ಅಡಿಕೆ ರಾಸಿ

ಮುಂದಿನ ತಿಂಗಳಲ್ಲಿ ಅಡಿಕೆ ಧಾರಣೆ ಹೇಗಾಗಬಹುದು?

ಜನವರಿ 2022 ಅಡಿಕೆ ಬೆಳೆಗಾರರು ಹೊಸ ಚಾಲಿ ಅದೂ ಸಾಧಾರಣ ಗುಣಮಟ್ಟದ ಅಡಿಕೆಗೆ ಕಿಲೋ 430-440  ತನಕ ಪೆಡೆದಿದ್ದರು. ಫೆಬ್ರವರಿಯಲ್ಲಿ ಧಾರಣೆ ಕುಂಟುತ್ತಾ  ಸಾಗಿದೆ.  ಕ್ಯಾಂಪ್ಕೋ ಬೆಂಬಲದಲ್ಲಿ ದರ ಬೀಳಲಿಲ್ಲ ಎನ್ನಲಾಗುತ್ತಿದೆ. ಖಾಸಗಿಯವರು ದರ ಇಳಿಸಿ, ನಾವು ಸ್ಪರ್ಧೆಗೆ ಇಲ್ಲ ಎಂದು ಹಿಂದೆ ಸರಿದಿದ್ದಾರೆ. ಈ ಎಲ್ಲಾ ಕಾರಣಗಳಿಂದ ಮುಂದಿನ ತಿಂಗಳು ಚಾಲಿ ಅಡಿಕೆ ದರ ಸ್ವಲ್ಪ ಹಿಂದೆ ಬರುವ ಸಾಧ್ಯತೆ ಕಂಡು ಬರುತ್ತಿದೆ. ಆದಾಗ್ಯೂ ಸ್ವಲ್ಪ ಪ್ರಮಾಣದಲ್ಲಿ  ಆಮದು ಆಗಿದೆಯಾದರೂ, ಇದನ್ನು ಸರಕಾರದ ಗಮನಕ್ಕೆ ತಂದು…

Read more
ಉತ್ತಮ ಇಳುವರಿಯ ತೆಂಗು

100 ತೆಂಗಿನ ಮರಕ್ಕೆ 10000 ಕಾಯಿ ಹೇಗೆ ಪಡೆಯಲು ಬೇಕಾದ ಆರೈಕೆ.

ತೆಂಗಿನ ಮರವೊಂದರ ಇಳುವರಿ ಸಾಮರ್ಥ್ಯದಷ್ಟನ್ನು ನಾವು ಪಡೆಯುತ್ತಿಲ್ಲ.  ಯಾರಿಗೆ 100 ತೆಂಗಿನ ಮರಕ್ಕೆ 10,000 ತೆಂಗಿನಕಾಯಿ ಆಗುತ್ತದೆಯೋ ಅವರಿಗೆ ತೆಂಗು ಕೃಷಿ ಲಾಭದಾಯಕ. 10000 ಕಾಯಿಗಿಂತ ಹೆಚ್ಚು ಪಡೆಯಲು ಹಾಕಬೇಕಾದ ಗೊಬ್ಬರ ಮತ್ತು ಮಾಡಬೇಕಾದ ಆರೈಕೆ  ಇವು. ತೆಂಗು ಒಂದು ಏಕದಳ ಸಸ್ಯ. ಇದಕ್ಕೆ ತಾಯಿ ಬೇರು ಇಲ್ಲ. ಇರುವ ಎಲ್ಲಾ ಹಬ್ಬು ಬೇರುಗಳೂ ಆಹಾರ ಸಂಗ್ರಹಿಸಿ ಕೊಡುವ ಬೇರುಗಳಾಗಿದ್ದು, ನಿರಂತರವಾಗಿ ನಿರ್ದಿಷ್ಟ ಪ್ರಮಾಣದ ಪೋಷಕಗಳನ್ನು ಕೊಟ್ಟರೆ ಇದು ಗರಿಷ್ಟ ಇಳುವರಿಯನ್ನು ಕೊಡಬಲ್ಲುದು. ತೆಂಗಿನ ಉತ್ತಮ ಇಳುವರಿಗೆ …

Read more
ಕೆಂಪಡಿಕೆ ರಾಸೀ

ಕೆಂಪಡಿಕೆ ಉಮೇದು – ಚಾಲಿ ನಡುಕ- ಕರಿಮೆಣಸು ಕುಸಿತ.22-02-2022 ಮಾರುಕಟ್ಟೆ.

