ಕರಿಮೆಣಸಿನ ಬೆಲೆ ಭಾರೀ ಏರಿಕೆ ಸಂಭವ

ಕರಿಮೆಣಸಿನ ಬೆಲೆ ಭಾರೀ ಏರಿಕೆ ಸಂಭವ –ಬೆಳೆಗಾರರು ಎಚ್ಚರಿಕೆಯಿಂದಿರಿ.

ಕಳೆದ ವಾರ 50000 ದ ಆಸುಪಾಸಿನಲ್ಲಿದ್ದ  ಕರಿಮೆಣಸಿನ ಬೆಲೆ ದಿಡೀರ್ ಆಗಿ ಒಂದೇ ವಾರದಲ್ಲಿ 56,000 ಕ್ಕೆ ಏರಿಕೆಯಾಗಿದೆ. ಕರಿಮೆಣಸು ಇದೆಯೇ ಎಂದು ಕೇಳುವ ಸ್ಥಿತಿ ಉಂಟಾಗಿದೆ. ಖಾಸಗಿ ಮಾರುಕಟ್ಟೆಯಲ್ಲಿ ದರ 60,000 ತನಕ ಏರಿದೆ. ಇನ್ನೂ ಏರಿಕೆ ಆಗಬಹುದು ಎಂಬ ಸುದ್ದಿ ಕೇಳಿಬರುತ್ತಿದೆ. ಮೆಣಸು ಬೆಳೆಯುವ ದೇಶಗಳಲ್ಲಿ ಉತ್ಪನ್ನದ ಕೊರೆತೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಕಳೆದ 5-6 ವರ್ಷಗಳಿಂದ ನೆಲಕಚ್ಚಿದ ಕರಿಮೆಣಸಿನ  ಬೆಲೆ ಕಳೆದ ವರ್ಷ 50,000 ದ ಆಸು ಪಾಸಿಗೆ ಬಂದಿತ್ತು.  ಒಮ್ಮೆ 55,000…

Read more
ಅಡಿಕೆ ಧಾರಣೆ ಸ್ವಲ್ಪ ಅಸ್ಥಿರವಾಗಿದೆ- ಬೆಳೆಗಾರರು ದೊಡ್ಡ ನಿರೀಕ್ಷೆ ಹೊಂದಬೇಕಾಗಿಲ್ಲ.

ಅಡಿಕೆ ಧಾರಣೆ ಸ್ವಲ್ಪ ಅಸ್ಥಿರವಾಗಿದೆ- ಬೆಳೆಗಾರರು ದೊಡ್ಡ ನಿರೀಕ್ಷೆ ಹೊಂದಬೇಕಾಗಿಲ್ಲ.

ಜುಲೈ ತಿಂಗಳ ಪ್ರಾರಂಭದಲ್ಲಿ ಕೆಂಪಡಿಕೆ ಧಾರಣೆ ಏರಿಕೆ ಪ್ರಾರಂಭವಾಗಿ ಬೆಳೆಗಾರರು  ಹೆಚ್ಚಿನ ನಿರೀಕ್ಷೆ ಹೊಂದುವಂತಾಯಿತು. ಇನ್ನೂ ಏರಬಹುದು ಸ್ವಲ್ಪ ಕಾಯೋಣ ಎಂದು ಮಾರಾಟಕ್ಕೆ ಹಿಂದೇಟು ಹಾಕುವ ಸ್ಥಿತಿ. ಸಹಜವಾಗಿ ಎಲ್ಲರೂ ಹೀಗೇ ಮಾಡುವುದು. ಆದರೆ ದರ ಏರುತ್ತಾ  ಏರುತ್ತಾ ಮುಂದೆ ಹೋಗುವುದಿಲ್ಲ. ಕೆಲ ಸಮಯದ ನಂತರ ