banana plantation

ಬಾಳೆ ಬೆಳೆಯುವಾಗ ಕಂದುಗಳನ್ನು ನಿಯತ್ರಿಸುವುದು ಹೇಗೆ?

ಬಾಳೆ ಬೆಳೆಗಾರರಿಗೆ ಕಂದುಗಳ ನಿಯಂತ್ರಣ ಒಂದು ದೊಡ್ಡ ಸಮಸ್ಯೆ. ಕಂದುಗಳು ಕಡಿಮೆಯಾದಷ್ಟೂ ಬಾಳೆ ಗೊನೆ ಚೆನ್ನಾಗಿ ಬರುತ್ತದೆ. ಬಾಳೆ ನೆಟ್ಟು ಸುಮಾರು 5-6 ತಿಂಗಳಿಗೆ ಕಂದುಗಳು ಬರಲಾರಂಭಿಸುತ್ತವೆ. ಕಂದುಗಳು ಬಂದ ನಂತರ ಇರುವ ಆಹಾರ ಅವುಗಳಿಗೂ ಹಂಚಿಕೆಯಾಗಬೇಕು. ಆಗ ಹೆಚ್ಚು ಹೆಚ್ಚು ಗೊಬ್ಬರಗಳನ್ನು ಕೊಡಬೇಕು. ಕಂದುಗಳನ್ನು ನಿಯಂತ್ರಿಸಿಕೊಂಡರೆ ಬಾಳೆಗೆ ಪೋಷಕಾಂಶ ಹಾಗೂ ನೀರಾವರಿ ಕಡಿಮೆ ಸಾಕಾಗುತ್ತದೆ. ಬಾಳೆ ಗೊನೆ ಪುಷ್ಟಿಯಾಗಿ ಬೆಳೆಯುತ್ತದೆ.  ಹಾಗಾದರೆ ಬಾಳೆಯಲ್ಲಿ ಕಂದುಗಳನ್ನು ತೆಗೆಯುವ ವಿಧಾನ ಹೇಗೆ? ಕಂದುಗಳ ನಿಯಂತ್ರಣಕ್ಕೂ ಬಾಳೆಯ ಅಧಿಕ ಇಳುವರಿಗೂ…

Read more
banana bunch

ಬಾಳೆ ನೆಡುವಾಗ ಥಿಮೆಟ್ ಬದಲು ಇದನ್ನು ಹಾಕಿ.

ಬಾಳೆ ಬೆಳೆಯಲ್ಲಿ  ಪ್ರಮುಖ ಸಮಸ್ಯೆಯಾದ ಕಾಂಡ – ಗಡ್ಡೆ  ಕೊರಕ ಹುಳದ ನಿಯಂತ್ರಣಕ್ಕೆ ಫೋರೇಟ್ ಮುಂತಾದ ವಿಷದ ಬದಲು ಜೈವಿಕ ಪರಿಹಾರ ಸುರಕ್ಷಿತ.  ಬಾಳೆ ಗೊನೆ ಹಾಕುವ ಸಮಯದಲ್ಲಿ ಅದಕ್ಕೆ ದಿಂಡು ಹುಟ್ಟಿಕೊಳ್ಳುತ್ತದೆ.  ದಿಂಡು ಬರುವ ತನಕ ಬಾಳೆಗೆ ಅಂತಹ ಕೀಟ ಸಮಸ್ಯೆ ಇಲ್ಲ. ಯಾವಾಗ ಗೊನೆ ಹಾಕುತ್ತದೆಯೋ ಆಗ ಮುನ್ಸೂಚನೆ ಇಲ್ಲದೆ ಕಾಂಡ ಕೊರಕ ಹುಳದ ತೊಂದರೆ ಉಂಟಾಗುತ್ತದೆ. ಈ ಕಾಂಡ ಕೊರಕ ಹುಳ ಬಾಧೆ ಇಲ್ಲದ ಬಾಳೆ ತಳಿಗಳೇ ಇಲ್ಲ. ಇದಕ್ಕೆ ಎಲ್ಲರೂ ವಿಷ…

Read more
egg fruit

ಇದು ಎಲ್ಲಾ ವರ್ಗದವರೂ ತಿನ್ನಬಹುದಾದ ಮೊಟ್ಟೆ ಹಣ್ಣು.

