ಎಲೆ ಚುಕ್ಕೆ ಪೀಡಿತ ಅಡಿಕೆ ಮರ

ಎಲೆ ಚುಕ್ಕೆ ರೋಗ-ಅಡಿಕೆ ಬೆಳೆಗಾರರ ಪಾಲಿಗೆ ಯಾವತ್ತೂ ಭಯ.

ಎಲೆ ಚುಕ್ಕೆ ರೋಗ ಎಂಬ ಅಡಿಕೆ ತೆಂಗು ಬೆಳೆಯ ಪ್ರಾಮುಖ್ಯ ರೋಗ ಈಗ ಎಲ್ಲಾ ಪ್ರದೇಶಗಳಲ್ಲಿ  ವ್ಯಾಪಿಸಲಾರಂಭಿದೆ. ಕೆಲವರು ಗುರುತಿಸಿರಬಹುದು. ಇನ್ನು ಕೆಲವರು ಗುರುತಿಸದೆಯೂ ಇರಬಹುದು. ಆದರೆ 90% ಕ್ಕೂ ಹೆಚ್ಚಿನ ಅಡಿಕೆ ತೋಟಗಳಲ್ಲಿ ಎಲೆ ಚುಕ್ಕಿ ರೋಗ ಇದೆ ಎಂದರೆ ಅಚ್ಚರಿಯಾಗಬಹುದು.  ಈಗ ಇದು ಚುಕ್ಕೆಯಾಗಿ ಕಂಡರೂ ಇದು ಮುಂದೆ ದೊಡ್ಡದಾದರೂ ಅಚ್ಚರಿ ಇಲ್ಲ.ಕ್ರಮೇಣ ಅಡಿಕೆ ಬೆಳೆಗಾರರ ಬದುಕಿನ ಮೇಲೆಯೇ ಇದು ಸವಾರಿ ಮಾಡಿದರೂ ಅಚ್ಚರಿ ಇಲ್ಲ.  ಬಹಳಷ್ಟು ಜನ ಅಡಿಕೆ ಬೆಳೆಗಾರರು ಶಿವಮೊಗ್ಗ ಜಿಲ್ಲೆಯಲ್ಲಿ…

Read more
ಸೀತಾಫಲವೂ ಲಕ್ಷ್ಮಣ ಫಲದಂತೆ ಔಷಧೀಯ

ಸೀತಾಫಲವೂ ಲಕ್ಷ್ಮಣ ಫಲದಂತೆ ಔಷಧೀಯ- ಬೆಳೆ ಸುಲಭ- ಲಾಭವು ಅಧಿಕ.

ಚಳಿಗಾಲದ ಮೊದಲ ಹಣ್ಣು ಎಂದರೆ ಸೀತಾಫಲ. ಮಳೆಗಾಲ ಕಳೆದ ತಕ್ಷಣ ಈ ಹಣ್ಣು ಮಾರುಕಟ್ಟೆಯಲ್ಲಿ ಹಾಜರ್. ಎಂತಹ ರುಚಿ. ಜೊತೆಗೆ ಆರೋಗ್ಯಕ್ಕೂ ಬಹಳ ಉತ್ತಮ. ಅಧಿಕಾ ನಾರಿನ ಅಂಶ ಉಳ್ಳ ಈ ಹಣ್ಣನ್ನು ಸೀಸನ್ ನಲ್ಲಿ ತಿನ್ನುವುದರಿಂದ ಆರೋಗ್ಯ ಬಹಳ ಒಳ್ಳೆಯದು. ಇದನ್ನು ಬರಗಾಲದ ನಾಡಿನಲ್ಲಿ ಬೆಳೆಯುವ ಹಣ್ಣು ಎನ್ನುತ್ತಾರೆ. ಸೀತಾಫಲ ಅತ್ಯಂತ ರುಚಿಕಟ್ಟಾದ ಹಣ್ಣು. ಒಮ್ಮೆ ಈ ಹಣ್ಣನ್ನು ಸವಿದರೆ ಮತ್ತೆ  ಬೇರೆ ಹಣ್ಣು ರುಚಿಸದು. ಅಂಥಹ ರುಚಿ ಹೊಂದಿದೆ. ಹಣ್ಣಿನ ಉತ್ಪಾದನೆ  ತುಂಬಾ ಕಡಿಮೆ …

Read more
banana plants

ಮಳೆಗಾಲದಲ್ಲಿ ಬಾಳೆ ಸಸ್ಯ ಮಗುಚಿ ಬೀಳುವುದಕ್ಕೆ ಕಾರಣ- ಪರಿಹಾರ.

