ಅಡಿಕೆ ಗರಿ ತಿನ್ನುವ ತಿಗಣೆಯ ಹಾನಿ

ಅಡಿಕೆ ಗರಿಗಳು ಯಾಕೆ ಹೀಗಾಗುತ್ತವೆ- ಪರಿಹಾರ ಏನು?

ಅಡಿಕೆಯ  ಸಸ್ಯದ ಎಲೆಗಳು ಗುಚ್ಚದ ತರಹ ಆಗುವ, ಸಸ್ಯ  ಬೆಳವಣಿಗೆಯನ್ನು ಹತ್ತಿಕ್ಕುವ  ಕೆಲವು ರಸ ಹೀರುವ ಕೀಟಗಳನ್ನು ನಿಯಂತ್ರಿಸದಿದ್ದರೆ  ಸಸಿ ಏಳಿಗೆ ಆಗುವುದೇ ಇಲ್ಲ. ಅಡಿಕೆ ಸಸಿ/ ಮರದ ಎಲೆ ಹಾಳಾದರೆ ಅದರ ಏಳಿಗೆಯೇ ಆಗುವುದಿಲ್ಲ. ಎಲೆಯ ರಸ ಹೀರಿ ತೊಂದರೆ ಮಾಡುವ ಕೆಲವು ತಿಗಣೆಗಳು ಇತ್ತೀಚಿನ ದಿನಗಳಲ್ಲಿ ಭಾರೀ  ತೊಂದರೆ ಮಾಡುತ್ತಿವೆ. ಒಂದು ಅಡಿಕೆ ನೆಟ್ಟು ಸುಮಾರು 5 ವರ್ಷಕ್ಕೆ ಅದು ಫಲ ಕೊಡಲು ಪ್ರಾರಂಭವಾಗಬೇಕು. ಆದರೆ ಇಂತಹ  ಕೀಟಗಳು ಧಾಳಿ ಮಾಡಿದವೆಂದರೆ ಅದರ ಬೆಳವಣಿಗೆಯೇ…

Read more
ಹುಳ ತಿಂದು ಸತ್ತ ತೆಂಗಿನ ಮರ

ತೆಂಗಿನ ಮರಗಳು ಸಾಯುತ್ತಿರುವುದಕ್ಕೆ ಕಾರಣ ಏನು?

ಸಿಡಿಲು, ಸುಳಿ ಕೊಳೆ, ಅಥವಾ ಇನ್ನೇನಾದರೂ ಕೀಟ ಬಾಧೆಯಿಂದ ತೆಂಗಿನ ಮರ ಸತ್ತರೆ ಅದನ್ನು ತಕ್ಷಣ ಕಡಿದು ಏನಿಲ್ಲವಾದರೂ ಸೌದೆ ಮಾಡಿಯಾದರೂ ವಿಲೇವಾರಿ ಮಾಡಿ. ಹೆಚ್ಚಿನ ರೈತರು  ತೆಂಗಿನ ಮರ ಸತ್ತು ಹೋದರೆ ಅದರಿಂದ ನಮಗೇನು ನಷ್ಟ ಎಂದು ಅದನ್ನು ಹಾಗೆ  ಬಿಡುತ್ತಾರೆ. ಸತ್ತು ಒಣಗಿ ಶಿಥಿಲವಾದ ಮೇಲೆ ವಿಲೇವಾರಿ ಸುಲಭ ಎಂಬ ಕಾರಣಕ್ಕೆ ಹೀಗೆ ಮಾಡುತ್ತಾರೆ. ಆದರೆ ಸತ್ತ ಮರವನ್ನು ಹಾಗೇ ಬಿಟ್ಟರೆ ಮತ್ತೆ ಒಂದೆರಡು ಮರ ಸಸಿ ಸಾಯುತ್ತದೆ ಏಕೆ ಗೊತ್ತೇ? ನಮ್ಮಲ್ಲಿ ಹಿರಿಯರು…

Read more
ತೆಂಗು-ಉತ್ತಮ ಆರೈಕೆಯಲ್ಲಿ ಬೆಳೆದ 4 ವರ್ಷದ ತೆಂಗು- 4 year yielding plant

ತೆಂಗು- 4 ವರ್ಷಕ್ಕೆ ಇಳುವರಿ ಪ್ರಾರಂಭವಾಗಲು ಹೇಗೆ ಸಾಕಬೇಕು?

