಬಿಡುಗಡೆ ಮಾಡುತ್ತದೆ. ಹಾಗಾಗಿ ಇವರಿಗೆ ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗಿಲ್ಲ. ಬೇಸಿಗೆಯಲ್ಲಿ  ಎಲ್ಲಾ ಕೃಷಿಕರಿಗೂ ನೀರಿನದ್ದೇ ಸಮಸ್ಯೆ. ಬೆಳೆಗಳು ನೀರನ್ನು ಹೆಚ್ಚು ಅಪೇಕ್ಷಿಸುತ್ತವೆ. ಮಣ್ಣು ಹೆಚ್ಚು ನೀರು ಕುಡಿಯುತ್ತದೆ. ಆದರೆ ಮೂಲಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿರುತ್ತದೆ. ಕೊಳವೆ ಬಾವಿಗಳೂ ಸಹ  ಕೈಕೊಡುವುದು ಇದೇ ಸಮಯದಲ್ಲಿ. ಇದಕ್ಕೆ…

Read more
tender arecanut

ಅಡಿಕೆ ಬೆಳೆಗಾರರಿಗೆ ವರ – ಅಡಿಕೆ ಮಿಲ್.

ಅಡಿಕೆ ಬೆಳೆಯಲ್ಲಿ ಎಲ್ಲಾ ಕಡೆ ಒಂದೇ ಸಮಯದಲ್ಲಿ ಅಡಿಕೆ ಕೊಯಿಲು ಆದಾಗ ಸುಲಿಯುವ ಕೆಲಸ ದೊಡ್ಡ ಕಷ್ಟ. ಜನ ಸಿಗುವುದಿಲ್ಲ. ಆ ಸಮಯದಲ್ಲಿ ಒಮ್ಮೆಗೇ ಟನ್ ಗಟ್ಟಲೆ ಅಡಿಕೆ ಸಿಪ್ಪೆ ತೆಗೆಯುವ ವ್ಯವಸ್ಥೆ ಎಂದರೆ ಅಡಿಕೆ ಮಿಲ್ ಗಳು. ಇದು ಬಾಡಿಗೆಯ ಆಧಾರದಲ್ಲಿ ಕೆಲಸ ಮಾಡಿ ಬೆಳೆಗಾರರಿಗೆ ತುಂಬಾ ಸಹಕಾರಿಯಾಗುತ್ತದೆ. ಭತ್ತವನ್ನು ಗದ್ದೆಯಿಂದ ಕೊಯಿಲು ಮಾಡಿ ಮಿಲ್ ಗೆ ಒಯ್ದರೆ ಅಲ್ಲಿ ಅದನ್ನು ಅಕ್ಕಿ ಮಾಡಿಕೊಡುವಂತೆ, ಅಡಿಕೆಗೂ ಇಂತಹ  ಒಂದು ವ್ಯವಸ್ಥೆ ಬಂದಿದೆ. ಈ ಯಾಂತ್ರಿಕ ವ್ಯವಸ್ಥೆಯಲ್ಲಿ…

Read more
water over flow

ಬೋರ್ ವೆಲ್ ಗೆ ನೀರು ಹುಡುಕುವಲ್ಲಿ ಇವರದ್ದೇ ಮೇಲುಗೈ

ಇವರು ಭೂ ವಿಜ್ಞಾನ ಅಧ್ಯಯನ ಮಾಡಿದವರಲ್ಲ. ಆದರೆ ಇವರಿಗೆ ಭೂ ಗರ್ಭದಲ್ಲಿರುವ ಜಲ ಶೋಧನೆ ಕಲೆ ಗೊತ್ತಿದೆ. ಪ್ರಪಂಚದಾದ್ಯಂತ ಭೂ ಗರ್ಭ ಜಲ ಶೊಧನೆಯಲ್ಲಿ ಇವರದ್ದೇ ಮೇಲುಗೈ. ವಿಜ್ಞಾನ ಒಪ್ಪದಿದ್ದ ಪಾರಂಪರಿಕ ಜಲ ಶೋಧನಾ ವಿದ್ಯೆಯನ್ನು ಸಮಾಜ ಒಪ್ಪಿದೆ ಮತ್ತು ಗೌರವಿಸಿದೆ. ಅನಾದಿ ಕಾಲದಿಂದಲೂ ನೀರಿನ ಶೋಧನೆ ಎಂಬುದು ಕೆಲವು ಸಾಂಪ್ರದಾಯಿಕ ವಿಧಾನಗಳ ಮೂಲಕ ನಡೆಯುತ್ತಾ ಬಂದಿದೆ. ಈಗಲೂ ಇದರ ಸ್ಥಾನವನ್ನು ವೈಜ್ಞಾನಿಕ ವಿಧಾನ ಓವರ್ ಟೇಕ್ ಮಾಡಿಲ್ಲ. ಪ್ರತೀ ಹಳ್ಳಿಗಳಲ್ಲೂ ನೀರಿನ ಸೆಳೆಯನ್ನು ಗುರುತಿಸಿ ಇಲ್ಲಿ ಬಾವಿ…

Read more
sprinkler installation

ಸ್ಪ್ರಿಂಕ್ಲರ್ ನೀರಾವರಿ ಮಾಡುವವರು ತಿಳಿಯಬೇಕಾದ ಮಾಹಿತಿ.

