ಕೀಟನಾಶಕ- ರೋಗನಾಶಕವನ್ನು ಪ್ರಮಾಣಕ್ಕಿಂತ ಹೆಚ್ಚು ಬಳಸಿದರೆ ಏನಾಗುತ್ತದೆ?
ಕೃಷಿಕರಾದವರೆಲ್ಲರೂ ಒಂದಿಲ್ಲೊಂದು ಉದ್ದೇಶಕ್ಕೆ ಕೀಟನಾಶಕ- ರೋಗನಾಶಕ ಸಿಂಪಡಿಸಿರಬಹುದು. ಇವುಗಳನ್ನು ಸಿಂಪಡಿಸುವಾಗ ನಾವು ಅನುಸರಿಸಿದ ಕ್ರಮ ಎಷ್ಟು ಸರಿ- ಎಷ್ಟು ತಪ್ಪು ಎಂಬುದನ್ನು ಒಮ್ಮೆ ಯೋಚನೆ ಮಾಡಲೇಬೇಕು. ಪ್ರತೀಯೊಂದು ಸಸ್ಯ ಸಂರಕ್ಷಣಾ ಔಷಧಿಗಳ ಬಳಕೆಗೆ ನಿರ್ದಿಷ್ಟ ಪ್ರಮಾಣ ಎಂಬುದಿದೆ. ಅದಕ್ಕಿಂತ ಹೆಚ್ಚು ಬಳಕೆ ಮಾಡಿದಾಗ ಆಗುವ ಅನಾಹುತಗಳೇನು? ಈಗಾಗಲೇ ಆದದ್ದು ಏನು ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ವೈಧ್ಯರು ರೋಗಿಗೆ ಒಂದು ಔಷಧಿ ಕೊಡುತ್ತಾರೆ, ಯಾವ ವೈಧ್ಯರೂ ಕೊಡುವಾಗ ಇದನ್ನು ಇಂತಹ (ಬೆಳಿಗ್ಗೆ+ ಮಧ್ಯಾನ್ಹ+ ರಾತ್ರೆ) ಹೊತ್ತಿನಲ್ಲಿ, ಇಂತಹ ಸಮಯದಲ್ಲಿ…