ಅಧಿಕಇಳುವರಿಗೆ ನೆರವಾಗುವ ರಾಸಾಯನಿಕ ಇಲ್ಲದ NPK ಪೋಷಕ.

ಕೆಲವು ರೈತರು ಬೆಳೆಗಳಿಗೆ ಎಲ್ಲಾ ರೀತಿಯ ಗೊಬ್ಬರಗಳನ್ನು ಕೊಡುತ್ತಾರೆ. ವರ್ಷದಿಂದ ವರ್ಷಕ್ಕೆ ಗೊಬ್ಬರ ಕೊಡುವ ಪ್ರಮಾಣವನ್ನೂ ಹೆಚ್ಚಿಸುತ್ತಾರೆ. ಆದರೆ ವರ್ಷದಿಂದ ವರ್ಷಕ್ಕೆ ಫಸಲು ಕಡಿಮೆಯಾಗುತ್ತದೆ. ಸಸ್ಯ ದ ಆರೋಗ್ಯವೂ ಹಾಳಾಗುತ್ತದೆ. ಇದಕ್ಕೆ ಕಾರಣ ಮಣ್ಣಿನ ಜೈವಿಕತೆ ಕ್ಷೀಣಿಸುವುದು. ಪರಿಸ್ಥಿತಿಗೆ ಸಹಜವಾಗಿ ಮಣ್ಣಿಗೆ ಸಾವಯವ ವಸ್ತುಗಳನ್ನು ಹೇರಳವಾಗಿ ಪೂರೈಕೆ ಮಾಡಲು ಆಗುತ್ತಿಲ್ಲ. ಇದರಿಂದಾಗಿ ಮಣ್ಣಿನ ಜೈವಿಕ ಗುಣ ಕ್ಷೀಣವಾಗುತ್ತಾ ಬರುತ್ತದೆ. ಹಾಕಿದ ಗೊಬ್ಬರವನ್ನು ಲಭ್ಯಸ್ಥಿತಿಗೆ ತಂದು ಅಧಿಕಇಳುವರಿ ಪಡೆಯಲು ಈ ಜೈವಿಕ ಸಮ್ಮಿಶ್ರಣ ನೆರವಾಗುತ್ತದೆ. ನಾವು ತಿನ್ನುವ ಆಹಾರ ದೇಹದಲ್ಲಿ…

Read more
ಸಗಣಿ ಗೊಬ್ಬರ

ಸಗಣಿ ಗೊಬ್ಬರ – ಪರಿಪೂರ್ಣ ಸಾವಯವ ಪೋಷಕವಲ್ಲ.

ಕೆಲವು ರೈತರು ನಾನು ನನ್ನ ಬೆಳೆಗಳಿಗೆ ಹಸುವಿನ ಸಗಣಿ ಗೊಬ್ಬರವನ್ನು ಮಾತ್ರ ಕೊಡುವುದು ಎನ್ನುತ್ತಾರೆ. ಮರಗಳು ಹಚ್ಚ ಹಸುರಾಗಿ ಬೆಳೆಯುತ್ತವೆಯಾದರೂ ಪರಿಪೂರ್ಣ ಪೋಷಕಗಳು ಇಲ್ಲದ ಕಾರಣ ಫಸಲು ಅಷ್ಟಕ್ಕಷ್ಟೇ.ಯಾವುದೇ ಪ್ರಾಣಿಯ ತ್ಯಾಜ್ಯಗಳಿಂದ ಪಡೆಯುವ ಹಿಕ್ಕೆ ಅಥವಾ ಮಲದಲ್ಲಿ  ಎಷ್ಟು ಪೋಷಕಗಳಿರುತ್ತವೆ ಎಂಬುದು ಹಲವಾರು ಸಂಗತಿಗಳ ಮೇಲೆ ಅವಲಂಭಿಸಿದೆ. ಪ್ರಾಣಿಯ ದೇಹ, ಅವುಗಳ ತಳಿ, ವಯಸ್ಸು, ತೂಕ, ಆಹಾರ ಸೇವಿಸುವುದರ ಮೇಲೆ ಅವು ಮಾಡಿಕೊಡುವ ಗೊಬ್ಬರದ ಪ್ರಮಾಣ ಹೊಂದಿರುತ್ತದೆ. ಇಷ್ಟು ಮಾತ್ರವಲ್ಲ ಆ ಪ್ರಾಣಿಯ ಆರೋಗ್ಯ  ಮತ್ತು ಅದು…

