ಈ ಔಷಧೀಯ ಅಕ್ಕಿಗೆ ಮಾರುಕಟ್ಟೆಯಲ್ಲಿ ರೂ.150 ಬೆಲೆ.

by | Jan 14, 2021 | Paddy (ಭತ್ತ) | 0 comments

ಅಸ್ಸಾಂ ನಲ್ಲಿ ಬೆಳೆಯುತ್ತಿದ್ದ ಕಪ್ಪು ಅಕ್ಕಿ ಈಗ ಮಲೆನಾಡಿನ ಸಕಲೇಶಪುರ ಸುತ್ತಮುತ್ತ ಬೆಳೆಯುತ್ತಿದ್ದು,  ಇದು ಔಷಧೀಯ ಅಕ್ಕಿಯಾಗಿ ಮಾರಲ್ಪಡುತ್ತದೆ.
ಅಕ್ಕಿಯ ಬಣ್ಣ ಬಿಳಿ ಎಂಬುದು ಹೊಸ ತಲೆಮಾರಿನವರಿಗೆ ಗೊತ್ತಿರುವಂತದ್ದು.  ಕರಾವಳಿಯ ಜನಕ್ಕೆ ಕೆಂಪಕ್ಕಿ ( ಕಜೆ) ಗೊತ್ತು. ಉಳಿದೆಡೆ ಬಿಳಿ ಬೆಳ್ತಿಗೆ ಅಕ್ಕಿ. ಆದರೆ ಅಕ್ಕಿಯಲ್ಲಿ ಬೇರೆ ಬಣ್ಣದ ತಳಿಗಳೂ ಭಾರತವೂ ಸೇರಿದಂತೆ ಬೇರೆ ಭತ್ತ ಬೆಳೆಯುವ ಕಡೆ ಇತ್ತು. ಈಗ ಅದು ಅಳಿವಿನಂಚಿಗೆ ತಲುಪಿದೆ. ಅಕ್ಕಿಯಲ್ಲೂ  ಕೆಲವು ತಳಿಗಳಿಗೆ ಔಷಧೀಯ ಮಹತ್ವ ಇದ್ದು, ಅಂತದ್ದರಲ್ಲಿ ಕಪ್ಪಕ್ಕಿಯೂ ಒಂದು.
Black rice paddy

ಕಪ್ಪಕ್ಕಿ ಎಲ್ಲಿ ಬೆಳೆಯುತ್ತಿದೆ:

  • ಸಕಲೇಶಪುರ- ಕೊಡಗು ಭಾಗಗಳಲ್ಲಿ ಸುಮಾರು 5 ವರ್ಷದ ಹಿಂದೆ ಹಿಡಿ ಭತ್ತದಿಂದ ಪ್ರಾರಂಭವಾದ ಈ ಕಪ್ಪಕ್ಕಿ ಬೆಳೆ ಈಗ ಟನ್ ಗಟ್ಟಲೆ ಉತ್ಪಾದನೆಯಾಗುವಷ್ಟು  ಬೆಳೆಯುತ್ತಿದೆ.
  • ಸಕಲೇಶಪುರ ಹಾಸನ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಒಂದು ಊರು ಬಾಗೆ.
  • ಇಲ್ಲಿನ ಬೆಳಗೋಡು ಹೋಬಳಿಯ ಎಡೆ ಹಳ್ಳಿ ಗ್ರಾಮದಲ್ಲಿ ಓರ್ವ ಹಿರಿಯ ಕೃಷಿಕ ಶ್ರೀ ವೈ ಸಿ ರುದ್ರಪ್ಪ ಇವರು ಸುಮಾರು 7 ಎಕ್ರೆಯಷ್ಟು  ಪ್ರದೇಶದಲ್ಲಿ ಕಪ್ಪಕ್ಕಿಯನ್ನು ಬೆಳೆಯುತ್ತಿದ್ದಾರೆ.
  • ಅಸ್ಸಾಂ ಮೂಲದ ಈ ಕಪ್ಪಕ್ಕಿ ವಿಶಿಷ್ಟ ಗುಣದ ಅಕ್ಕಿ.
  • ಇದು   ವಿಶೇಷ ಬ್ರಾಂಡ್ ನ ಅಕ್ಕಿಯಾಗಿ ಮಾರಲ್ಪಡುತ್ತದೆ.
  • ಇದನ್ನು ಕೆಲವು ಮಾರಾಟಗಾರರು ಕಿಲೋ 150 – 200 ರೂ ತನಕವೂ ಮಾರುತ್ತಾರೆ.