ಮಳೆಗಾಲದಲ್ಲಿ ಬಾಳೆ ದಂಟು ಮುರಿದು ಬೀಳುವ ಸಮಸ್ಯೆ ಎಲ್ಲಾ ಕಡೆಯಲ್ಲೂ ಕಂಡು ಬರುತ್ತದೆ. ಅಂತಹ ಬಾಳೆಯ ಕಾಂಡವನ್ನು ಸ್ವಲ್ಪ ಕಡಿದು ನೋಡಿದರೆ ಕಾಂಡ ಹಾಳಾಗಿರುತ್ತದೆ. ಬಾಳೆಯ ಸಸ್ಯಗಳು ಇನ್ನೇನೋ ಗೊನೆ ಹಾಕಬೇಕು ಎಂಬ ಹಂತದಲ್ಲಿ, ಅಥವಾ ಗೊನೆ ಹಾಕಿ ಬೆಳೆಯುತ್ತಿರುವ ಹಂತದಲ್ಲಿ ಇದಕ್ಕೆ ಇಂದು ಕೀಟ ತೊಂದರೆ  (Pseudostem borer,and Rhizome weevil)ಮಾಡುತ್ತದೆ. ಈ ಕೀಟದ ಚಟುವಟಿಕೆ ಮಳೆಗಾಲ ಪ್ರಾರಂಭದಲ್ಲಿ ಮತ್ತು ಕೊನೆಗೆ ಹೆಚ್ಚು. ಇದರಿಂದ ಇಡೀ  ಗೊನೆ ಹಾಳಾಗುತ್ತದೆ. ಉಳಿದ ಬಾಳೆಗೂ ಪ್ರಸಾರವಾಗುತ್ತದೆ. ಬಾಳೆ ಗೊನೆ…

Read more
ಭೂತಾನ್ ದೇಶದ ಅಡಿಕೆ – ಸಾಗರಕ್ಕೆ ಒಂದು ಕೊಡ ನೀರು ಚೆಲ್ಲಿದಂತೆ

ಭೂತಾನ್ ದೇಶದ ಅಡಿಕೆ – ಸಾಗರಕ್ಕೆ ಒಂದು ಕೊಡ ನೀರು ಚೆಲ್ಲಿದಂತೆ.

ಭಾರತ ಸರಕಾರ ನೆರೆಯ ಭೂತಾನ್ ನಿಂದ ಹಸಿ ಅಡಿಕೆಯನ್ನು ಆಮದು ಮಾಡಿಕೊಳ್ಳುವ ಕುರಿತು ಅನುಮತಿ ನೀಡಿದೆ   ಇದು ನಮ್ಮ ದೇಶದ ಉತ್ಪಾದನೆಗೆ ಹೋಲಿಸಿದರೆ ಸಾಗರಕ್ಕೆ ಒಂದು ಕೊಡ ನೀರು ಚೆಲ್ಲಿದಂತೆ. ಸುದ್ದಿ  ಮಾತ್ರ ಭಾರೀ ಎಲ್ಲರಲ್ಲೂ ಆತಂಕವನ್ನು ಸೃಷ್ಟಿಸಿದೆ. ಭಾರತ ಸರಕಾರದ ವಿದೇಶಿ ವ್ಯಾಪಾರದ ನಿರ್ಧೇಶನಾಲಯದ (Directorate general of Foreign Trade ) ಈ ಆಮದಿಗೆ ಅನುಮತಿಸಿದೆ ಎನ್ನಲಾಗುತ್ತಿದೆ. ಈ ನಿರ್ಧೇಶನಾಲಯದ ಅಧಿಕೃತ ವೆಬ್ ಸೈಟ್ ನಲ್ಲಿ ಈ ಕುರಿತಂತೆ ಒಂದು ಸುತ್ತೋಲೆಯೂ ಇದೆ. ಹಾಗಾಗಿ…

Read more
ಅಡಿಕೆಯ ಧಾರಣೆ ಏನಾಗಬಹುದು? ಇಳಿಕೆಯೋ ಏರಿಕೆಯೋ

ಅಡಿಕೆಯ ಧಾರಣೆ ಏನಾಗಬಹುದು? ಇಳಿಕೆಯೋ ಏರಿಕೆಯೋ?

