ಅಡಿಕೆ ಚೀಲ

ಅಡಿಕೆ ಆಮದು ಅಂಕುಶ ಸಡಿಲಿಕೆ- ಮಿಜೋರಾಂ ಸರಕಾರದ ಕ್ರಮ.

ಅಡಿಕೆಯ ಬೆಲೆ ಗಗನಕೇರುವಾಗ ಯಾರಾದರೂ ಅದಕ್ಕೊಂದು ತಡೆ ಹಾಕಲು  ಕಲ್ಲು ಎಸೆಯಲು ಸಿದ್ದತೆ ನಡೆಸುತ್ತಾರೆ.ಇಂದು ಅಡಿಕೆಯ ಬೆಲೆ ಗಗನಕ್ಕೆ ಏರಲು ಬಲವಾದ ಕಾರಣ ಅಡಿಕೆ ಆಮದು ತಡೆ. ಈಗ ಈ ತಡೆಯ ಮೇಲೆ ಅಂಕುಶ ಸಡಿಲವಾದಂತೆ ಕಾಣಿಸುತ್ತಿದೆ. ಮಿಜೋರಾಂ ಸರಕಾರ ಈ ತನಕ ಅಡಿಕೆಯನ್ನು ತನ್ನೊಳಗೆ ಬಾರದಂತೆ ತಡೆದಿದ್ದ ಅಧಿಕಾರಿಗಳನ್ನು ಸರಕು ಸಾಗಾಣಿಕೆ ಸಂಘದ ಒತ್ತಾಯದ ಮೇರೆಗೆ ವರ್ಗಾವಣೆ ಮಾಡಿದೆ. ಈ ಕಾರಣದಿಂದ ಮುಂದೆ ಅಡಿಕೆ ಆಮದಿನ ಮೇಲೆ ಅಂಕುಶ ಸಡಿಲವಾದರೂ ಅಚ್ಚರಿ ಇಲ್ಲ. ಮಿಜೋರಾಂ ಮೂಲಕ…

Read more
ಒಣಗಲು ಹರಡಿದ ಅಡಿಕೆ

ಗುಣಮಟ್ಟದ ಅಡಿಕೆ ಉತ್ಪಾದನೆ ತಾಂತ್ರಿಕತೆ.

ಅಡಿಕೆ ಬೆಳೆಗಾರರು ಕೆಂಪಡಿಕೆ ಮಾಡುವವರು ಆಗಲಿ, ಚಾಲಿ ಮಾಡುವವರೇ ಆಗಲಿ, ಗುಣಮಟ್ಟದ  ಅಡಿಕೆ ಉತ್ಪಾದನೆ ಕಡೆಗೆ ಅದ್ಯ ಗಮನಹರಿಸಲೇ ಬೇಕು. ಇದು ನಮ ಸುರಕ್ಷತೆಗಾಗಿ ನಾವು ಮಾಡಬೇಕಾದ ಅಗತ್ಯ ಕೆಲಸ. ಗುಣಮಟ್ಟ ಉಳ್ಳ ಅಡಿಕೆಗೆ ಗರಿಷ್ಟ ಬೆಲೆ. ಅಡಿಕೆಯ ಮಾನ ಉಳಿಯುವುದೂ ಗುಣಮಟ್ಟ ಪಾಲನೆಯಲ್ಲಿ. ಹೀಗಿರುವಾಗ ಅಡಿಕೆ ಬೆಳೆಗಾರರು ತಮ್ಮ ಭವಿಷ್ಯದ ಹಿತ ದೃಷ್ಟಿಯಿಂದ ಗುಣಮಟ್ಟಕ್ಕೆ ಆದ್ಯ ಗಮನ ಕೊಡಲೇ ಬೇಕು. ಅಡಿಕೆಯ ಕುರಿತಾಗಿ ಯಾವಾಗಲೂ ನ್ಯಾಯಾಲಯ  ಬೆಳೆಗಾರರ ಮೇಲೆ ತಿರುಗಿ ಬೀಳಬಹುದು. ಯಾರಾದರೂ ಅಡಿಕೆಯಲ್ಲಿ ಆರೋಗ್ಯಕ್ಕೆ…

Read more
ಕೆಂಪು ರಾಸಿ ಅಯದೆ ಇದ್ದದ್ದು

ಅಡಿಕೆ ಧಾರಣೆ ಸ್ಥಿತಿಗತಿ-ದಿನಾಂಕ 10-01-2022, ಚಾಲಿ ಚುರುಕು. ಕೆಂಪು ಸ್ಥಿರ.

