
ಕೆಂಪಡಿಕೆ ಇಳಿಕೆ- ಚಾಲಿ ಅಸ್ಥಿರ-ಇಂದಿನ ಧಾರಣೆ-01-10-2021
ಕೆಂಪಡಿಕೆ ಮಾಡುವ ಎಲ್ಲಾ ಕಡೆ ರಾಶಿ ದರ ಕೇವಲ 15 ದಿನಗಳ ಕಾಲಾವಧಿಯಲ್ಲೇ ಕ್ವಿಂಟಾಲಿಗೆ 8000 ಇಳಿಕೆಯಾಗಿದೆ. ಚಾಲಿ ಯಾವುದೋ ಕಾರಣಕ್ಕೆ ಕ್ಯಾಂಪ್ಕೋ ಸಂಸ್ಥೆ ದರ ಇಳಿಸದೆ ಅಲ್ಲಿಂದಲ್ಲಿಗೆ ನಿಲ್ಲಿಸಿದೆ. ನಮೂದಿಸಿದ ದರಕ್ಕೂ ಕೊಳ್ಳುವ ದರಕ್ಕೂ ಗುಣಮಟ್ಟದ ಹೆಳೆಯಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬರಲಾರಂಭಿಸಿದೆ. ಸ್ವಲ್ಪ ಅಸ್ಥಿರತೆ ಸೂಚನೆ ಕಂಡು ಬರಲಾರಂಭಿಸಿದೆ. ಸಧ್ಯವೇ ಅಡಿಕೆ ವ್ಯವಹಾರ ನಡೆಸುವ ದೈತ್ಯ ಸಹಕಾರಿ ಸಂಸ್ಥೆ ತನ್ನ ವಾರ್ಷಿಕ ಮಹಾಸಭೆ ನಡೆಯಲಿದೆ. ಆ ತನಕ ದರ ಸ್ಥಿರತೆ ಇರಬಹುದು ಎಂಬುದಾಗಿ ಆಡಿಕೊಳ್ಳುತ್ತಿದ್ದಾರೆ….