ಮೊಟ್ಟೆಯನ್ನು ಎಲ್ಲರೂ ತಿನ್ನುವುದಿಲ್ಲ. ಆದರೆ ಈ ಮೊಟ್ಟೆ ಹಣ್ಣು ತಿಂದರೆ ಮೊಟ್ಟೆಯಲ್ಲಿರುವುದಕ್ಕಿಂತ ಹೆಚ್ಚು  ಸತ್ವಗಳು ದೊರೆಯುತ್ತದೆ. ಇದು ಮಾಂಸಾಹಾರ ಅಲ್ಲ. ಸಸ್ಯಾಹಾರ. ಎಗ್ ಪ್ರುಟ್ ಎಂದು ಕರೆಯಲಾಗುವ ಈ ಹಣ್ಣು ಅತ್ಯುತ್ತಮ ಪೌಷ್ಟಿಕಾಂಶ (8 ಮೀ. ತನಕ) ಈ ಸಸ್ಯದಲ್ಲಿ ಅಧಿಕ ಪ್ರಮಾಣದಲ್ಲಿ ಕಾಯಿಗಳಾಗುತ್ತದೆ. ಹಣ್ಣಾದಾಗ ಕಡು ಹಳದಿ ಬಣ್ಣ ಬರುತ್ತದೆ. ಹಣ್ಣಿನ ಒಳ ತಿರುಳು ಭಾಗ ಮೊಟ್ಟೆಯಲ್ಲಿ ಹಳದಿ ಭಾಗ ಇದ್ದಂತೆ ಕಾಣುತ್ತದೆ. ಅದಕ್ಕಾಗಿ ಮೊಟ್ಟೆ ಹಣ್ಣು ಎಂದು ಕರೆದಿರಬೇಕು. ಉಷ್ಣ ವಲಯದ ಈ ಹಣ್ಣಿನ…

Read more
pomegranate

ದಾಳಿಂಬೆಯ ಹೊಸ ಹೈಬ್ರೀಡ್ ತಳಿ.

ದಾಳಿಂಬೆ ಬೆಳೆಗಾರರಿಗೆ ಅಧಿಕ ಇಳುವರಿ ನೀಡಬಲ್ಲ, ಆಕರ್ಷಕ ಬಣ್ಣದ ತಳಿಯಾಗಿ ಪರಿಚಯಿಸಲ್ಪಟ್ಟದ್ದು ಸೋಲಾಪುರ ಲಾಲ್. ಭಾರತ ಸರಕಾರದ ಕೃಷಿ ಅನುಸಂಧಾನ ಪರಿಷತ್ತು ದಾಳಿಂಬೆ ಬೆಳೆ  ಕುರಿತಂತೆ  ಸಂಶೋಧನೆ ನಡೆಸುವುದಕ್ಕಾಗಿ ಮಹಾರಾಷ್ಟ್ರದ ಸೋಲಾಪುರದಲ್ಲಿ  ರಾಷ್ಟ್ರೀಯ  ದಾಳಿಂಬೆ ಸಂಶೋಧನಾ ಸಂಸ್ಥೆಯನ್ನು  ಸ್ಥಾಪಿಸಿದೆ. ಇಲ್ಲಿಂದ ಬಿಡುಗಡೆಯಾದ ಅಧಿಕ ಪೋಷಕಾಂಶ ಒಳಗೊಂಡ ಹೈಬ್ರೀಡ್ ದಾಳಿಂಬೆ ಸೋಲಾಪುರ ಲಾಲ್. ಈ ಸಂಸ್ಥೆಯು ದಾಳಿಂಬೆ  ಬೆಳೆಗಾರರಿಗೆ, ಬೇಸಾಯಕ್ಕೆ  ಸೂಕ್ತವಾಗುವ ಬೇರೆ  ಬೇರೆ ದಾಳಿಂಬೆ  ತಳಿಗಳನ್ನು  ಪರಿಚಯಿಸಿದೆ. ಮೊದಲಾಗಿ ಗಣೇಶ ತಳಿಯನ್ನು   ಪರಿಚಯಿಸಿ ನಂತರ 2003 -04…

Read more
ಗೊನೆ ಹಾಕಿದ ಬಾಳೆ

ಬಾಳೆ ಯಾವಾಗ ನೆಟ್ಟರೆ ಹೆಚ್ಚು ಲಾಭವಾಗುತ್ತದೆ?