ಹೊಸ ವರ್ಷದ ಎರಡನೇ ವಾರ 10-01-2022 ಅಡಿಕೆ ಧಾರಣೆ ಸ್ಥಿರವಾಗಿ ಮುಂದುವರಿದಿದೆ. ಚಾಲಿ ಅಡಿಕೆ ಮಾರುಕಟ್ಟೆಗೆ ಕ್ಯಾಂಪ್ಕೋ ಬೆಂಗಾವಲಾಗಿ ನಿಂತು ದರ ಕುಸಿಯದಂತೆ ಮಾಡಿದೆ. ಈ ವರ್ಷದಾದ್ಯಂತ ಅಡಿಕೆ ಧಾರಣೆ ಇದೇ ರೀತಿಯಲ್ಲಿ ಮುಂದುವರಿಯಲಿದೆ ಎನ್ನಲಾಗುತ್ತಿದೆ. ಕಳೆದ ವರ್ಷದ ದಾಖಲೆಯ ಬೆಲೆಯನ್ನು ಹಿಂದಿಕ್ಕಿ ಇನ್ನೂ ಏರುವ ಸಾಧ್ಯತೆ ಇದೆ ಎಂಬುದಾಗಿಯೂ  ಹೇಳುತ್ತಿದ್ದಾರೆ. ಈ ಸಮಯದ ದರ ಸ್ಥಿತಿಯನ್ನು ನೋಡಿದಾಗ ಹೊಸ ಚಾಲಿ ಧಾರಣೆ ಈ ವರ್ಷ 500 ದಾಟಬಹುದು, ಕೆಂಪು 50,000 ಮೀರಿ ಏರಿಕೆಯಾಗಬಹುದು ಎಂಬ ವದಂತಿಗಳಿವೆ….

Read more
ಎರಡು ವರ್ಷ ಕಳೆದ ಅಡಿಕೆ ಸಸಿ

ಎರಡು ವರ್ಷದ ಅಡಿಕೆ ಗಿಡಗಳ ಪಾಲನೆ ಪೋಷಣೆ ಹೇಗಿರಬೇಕು?

ಅಡಿಕೆ ಬೆಳೆಗಾರರು ಅಡಿಕೆ ಸಸಿಯನ್ನು ಮಕ್ಕಳಂತೆ ಸಾಕಬೇಕು. ಹಾಗಿದ್ದರೆ ಅದು ನಿರೀಕ್ಷೆಯೆ ಸಮಯಕ್ಕೆ ಫಲ ಕೊಡುತ್ತದೆ. ಧೀರ್ಘ ಕಾಲದ ತನಕವೂ ಫಲ ಕೊಡುತ್ತಾ ಇರುತ್ತದೆ. ಫಲ ಬರಲು ಪ್ರಾರಂಭವಾದ ನಂತರ ಸಾಕಿದರೆ ಏನೂ ಪ್ರಯೋಜನ ಇಲ್ಲ. ಅದಕ್ಕಾಗಿ ನೆಟ್ಟು ಮೊದಲ ವರ್ಷ ಕಳೆದು ಎರಡು ವರ್ಷಕ್ಕೆ ಕಾಲಿಡುವಾಗ ಯಾವ ಯಾವ ಪಾಲನೆ ಪೋಷಣೆ  ಮಾಡಿ ಅದನ್ನು ಸಲಹಬೇಕು ಎಂಬ ಪೂರ್ತಿ ಮಾಹಿತಿ ಇಲ್ಲಿದೆ. ನೆಟ್ಟ ಸಸಿಯನ್ನು ತಕ್ಷಣದಿಂದ ಹೇಗೆ ಸಾಕಬೇಕು ಎಂಬ ಬಗ್ಗೆ ಈ ಹಿಂದೆ ಸವಿಸ್ತಾರವಾದ…