ಅಡಿಕೆ ಧಾರಣೆಯ ಈಗಿನ ಪರಿಸ್ಥಿತಿ ಬೆಳೆಗಾರರನ್ನು ಚಿಂತೆಗೀಡುಮಾಡಿದ್ದು, ಇಳಿಕೆಯಾದೀತೋ ಎಂಬ ಆತಂಕ ಉಂಟುಮಾಡಿದೆ. ಬೆಳೆಗಾರರು ಆತಂಕ ಪಡಬೇಕಾಗಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಈಗ ದರ ಇಳಿಕೆ ಆಗಿದೆ. ಮುಂದೆ ಇದು ಸರಿಯಾಗುತ್ತದೆ. ಈ ಸಮಯದಲ್ಲಿ ದರ ಇಳಿಕೆ ಆಗುವುದು ಸಹಜವಾಗಿದೆ.ಈಗ ಕೃಷಿಕರಿಗೆ ಹಣದ ಅಗತ್ಯ ಇರುತ್ತದೆ. ಬೆಳೆಗಾರರಿಗೆ ಮಾರಾಟ ಮಾಡದೆ ನಿರ್ವಾಹ ಇಲ್ಲದ ಸ್ಥಿತಿ ಇರುತ್ತದೆ. ಅದಕ್ಕೆ ಅನುಗುಣವಾಗಿ ದರ ಇಳಿಕೆ ಆಗುತ್ತದೆ. ಈಗ ಅದದ್ದೂ ಇದೆ. ಬೆಳೆಗಾರರೆಲ್ಲರೂ ಅಧಿಕ ಬೆಲೆ ಸಿಗಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಸಾಧ್ಯವಾದಷ್ಟು…

Read more
ಸರ್ಕಾರೀ ಗೊಬ್ಬರಗಳು

ಸರ್ಕಾರೀ ಗೊಬ್ಬರಗಳನ್ನು ಬಳಸಿ- 75% ದಷ್ಟು ಗೊಬ್ಬರದ ಖರ್ಚು ಉಳಿಸಿ.

 ಭಾರತ ಸರಕಾರ ರೈತರಿಗೆ ಸಹಾಯಧನದ ಮೂಲಕ ಒದಗಿಸುವ ಸರ್ಕಾರೀ ಗೊಬ್ಬರವನ್ನೇ ಬಳಸಿದರೆ ರೈತರ ಗೊಬ್ಬರದ ಖರ್ಚು 75% ಕ್ಕೂ ಹೆಚ್ಚು ಉಳಿತಾಯವಾಗುತ್ತದೆ.  ಇತ್ತೀಚೆಗೆ ಅಡಿಕೆ ತೋಟಕ್ಕೂ ಸಾಲ್ಯುಬಲ್ ಗೊಬ್ಬರಗಳನ್ನು ಕೊಟ್ಟು ಬೆಳೆಸುವ ಕ್ರೇಜಿ ಪ್ರಾರಂಭವಾಗಿದೆ.  ಇದಕ್ಕಾಗಿ ಸಾಕಷ್ಟು ಖರ್ಚುಗಳನ್ನೂ ಮಾಡಿ ದುಬಾರಿ ಬೆಲೆಯ ಸಾಲ್ಯುಬಲ್ ಗೊಬ್ಬರಗಳನ್ನು ಖರೀದಿಸಿ ತಂದು ಬಳಸಲಾರಂಭಿಸಿದ್ದಾರೆ. ಅಡಿಕೆಗೆ ಬೆಲೆ ಬಂದಿದೆ ಎಂದೋ ಕೈಯಲ್ಲಿ ದುಡ್ಡು ತುಳುಕುವ ಕಾರಣದಿಂದಲೋ ಜನ ಹೊಸ ಹೊಸತಕ್ಕೆ ಬೇಗ ಮರುಳಾಗುತ್ತಿದ್ದಾರೆ.ಧೀರ್ಘಾವಧಿ ಬೆಳೆಗಳಿಗೆ ದಿನಕ್ಕೊಮ್ಮೆ, ವಾರಕ್ಕೊಮ್ಮೆ ಗೊಬ್ಬರ ಕೊಡಬೇಕಾದ ಅಗತ್ಯ…

Read more
ಒಂದು ಲೀ. ಹಾಲಿಗೆ 100 ರೂ.

