ಬೇಸಿಗೆಯಲ್ಲಿ ಗೊಬ್ಬರಗಳನ್ನು ಕೊಡುವುದರಿಂದ ಭಾರೀ ಲಾಭವಿದೆ.

ಬೇಸಿಗೆ ಕಾಲದಲ್ಲಿ ಸಸ್ಯ ಬೆಳವಣಿಗೆ ಚುರುಕಾಗಿರುತ್ತದೆ. ಅದಕ್ಕಾಗಿ ಬೇಸಿಗೆಯಲ್ಲಿ ನೀರಾವರಿ ಇರುವ ಬೆಳೆಗಳಿಗೆ ಗೊಬ್ಬರ ಕೊಡುವುದು ಉತ್ತಮ. ಯಾವಾಗಲೂ ಹಸಿವಿದ್ದಾಗ ಉಣ್ಣಬೇಕು. ಬಾಯಾರಿದಾಗ ನೀರು ಕುಡಿಯಬೇಕು. ಇದೇ ಸಿದ್ದಾಂತದಲ್ಲಿ  ಸಸ್ಯ ಪೋಷಣೆಯೂ ನಡೆಯಬೇಕು. ಸಸ್ಯಗಳು ಹೆಚ್ಚು ಬಾಯಾರಿಕೆ ಮತ್ತು ಹಸಿವಿನಿಂದ plant’s need  ಇರುವುದು ಬೇಸಿಗೆಯ ಕಾಲದಲ್ಲಿ. ಈಗ ಅವುಗಳಿಗೆ ನೀರನ್ನೂ ಪೋಷಕಗಳನ್ನೂ ಕೊಡುವುದರಿಂದ ಅವುಗಳ ಬೆಳವಣಿಗೆಗೆ ತುಂಬಾ ಪ್ರಯೋಜನವಾಗುತ್ತದೆ. ಸಸ್ಯಗಳು ನಾವು ಕೊಡುವ ನೀರು, ಗೊಬ್ಬರಕ್ಕೆ ಚೆನ್ನಾಗಿ ಸ್ಪಂದಿಸಿ ಸ್ವೀಕರಿಸುತ್ತವೆ. ನಾವೆಲ್ಲಾ ಬೆಳೆಗಳಿಗೆ ಗೊಬ್ಬರ ಕೊಡಲು…

Read more
ಕೊಡದಲ್ಲಿ ನೀರು ಸೇದಿ ಕುಡಿಯುವ ಭಾಗ್ಯ

ಜಲ –ಇದು ಲಕ್ಷ್ಮಿ . ಜಲವನ್ನು ಸಂರಕ್ಷಿಸೊಣ- ಗೌರವಿಸೋಣ.

ನಮಗೆ ಬಾವಿ ತೋಡಿದಾಗ ಹೇರಾವರಿ ನೀರು ಸಿಕ್ಕಿದರೆ ಅದು ನಮ್ಮ ಮನೆಗೆ ಲಕ್ಷ್ಮಿಯ ಕೃಪೆ ದಯಪಾಲಿಸಿದೆ ಎಂದರ್ಥ. ಲಕ್ಷ್ಮಿ ಒಲಿದಳೆಂದು ಸ್ವೇಚ್ಚಾಚಾರ ಮಾಡಿದರೆ ಯಾವುದೇ ಸಮಯದಲ್ಲಿ ಆಕೆ ನಿರ್ಗಮಿಸಿದರೂ ಅಚ್ಚರಿ ಇಲ್ಲ. ಇದು ನೀರು ಸಂಪತ್ತು ಎಲ್ಲದಕ್ಕೂ ಅನ್ವಯ.ಭಯ ಭಕ್ತಿ  ಗೌರವದಿಂದ ಪ್ರಾಕೃತಿಕ ಕೊಡುಗೆಗಳನ್ನು ಅನುಭವಿಸಬೇಕು.   ವಿಶ್ವ ಜಲ ದಿನ ಮಾರ್ಚ್ 22. ಜೀವ ಜಲದ ಪ್ರಾಮುಖ್ಯತೆ ಬಗ್ಗೆ ನಾವೆಲ್ಲರೂ ಜಾಗೃತರಾಗಬೇಕು. ವರ್ಷ ವರ್ಷವೂ ನಾವು ಜಲ ದಿನ ಎಂದು ಈ ದಿನವನ್ನು ಆಚರಿ ಸುತ್ತೇವೆ….