ತೆಂಗಿನ ಸಸಿ ನೆಟ್ಟು ನಂತರ ಎಲ್ಲಾ ನಿರ್ವಹಣೆಯನ್ನೂ ಚಾಚೂ ತಪ್ಪದೆ ಮಾಡುತ್ತಾ ಬಂದರೆ ಅದು 4 ನೇ ವರ್ಷಕ್ಕೆ ಹೂ ಬಿಟ್ಟು 5 ವರ್ಷಕ್ಕೆ ಕಾಯಿ ಬಿಡಲು ಪ್ರಾರಂಭವಾಗುತ್ತದೆ. ಹೈಬ್ರೀಡ್ ತಳಿಗಳು ನಾಲ್ಕನೇ ವರ್ಷಕ್ಕೇ ಫಲ ಕೊಡಲು ಪ್ರಾರಂಭವಾಗುತ್ತದೆ.  ನಾವೆಲ್ಲಾ ತೆಂಗಿನ ಸಸಿ ನೆಡುತ್ತೇವೆ. ಫಲ ಬರುವ ತನಕ ಆರೈಕೆ ಮಾಡಲು ಉದಾಸೀನ ಮಾಡುತ್ತೇವೆ. ಫಲ ಬಂದ ನಂತರ ಹೆಚ್ಚು ಇಳುವರಿ ಬೇಕು ಎಂದು ಗೊಬ್ಬರ ಕೊಡುವ ಉತ್ಸಾಹ ತೋರುತ್ತೇವೆ. ಆದರೆ ಇದು ಸೂಕ್ತ ಕ್ರಮ ಅಲ್ಲ. ಸಸಿ ನೆಟ್ಟಾದಾಗಿನಿಂದ…

Read more

ತೆಂಗಿನ ಇಳುವರಿ ಹೆಚ್ಚಲು ಹಿಪ್ಪು ನೇರಳೆ ಬೆಳೆ ಸಹಾಯಕ.

ತೆಂಗಿನ ತೋಟದಲ್ಲಿ ಮಿಶ್ರ ಬೆಳೆಗಳನ್ನು ಬೆಳೆಸಿದರೆ ತೆಂಗಿನಲ್ಲಿ ಇಳುವರಿ ಹೆಚ್ಚುತ್ತದೆ. ತೆಂಗಿನ ತೋಟದಲ್ಲಿ ಬಹುವಾರ್ಷಿಕ ಮಿಶ್ರ ಬೆಳೆಗಳಲ್ಲಿ ಹಿಪ್ಪು ನೇರಳೆ ಒಂದು. ಉಳಿದೆಲ್ಲಾ ಮಿಶ್ರ ಬೆಳೆಗಳು ಕೊಡುವ ಆದಾಯಕ್ಕೆ ಹೋಲಿಕೆ ಮಾಡಿದರೆ ಹಿಪ್ಪು ನೇರಳೆಯೇ ಶ್ರೇಷ್ಟ. ಇದು ನೆಟ್ಟು ಸಸಿ ಆಗುವ ತನಕ ಒಂದು ವರ್ಷ ಕಾಯಬೇಕಾಗಬಹುದು. ನಂತರ ಇದರಿಂದ ನಿರಂತರ ಆದಾಯ ಬರುತ್ತಲೇ ಇರುತ್ತದೆ. ತೆಂಗಿನ ಅಧಿಕ ಇಳುವರಿಗೂ ಇದು ಸಹಾಯಕವಾಗುತ್ತದೆ. ರೇಶ್ಮೆ ವ್ಯವಸಾಯ ಎಂಬುದು ಒಂದು ರೀತಿಯಲ್ಲಿ ಸರಕಾರಿ ನೌಕರಿ ಇದ್ದಂತೆ. ತಿಂಗಳಾಂತ್ಯಕ್ಕೆ ಬರುವ…

Read more
ಮಂಗಳ ಅಥವಾ ಇಂಟರ್ ಮಂಗಳ ಅಡಿಕೆ ಫಸಲು

ಇಂಟರ್ ಸಿ ಎಂದರೆ ಮಂಗಳ ತಳಿ. ಹೊಸ ತಳಿ ಅಲ್ಲ.