ಈ ವರ್ಷದ ನಿರೀಕ್ಷೆಯಂತೆ ಕೆಂಪಡಿಕೆ ದರಕ್ಕೆ ಅಂಜಿಕೆ ಇಲ್ಲ. ಇದು ಏರಿಕೆಯಾಗುವುದು ತಡವಾದರೂ ಇಳಿಕೆ ಆಗುವ ಸಾಧ್ಯತೆ ತುಂಬಾ ಕಡಿಮೆ. ಚಾಲಿ ಮಾತ್ರ ಈ ವರ್ಷ ಭಾರೀ ಏರಿಕೆಯ ನಿರೀಕ್ಷೆ ಇಲ್ಲ. ಹಾಗೆಂದು ಬಾರೀ ಇಳಿಕೆಯೂ ಆಗದು. ಇಂದು ದಿನಾಂಕ 22-02-2022 ಮಂಗಳವಾರ ರಾಜ್ಯದ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಅಡಿಕೆ, ಕರಿಮೆಣಸು, ಕೊಬ್ಬರಿ, ರಬ್ಬರ್, ಕಾಫೀ ದರ ಹೇಗಿತ್ತು ಗಮನಿಸಿ. ಚಾಲಿ ದರ ಖಾಸಗಿಯವರ ಸ್ಪರ್ಧೆ ಇಲ್ಲದೆ ಅಲ್ಲಾಡುತ್ತಿಲ್ಲ. ಹಾಗೆಂದು ಕರಾವಳಿಯಲ್ಲಿ ಅಡಿಕೆ ಬೆಳೆಗಾರರು…

Read more
ಅಡಿಕೆ ಸಿಂಗಾರ

ಅಡಿಕೆ – ಸಿಂಗಾರಕ್ಕೆ ಸಿಂಪರಣೆ ಯಾವಾಗ ಯಾವುದನ್ನು ಮಾಡಬೇಕು?

ಅಡಿಕೆಯ ಮಿಡಿ ಉಳಿಸುವುದಕ್ಕೆ ಕೀಟನಾಶಕ, ಶಿಲೀಂದ್ರನಾಶಕದ ಬಳಕೆ ಯಾವಾಗ ಯಾವುದನ್ನು ಮಾಡಬೇಕು, ಅನವಶ್ಯಕವಾಗಿ ಸಿಂಪಡಿಸಿದರೆ ನಷ್ಟ ಏನು ಎಂಬ ಬಗ್ಗೆ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ಹಿರಿಯ ರೋಗ ಶಾಸ್ತ್ರಜ್ಞ ಡಾ. ವಿನಾಯಕ ಹೆಗಡೆಯವರ ಜೊತೆ ಚರ್ಚಿಸಿ ಆ ಪ್ರಕಾರ ರೈತರಿಗೆ ತಿಳಿಸುವ ಮಾಹಿತಿ ಇದು. ಅಡಿಕೆಗೆ ಬೆಲೆ ಚೆನ್ನಾಗಿದೆ. ಹಾಗಾಗಿ  ಹೇಗಾದರೂ ಮಾಡಿ ಹೂ ಗೊಂಚಲಿನಲ್ಲಿ ಇರುವ ಎಲ್ಲಾ ಕಾಯಿಗಳನ್ನೂ ಉಳಿಸಿಕೊಳ್ಳಬೇಕು, ಗರಿಷ್ಟ ಇಳುವರಿ ಪಡೆಯಬೇಕು ಎಂಬ  ಆಸೆಯಲ್ಲಿ ಇತ್ತೀಚೆಗೆ ನಾವು ಹೂಗೊಂಚಲಿಗೆ ಕೀಟನಾಶಕ,…

Read more
ರೋಗ ಸೋಂಕಿತ ಮರ

ತೆಂಗು- ಅಡಿಕೆ ಮರಗಳಿಗೆ ಬಂದಿದೆ ಹೊಸ ಮಾರಣಾಂತಿಕ ಸಾಂಕ್ರಾಮಿಕ ರೋಗ.