ಬಾಳೆ ಕಾಯಿಗೆ ಬೇಡಿಕೆ ಇರುವ ತಿಂಗಳುಗಳಿಗೆ 9-10  ತಿಂಗಳ ಮುಂಚೆ ನಾಟಿ ಮಾಡುವುದರಿಂದ  ಬೆಳೆದವರಿಗೆ ಉತ್ತಮ ಬೆಲೆ ಸಿಕ್ಕಿ ಲಾಭವಾಗುತ್ತದೆ. ಸಾಮಾನ್ಯವಾಗಿ ಹಬ್ಬದ ದಿನಗಳು ಪ್ರಾರಂಭವಾಗುವ ನಾಗರ ಪಂಚಮಿ, ಕೃಷ್ಣಾಷ್ಟಮಿ,ಚೌತಿ ಹಬ್ಬ ನವರಾತ್ರೆ, ಮತ್ತು ದೀಪಾವಳಿಗೆ ಕಠಾವಿಗೆ ಸಿಗುವಂತೆ ಒಂದು ತಿಂಗಳ ಮಧ್ಯಂತರದಲ್ಲಿ  ಬಾಳೆ ಸಸಿ ನೆಟ್ಟು ಬೆಳೆಸಿದರೆ ಎಲ್ಲಾ ಹಬ್ಬದ ಸಮಯದಲ್ಲೂ ಕಠಾವಿಗೆ ಸಿಗುತ್ತದೆ.    ಹೆಚ್ಚಿನವರು ಬಾಳೆ ನಾಟಿ ಮಾಡಲು ಆಯ್ಕೆ ಮಾಡುವುದು ಮಳೆಗಾಲ ಪ್ರಾರಂಭದ ದಿನಗಳನ್ನು. ಎಲ್ಲರೂ ಇದೇ ಸಮಯದಲ್ಲಿ ನಾಟಿ ಮಾಡಿದರೆ…

Read more
Pineapple Shridhara gowda

ಅನನಾಸು ಬೆಳೆಯಲ್ಲೂ ಕೋಟಿ ಸಂಪಾದನೆ ಸಾಧ್ಯವಿದೆ.

ಕೋಟಿ ಸಂಪಾದನೆಗಾಗಿ ಜೀವಕ್ಕೆ ಅಪಾಯ ಇರುವ , ಅತ್ಯಧಿಕ ತಲೆಬಿಸಿ ಇರುವ  ಬೆಳೆಗಳ ಹಿಂದೆ ಹೋಗಿ ಪಶ್ಚಾತ್ತಾಪ ಪಡಬೇಡಿ. ಶ್ರಮ ಪಟ್ಟು ದುಡಿದರೆ ಕೋಟಿ ಸಂಪಾದನೆಗೆ  ಬೇರೆ ತೋಟಗಾರಿಕಾ ಬೆಳೆಗಳೂ ಇವೆ. ಜನ ಅಧಿಕ ಆದಾಯದ ಬೆಳೆ ಬೇಕು ಎಂದು ಅತ್ಯಂತ ರಿಸ್ಕ್ ಇರುವ ಶ್ರೀ ಗಂಧದಂತಹ ಬೆಳೆಯ ಹಿಂದೆ ಹೋಗುತ್ತಿದ್ದಾರೆ, ಬುದ್ಧಿವಂತ ರೈತರು ಅಷ್ಟು ವರ್ಷ ಕಾಯದೆ, ಕೆಲವೇ ವರ್ಷಗಳಲ್ಲಿ ಸ್ವಂತ ಭೂಮಿ ಇಲ್ಲವೇ ಲೀಸ್ ಗೆ ಪಡೆದ ಭೂಮಿಯಲ್ಲಾದರೂ ಅನನಾಸು ಬೆಳೆದು ಕೋಟಿಯನ್ನು ಕಂಡವರಿದ್ದಾರೆ….