ಅಧಿಕ ಇಳುವರಿಗೆ ಇಂಟರ್ ಸಿ ಮಂಗಳಬೇ ಆಗಬೇಕು ಎಂದು ದುಂಬಾಲು ಬಿದ್ದು, ನೆಡ ಬಯಸುವವರು ಒಂದಷ್ಟು ವಿಚಾರಗಳನ್ನು ತಿಳಿದಿರಬೇಕು. ಇದು ಅಧಿಕ ಇಳುವರಿ ಕೊಡಬಹುದು.  ಆದರೆ ಅದು ಹಿಂದೆ ಇದ್ದ ಮಂಗಳ ತಳಿಯೇ ಆಗಿದೆ. . ಇಂಟರ್ ಸಿ ಮಂಗಳ  ತಳಿ ಎಂಬ ಹೆಸರೇ ಒಂದು ಪ್ರಚಾರ. ಇನ್ನು ಇದನ್ನು ಒಂದು ತಳಿ ಎಂದು ಮಾರಾಟ ಮಾಡುವವರ ಅವಿವೇಕತನಕ್ಕೆ ಏನು ಹೇಳಬೇಕೋ ತಿಳಿಯದು. ಒಂದು ಗಾದೆ ಇದೆ, ನಮ್ಮನ್ನು ಮಂಗ ಮಾಡುವುದಲ್ಲ, ನಾವು ಮಂಗ ಆಗುವುದು. ನಮ್ಮ ಅಸಹಾಯಕತೆಯೇ…

Read more
cows in open field grazing

ಹಸುಗಳ ಆರೋಗ್ಯ ಮತ್ತು ನಾವು ಕೊಡುವ ಆಹಾರ.

ಈಗಲೇ ಕೆಲವು ವೈದ್ಯರು ಹಾಲು ಬಿಡಿ. ಆರೋಗ್ಯವಾಗಿರುತ್ತೀರಿ ಎನ್ನುತ್ತಿದ್ದಾರೆ. ಮುಂದೆ ಎಲ್ಲರೂ ಹೀಗೇ ಹೇಳುತ್ತಾ ಬಂದರೆ  ಜೀವನೋಪಾಯಕ್ಕಾಗಿ ಹಸು ಸಾಕುವವರಿಗೆ ಭಾರೀ ನಷ್ಟವಾದೀತು. ಹಸುಗಳನ್ನು ಸಾಕುವಾಗ ಅದನ್ನು ಸಾಕಿದ ಖರ್ಚು ನಮಗೆ ಬರಬೇಕು. ಲಾಭ ಆಗಬೇಕು. ಈ ಉದ್ದೇಶದಲ್ಲಿ ನಾವು ಹಸುವೊಂದರ ಜೀವದೊಂದಿಗೆ ಆಟ ಆಡುತ್ತಿದ್ದೇವೆ ಎಂದರೆ ತಪ್ಪಾಗಲಾರದು. ಹಸುಗಳಿಗೆ ಬೇಕೋ ಬೇಡವೋ ನಮಗೂ ಗೊತ್ತಿಲ್ಲ. ಶಿಫಾರಸು ಮಾಡುವವರಿಗೂ ಗೊತ್ತಿಲ್ಲ. ಹೆಚ್ಚು ಹೆಚ್ಚು ಪಶು ಆಹಾರ, ಖನಿಜ ಮಿಶ್ರಣ  ಹಾಗೆಯೇ ವಿಟಮಿನ್ ಮುಂತಾದವುಗಳನ್ನು ಕೊಟ್ಟು ಹಸುವಿನ ಆರೋಗ್ಯವನ್ನು…

Read more
ಗೊನೆ ಹಾಕಿದ ಬಾಳೆ

ಬಾಳೆ ಯಾವಾಗ ನೆಟ್ಟರೆ ಹೆಚ್ಚು ಲಾಭವಾಗುತ್ತದೆ?