Read more
ಹಲಸಿನ ಕಾಯಿಯಾಗುವ ಕೌತುಕ

ಹಲಸು ಹೇಗೆ ಕಾಯಿಯಾಗುತ್ತದೆ. ಅದರ ಕೌತುಕ ಏನು?

ಹಲಸಿನ ಮರದಲ್ಲಿ ಹೂವು ಬಿಡುವುದು ಹಲಸಿನ ಕಾಯಿಯಾಗಲು. ಹಲಸಿನ ಕಾಯಿಯ ಮಿಡಿಯೇ ಅದರ ಹೂವು.  ಕಳ್ಳಿಗೆ ಮತ್ತು ಮೈ ಕಳ್ಳಿಗೆ ಎಂದು ಕರೆಯುವ ಇದು ಹೆಣ್ಣು ಮತ್ತು ಗಂಡು ಹೂವುಗಳು. ಚಳಿಗಾಲ ಪ್ರಾರಂಭವಾಗುವ ಸಮಯದಿಂದ ಆರಂಭವಾಗಿ ಶಿವರಾತ್ರೆ  ತನಕ ಹಲಸಿನ ಮರ ಹೂವು ಬಿಡುವ ಕಾಲ. ಈ ಸಮಯದಲ್ಲಿ ಕೆಲವು ಬೇಗ ಹೂವು ಬಿಟ್ಟರೆ ಮತ್ತೆ  ಕೆಲವು ನಿಧಾನವಾಗಿ ಶಿವರಾತ್ರೆ  ನಂತರವೂ ಹೂವು ಬಿಡುತ್ತವೆ. ಗಾಳಿ  ಬಂದಾಗ ಹೂವು ಬಿಡುವಿಕೆ ಜಾಸ್ತಿ ಎನ್ನುತ್ತಾರೆ. ವಾಸ್ತವವಾಗಿ ಹಾಗಲ್ಲ. ಶುಷ್ಕ…

Read more
ಡ್ರಿಪ್ ಇರಿಗೇಶನ್ ಅಳವಡಿಸಿದ ಅಡಿಕೆ ತೋಟ

ಡ್ರಿಪ್ ಇರಿಗೇಶನ್ ವ್ಯವಸ್ಥೆಯಲ್ಲಿ ಬ್ಲಾಕ್ ಆಗದಂತೆ ಮಾಡುವ ಸರಳ ವಿಧಾನ

ಬಹಳ ಜನ ರೈತರು ಡ್ರಿಪ್ ಮಾಡಿದರೆ ಅದು ಬ್ಲಾಕ್ ಆಗುತ್ತದೆ, ನೀರು ಸರಿಯಾಗಿ ಹೋಗದೆ ಸಮಸ್ಯೆಯಾಗುತ್ತದೆ ಎನ್ನುತ್ತಾರೆ. ಬ್ಲಾಕ್ ಆಗುವುದಕ್ಕೆ ಕಾರಣವನ್ನು ಗುರುತಿಸಿ ಅದಕ್ಕೆ ಬೇಕಾಗುವ ಸರಳ ಪರಿಹಾರಗಳನ್ನು ಮಾಡಿದರೆ  ಅದು ಸಮಸ್ಯೆಯೇ ಆಗದು. ಡ್ರಿಪ್ ಇರಿಗೇಶನ್ ವ್ಯವಸ್ಥೆಯಲ್ಲಿ ಕಣ್ಣಿಗೆ ಕಾಣದ ಕೆಲವು ಲವಣಗಳು ಸ್ವಲ್ಪ ಸ್ವಲ್ಪವೇ ಆಂಟಿಕೊಂಡು ನೀರು ಹರಿಯುವ  ದ್ವಾರವನ್ನು ಮುಚ್ಚುತ್ತದೆ. ಇದು ಹೆಚ್ಚಿನವರು ಅನುಭವಿಸುವ ಸಮಸ್ಯೆ. ಈ ಲವಣಗಳನ್ನು ಕಾಲ ಕಾಲಕ್ಕೆ ಅನುಗುಣವಾಗಿ ಸ್ವಚ್ಚತೆ ಮಾಡುತ್ತಿದ್ದರೆ ಆ ಸಮಸ್ಯೆಯಿಂದ ಪಾರಾಗಬಹುದು. ಮಳೆಗಾಲದಲ್ಲಿ ಯಾರೂ…

Read more

ಬೋರ್ ವೆಲ್ ಕೊರೆಯುವಾಗ ನೀರು ಎಲ್ಲಿಂದ ಬರುತ್ತದೆ?