ತೆಂಗು ಅಡಿಕೆ ಬೆಳೆ ಬೆಳೆಯುವುದು ಈಗ ಹಿಂದಿನಷ್ಟು ಸುಲಭವಾಗಿಲ್ಲ. ಹಿಂದೆ ಸಸಿ ನೆಟ್ಟರೆ ಅದು ನೀರಾವರಿ ಗೊಬ್ಬರ ಕೊಟ್ಟರೆ ಚೆನ್ನಾಗಿಯೇ ಬೆಳೆಯುತ್ತಿತ್ತು. ಈಗ ಹಾಗಿಲ್ಲ. ನೀರು, ಗೊಬ್ಬರ ಎರಡನ್ನು ಕೊಡಲು ನಾವು ಜಿಪುಣತನ ಮಾಡುವುದಿಲ್ಲ. ಆದರೆ ವಾತಾವರಣ ನಮಗೆ ಸಹಕಾರ ಕೊಡುತ್ತಿಲ್ಲ. ಹಿಂದೆ ಮೈನರ್ ರೋಗ ಕಾರಕಗಳಾಗಿದ್ದವು, ಈಗ ಪ್ರಭಲರೋಗಗಳಾಗುತ್ತಿವೆ. ಅದೇ ರೀತಿಯಲ್ಲಿ ಕೀಟಗಳೂ. ಕೀಟ – ರೋಗ ನಾಶಕಕ್ಕೆ ಬಗ್ಗದ ಸ್ಥಿತಿ  ಉಂಟಾಗಿದೆ. ಬಹುಷಃ ಇನ್ನು ಮುಂದಿನ ದಿನಗಳು ಅಡಿಕೆ ತೆಂಗು ಬೆಳೆಗಾರರಿಗೆ ರೋಗ –…

Read more
ಆಡಿಕೆ

ಅಡಿಕೆ ಮಾರುಕಟ್ಟೆ ಡಲ್ ಯಾಕೆ?. ದಿನಾಂಕ:09-02-2022 ರಂದು ರಾಜ್ಯದಲ್ಲಿ ಎಲ್ಲೆಲ್ಲಿ ಏನು ದರ.

ಅಡಿಕೆ ದರ ಎರಿಕೆಯಾಗುವ ಸೂಚನೆ ಇಲ್ಲ. ಪುಣ್ಯಕ್ಕೆ ಇಳಿಕೆಯೂ ಇಲ್ಲವಲ್ಲ. ಅದಕ್ಕೆ ಸಂತೋಷ ಪಡಬೇಕು. ಚಾಲಿ ಅಡಿಕೆ ಮಾರುಕಟ್ಟೆ ಮೇಲ್ನೋಟಕ್ಕೆ ಸ್ಥಿರವಾಗಿದೆ ಎಂದು ಕಂಡುಬಂದರೂ ದರ ಇಳಿಕೆಯಾಗಿದೆ. ಸೂಚಿಸಿದ ದರಕ್ಕೆ ಖರೀದಿ ಮಾಡುವವರು ಇಲ್ಲ.  ಹಾಗಾಗಿ ಅಡಿಕೆ ಮಾರುಕಟ್ಟೆ ಡಲ್. ಬಹುಷಃ ಇದು ಇನ್ನೂ 2-3 ತಿಂಗಳು ಹೀಗೇ ಮುಂದುವರಿಯುವ ಸಾಧ್ಯತೆ.ದಿನಾಂಕ 09-02-2022  ಬುಧವಾರ ರಾಜ್ಯದಲ್ಲಿ ಅಡಿಕೆ ಮಾರುಕಟ್ಟೆ ಧಾರಣೆ. ಚಾಲಿ ಅಡಿಕೆ ಹಾಗೂ ಕೆಂಪಡಿಕೆಯ ಆಮದು ಸಾಧ್ಯತೆ ಇದೆ ಎಂಬ ಸುದ್ದಿ ಇದೆ. ಈಗಾಗಲೇ  ಮಿಜೋರಾಂ…

Read more
ಶತಮಂಗಳ ಅಡಿಕೆ ಮರ

ಭಾರೀ ಬೇಡಿಕೆಯ ಹೊಸತಳಿಯ ಅಡಿಕೆ – ಶತಮಂಗಳ.