ಬಾಳೆ ಕಾಯಿಗೆ ಬೇಡಿಕೆ ಇರುವ ತಿಂಗಳುಗಳಿಗೆ 9-10  ತಿಂಗಳ ಮುಂಚೆ ನಾಟಿ ಮಾಡುವುದರಿಂದ  ಬೆಳೆದವರಿಗೆ ಉತ್ತಮ ಬೆಲೆ ಸಿಕ್ಕಿ ಲಾಭವಾಗುತ್ತದೆ. ಸಾಮಾನ್ಯವಾಗಿ ಹಬ್ಬದ ದಿನಗಳು ಪ್ರಾರಂಭವಾಗುವ ನಾಗರ ಪಂಚಮಿ, ಕೃಷ್ಣಾಷ್ಟಮಿ,ಚೌತಿ ಹಬ್ಬ ನವರಾತ್ರೆ, ಮತ್ತು ದೀಪಾವಳಿಗೆ ಕಠಾವಿಗೆ ಸಿಗುವಂತೆ ಒಂದು ತಿಂಗಳ ಮಧ್ಯಂತರದಲ್ಲಿ  ಬಾಳೆ ಸಸಿ ನೆಟ್ಟು ಬೆಳೆಸಿದರೆ ಎಲ್ಲಾ ಹಬ್ಬದ ಸಮಯದಲ್ಲೂ ಕಠಾವಿಗೆ ಸಿಗುತ್ತದೆ.    ಹೆಚ್ಚಿನವರು ಬಾಳೆ ನಾಟಿ ಮಾಡಲು ಆಯ್ಕೆ ಮಾಡುವುದು ಮಳೆಗಾಲ ಪ್ರಾರಂಭದ ದಿನಗಳನ್ನು. ಎಲ್ಲರೂ ಇದೇ ಸಮಯದಲ್ಲಿ ನಾಟಿ ಮಾಡಿದರೆ…

Read more
Pineapple Shridhara gowda

ಅನನಾಸು ಬೆಳೆಯಲ್ಲೂ ಕೋಟಿ ಸಂಪಾದನೆ ಸಾಧ್ಯವಿದೆ.

ಕೋಟಿ ಸಂಪಾದನೆಗಾಗಿ ಜೀವಕ್ಕೆ ಅಪಾಯ ಇರುವ , ಅತ್ಯಧಿಕ ತಲೆಬಿಸಿ ಇರುವ  ಬೆಳೆಗಳ ಹಿಂದೆ ಹೋಗಿ ಪಶ್ಚಾತ್ತಾಪ ಪಡಬೇಡಿ. ಶ್ರಮ ಪಟ್ಟು ದುಡಿದರೆ ಕೋಟಿ ಸಂಪಾದನೆಗೆ  ಬೇರೆ ತೋಟಗಾರಿಕಾ ಬೆಳೆಗಳೂ ಇವೆ. ಜನ ಅಧಿಕ ಆದಾಯದ ಬೆಳೆ ಬೇಕು ಎಂದು ಅತ್ಯಂತ ರಿಸ್ಕ್ ಇರುವ ಶ್ರೀ ಗಂಧದಂತಹ ಬೆಳೆಯ ಹಿಂದೆ ಹೋಗುತ್ತಿದ್ದಾರೆ, ಬುದ್ಧಿವಂತ ರೈತರು ಅಷ್ಟು ವರ್ಷ ಕಾಯದೆ, ಕೆಲವೇ ವರ್ಷಗಳಲ್ಲಿ ಸ್ವಂತ ಭೂಮಿ ಇಲ್ಲವೇ ಲೀಸ್ ಗೆ ಪಡೆದ ಭೂಮಿಯಲ್ಲಾದರೂ ಅನನಾಸು ಬೆಳೆದು ಕೋಟಿಯನ್ನು ಕಂಡವರಿದ್ದಾರೆ….

Read more
honey comb

ಜೇನಿನಲ್ಲಿ ಕಲಬೆರಕೆ ಯಾಕೆ ಆಗುತ್ತಿದೆ?