ಜನ ಬೋರ್  ವೆಲ್ ಎಂದರೆ ಭೂಮಿಯ ಅಥವಾ ಬಂಡೆಯ ಎಡೆಯಲ್ಲಿ  ಅಂತರ್ಗಾಮೀ ನದಿಗಳೇ ಇದೆ ಎಂದು ತಿಳಿದಿದ್ದಾರೆ. ಆದರೆ ವಾಸ್ತವಿಕತೆ ಬೇರೆಯೇ ಇದೆ.ಭೂಮಿಯಲ್ಲಿ ಬಂಡೆಯ ಬಿರುಕುಗಳ ಎಡೆಯಲ್ಲಿ ಜಿನುಗುವ ನೀರು ಇರುತ್ತದೆ. ಇದೆಲ್ಲಾ ಒಟ್ಟುಗೂಡುತ್ತಾ ದೊಡ್ದ ಪ್ರಮಾಣದ ನೀರಾಗುತ್ತದೆಯೇ ಹೊರತು “ ದಂಡು” ಅಥವಾ ನದಿ ಇರುವುದಿಲ್ಲ. ಹಾಗಿದ್ದರೆ ಏನಿದೆ ಒಳಗೆ? ನೀವು ಎಲ್ಲಿಯಾದರೂ ಬೆಟ್ಟದ ಬದಿಯಲ್ಲಿ ನೀರು ಹೊರಬರುವ ಚಿಲುಮೆಯನ್ನು ಕಂಡದ್ದಿದೆಯೇ? ಕಂಡಿದ್ದರೆ ಅದನ್ನು ಸೂಕ್ಷ್ಮವಾಗಿ ಗಮನಿಸಿರಿ. ಅದು ಹೇಗೆ ಹೊರ ಬರುತ್ತದೆ. ಎಲ್ಲಿಂದ ಬರುತ್ತದೆ. ಅದರ…

Read more
ಹನಿ ನೀರಾವರಿ ಸಾಧನ

ಹನಿ ನೀರಾವರಿ ಅಳವಡಿಸಿಕೊಳ್ಳುವಾಗ ನೀವು ತಿಳಿದಿರಬೇಕಾದ ವಿಷಯಗಳು.

ಈ ವರ್ಷ ಬಹಳಷ್ಟು ಜನ ಅಡಿಕೆ ತೋಟ ಮಾಡುತ್ತಿದ್ದಾರೆ. ಹೆಚ್ಚಿನವರ ಆಯ್ಕೆ ಹನಿ ನೀರಾವರಿ. ಜನ ನೀರು ಉಳಿತಾಯದ ಕಡೆಗೆ ಹೆಚ್ಚಿನ ಗಮನ ಕೊಡುವಷ್ಟು ಮುಂದುವರಿದದ್ದು ಸಂತೋಷದ ವಿಚಾರ. ಹನಿ ನೀರಾವರಿ ವ್ಯವಸ್ಥೆ ಅಳವಡಿಸಿಕೊಳ್ಳುವಾಗ, ಅಳವಡಿಸುವವರ ಜೊತೆಗೆ ನಾವೂ ಸ್ವಲ್ಪ ಅದರ ಸೂಕ್ಷ್ಮ ವಿಷಯಗಳನ್ನು ತಿಳಿದಿದ್ದರೆ ಬಹಳ ಒಳ್ಳೆಯದು. ಹನಿ ನೀರಾವರಿ ಎಂದರೆ ಲಭ್ಯವಿರುವ ನೀರನ್ನು ಎಲ್ಲೆಲ್ಲಿ ಬೆಳೆಗಳಿವೆಯೋ ಅಲ್ಲಿಗೆ ತಲುಪಿಸಿ ಆ ಸಸ್ಯಕ್ಕೆ ದಿನಕ್ಕೆ ಎಷ್ಟು ನೀರು ಬೇಕೋ ಅಷ್ಟನ್ನು ಮಾತ್ರ ಕೊಡುವ ವ್ಯವಸ್ಥೆ. ಇಲ್ಲಿ…

Read more
ಕರಿಮೆಣಸು ಹೀಗೆ ಬೆಳೆಸಬಹುದು

ಬುಷ್ ಪೆಪ್ಪರ್- ಕೊಯಿಲು ಬೆಳೆಸುವುದು ಹೇಗೆ- ಅನುಕೂಲ ಏನು?