Read more
ಜಂಬಿಟ್ಟಿಗೆ ಮಣ್ಣು

ಈ ಮಣ್ಣು ಬೆಳೆಯ ಗುಣಮಟ್ಟ ಹೆಚ್ಚಿಸುತ್ತದೆ. ಯಾಕೆ?

ಮಣ್ಣಿನ ಗುಣ ಎಂಬುದು ನಮಗೆಲ್ಲಾ ಗೊತ್ತಿರುವ ಸಂಗತಿ. ಮಣ್ಣಿನ ಗುಣ ಚೆನ್ನಾಗಿದ್ದರೆ ಕೃಷಿ ಲಾಭದಾಯಕವಾಗುತ್ತದೆ. ನಾವು ಬೆಳೆಯುವ ಬೆಳೆಯ ಫಸಲಿಗೆ ಗುಣಮಟ್ಟ ಬರುತ್ತದೆ.  ಮಣ್ಣು ಎಂಬುದು ಶಿಲಾ ಶಿಥಿಲತೆಯಿಂದ ಆದ ವಸ್ತು. ಶಿಲೆಯಲ್ಲಿರುವ ಖನಿಜಗಳು,  ಸಸ್ಯ , ಪ್ರಾಣಿಗಳ ಕಳಿಯುವಿಕೆಯಿಂದಾದ ಸಾವಯವ ವಸ್ತುಗಳು ಸೇರಿ, ಅದು ಬೇರೆ ಬೇರೆ ರೂಪಾಂತರ ಹೊಂದಿವೆ. ಒಂದೊಂದು ಕಡೆಯ ಮಣ್ಣು ಒಂದೊಂದು ರೀತಿಯಲ್ಲಿ ಇರುತ್ತವೆ. ಇದಕ್ಕೆಲ್ಲಾ ಕಾರಣ ಅಲ್ಲಿ ಆದ ಶಿಲೆ ಮತ್ತು ಅದರ ರೂಪಾಂತರ. ಕರಾವಳಿಯ ಮಣ್ಣು, ಮಲೆನಾಡಿನ ಮಣ್ಣು,…

Read more
ಅಡಿಕೆ

ಇದು ಅಡಿಕೆಯ ಭಾರೀ ಹೆಸರುವಾಸಿ ತಳಿ.

ಅಡಿಕೆ ಬೆಳೆಸುವವರು ಪ್ರಥಮತಹ  ಆಯ್ಕೆ  ಮಾಡಬೇಕಾದ ತಳಿ. ಉತ್ತಮ ತಳಿಯನ್ನು ಆಯ್ಕೆ ಮಾಡಿದ್ದೇ ಆದರೆ ಮುಂದಿನ ಬಹುತೇಕ ಕೆಲಸ ಸುಲಭ. ಇದು ಮನೆ ಕಟ್ಟುವುದಕ್ಕೆ ಪಂಚಾಂಗ ಹಾಕಿದಂತೆ. ಅಡಿಕೆ ತೆಂಗು ಬೆಳೆ ಮುಂತಾದ ಧೀರ್ಘಾವಧಿ ಬೆಳೆಗಳಲ್ಲಿ ಸೂಕ್ತ ತಳಿಯ ಬೀಜ ಆಯ್ಕೆ ಮಾಡಿಕೊಳ್ಳದೆ ಇದ್ದರೆ ಮುಂದೆ ಅದನ್ನು ಸರಿಪಡಿಸಲಿಕ್ಕೆ ಆಗುವುದಿಲ್ಲ. ಯಾವಾಗಲೂ  ತಳಿ ಆಯ್ಕೆ ಮಾಡುವಾಗ ತಳಿ ಮಿಶ್ರಣ ಆಗದಂತ ಜಾಗದಿಂದ, ಸೂಕ್ತ ವಿಧಾನದಿಂದ ಬೀಜವನ್ನು ಆಯ್ಕೆ ಮಾಡಿ ಅವರವರೇ ಸಸಿ ತಯಾರಿಸಿಕೊಂಡರೆ ಬಹಳ ಉತ್ತಮ.  ಕರ್ನಾಟಕದಲ್ಲಿ…

