ಅಡಿಕೆ ಕಾಯಿಗಳು ಯಾಕೆ ಹೀಗಾಗುತ್ತವೆ? ಏನು ಪರಿಹಾರ?
ಬಹಳಷ್ಟು ಅಡಿಕೆ ಬೆಳೆಗಾರರ ತೋಟದಲ್ಲಿ ಈಗ ಇಂತಹ ಕಾಯಿಗಳು ಉದುರಿ ಬೀಳುತ್ತಿವೆ. ಸರಿಯಾಗಿ ಬಲಿತು ಹಣ್ಣಾಗಿರದ, ಮೇಲ್ಮೈಯಲ್ಲಿ ಸುಟ್ಟಂತಹ ಕಲೆ ಇರುವ ಈ ಅಡಿಕೆಗೆ ಗುಣಮಟ್ಟ ಇರುವುದಿಲ್ಲ. ಸಿಪ್ಪೆ ಅಂಟಿರುವ ಉಳ್ಳಿ ಅಡಿಕೆ ಆಗಬಹುದು. ಒಡೆದ ಪಟೋರಾವೂ ಆಗಬಹುದು. ಇಲ್ಲವೇ ಕೆಂಪು ಬಣ್ಣದ ಕರಿಗೋಟು ಆಗಬಹುದು. ಹೀಗಾಗುವುದಕ್ಕೆ ಕಾರಣ ಏನು ಎಂಬುದು ಬಹಳಷ್ಟು ಕೃಷಿಕರಿಗೆ ಗೊತ್ತಿಲ್ಲ. ಇದು ಹೊಸ ಸಮಸ್ಯೆ ಅಲ್ಲವಾದರೂ ಈಗೀಗ ಇದರ ತೊಂದರೆ ಹೆಚ್ಚಾಗುತ್ತಿದೆ. ಅಡಿಕೆ ಬೆಳೆಗೆ ಈಗೀಗ ಒಂದಿಲ್ಲೊಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.ಇದಕ್ಕೆ ಕಾರಣ…