
ಕೆಂಪಡಿಕೆ ಮಾಡಲು ಸೂಕ್ತವಾದ ವಿವಿಧ ತಳಿಗಳು.
ಅಡಿಕೆ ಬೆಳೆಯುವ ಕೆಲವು ಪ್ರದೇಶಗಳಲ್ಲಿ ಬೇಯಿಸಿ ಕೆಂಪಡಿಕೆ ಮಾಡುವುದು ಅಲ್ಲಿನ ಪರಂಪರಾಗತ ಕ್ರಮ. ಬೇಯಿಸಲು ಅದಕ್ಕೆಂದೇ ಸೂಕ್ತವಾದ ತಳಿಗಳನ್ನು ಮಾತ್ರ ಬೆಳೆಸಬೇಕು. ಕೆಂಪಡಿಕೆ ಮಾಡಲು ಹೊಂದುವ ಅಡಿಕೆ ಬಿಸಿಲಿನಲ್ಲಿ ಒಣಗಿಸಿ ಮಾಡುವ ಚಾಲಿ ಅಡಿಕೆಗೆ ಸೂಕ್ತವಲ್ಲ. ಚಾಲಿ ಮಾಡುವ ಅಡಿಕೆ ಕೆಂಪಡಿಕೆ ಮಾಡಲೂ ಸೂಕ್ತವಲ್ಲ. ಆಯಾಯಾ ಪ್ರದೇಶಕ್ಕೆ ಹೊಂದಿಕೆಯಾಗುವ ರೂಡಿಯ ತಳಿಗಳನ್ನು ಬೆಳೆಸುವುದು ಎಲ್ಲದಕ್ಕಿಂತ ಉತ್ತಮ. ಕರಾವಳಿಯ ಪ್ರದೇಶವನ್ನು ಹೊರತಾಗಿಸಿ ರಾಜ್ಯದ ಉಳಿದ 6 ಜಿಲ್ಲೆಗಳಲ್ಲಿ ಅಡಿಕೆಯನ್ನು ಬೇಯಿಸುತ್ತಾರೆ. ಇದನ್ನು ಕೆಂಪಡಿಕೆ ಎನ್ನುತ್ತಾರೆ. ಈ ಉದ್ದೇಶಕ್ಕೆ ಎಲ್ಲಾ…