ಬಹುತೇಕ ಕರಾವಳಿ ಮಲೆನಾಡಿನ ಅಡಿಕೆ ತೋಟದ ಬೆಳೆಗಾರರ ಮೊದಲ ಆಯ್ಕೆ ಸ್ಪ್ರಿಂಕ್ಲರ್. ಈ  ವ್ಯವಸ್ಥೆ ಹೇಗಿದ್ದರೆ ಉತ್ತಮ ಇಲ್ಲಿದೆ ಮಾಹಿತಿ. ಸ್ಪ್ರಿಂಕ್ಲರ್ ನೀರಾವರಿ ಎಂದರೆ ಹೇಳಿದಷ್ಟು ಸರಳ ಅಲ್ಲ. ಈ ನೀರಾವರಿ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಿದರೆ ಮಾತ್ರ ಅದರಲ್ಲಿ ಫಲ.ಹೆಸರೇ ಹೇಳುವಂತೆ ನೀರು ಮಳೆಯಂತೆ ಎಲ್ಲಾ ಕಡೆಗೂ ಸಿಂಚನವಾಗಬೇಕು. ಎಲ್ಲಾ ಭಾಗವೂ ಒದ್ದೆಯಾಗಬೇಕು. ಹೀಗೆ ಆಗಬೇಕಿದ್ದರೆ ಅದಕ್ಕೂ ಒಂದು ಡಿಸೈನ್ ಎಂಬುದು ಇದೆ. ಆ ಡಿಸೈನ್ ಪ್ರಕಾರ ಮಾಡಿದ್ದೇ ಆದರೆ ಸ್ರಿಂಕ್ಲರ್ ನೀರಾವರಿ ಉತ್ತಮ ಫಲ ಕೊಡುತ್ತದೆ.  ಹರಿ…

Read more
ಹುಳ ತಿಂದು ಸತ್ತ ತೆಂಗಿನ ಮರ

ತೆಂಗಿನ ಮರಗಳು ಸಾಯುತ್ತಿರುವುದಕ್ಕೆ ಕಾರಣ ಏನು?

ಸಿಡಿಲು, ಸುಳಿ ಕೊಳೆ, ಅಥವಾ ಇನ್ನೇನಾದರೂ ಕೀಟ ಬಾಧೆಯಿಂದ ತೆಂಗಿನ ಮರ ಸತ್ತರೆ ಅದನ್ನು ತಕ್ಷಣ ಕಡಿದು ಏನಿಲ್ಲವಾದರೂ ಸೌದೆ ಮಾಡಿಯಾದರೂ ವಿಲೇವಾರಿ ಮಾಡಿ. ಹೆಚ್ಚಿನ ರೈತರು  ತೆಂಗಿನ ಮರ ಸತ್ತು ಹೋದರೆ ಅದರಿಂದ ನಮಗೇನು ನಷ್ಟ ಎಂದು ಅದನ್ನು ಹಾಗೆ  ಬಿಡುತ್ತಾರೆ. ಸತ್ತು ಒಣಗಿ ಶಿಥಿಲವಾದ ಮೇಲೆ ವಿಲೇವಾರಿ ಸುಲಭ ಎಂಬ ಕಾರಣಕ್ಕೆ ಹೀಗೆ ಮಾಡುತ್ತಾರೆ. ಆದರೆ ಸತ್ತ ಮರವನ್ನು ಹಾಗೇ ಬಿಟ್ಟರೆ ಮತ್ತೆ ಒಂದೆರಡು ಮರ ಸಸಿ ಸಾಯುತ್ತದೆ ಏಕೆ ಗೊತ್ತೇ? ನಮ್ಮಲ್ಲಿ ಹಿರಿಯರು…

Read more
ಲಾಭದಾಯಕ ಕೃಷಿಗೆ ಬೇಕಾದ ಫಲವತ್ತಾದ ಮಣ್ಣು

ಕೃಷಿ ಲಾಭದಾಯಕವಾಗಲು ಬೇಕಾಗುವುದೇ ಉತ್ತಮ ಮಣ್ಣು – ಹೇಗೆ?