ಇತ್ತೀಚೆಗೆ ಬಿಡುಗಡೆಯಾದ ಅಧಿಕ ಇಳುವರಿ ಕೊಡಬಲ್ಲ ಭಾರೀ ಭರವಸೆಯ ತಳಿ ಶತಮಂಗಳ ದ ಬೀಜ , ಸಸಿಗೆ ಭಾರೀ ಬೇಡಿಕೆ. ಈ ತಳಿಯನ್ನು CPCRI ವಿಟ್ಲ ಕೇಂದ್ರವು ಬಿಡುಗಡೆ ಮಾಡಿದ್ದು, ಈಗಿರುವ ಎಲ್ಲಾ ತಳಿಗಳಿಗಿಂತ ಅಧಿಕ ಇಳುವರಿ ಕೊಡುವ ಸಾಮರ್ಥ್ಯ ಹೊಂದಿದೆ. ಹಾಗಾಗಿ ಬೆಳೆಯುವ ರೈತರು ಈ ತಳಿಗೆ ಮುಗಿ ಬೀಳುತ್ತಿದ್ದಾರೆ. ಪ್ರಾದೇಶಿಕ ತಳಿಗಳು: ಅಡಿಕೆಯಲ್ಲಿ  ಮುಖ್ಯವಾಗಿ ಕೆಂಪಡಿಕೆಗೆ ಹೊಂದುವ ತಳಿ ಮತ್ತು ಚಾಲಿಗೆ ಹೊಂದುವ ತಳಿ  ಎಂಬ  ಎರಡು ಪ್ರಕಾರಗಳು. ಕೆಂಪಡಿಕೆಮಾಡುವ ಪ್ರದೇಶಗಳಲ್ಲಿ  ಸ್ಥಳೀಯ ತಳಿಗಳೇ …

Read more
ಅಡಿಕೆ ಮಾರಾಟ ಫ್ರಾಂಗಣ

ಜನವರಿ ಕೊನೆಗೆ ಅಡಿಕೆ ಮಾರುಕಟ್ಟೆ ಧಾರಣೆ ದಿನಾಂಕ:31-01-2022

2022 ನೇ ವರ್ಷದ ಜನವರಿ ತಿಂಗಳಲ್ಲಿ ಅಡಿಕೆ ಮಾರುಕಟ್ಟೆಯಲ್ಲಿ ಯಾವುದೇ ಸ್ಥಿತ್ಯಂತರ ಆಗದೆ, ಸ್ವಲ್ಪ ಅನುಮಾನದಲ್ಲೇ ಮುಂದುವರಿದಿದೆ. ಖಾಸಗಿ ವ್ಯಾಪಾರಿಳು ಸಾಂಸ್ಥಿಕ ವ್ಯಾಪಾರಿಗಳ ಜೊತೆಗೆ ಸ್ಪರ್ಧೆಗೆ ಇಳಿಯಲೇ ಇಲ್ಲ. ಸಾಂಸ್ಥಿಕ ವ್ಯಾಪಾರಿಗಳು ತಮ್ಮ ದರಪಟ್ಟಿಯಲ್ಲಿ ವ್ಯತ್ಯಾಸ ಮಾಡದೆ ಗುಣಮಟ್ಟದ ಆಧಾರದಲ್ಲಿ ಬೆಲೆ ನಿರ್ಧರಿಸಿ ಅಡಿಕೆ ಖರೀದಿ ನಡೆಸುತ್ತಿದ್ದರು. ಜನವರಿ ತಿಂಗಳ ಕೊನೆ ಮಾರುಕಟ್ಟೆ ದಿನವಾದ ದಿನಾಂಕ 31-01-2022 ರಂದು ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಕೊಬ್ಬರಿ, ಕರಿಮೆಣಸು, ರಬ್ಬರ್ ಕಾಫೀ ಧಾರಣೆ ಹೇಗಿತ್ತು ಗಮನಿಸಿ. ಅಡಿಕೆ ಮರುಕಟ್ಟೆ…

Read more
ಚೇತರಿಕೆಯತ್ತ ಕೆಂಪಡಿಕೆ

ಕೆಂಪಡಿಕೆ ಚೇತರಿಕೆ- ಚಾಲಿ ಅಡಿಕೆಗೆ ಮಬ್ಬು. 21-01-2022 ರಂದು ಧಾರಣೆ.