Read more

ಈ ಹಣ್ಣು ತಿಂದರೆ ಆರೋಗ್ಯ ನಿಮ್ಮ ಹತೋಟಿಯಲ್ಲಿರುತ್ತದೆ.

ಪ್ಯಾಶನ್ ಪ್ರುಟ್ Passiflora ಎಂಬ ಹಣ್ಣನ್ನು ಬಹಳ ಹಿಂದಿನಿಂದಲೂ ತಜ್ಞರು ಬಹಳ ಆರೋಗ್ಯಕರ ಹಣ್ಣು ಎಂದು ಹೇಳುತ್ತಾ ಬಂದಿದ್ದಾರೆ. ಇದನ್ನು ಮೈನರ್ ಪ್ರೂಟ್  ವಿಭಾಗದಲ್ಲಿ ಸೇರಿಸಿ ಅದರ ಆರೋಗ್ಯ ಗುಣ, ಬೆಳೆ ಕ್ರಮ, ಮೌಲ್ಯ ವರ್ಧನೆ ಇತ್ಯಾದಿಗಳ ಬಗ್ಗೆ ಸಂಶೋಧನೆ ನಡೆದಿದೆ. ಬೆಂಗಳೂರಿನ ಹೇಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಇದರ ಬಗ್ಗೆ ಸಂಶೋಧನೆಗಳು ನಡೆಯುತ್ತಿದೆ. ಇಲ್ಲಿ ಅರ್ಕಾ ಕಾವೇರಿ ಎಂಬ ನೇರಳೆ ಬಣ್ಣದ  ಹಣ್ಣಿನ ತಳಿಯನ್ನೂ ಅಭಿವೃದಿ ಮಾಡಲಾಗಿದೆ. ಈ ಹಣ್ಣು  ಬೆಳೆಸಲು ಯಾವುದೇ ಕಷ್ಟವಿಲ್ಲ….

Read more
ಸೀತಾಫಲದ ಹಣ್ಣುಗಳು

ಸೀತಾಫಲ ಬೆಳೆ ಜೀವನಕ್ಕೆ ಹೊಸ ತಿರುವು ಕೊಟ್ಟಿತು.

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಸಂಗೊಳಗಿಯ 45 ವಯಸ್ಸಿನ ಸಣ್ಣ ರೈತ ವೆಂಕಟರಾವ ಬಿರಾದಾರ ಒಂದು ಎಕರೆಯಲ್ಲೇ ತರಹೇವಾರಿ ಹಣ್ಣು ತರಕಾರಿ ಬೆಳೆದು ವರ್ಷಕ್ಕೆ ಸುಮಾರು 5 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಹಗಲಿರುಳು ಕಠಿಣ ಪರಿಶ್ರಮದಿಂದ ಅರ್ಧ ಎಕರೆಯಲ್ಲಿ ಬೆಳೆದ ಸೀತಾಫಲ ಹಣ್ಣಿನಿಂದ  ತನ್ನ ಆರ್ಥಿಕ ಸ್ಥಿತಿಗತಿಯೇ  ಬದಲಾಯಿತು. ಇದು ಇತರೆ ಸಣ್ಣ ರೈತರಿಗೆ ಮಾದರಿಯಾಗಿದೆ. ಕೃಷಿ ಒಂದೇ ಅವಕಾಶವಾಗಿತ್ತು: ವೆಂಕಟರಾವ್ ಬಡತನದ ಕಾರಣ ಎಸ್.ಎಸ್.ಎಲ್.ಸಿ. ನಂತರ ವಿದ್ಯಾಭ್ಯಾಸ ಮುಂದುವರಿಸಲಿಲ್ಲ. ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದ…

Read more
ಉಪಚಾರ ಮಾಡಿ ಚೆನ್ನಾಗಿ ಹೂ ಬಿಟ್ಟ ಮಾವಿನ ಮರ.

ಮಾವಿನ ಮರದಲ್ಲಿ ಹೂ ಬರಲು ಇದನ್ನು ಮಾಡಬೇಕು.