ಒಂದು ಲೀ. ಹಾಲು ರೂ.100 ಆದರೆ…

ಒಬ್ಬ ಮಿತ್ರರು ಹೇಳುತ್ತಾರೆ, ನಾನು ಹಸು ಸಾಕಾಣೆ ಮಾಡಬೇಕಾದರೆ ಹಾಲು ಲೀಟರೊಂದರ ರೂ. 100 ರೂ. ಸಿಗಬೇಕು. ಅಷ್ಟು  ಖರ್ಚು ಹಸು ಸಾಕುವುದಕ್ಕೆ ಇದೆ. ಹಾಗಾಗಿ ನಷ್ಟವಾಗುವ ಕಸುಬನ್ನು ನಾನು ಯಾಕೆ ಮಾಡಬೇಕು? ಇದು ನನ್ನ ಮಿತ್ರರೊಬ್ಬರ ಕಥೆ ಮಾತ್ರ ಅಲ್ಲ ಬಹುತೇಕ ಹೈನುಗಾರಿಕೆ ಅಥವಾ ಹಸು ಸಾಕಣೆ ಮಾಡುತ್ತಿದ್ದ ರೈತರು ಅದನ್ನು ಈಗ ಬಿಟ್ಟಿದ್ದರೆ ಅದಕ್ಕೆ ಕಾರಣ ಲಾಭ ನಷ್ಟದ ಲೆಕ್ಕಾಚಾರ. ಲಾಭವಾಗುವುದಾರರೆ ಹಸು ಸಾಕಣೆ ಬೇಕು. ಲಾಭ ಇಲ್ಲವಾದರೆ ಬೇಡ. ಹಸು ಸಾಕಾಣಿಕೆ ಲಾಭವಲ್ಲ…

Read more
3 ವರ್ಷ ತುಂಬುತ್ತಿರುವ ಅಡಿಕೆ ಸಸಿ

3 ವರ್ಷಕ್ಕೆ ಅಡಿಕೆ ಫಲ ಕೊಡಬೇಕಾದರೆ ಏನೇನು ಮಾಡಬೇಕು?

ಅಡಿಕೆ ಸಸಿ ನೆಟ್ಟು ಅದು ಇಳುವರಿ ಬರಲು ಅಥವಾ ಹೂ ಗೊಂಚಲು ಮೂಡಲು ಕೇವಲ 3 ವರ್ಷ ಸಾಕು. ಅದು ನಾವು ಬೆಳೆಸುವ ಕ್ರಮ ಮತ್ತು ತಳಿ ಗುಣದಿಂದ ನಿರ್ಧಾರವಾಗುತ್ತದೆ. ಬಹುತೇಕ ಎಲ್ಲಾ ತಳಿಗಳೂ ಫಸಲು ಕೊಡುವುದು 1 ವರ್ಷ ವಿಳಂಬವಾದರೂ ಹೂ ಗೊಂಚಲನ್ನು ಕೇವಲ 3 ನೇ ವರ್ಷಕ್ಕೆ ತೋರಿಸುತ್ತದೆ. ಅಡಿಕೆ ಸಸಿಯಲ್ಲಿ ಹೂ ಗೊಂಚಲು ಬರಲು ಕೆಲವರು 4-5-6 ವರ್ಷ ತನಕವೂ ಕಾಯುತ್ತಾರೆ. ಇದು ಅವರ ಅಸಮರ್ಪಕ ತೋಟ ನಿರ್ವಹಣೆ ವಿಧಾನದಿಂದ ಆಗುವುದು. ಉತ್ತಮವಾದ…

Read more
ಕೆಂಪು ರಾಶಿ ಸ್ವಲ್ಪ ಹಿನ್ನಡೆ – ಚಾಲಿಗೆ ಬೇಡಿಕೆ

ಕೆಂಪು ರಾಶಿ ಸ್ವಲ್ಪ ಹಿನ್ನಡೆ – ಚಾಲಿಗೆ ಬೇಡಿಕೆ ಕಡಿಮೆ -ಮಾರುಕಟ್ಟೆಗೆ ಮಾಲು ಇಲ್ಲ.