ತೋಟದಲ್ಲಿ ಮರಕ್ಕೆ ಅಥವಾ ಯಾವುದಾದರು ಅಧಾರಕ್ಕೆ  ಹಬ್ಬಿಸಿ ಬೆಳೆಸಿದ ಕರಿಮೆಣಸನ್ನು  ಬೆಳೆಸುವುದು ನಮಗೆಲ್ಲಾ ಗೊತ್ತಿರುವ ಬೆಳೆ ಕ್ರಮ. ಇದನ್ನು ಮರಕ್ಕೆ ಹಬ್ಬಿಸು  ಬೆಳೆಸುವುದಲ್ಲದೆ ನೆಲದಲ್ಲಿಯೆ ಬೆಳೆಸಿ ಮೆಣಸು ಪಡೆಯಬಹುದು. ಈ ರೀತಿ ಮೆಣಸು ಬೆಳೆಸುವುದಕ್ಕೆ ಬುಷ್ ಪೆಪ್ಪರ್ ,ಪೊದೆಮೆಣಸು (bush pepper) ಎನ್ನುತ್ತಾರೆ. ಇದನ್ನು ಕೊಯ್ಯುವುದು ಸುಲಭ. ವರ್ಷದಲ್ಲಿ ಎರಡು ಮೂರು ಬಾರಿ ಇಳುವರಿಯು ಕೊಡುತ್ತದೆ. ಕೆಲವು ಇತಿಮಿತಿಗಳಲ್ಲಿ  ಇದನ್ನು ಬೆಳೆಸಬಹುದು. ಅಸಾಂಪ್ರದಾಯಿಕ ಪ್ರದೇಶಗಲ್ಲಿ ತಾಜಾ ಮೆಣಸು ಬಯಸುವವರಿಗೆ ಇದು ಉತ್ತಮ.  ಕಾಳು ಮೆಣಸು ಬೆಳೆಸಬೇಕೆಂಬ  ಆಸಕ್ತಿ…

Read more
ಶುಂಠಿ ಹೊಲ

ಶುಂಠಿ ಈಗ ನೆಟ್ಟರೆ ಬೆಳೆಗೆ ರೋಗ ಕಡಿಮೆ ಹೇಗೆ?.

ಶುಂಠಿ ಮುಂತಾದ  ಗೆಡ್ಡೆ ಗೆಣಸು ಬೆಳೆಗಳನ್ನು ಬೆಳೆಸುವರೇ ಕುಂಭ  ಮಾಸ ಅತ್ಯಂತ ಸೂಕ್ತ ಕಾಲ. ಶುಂಠಿಗೆ ಈ ವರ್ಷ ಬೆಲೆ ಕುಸಿತವಾಗಿದೆ ಎಂದು ಬೆಳೆ ಬಿಟ್ಟು ಬಿಡಬೇಡಿ. ಈ ವರ್ಷ ಮತ್ತೆ ಶುಂಠಿಗೆ ಚಾನ್ಸ್ ಬರುವ ಸಾಧ್ಯತೆ ಇದೆ. ಜೊತೆಗೆ ಬಿತ್ತನೆ ಗಡ್ಡೆಯೂ ಕಡಿಮೆ ಬೆಲೆಗೆ ಲಭ್ಯ. ಮಾರ್ಚ್ ನಂತರ ಶುಂಠಿ ನೆಟ್ಟರೆ ಮಳೆ ಬರುವ ಸಮಯಕ್ಕೆ ಗಿಡ ಬೆಳೆದು ರೋಗ ಸಾಧ್ಯತೆ ಕಡಿಮೆ. ಮಾಗಿ ತಿಂಗಳು ಅಥವಾ ಕುಂಭ ಮಾಸ ಕಳೆದರೆ ಮಳೆಗಾಲ. ಆಷಾಢ ಕಳೆದರೆ…

Read more
ತೋಟಕ್ಕೆ ಮಣ್ಣು – Fresh soil

ತೋಟಕ್ಕೆ ಹೇಗೆ ಮಣ್ಣು ಹಾಕಬೇಕು- ಯಾವ ಮಣ್ಣು ಸೂಕ್ತ ?