ನಿರೀಕ್ಷೆಯಂತೆ ಕೆಂಪಡಿಕೆ ಮಾರುಕಟ್ಟೆಯಲ್ಲಿ ಚೇತರಿಕೆ ಪ್ರಾರಂಭವಾಗಿದೆ. ಖರೀದಿಯಲ್ಲಿ ಉತ್ಸಾಹ (Force) ಇದೆ ಎಂಬುದಾಗಿ ವರ್ತಕರು ಹೇಳುತ್ತಿದ್ದಾರೆ. ಯಾವಾಗಲೂ ಸರಾಸರಿ ದರ ಮತ್ತು ಗರಿಷ್ಟ ದರಗಳ ಅಂತರ ಹತ್ತಿರವಾದರೆ ಖರೀದಿಯಲ್ಲಿ ಆಸಕ್ತಿ ಹೆಚ್ಚು ಎನ್ನಲಾಗುತ್ತದೆ. ಇದು ಈಗ ಪ್ರಾರಂಭವಾಗಿದೆ. ಚಾಲಿ ಮಾತ್ರ ಸ್ವಲ್ಪ ಮಬ್ಬು. ದಿನಾಂಕ 21-01-2022 ರಂದು ರಾಜ್ಯದೆಲ್ಲೆಡೆ ಧಾರಣೆ. ಕರಾವಳಿಯ ಚಾಲಿ ಅಡಿಕೆ ಈ ವರ್ಷ ಗುಣಮಟ್ಟ ಇಲ್ಲ. ಯಾವಾಗಲೂ ಕರಾವಳಿಯ ಚಾಲಿ ಅಡಿಕೆ ಎಂದರೆ ಅದಕ್ಕೆ  ವಿಶೇಷ ಸ್ಥಾನಮಾನ ಇತ್ತು. ಈ ವರ್ಷದ ಪ್ರತಿಕೂಲ…

Read more
ಒಣ ನೆಲದಲ್ಲಿ ಕಾಯಿ ಕಚ್ಚುವಿಕೆ ಹೆಚ್ಚು

ಸಿಂಗಾರಕ್ಕೆ ಸಿಂಪರಣೆ ಅಗತ್ಯ ಇದೆಯೇ?. ಮರಕ್ಕೆ ಶಕ್ತಿ ಕೊಟ್ಟರೆ ಸಾಲದೆ?.

ಅಡಿಕೆ ಬೆಳೆಗಾರರ ಕೊಯಿಲಿನ ತಲೆಬಿಸಿ ಕಡಿಮೆಯಾಗಿದೆ. ಈಗ ಮುಂದಿನ ಬೆಳೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಸಿಂಪರಣೆ. ಹೇಗಾದರೂ ಮಾಡಿ ಬಿಡುವ ಹೂ ಗೊಂಚಲಿನ ಕಾಯಿಗಳನ್ನು ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಸಿಂಗಾರಕ್ಕೆ ಸಿಂಪರಣೆ ಪ್ರಾರಂಭಿಸಿದ್ದಾರೆ. ಕೆಲವರು 2 ಸಿಂಪರಣೆ ಮುಗಿಸಿದ್ದೂ ಆಗಿದೆ. ನಿಜವಾಗಿ ಹೇಳಬೇಕೆಂದರೆ ನಾವು ಮಾಡುವಷ್ಟು ಸಿಂಪರಣೆಯ ಅಗತ್ಯ ಅಡಿಕೆಗೆ ಇಲ್ಲ. ಮರಕ್ಕೆ ಶಕ್ತಿ ಕೊಟ್ಟರೆ ಸಾಕಾಗುತ್ತದೆ. ಫಸಲು ಹೆಚ್ಚಾಗಬೇಕು ಎಂದು ತರಹೇವಾರು  ಕೀಟ,ರೋಗನಾಶಕಗಳನ್ನು ಪ್ರತೀ ಹೂ ಗೊಂಚಲಿಗೆ ಸಿಂಪಡಿಸುವುದು, ಸಿಕ್ಕ ಸಿಕ್ಕವರೊಂದಿಗೆ  ಈ ಬಗ್ಗೆ  ಸಲಹೆ ಕೇಳಿ ಅದರಂತೆ …

Read more
error: Content is protected !!