Read more
ಕುರುವಾಯಿ ದುಂಬಿ

ಕುರುವಾಯಿ ದುಂಬಿಯ ಕಾಟ ಹೆಚ್ಚಾಗಲು ಕೊಟ್ಟಿಗೆ ಗೊಬ್ಬರ ಕಾರಣ

ಯಾವಾಗಲೂ  ಕತ್ತಲಾಗುತಲೇ ನಿಮ್ಮ ಮನೆಯ ವಿದ್ಯುತ್ ದೀಪಕ್ಕೆ  ಒಂದು ದೊಡ್ದ ದುಂಬಿ ಬಂದು ನೆಲಕ್ಕೆ  ಬೀಳುತ್ತದೆ. ಅದರಲ್ಲಿ  ಹೆಚ್ಚಿನದು ತೆಂಗಿನ ಮರದ ಸುಳಿಯನ್ನು ಕೊರೆಯುವ ಕುರುವಾಯಿ  ದುಂಬಿಯಾಗಿರುತ್ತದೆ. ಇದು ವಂಶಾಭಿವೃದ್ದಿಯಾಗುವುದು ಕೊಟ್ಟಿಗೆ ಗೊಬ್ಬರ ಅಥವಾ ಸಾವಯವ ಗೊಬ್ಬರದಲ್ಲಿ. ಕುರುವಾಯಿ ನಿಯಂತ್ರಣವಾಗಬೇಕಿದ್ದರೆ ಸಾವಯವ ಗೊಬ್ಬರವನ್ನು  ಉಪಚರಿಸಿ ಬಳಕೆ ಮಾಡಬೇಕು. ತೆಂಗಿನ ಮರವನ್ನು ಕೊಲ್ಲದೇ, ಅದನ್ನು ಏಳಿಗೆಯಾಗಲು ಬಿಡದ ಒಂದು ಸಾಮಾನ್ಯ ಕೀಟ ಕುರುವಾಯಿ. ನಮ್ಮ ಹಿರಿಯರು ಹೇಳುವುದಿದೆ, ಒಂದು ಕುರುವಾಯಿ ಕೊಂದರೆ 1 ದೇವಾಸ್ಥಾನ ಕಟ್ಟಿದ ಪುಣ್ಯವಿದೆ ಎಂದು….

Read more
ಚಾಲಿ ಮತ್ತು ಕೆಂಪು ಅಡಿಕೆ ಮಾರಾಟ

2022 ಹೊಸ ವರ್ಷದ ಮೊದಲ ದಿನ – ಚಾಲಿ- ಕರಿಮೆಣಸು ಇಳಿಕೆ. ಕೆಂಪು ಸ್ಥಿರ, ಕೊಬ್ಬರಿ ಏರಿಕೆ.

2021 ಕಳೆದು 2022 ಬಂದಾಯ್ತು. 2021 ನೇ ವರ್ಷದಲ್ಲಿ ಚಾಲಿ ಅಡಿಕೆ ಬೆಳೆಗಾರರು ತಮ್ಮ ಆನುಭವದಲ್ಲಿ ಕಂಡಿರದ ದರ ಏರಿಕೆಯನ್ನು ನೋಡಿದ್ದಾರೆ. ಸಂತೋಷ ಪಡಬೇಕಾದ ಸಂಗತಿ. ಆದರೆ ಕೆಂಪಡಿಕೆಗೆ ಮಾತ್ರ ಅಂಥಃ ಬೆಲೆ ಏರಿಕೆ ಆಗಿಲ್ಲ. ನಿರಾಸೆಯೂ ಆಗಿಲ್ಲ.  ಹೊಸ ವರ್ಷದ ಮೊದಲ ದಿನ ಚಾಲಿ ಸ್ವಲ್ಪ ಇಳಿಕೆಯೂ, ಕೆಂಪು ಸ್ಥಿರವಾಗಿಯೂ, ಕರಿಮೆಣಸಿನ ಬೆಲೆ ಕುಸಿತ ಆಗಿದೆ. ಕೊಬ್ಬರಿ ಏರಿದೆ. 2022 ನೇ ಇಸವಿಯೂ ರೈತರ ಪಾಲಿಗೆ ಅದೃಷ್ಟದ ವರ್ಷವಾಗಿಯೇ ಉಳಿಯಲಿದೆ.   ಕಳೆದ ಮೂರು ನಾಲ್ಕು…

Read more
good yielded plant

ಬೀಜಕ್ಕಾಗಿ ಅಡಿಕೆ ಹಣ್ಣು ( ಗೋಟು) ಅಯ್ಕೆ ಮಾಡುವ ಸೂಕ್ತ ವಿಧಾನ.