Read more
caskuta plant

ಇದು ಔಷಧೀಯ ಗಿಡ ಅಲ್ಲ – ಬದನಿಕೆ ಕಳೆ.

ಇದರ ಒಂದು ತುಂಡು ಚೂರನ್ನು ತಂದು ನಿಮ್ಮ ಮನೆಯ ಅಥವಾ ಹೊಲದ ಗಿಡದ ಮೇಲೆ ಎಲ್ಲಿಯಾದರೂ ಹಾಕಿ. ಅದು ಬದುಕುತ್ತದೆ. ಇದಕ್ಕೆ ಎಲೆ ಇಲ್ಲ. ಬೇರೂ ಇಲ್ಲ. ಬದುಕಲು ಮಣ್ಣೂ ಬೇಕಾಗಿಲ್ಲ. ಎಲೆ , ಕಾಂಡ ಎಲ್ಲೆಲ್ಲೂ ಬದುಕುತ್ತದೆ. ಕಡಿದು ತೆಗೆದು ಸುಟ್ಟರೆ ಸಾಯಬಹುದು. ಇಲ್ಲವಾದರೆ ಮತ್ತೆ ಅಲ್ಲೇ ಹುಟ್ಟಿಕೊಳ್ಳುತ್ತದೆ. ಇದು ಒಂದು ಪರಾವಲಂಭಿ ಸಸ್ಯವಾಗಿದ್ದು, ಇದನ್ನು ಬದನಿಕೆ ಎನ್ನುತ್ತಾರೆ. ಕೆಲವರು ಈ ಬಳ್ಳಿಯನ್ನು ಔಷಧೀಯ ಬಳ್ಳಿ ಎನ್ನುತ್ತಾರೆ. ಆದರೆ ಇದು ಔಷಧೀಯ ಬಳ್ಳಿ ಅಲ್ಲ. ಬದಲಿಗೆ…

Read more

ಈ ಹಣ್ಣು ತಿಂದರೆ ಆರೋಗ್ಯ ನಿಮ್ಮ ಹತೋಟಿಯಲ್ಲಿರುತ್ತದೆ.

ಪ್ಯಾಶನ್ ಪ್ರುಟ್ Passiflora ಎಂಬ ಹಣ್ಣನ್ನು ಬಹಳ ಹಿಂದಿನಿಂದಲೂ ತಜ್ಞರು ಬಹಳ ಆರೋಗ್ಯಕರ ಹಣ್ಣು ಎಂದು ಹೇಳುತ್ತಾ ಬಂದಿದ್ದಾರೆ. ಇದನ್ನು ಮೈನರ್ ಪ್ರೂಟ್  ವಿಭಾಗದಲ್ಲಿ ಸೇರಿಸಿ ಅದರ ಆರೋಗ್ಯ ಗುಣ, ಬೆಳೆ ಕ್ರಮ, ಮೌಲ್ಯ ವರ್ಧನೆ ಇತ್ಯಾದಿಗಳ ಬಗ್ಗೆ ಸಂಶೋಧನೆ ನಡೆದಿದೆ. ಬೆಂಗಳೂರಿನ ಹೇಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಇದರ ಬಗ್ಗೆ ಸಂಶೋಧನೆಗಳು ನಡೆಯುತ್ತಿದೆ. ಇಲ್ಲಿ ಅರ್ಕಾ ಕಾವೇರಿ ಎಂಬ ನೇರಳೆ ಬಣ್ಣದ  ಹಣ್ಣಿನ ತಳಿಯನ್ನೂ ಅಭಿವೃದಿ ಮಾಡಲಾಗಿದೆ. ಈ ಹಣ್ಣು  ಬೆಳೆಸಲು ಯಾವುದೇ ಕಷ್ಟವಿಲ್ಲ….