ಅಡಿಕೆ ತೋಟಕ್ಕೆ ಮಣ್ಣು ಹಾಕುವುದು ನಾವೆಲ್ಲಾ ಮಾಡುವ ಒಂದು ಪ್ರಮುಖ ಬೇಸಾಯ ಕ್ರಮ. ಮಣ್ಣು ಹಾಕುವ ಪದ್ದತಿ ಒಳ್ಳೆಯದು. ಅದರೆ ಹಾಕುವಾಗ ಹೇಗೆ ಹಾಕಬೇಕು, ಎಂತಹ ಮಣ್ಣು ಹಾಕಬೇಕು, ಎಷ್ಟು ಪ್ರಮಾಣದಲ್ಲಿ ಹಾಕಬೇಕು ಎಂಬುದು ಪ್ರಾಮುಖ್ಯ ಸಂಗತಿ. ತೀರಾ ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಹಾಕಬಾರದು. ಫಲವತ್ತಾಗಿರದ ಮಣ್ಣು ಬೇಡ. ಸಾವಯವ ವಸ್ತುಗಳು ಸೇರಿ ಬಣ್ಣ ಬದಲಾದ ಮಣ್ಣನ್ನು ಹಾಕಿದರೆ ಅದರ ಪ್ರಯೋಜನ ಹೆಚ್ಚು. ತೋಟ- ಹೊಲಕ್ಕೆ ಹೊಸ ಮಣ್ಣು ಹಾಕುವ ಉದ್ದೇಶ ಮಣ್ಣು ಹೆಚ್ಚು ಸಡಿಲವಾಗಿ ಮೇಲು…

Read more
ಕೆಂಪಡಿಕೆ

ಕೆಂಪಡಿಕೆ ಬಲ- ಚಾಲಿಹಿನ್ನೆಡೆ- ಇಂದು 08-03-2022 ಅಡಿಕೆ ಧಾರಣೆ.

ಹಿಂದಿನ ಲೆಕ್ಕಾಚಾರಗಳು ಹಾಗೂ ಪರಿಸ್ಥಿತಿಗಳಂತೆ ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಉತ್ಸಾಹ ಕಡಿಮೆಯಾಗಿದೆ. ಅತ್ಯಲ್ಪ ಪ್ರಮಾಣದ ಅಡಿಕೆ ಮಾತ್ರ ಉತ್ತಮ ದರಕ್ಕೆ ಖರೀದಿಯಾಗುತ್ತಿದ್ದು, ಪ್ರಕಟಣೆಯ ದರಕ್ಕೂ ಕೊಳ್ಳುವ ದರಕ್ಕೂ ಸಂಬಂಧವೇ ಇಲ್ಲದಾಗಿದೆ. ಆದರೆ ಕೆಂಪಡಿಕೆ ಮಾರುಕಟ್ಟೆ ಮಾತ್ರ  ಬಲ ಕಳೆದುಕೊಳ್ಳದೆ ಉಳಿದಿದೆ. ಬಹುತೇಕ ಕೆಂಪಡಿಕೆ ಉಳ್ಳವರು ಉತ್ತಮ ದರದ ನಿರೀಕ್ಷೆಯಲ್ಲಿ ಮಾರಾಟ ಮಾಡುವುದನ್ನು ಮುಂದೂಡುತ್ತಿದ್ದಾರೆ.ಈ ವರ್ಷ ಹಿಂದೆಲ್ಲಾ ಆಗುತ್ತಿದ್ದಂತೆ ಕೆಂಪಡಿಕೆ ದರವನ್ನು ಹಿಂಬಾಲಿಸುತ್ತಾ ಚಾಲಿ ದರ ಮುಂದುವರಿಯಲಿದೆ ಎಂಬ ವದಂತಿಗಳಿವೆ.   ನಿನ್ನೆ ದಿನಾಂಕ 07-03-2022 ರಂದು ಕೆಂಪಡಿಕೆಯ…

Read more
error: Content is protected !!