ಈಗ ಎಲ್ಲರೂ ಬೀಜಕ್ಕಾಗಿ ಅಡಿಕೆ ಹಣ್ಣು ( ಗೋಟು) ಅಯ್ಕೆ ಮಾಡುವ (ಬೀಜದ ಅಡಿಕೆ) ಅವಸರದಲ್ಲಿದ್ದಾರೆ. ಉತ್ತಮ ಇಳುವರಿ ಕೊಡುವ ತಳಿ ಬೇಕು ಎಂಬುದು ಎಲ್ಲರ ಆಕಾಂಕ್ಷೆ . ಬೀಜದ ಅಡಿಕೆ ಹುಡುಕಾಟದ ಭರದಲ್ಲಿ ತಮ್ಮ ಕಾಲ ಬುಡದಲ್ಲೇ ಇರುವ  ಉತ್ಕೃಷ್ಟ ತಳಿಯ ಅಡಿಕೆಯನ್ನು ಗಮನಿಸುವುದೇ ಇಲ್ಲ.  ನಿಜವಾಗಿ ಹೇಳಬೇಕೆಂದರೆ ಅವರವರ ಹೊಲದಲ್ಲಿ  ಅಥವಾ ಅವರ ಸುತ್ತಮುತ್ತಲಿನ ಪ್ರದೇಶದಲ್ಲಿ ಇರುವ ತಳಿಗಳೇ  ಉತ್ಕೃಷ್ಟ ತಳಿಯಾಗಿರುತ್ತದೆ. ಯಾವುದೇ ಬೆಳೆಯಲ್ಲಿ ಬೀಜದ ಆಯ್ಕೆ ಎಂಬುದು ಪ್ರಾಮುಖ್ಯ ಘಟ್ಟ. ಬೀಜದ ಗುಣದಲ್ಲೇ…

Read more
ಅಡಿಕೆ ಬೆಳೆಯಲ್ಲಿ ಹೆಚ್ಚಳವಾಗುತ್ತಿರುವ ಸಮಸ್ಯೆ

ಅಡಿಕೆ ಬೆಳೆಯಲ್ಲಿ ಈ ಸಮಸ್ಯೆ ಬಾರೀ ಹೆಚ್ಚಳವಾಗಲು ಕಾರಣ.

ಇತ್ತೀಚೆಗೆ ಬಹುತೇಕ ಎಲ್ಲಾ ಅಡಿಕೆ ಬೆಳೆಗಾರರಲ್ಲೂ ಈ ಸಮಸ್ಯೆ ಹೆಚ್ಚಾಗುತ್ತಿದೆ. ಎಲ್ಲರೂ ಇದಕ್ಕೆ ಏನು ಪರಿಹಾರ ಎಂದು ಕೇಳುವವರು. ಆದರೆ ಯಾಕಾಗಿ ಈ  ಸಮಸ್ಯೆ ಹೆಚ್ಚಾಯಿತು ಎಂದು ಯಾರೂ ಹೇಳುತ್ತಿಲ್ಲ.ಇದು ಹೊಸ ಸಮಸ್ಯೆ ಅಲ್ಲ. ಅಡಿಕೆ ಬೆಳೆ ಪ್ರಾರಂಭವಾದಾಗಿನಿಂದಲೂ ಇದ್ದುದೇ. ಆದರೆ ಈಗ ಅದು ಮಿತಿ ಮೀರಿ ಹೆಚ್ಚಳವಾಗುತ್ತಿದೆ.ಎಲ್ಲಾ ಕಡೆಯಲ್ಲೂ ಇದು ಅಡಿಕೆ ಬೆಳೆಯನ್ನು ಪೀಡಿಸುತ್ತಿದೆ. ಅಡಿಕೆ ಮರ/ ಸಸಿಗಳ ಎಲೆಯನ್ನು ಹಾಳು ಮಾಡುವ ಒಂದು ರೀತಿಯ ತಿಗಣೆ ಇತ್ತೀಚಿನ ವರ್ಷಗಳಲ್ಲಿ  ಭಾರೀ ಸಮಸ್ಯೆ ಉಂಟು ಮಾಡುತ್ತಿದೆ….