Read more
ಸೀತಾಫಲದ ಹಣ್ಣುಗಳು

ಸೀತಾಫಲ ಬೆಳೆ ಜೀವನಕ್ಕೆ ಹೊಸ ತಿರುವು ಕೊಟ್ಟಿತು.

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಸಂಗೊಳಗಿಯ 45 ವಯಸ್ಸಿನ ಸಣ್ಣ ರೈತ ವೆಂಕಟರಾವ ಬಿರಾದಾರ ಒಂದು ಎಕರೆಯಲ್ಲೇ ತರಹೇವಾರಿ ಹಣ್ಣು ತರಕಾರಿ ಬೆಳೆದು ವರ್ಷಕ್ಕೆ ಸುಮಾರು 5 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಹಗಲಿರುಳು ಕಠಿಣ ಪರಿಶ್ರಮದಿಂದ ಅರ್ಧ ಎಕರೆಯಲ್ಲಿ ಬೆಳೆದ ಸೀತಾಫಲ ಹಣ್ಣಿನಿಂದ  ತನ್ನ ಆರ್ಥಿಕ ಸ್ಥಿತಿಗತಿಯೇ  ಬದಲಾಯಿತು. ಇದು ಇತರೆ ಸಣ್ಣ ರೈತರಿಗೆ ಮಾದರಿಯಾಗಿದೆ. ಕೃಷಿ ಒಂದೇ ಅವಕಾಶವಾಗಿತ್ತು: ವೆಂಕಟರಾವ್ ಬಡತನದ ಕಾರಣ ಎಸ್.ಎಸ್.ಎಲ್.ಸಿ. ನಂತರ ವಿದ್ಯಾಭ್ಯಾಸ ಮುಂದುವರಿಸಲಿಲ್ಲ. ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದ…

Read more

ತೆಂಗಿಗೆ ವಿಷ ಕೊಟ್ಟರೆ ಎಳನೀರು ಸಿಹಿಯಾಗುವುದೇ?

ತೆಂಗಿನ ಕಾಯಿಯ, ಎಳೆಕಾಯಿಯ   ನೀರು ಸಿಹಿಯಾಗಿರಲಿ ಅದರ ತಳಿ ಗುಣ ಕಾರಣ ಹೊರತು ಅದನ್ನು ಹೊರ ವಸ್ತುಗಳನ್ನು ಸೇರಿಸಿ ಸಿಹಿ ಮಾಡಲು ಸಾಧ್ಯವಿಲ್ಲ. ತೆಂಗಿನ ಕೆಲವು ತಳಿಗಳು ಸಿಹಿಯಾದ ಎಳನೀರನ್ನು ಕೊಡುತ್ತವೆ. ಮತ್ತೆ ಕೆಲವು ಸ್ವಲ್ಪ ಸಪ್ಪೆ. ಇದು ಯಾರೂ ಮಾಡುವುದು ಅಲ್ಲ. ಅದು ಅದರ ಅಂತರ್ಗತ ಗುಣ. ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಸಿಹಿ ಹೆಚ್ಚಿಸಲು ಸೂಕ್ಷ್ಮ ಪೊಷಕಾಂಶ ಮತ್ತು ಪೊಟ್ಯಾಶಿಯಂ ಬಳಕೆ ನೆರವಾಗುತ್ತದೆಯಾದರೂ  ಯಾವ ಕೀಟನಾಶಕ ರೋಗ ನಾಶಕ ಇದನ್ನು ಹೆಚ್ಚಿಸುವುದಿಲ್ಲ. ಇತ್ತೀಚೆಗೆ ಒಂದು ವಾಟ್ಸ್…

Read more
chines potato

ಈ ಗಡ್ಡೆಗೆ ಬಹಳ ಬೇಡಿಕೆ ಮತ್ತು ಉತ್ತಮ ಬೆಲೆ.