ಮಾವಿನ ಮರದಲ್ಲಿ ಡಿಸೆಂಬರ್ ತಿಂಗಳಿಂದ ಪ್ರಾರಂಭವಾಗಿ ಫೆಬ್ರವರಿ ತನಕ ಹೂವಾಗುತ್ತದೆ. ಹೂವಾಗುವ ಸಮಯದಲ್ಲಿ  ಮರದ ಆರೋಗ್ಯ ಉತ್ತಮವಾಗಿರಬೇಕು. ಮುಖ್ಯವಾಗಿ ಮಾವಿನ ಹೂ ಬರುವ ಮೊಗ್ಗು (bud) ಭಾಗ ಆರೋಗ್ಯವಾಗಿದ್ದರೆ, ಅಂದರೆ ಕೀಟ , ರೋಗ ಸೋಂಕಿನಿಂದ ಮುಕ್ತವಾಗಿದ್ದರೆ, ಹೂ ಹೆಚ್ಚು ಬರುತ್ತದೆ. ಮುಂದೆ ಹೂವಿಗೆ ಬರುವ ಕೀಟಗಳೂ ಕಡಿಮೆಯಾಗುತ್ತವೆ. ಹೂವು ಉದುರುವುದು ಕಡಿಮೆಯಾಗಿ ಕಾಯಿ ಕಚ್ಚುವಿಕೆ ಹೆಚ್ಚುತ್ತದೆ. ಇದಕ್ಕೆ ಮರ ಚಿಗುರುವ ಮುಂಚೆ ಕೆಲವು ಉಪಚಾರಗಳನ್ನು ತಪ್ಪದೆ ಮಾಡಬೇಕು. ಗೇರು ಮರ ಚಿಗುರಿದರೆ ಅದರಲ್ಲಿ ಹೂ ಗೊಂಚಲು…

Read more
ಬಾಳೆ ಗೊನೆಗೆ ಕವರ್ ಹಾಕಿರುವುದು- Covering for banana bunch

ಬಾಳೆ ಗೊನೆಗೆ ಕವರ್ ಹಾಕಿದರೆ ಹೆಚ್ಚು ಬೆಲೆ.

ಈಗ ಮಾರುಕಟ್ಟೆಯಲ್ಲಿ ದೊರೆಯುವ ಬಾಳೆ ಹಣ್ಣುಗಳನ್ನು ಸರಿಯಾಗಿ ಗಮನಿಸಿದ್ದೀರಾ? ಅವುಗಳ ಮೇಲೆ ಒಂದೇ ಒಂದು ಕಲೆ ಕೂಡಾ ಇರುವುದಿಲ್ಲ. ಹಣ್ಣು ತಿನ್ನುವ ಮುಂಚೆ ಅದನ್ನು ತೊಳೆದು ತಿನ್ನಬೇಕು ಎನ್ನುತ್ತಾರೆ. ಆದರೆ ಇದನ್ನು ಕೈತೊಳೆದು ಮುಟ್ಟುಬೇಕು ಎಂಬಷ್ಟು ಸ್ವಚ್ಚವಾಗಿರುತ್ತದೆ. ಹಣ್ಣು ನೋಡಿದರೆ ಎಂತವನಿಗೂ  ಕೊಳ್ಳುವ ಮನಸ್ಸಾಗಬೇಕು.  ಇದು ಗಾಳೆ ಗೊನೆಗೆ ಕವರ್ ಹಾಕಿ ಬೆಳೆದ ಕಾಯಿಯಾಗಿದ್ದು, ಮಾರುಕಟ್ಟೆಯಲ್ಲಿ ಇದಕ್ಕೆ ಉತ್ತಮ ಬೇಡಿಕೆ. ಮುಂದಿನ ದಿನಗಳಲ್ಲಿ ಇದು ಮಾಮೂಲಿಯಾಗಲಿದೆ.  ಬಹಳ ಹಿಂದಿನಿಂದಲೂ ವಿದೇಶಗಳಿಗೆ ರಪ್ತು ಮಾಡುವ ಉದ್ದೇಶದ ಬಾಳೆ ಕಾಯಿಗಳಿಗೆ…

Read more
error: Content is protected !!