ಕೃಷಿ ಮಾಡುವ ನಾವೆಲ್ಲಾ ಮಣ್ಣಿನ ಬಗ್ಗೆ ಎಷ್ಟು ತಿಳಿದುಕೊಂಡರೂ ಸಾಲದು. ಮಣ್ಣು ಮೊದಲು. ಕೃಷಿ ಅನಂತರ.ಮಣ್ಣಿನಲ್ಲಿ ಫಲವತ್ತತೆ ಇದ್ದರೆ ಮಾತ್ರ ಅದರಲ್ಲಿ ಕೃಷಿ ಮಾಡಿ. ಫಲವತ್ತತೆ ಇಲ್ಲದಲ್ಲಿ ಕೃಷಿ ಯಾವಾಗಲೂ ಲಾಭದಾಯಕವಾಗುವುದಿಲ್ಲ. ಇತ್ತೀಚೆಗೆ ಈಶ ಫೌಂಡೇಶನ್ ನ ಸಧ್ಗುರುಗಳು ತಮ್ಮ ವೀಡಿಯೊದಲ್ಲಿ ಕ್ಯಾಲಿಫೋರ್ನಿಯಾ ದೇಶವು ಅಕ್ಕಿಯನ್ನು ಥೈಲ್ಯಾಂಡ್ ದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಯಾಕೆ ಭಾರತದಿಂದ ಮಾಡುವುದಿಲ್ಲ ಎಂಬ ಬಗ್ಗೆ ಕೇಳಿದಾಗ ಭಾರತದ ಅಕ್ಕಿಯಲ್ಲಿ ಯಾವ ಪೋಷಕಾಂಶಗಳೂ ಇಲ್ಲ ಎನ್ನುತ್ತಾರೆ ಎಂದಿದ್ದಾರೆ. ಅದೇ ರೀತಿ ವಿಯೆಟ್ ನಾಂ ದೇಶ…

Read more
ಜಂಬಿಟ್ಟಿಗೆ ಮಣ್ಣು

ಈ ಮಣ್ಣು ಬೆಳೆಯ ಗುಣಮಟ್ಟ ಹೆಚ್ಚಿಸುತ್ತದೆ. ಯಾಕೆ?

ಮಣ್ಣಿನ ಗುಣ ಎಂಬುದು ನಮಗೆಲ್ಲಾ ಗೊತ್ತಿರುವ ಸಂಗತಿ. ಮಣ್ಣಿನ ಗುಣ ಚೆನ್ನಾಗಿದ್ದರೆ ಕೃಷಿ ಲಾಭದಾಯಕವಾಗುತ್ತದೆ. ನಾವು ಬೆಳೆಯುವ ಬೆಳೆಯ ಫಸಲಿಗೆ ಗುಣಮಟ್ಟ ಬರುತ್ತದೆ.  ಮಣ್ಣು ಎಂಬುದು ಶಿಲಾ ಶಿಥಿಲತೆಯಿಂದ ಆದ ವಸ್ತು. ಶಿಲೆಯಲ್ಲಿರುವ ಖನಿಜಗಳು,  ಸಸ್ಯ , ಪ್ರಾಣಿಗಳ ಕಳಿಯುವಿಕೆಯಿಂದಾದ ಸಾವಯವ ವಸ್ತುಗಳು ಸೇರಿ, ಅದು ಬೇರೆ ಬೇರೆ ರೂಪಾಂತರ ಹೊಂದಿವೆ. ಒಂದೊಂದು ಕಡೆಯ ಮಣ್ಣು ಒಂದೊಂದು ರೀತಿಯಲ್ಲಿ ಇರುತ್ತವೆ. ಇದಕ್ಕೆಲ್ಲಾ ಕಾರಣ ಅಲ್ಲಿ ಆದ ಶಿಲೆ ಮತ್ತು ಅದರ ರೂಪಾಂತರ. ಕರಾವಳಿಯ ಮಣ್ಣು, ಮಲೆನಾಡಿನ ಮಣ್ಣು,…

Read more
caskuta plant

ಇದು ಔಷಧೀಯ ಗಿಡ ಅಲ್ಲ – ಬದನಿಕೆ ಕಳೆ.

ಇದರ ಒಂದು ತುಂಡು ಚೂರನ್ನು ತಂದು ನಿಮ್ಮ ಮನೆಯ ಅಥವಾ ಹೊಲದ ಗಿಡದ ಮೇಲೆ ಎಲ್ಲಿಯಾದರೂ ಹಾಕಿ. ಅದು ಬದುಕುತ್ತದೆ. ಇದಕ್ಕೆ ಎಲೆ ಇಲ್ಲ. ಬೇರೂ ಇಲ್ಲ. ಬದುಕಲು ಮಣ್ಣೂ ಬೇಕಾಗಿಲ್ಲ. ಎಲೆ , ಕಾಂಡ ಎಲ್ಲೆಲ್ಲೂ ಬದುಕುತ್ತದೆ. ಕಡಿದು ತೆಗೆದು ಸುಟ್ಟರೆ ಸಾಯಬಹುದು. ಇಲ್ಲವಾದರೆ ಮತ್ತೆ ಅಲ್ಲೇ ಹುಟ್ಟಿಕೊಳ್ಳುತ್ತದೆ. ಇದು ಒಂದು ಪರಾವಲಂಭಿ ಸಸ್ಯವಾಗಿದ್ದು, ಇದನ್ನು ಬದನಿಕೆ ಎನ್ನುತ್ತಾರೆ. ಕೆಲವರು ಈ ಬಳ್ಳಿಯನ್ನು ಔಷಧೀಯ ಬಳ್ಳಿ ಎನ್ನುತ್ತಾರೆ. ಆದರೆ ಇದು ಔಷಧೀಯ ಬಳ್ಳಿ ಅಲ್ಲ. ಬದಲಿಗೆ…

Read more
error: Content is protected !!