Black rice farmar Y C Rudrappa

ಶ್ರೀಯುತ ರುದ್ರಪ್ಪ ಇವರಿಗೆ ಈಗ ವರ್ಷ 74 ರ ಅಸುಪಾಸು. ಇವರ ಉತ್ಸಾಹ ಮಾತ್ರ 47 ವಯಸ್ಸಿನದ್ದು. ಕಾರಣ ಇಷ್ಟೇ ಅವರು ಉಳಿಸಿಕೊಂಡು ಬಂದ ಆರೋಗ್ಯ. ಆರೋಗ್ಯದ  ಮಾತು ಇಲ್ಲಿ ಯಾಕೆ ಎನ್ನುತ್ತೀರಾ, ಇಲ್ಲೇ ಇರುವುದು ಅವರ ಶಿಸ್ತುಬದ್ದ್ದ ಜೀವನ ಮತ್ತು ಕೃಷಿಕ್ರಮ.

  • ಶ್ರೀಯುತರು ಓರ್ವ ಸಾವಯವ ಕೃಷಿಕರು.
  • ಹಾಗೆಂದು ಇದರ ಕಟ್ಟಾ ಅನುಯಾಯಿ ಅಲ್ಲ.
  • ಎಲ್ಲಿ ಸಾವಯವ ಸಾಧ್ಯವೋ ಅಲ್ಲಿ ಅದನ್ನು ಮಾಡುತ್ತಾರೆ.
  • ಎಲ್ಲಿ ಅಸಾಧ್ಯವೋ ಅಲ್ಲಿ ಅಗತ್ಯ ಬಿದ್ದಾಗ ಜಾಗರೂಕತೆಯಿಂದ ಕೀಟನಾಶಕ ಬಳಕೆ (ಕಾಫಿಯ ಬೋರರ್ ಗಾಗಿ) ಮಾಡುತ್ತಾರೆ.
  • ತಮ್ಮಲ್ಲೇ ಸಾಕಷ್ಟು ಸಾವಯವ ಗೊಬ್ಬರಗಳನ್ನು ಉತ್ಪಾದಿಸುತ್ತಾರೆ.
  • ಅದರಲ್ಲೇ  ಬೆಳೆ ಪೋಷಣೆಗೆ ಬೇಕಾದ ಗೊಬ್ಬರಗಳನ್ನು ಪಡೆಯುತ್ತಾರೆ.
  • ಗೊಬ್ಬರಕ್ಕಾಗಿಯೇ ಡೈರಿ ಮಾಡಿಕೊಂಡಿದ್ದಾರೆ.
  • ಎರೆ ಗೊಬ್ಬರವನ್ನು ಮಾಡುತ್ತಾರೆ.
  • ತಮ್ಮ ಮನೆಗೆ ಬೇಕಾದ, ಅಕ್ಕಿ ತರಕಾರಿಗಳನ್ನು ತಾವೇ ಉತ್ಪಾದಿಸಿ ಬಳಸುತ್ತಾರೆ.

ಸಾವಯವ ಕೃಷಿಯಲ್ಲೇ ಭತ್ತದ ಬೇಸಾಯ:

Organic paddy field

  • ಉಣ್ಣುವ ಅಕ್ಕಿಯಿಂದ ಸಾಮಾಜಿಕ ಅಸ್ವಾಸ್ತ್ಯ್ಹ ಉಂಟಾಗಬಾರದು. ಅನ್ನಕ್ಕೆ ವಿಷ ಹಾಕಬಾರದು.
  • ಭತ್ತದ ಹುಲ್ಲನ್ನು ತಿನ್ನುವ ಮೂಕ ಪಶುಗಳ ದೇಹಕ್ಕೆ ವಿಷ ಪ್ರಾಶನ ಮಾಡಬಾರದು.
  •  ಇದು ಇವರು ಭತ್ತದ ಬೇಸಾಯದಲ್ಲಿ ಇಟ್ಟುಕೊಂಡ ಕಟ್ಟುಪಾಡು.
  • ಇವರು ಅಡಿಕೆ, ಕಾಫೀ, ಮೆಣಸು ಭತ್ತ ಮುಂತಾದ ಬೆಳೆಗಳನ್ನು ಬೆಳೆಸುವವರು.
  • ಸಾವಯವ ವಿಧಾನದಲ್ಲೇ ಭತ್ತ ಬೆಳೆಯುತ್ತಾರೆ. ಇವರಿಗೆ ಭಾರೀ ಇಳುವರಿಯ ಆಸೆ ಇಲ್ಲ.
  • ಸಾಧಾರಣ ಇಳುವರಿ ಬಂದರೆ ಸಾಕು. ಅಷ್ಟಕ್ಕೆ ಬೇಕಾದ ಗೊಬ್ಬರಗಳನ್ನು ಅವರೇ ತಯಾರಿಸಿ ಬಳಕೆ ಮಾಡುತ್ತಾರೆ.
  • ಸುಮಾರು 3 ವರ್ಷಕ್ಕೆ ಹಿಂದೆ ಈ ಭಾಗಕ್ಕೆ ಕಪ್ಪಕ್ಕಿಯ ಪರಿಚಯವಾಯಿತಂತೆ.
  • ಸ್ವಲ್ಪ ಪ್ರದೇಶದಿಂದ  ಪ್ರಾರಂಭವಾದ ಈ ಕಪ್ಪಕ್ಕಿ ಬೆಳೆ ಈಗ 7 ಎಕ್ರೆಯಷ್ಟು ಪ್ರದೇಶದಲ್ಲಿ ಬೆಳೆಯುತ್ತಾರೆ.
  • ಇವರೇ ದೊಡ್ಡ ಪ್ರಮಾಣದಲ್ಲಿ ಬೆಳೆಯುವವರು ಎನ್ನಬಹುದು.
  • ಯಾವುದೇ ಕೀಟನಾಶಕ ಬಳಕೆ ಇಲ್ಲ.
  • ಸುಮಾರು 8 ಎಕ್ರೆಯಷ್ಟು ಭತ್ತದ ಗದ್ದೆ ಇದೆ.
  • ಇದರಲ್ಲಿ ರಾಜಮುಡಿ ಒಂದು ಎಕ್ರೆಯಷ್ಟು ಉಳಿದ ಪ್ರದೇಶದಲ್ಲಿ ಕಪ್ಪಕ್ಕಿಯನ್ನು ಬೆಳೆಯುತ್ತಾರೆ.
  • ಕಪ್ಪಕ್ಕಿ ಇಲ್ಲಿಯ ಸ್ಥಳೀಯ ಅಕ್ಕಿ ಅಲ್ಲ.
  • ಆದರ ಕಾರಣ ಇದಕ್ಕೆ ಕೀಟಗಳ ಹಾವಳಿ ಕಡಿಮೆ ಇದ್ದಂತಿದೆ ಎನ್ನುತ್ತಾರೆ.
  • ಹಾಗೆಂದು ಇದು ನಮ್ಮ ದೇಶದ ಪುರಾತನ ಅಕ್ಕಿ ತಳಿ.
  • ಇದು ಧೀರ್ಘಾವಧಿಯ ಬೆಳೆ.
  • ಸುಮಾರು 150 ದಿನ ಬೇಕು.
  • ಪೈರು ಗಟ್ಟಿ. ಎಕ್ರೆಗೆ ಸರಾಸರಿ 12-13 ಕ್ವಿಂಟಾಲು ಇಳುವರಿ ಬರುತ್ತದೆ.
  • ಹೆಚ್ಚು ಆರೈಕೆ ಮಾಡಿದರೆ ಸ್ವಲ್ಪ ಹೆಚ್ಚು ಬರಬಹುದು.
  • ನೈಜ ಆಸಕ್ತರಿಗೆ ಇವರು ಬೆಳೆ ಬೆಳೆಸಲು ಬೀಜಗಳನ್ನೂ ಕೊಡುತ್ತಾರೆ.

ಅಕ್ಕಿಯ ಮಹತ್ವ:

  • ಅಕ್ಕಿ ನೋಡಲು ಇದ್ದಿಲು ಮಸಿ ತರಹ ಕಾಣುತ್ತದೆ.
  • ಔಷಧೀಯ ಬಳಕೆಗೇ ಹೋಗುವುದು. ಪಾಯಸ ಮಾಡಿದರಂತೂ ಅದರ ಬಣ್ಣ ಬಲು ಆಕರ್ಷಕ.
  • ಹೆಂಗಸರಿಗೆ ನಂಜು ಇತ್ಯಾದಿ ಬಾಣಂತನ ಸಮಯದ ಅಸ್ವಾಸ್ತ್ಯಗಳಿಗೆ, ಹಾಲು ಹೆಚ್ಚಳಕ್ಕೆ ಇದು ಔಷಧಿ.
  • ಆದ ಕಾರಣ ಇದಕ್ಕೆ ಕೀಟನಾಶಕ  ಸಿಂಪರಣೆ ಮಾಡಬಾರದು.
  • ಇದರಲ್ಲಿ ಹುಲ್ಲು ಅತ್ಯಧಿಕ. ಹಸುಗಳು ಇದನ್ನು  ಇಷ್ಟಪಟ್ಟು ತಿನ್ನುತ್ತವೆ.
  • ಭತ್ತವನ್ನು ಬೆಳೆದು ಕ್ವಿಂಟಾಲಿಗೆ 3000 ರೂ. ಗಳಿಗೆ ಫೆಡರೇಶ್ ಗೆ ಕೊಡುತ್ತಾರೆ.
  • ಬೆಳೆ ಬೆಳೆಸುವುದು ಸಹ ಫೆಡರೇಶನ್ ನ ಅಡಿಯಲ್ಲೇ.
  • ತಳಿ ಸಂರಕ್ಷಣೆಗೆ ಮತ್ತು ಸಾವಯವ ಉತ್ಪನ್ನವನ್ನು ಗ್ರಾಹಕರಿಗೆ ದೊರೆಯುವಂತೆ ಮಾಡುವುದೇ ಈ ಫೆಡರೇಶನ್ ನ ಉದ್ದೇಶ,
  • ಹಾಸನ ಮತ್ತು ಕೊಡಗು ಆರ್ಗಾನಿಕ್ ಫಾರ್ಮರ್ಸ್ ಫೆಡರೇಶನ್ HASCO ಎಂಬ ಸಂಸ್ಥೆ ಉಭಯ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು,
  • ಸುಮಾರು 8 ಕಡೆ ಇದರ ಸರ್ವಸಜ್ಜಿತ ಸ್ ಔಟ್ ಲೆಟ್ ಗಳು ಇವೆ.
  • ಫೆಡರೇಶನ್ ನಲ್ಲಿ  ಸಂಸ್ಕರಣಾ ಘಟಕವೂ ( ಭತ್ತದಿಂದ ಅಕ್ಕಿ ಮಾಡುವುದ ಇತ್ಯಾದಿ)ಇದೆ.
  • ಪ್ರತೀ ತಾಲೂಕಿನಿಂದ ಚುನಾಯಿತ ಪ್ರತಿನಿಧಿಗಳೊಳಗೊಂಡ ಸಂಸ್ಥೆಯಾಗಿದ್ದು, ಸರಕಾರದ ನಿರ್ಧೇಶನದಂತೆ ಕಾರ್ಯ ನಿರ್ವಹಿಸುತ್ತದೆ.
  • ಶ್ರೀಯುತ ವೈ ಸಿ ರುದ್ರಪ್ಪನವರು ಈ ಫೆಡರೇಶನ್ ನ ಅಧ್ಯಕ್ಷರಾಗಿದ್ದಾರೆ.
  • ಈ ಅಕ್ಕಿಗೆ ಬೆಂಗಳೂರು ಅತೀ ದೊಡ್ಡ ಮಾರುಕಟ್ಟೆಯಾಗಿದ್ದು, ಅಲ್ಲಿ 150 ರೂ. ಗೂ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ.

ನಾವು ಉಣ್ಣುವ ಅನ್ನ, ಪಶುಗಳು ತಿನ್ನುವ ಮೇವು ವಿಷ ಮುಕ್ತವಾಗಿರಬೇಕು. ಅದನ್ನು ರೈತರು ಮಾಡಬೇಕು. ಸಾಧ್ಯವಾದಷ್ಟು ಕೀಟ ರೋಗ ನಿರೋಧಕ ಶಕ್ತಿ ಉಳ್ಳ ತಳಿಗಳನ್ನು ಬೆಳೆಸುವುದರಿಂದ ವಿಷ ಮುಕ್ತವಾಗಿ  ಬೆಳೆ ಬೆಳೆಯಬಹುದು. ಕಪ್ಪಕ್ಕಿ ಬೆಳೆಗೆ ಇವರು ಗಮನಿಸಿದಂತೆ ಅಂತಹ ಕೀಟ ರೋಗ ಬಾಧೆ ಇಲ್ಲದೆ ಗಡುಸಾಗಿ ಬೆಳೆಯುವ ಗುಣ ಇದೆ.

ರೈತರ ಸಂಪರ್ಕ ಸಂಖ್ಯೆ :9448529723 ( ಹಿರಿಯರು ಆದ ಕಾರಣ ನೈಜ ಅಗತ್ಯ ಇದ್ದವರು ಮಾತ್ರ ಸಂಪರ್ಕಿಸಿರಿ)

0 Comments

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!