ಗಡ್ಡೆ ಗೆಣಸಿನ ಬೆಳೆಗಳಲ್ಲಿ  ಅಧಿಕ ಬೆಲೆಯ ಬೆಳೆ ಎಂದರೆ ಸಾಂಬ್ರಾಣಿ. ಚೈನೀಸ್ ಪೊಟ್ಯಾಟೋ ಎಂಬ ಈ ತರಕಾರಿ ನಮ್ಮಲ್ಲಿ ಬಹಳ ಪುರಾತನ ಕಾಲದಿಂದಲೂ ಬೆಳೆಯಲ್ಪಡುತ್ತಿತ್ತು. ಈಗ ಇದನ್ನು ಕೆಲವೇ ಕೆಲವು ಜನ ಮಾತ್ರ ಬೆಳೆಯುತ್ತಿದ್ದು, ಸರಾಸರಿ  ಕಿಲೋ 60 ರೂ ತನಕ ಬೆಲೆ ಇದೆ. ಅಪರೂಪದ  ತರಕಾರಿಯಾದ ಕಾರಣ ಬಾರೀ ಬೇಡಿಕೆಯೂ ಇದೆ. ತರಕಾರಿ ಅಂಗಡಿಗೆ ಬರುವುದೇ ಕಡಿಮೆ. ಬಂದರೆ ಕ್ಷಣದಲ್ಲಿ ಖಾಲಿ. ಆಲೂಗಡ್ಡೆಯ ತರಹವೇ ಇರುವ ಈ ಗಡ್ಡೆ ಅದರ ತಮ್ಮ ಎಂದರೂ ತಪ್ಪಾಗದು. ಆಲೂಗಡ್ಡೆಗೂ ಇದಕ್ಕೂ…

Read more
brinjal grower

ಇದು ಭಾರೀ ಬೇಡಿಕೆಯ ಗುಳ್ಳ ಬದನೆ.

ಕರಾವಳಿಯ ಬದನೆ ತಳಿಗಳಲ್ಲಿ ಹೆಸರುವಾಸಿಯಾದ ಮಟ್ಟು ಗುಳ್ಳಕ್ಕೆ ಸರಿಸಾಟಿಯಾದ ಮತ್ತೊಂದು ಗುಳ್ಳ ,ಇದೇ ಉಡುಪಿ ಜಿಲ್ಲೆಯ ಮತ್ತೊಂದೆಡೆಯೂ ಬೆಳೆಯುತ್ತಿದೆ. ಇದರ ಆಕಾರ ಬಣ್ಣ ಎಲ್ಲವೂ ಏಕಪ್ರಕಾರ. ಒಂದೇ ಒಂದು ವ್ಯತ್ಯಾಸ ಎಂದರೆ ಮಟ್ಟು ಗುಳ್ಳಕ್ಕೆ ತೊಟ್ಟಿನಲ್ಲಿ ಮುಳ್ಳು ಇದೆ. ಇದಕ್ಕೆ ಇಲ್ಲ.  ಕರಾವಳಿಯ ಜನರ ಬಲು ಅಚ್ಚುಮೆಚ್ಚಿನ  ಗುಳ್ಳ ಬದನೆಯ ಆಸೆಯನ್ನು ಪೂರೈಸಿದ ಬದನೆಯಲ್ಲಿ ಈ ಊರಿನ ಬದನೆ ಒಂದು. ಕರಾವಳಿಯ ಜನ ಎಲ್ಲೇ ಹೋಗಲಿ ಗುಳ್ಳ ಬದನೆ ಸಿಕ್ಕರೆ ಎಷ್ಟೇ ಬೆಲೆ ಕೊಟ್ಟಾದರೂ ಖರೀದಿ ಮಾಡುತ್ತಾರೆ….

Read more
error: Content is protected !!