Read more
ಕೆಂಪು ಅಡಿಕೆ ಧಾರಣೆ

ಡಿಸೆಂಬರ್ ಎರಡನೇ ಶುಕ್ರವಾರ-10-12-2021.ಅಡಿಕೆ ಧಾರಣೆ.

ಅಡಿಕೆ ಬೆಳೆಗಾರರು  ಹೆಚ್ಚಾಗಿ  ವಾರದ ಮೊದಲ ದಿನ ಸೋಮವಾರದ ಧಾರಣೆ ಹೇಗಿರುತ್ತದೆ ಮತ್ತೆ ಶುಕ್ರವಾರದ ಧಾರಣೆ ಹೇಗಿರುತ್ತದೆ ಎಂದು ಗಮನಿಸಿ ಏರಿಳಿತವನ್ನು ಲೆಕ್ಕಾಚಾರ ಹಾಕುತ್ತಾರೆ. ಸೋಮವಾರ ಏರಿಕೆಯಾದರೆ ಇಡೀ ವಾರ  ಹಾಗೆಯೇ ಮುಂದುವರಿಯುತ್ತದೆ. ಶುಕ್ರವಾರದ ದರ ಮುಂದಿನ ವಾರದ ದರವನ್ನು ಅಂದಾಜು ಮಾಡಲು ಸಹಾಯಕ. ಇಂದು ದಿನಾಂಕ 10-12-2021 ಶುಕ್ರವಾರ ದರ ಇಳಿಕೆಯಾಗದೆ ಸ್ವಲ್ಪ ಏರಿಕೆಯೇ ಆದ ಕಾರಣ ಮುಂದಿನ ವಾರವೂ ಹೀಗೆ ಮುಂದುವರಿಯಬಹುದು, ಇಂದು ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಚಾಲಿ ಹೊಸತು 43,500-45200 ತನಕ, ಹಳೆ…

Read more
ಕೆಂಪಡಿಕೆ ರಾಸೀ ಶ್ರಿಂಗೇರಿ

ಕೆಂಪಡಿಕೆ- ಸುಪಾರಿ ಎರಡೂ ಏರಿಕೆ- ಸೋಮವಾರ 06-12-2021 ರ ಧಾರಣೆ.

ಕರಾವಳಿಯಲ್ಲಿ ಅಡಿಕೆ ಖರೀದಿಯ ಪ್ರಮುಖ ಸಂಸ್ಥೆ ಕ್ಯಾಂಪ್ಕೋ ಇಂದು ಹಳೆ ಸುಪಾರಿ, ಡಬ್ಬಲ್ ಚೋಲ್ ಗಳಿಗೆ ಏಕಾಏಕಿ 10 ರೂ. ಏರಿಸಿ ಅಡಿಕೆ ಮಾರುಕಟ್ಟೆಯಲ್ಲಿ ಸಂಚಲನವನ್ನು ಉಂಟುಮಾಡಿದೆ.  ಖಾಸಗಿಯವರು ನಾವೂ ಸ್ಪರ್ಧೆಗೆ ಸಿದ್ದರಿದ್ದೇವೆ ಎಂದು ತೋರಿಸಿದ್ದಾರೆ. ಕ್ಯಾಂಪ್ಕೋ ಹೊಸ ಸುಪಾರಿ ಕ್ವಿಂಟಾಲಿಗೆ 43,500, ಖಾಸಗಿ 45,000, ಹಳೆ ಅಡಿಕೆ ಕ್ಯಾಂಪ್ಕೋ 42,500- ಡಬ್ಬಲ್ ಚೋಲ್ 43,000 ಖಾಸಗಿ 54,000 ದರದಲ್ಲಿ ಖರೀದಿ ನಡೆದಿದೆ. ಶಿರಸಿಯಲ್ಲಿ ಕೆಂಪಡಿಕೆ (ರಾಶಿ) ಮತ್ತೆ ಬೆಲೆ ಏರಿಕೆಯಾಗಿದೆ. ಬಹುಷಃ ಈ ವಾರ ಮತ್ತೆ…

Read more
error: Content is protected !!