ಒಬ್ಬ ಜೇನು  ಸಾಕಾಣಿಕೆ ಮಾಡುವವನು ಅಂಗಡಿಯ ಜೇನನ್ನು ಉಚಿತವಾಗಿ ಕೊಟ್ಟರೂ ಖರೀದಿ ಮಾಡಲಾರ. ಅವನಿಗೆ ಗೊತ್ತಿದೆ ಯಾವುದು ಶುದ್ಧ ಜೇನು ಎಂದು. ಜನರಿಗೆ ಅರೋಗ್ಯ ಕಳಕಳಿ ಹೆಚ್ಚುತ್ತಿದೆ. ಅವರು ಆರೋಗ್ಯಕ್ಕಾಗಿ ಮಾಡುವುದೆಲ್ಲಾ ಅನಾರೋಗ್ಯವನ್ನು ಆಹ್ವಾನಿಸುತ್ತದೆ. ಜನ ಮಂಗ ಆಗುತ್ತಾರೆಯೇ ಹೊರತು ಮಂಗ ಮಾಡುವುದಲ್ಲ. ಜೇನು ಸಂತತಿ ಕಡಿಮೆಯಾಗಿದೆ. ಪರಾಗದಾನಿಗಳು ಇಲ್ಲದೆ ಬೆಳೆ ನಷ್ಟವಾಗುತ್ತಿದೆ ಎಂಬುದಾಗಿ ಬಲ್ಲವರು  ಎಚ್ಚರಿಸುತ್ತಿದ್ದಾರೆ. ಕಾಡು ಕಡಿಮೆಯಾಗಿದೆ. ಪುಷ್ಪಗಳು ಇಲ್ಲದಾಗಿದೆ. ಆಹಾರ ಇಲ್ಲದೆ ಜೇನಿನ ಸಾಕಾಣಿಕೆಗೆ ತೊಂದರೆಯಾಗಿದೆ ಎಂದು ಎಲ್ಲಾ ಕಡೆಯಲ್ಲೂ ಎಚ್ಚರಿಕೆಗಳು ಕೇಳಿ…

Read more
ಲಾಭದಾಯಕ ಕೃಷಿಗೆ ಬೇಕಾದ ಫಲವತ್ತಾದ ಮಣ್ಣು

ಕೃಷಿ ಲಾಭದಾಯಕವಾಗಲು ಬೇಕಾಗುವುದೇ ಉತ್ತಮ ಮಣ್ಣು – ಹೇಗೆ?

ಕೃಷಿ ಮಾಡುವ ನಾವೆಲ್ಲಾ ಮಣ್ಣಿನ ಬಗ್ಗೆ ಎಷ್ಟು ತಿಳಿದುಕೊಂಡರೂ ಸಾಲದು. ಮಣ್ಣು ಮೊದಲು. ಕೃಷಿ ಅನಂತರ.ಮಣ್ಣಿನಲ್ಲಿ ಫಲವತ್ತತೆ ಇದ್ದರೆ ಮಾತ್ರ ಅದರಲ್ಲಿ ಕೃಷಿ ಮಾಡಿ. ಫಲವತ್ತತೆ ಇಲ್ಲದಲ್ಲಿ ಕೃಷಿ ಯಾವಾಗಲೂ ಲಾಭದಾಯಕವಾಗುವುದಿಲ್ಲ. ಇತ್ತೀಚೆಗೆ ಈಶ ಫೌಂಡೇಶನ್ ನ ಸಧ್ಗುರುಗಳು ತಮ್ಮ ವೀಡಿಯೊದಲ್ಲಿ ಕ್ಯಾಲಿಫೋರ್ನಿಯಾ ದೇಶವು ಅಕ್ಕಿಯನ್ನು ಥೈಲ್ಯಾಂಡ್ ದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಯಾಕೆ ಭಾರತದಿಂದ ಮಾಡುವುದಿಲ್ಲ ಎಂಬ ಬಗ್ಗೆ ಕೇಳಿದಾಗ ಭಾರತದ ಅಕ್ಕಿಯಲ್ಲಿ ಯಾವ ಪೋಷಕಾಂಶಗಳೂ ಇಲ್ಲ ಎನ್ನುತ್ತಾರೆ ಎಂದಿದ್ದಾರೆ. ಅದೇ ರೀತಿ ವಿಯೆಟ್ ನಾಂ ದೇಶ…

Read more
error: Content is protected !!