ಕೆಂಪು ರಾಶಿ ಅಡಿಕೆ ಮಾರುಕಟ್ಟೆ ಹೇಗಾದರೂ ಒಮ್ಮೆ 55,000 ತಲುಪಿತು. ಆದರೆ ಶುಕ್ರವಾರದ ಮಾರುಕಟ್ಟೆ, ಭಾನುವಾರದ ತೀರ್ಥಹಳ್ಳಿ ಮಾರುಕಟ್ಟೆಯಲ್ಲಿ ಹಾಗೂ ಇಂದು 12-09-2022 ಸಾಗರ, ಶಿವಮೊಗ್ಗದಲ್ಲಿನ ವ್ಯವಹಾರ ನೋಡುವಾಗ ಸ್ವಲ್ಪ ಸ್ವಲ್ಪ ಹಿಂದೆ ಬರುವ ಲಕ್ಷಣ ಕಾಣಿಸುತ್ತಿದೆ.  ನಿಖರವಾಗಿ ಹಿಂದೆ ಬಂತು ಎಂಬಂತಿಲ್ಲ. ಇನ್ನೂ ಒಂದೆರಡು ದಿನಗಳ ಮಾರುಕಟ್ಟೆ ಸ್ಥಿತಿ ನೋಡಿ ಅಂದಾಜು ಮಾಡಬಹುದಷ್ಟೇ. ಚಾಲಿ ಮಾರುಕಟ್ಟೆಯಲ್ಲಿ ಖಾಸಗಿಯವರು ಸ್ವಲ್ಪ ಮುಂದೆ ಬಂದಿದ್ದಾರೆ. ಅಡಿಕೆ ಬರುತ್ತಿಲ್ಲ ಎಂಬ ಕಾರಣಕ್ಕೆ ದರ ಏರಿಸಲಾಗಿದೆ ಎನ್ನುತ್ತಾರೆ. ಚಾಲಿ ದರ ಏರಿಕೆ-…

Read more
ಎನ್ ಸಿ ಪಟೇಲ್ ರವರಿಗೆ ಗೌರವ ಡಾಕ್ಟರೇಟ್

ಎನ್ ಸಿ ಪಟೇಲ್ ರವರಿಗೆ ಗೌರವ ಡಾಕ್ಟರೇಟ್ – ಯೋಗ್ಯ ವ್ಯಕ್ತಿಗೆ ಯೋಗ್ಯ ಪುರಸ್ಕಾರ.

ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಇವರು ತಮ್ಮ  56 ನೇ ಘಟಿಕೋತ್ಸವದಲ್ಲಿ ಎನ್ ಸಿ ಪಟೇಲ್  ಎಂಬ  ಅ ತ್ಯುತ್ತಮ ಕೃಷಿಕರಿಗೆ ಗೌರವ ಡಾಕ್ಟರೇಟ್ ನೀಡಿದ್ದು ಯೋಗ್ಯ ವ್ಯಕ್ತಿಗೆ ಯೋಗ್ಯ ಪುರಸ್ಕಾರ ಎನ್ನಿಸಿದೆ. ಶ್ರಿಯುತ  ಎನ್ ಸಿ ಪಟೇಲ್ ಇವರು ತಮ್ಮ ಇಡೀ ಜೀವಮಾನವನ್ನೇ ಕೃಷಿಗಾಗಿ ಮುಡಿಪಾಗಿಟ್ಟವರು. ತೋಟಗಾರಿಕಾ ಬೆಳೆಗಳಾದ ಮಾವು, ದ್ರಾಕ್ಷಿ, ದಾಳಿಂಬೆ, ಸೀಬೆ, ನೇರಳೆ ಮುಂತಾದ ಬೆಳೆಗಳನ್ನು ಅಚ್ಚುಕಟ್ಟಾಗಿ ಬೆಳೆಯುತ್ತಿರುವ ಮಾದರಿ ರೈತ. ನಾಗದಾಸನಹಳ್ಳಿ ಚಿಕ್ಕಕೆಂಪಣ್ಣ ಪಟೇಲ್ (Nagadasanahalli Chikakempanna patel) ಬೆಂಗಳೂರು ಹೊರವಲಯದ ಯಲಹಂಕದ…

Read more
error: Content is protected !!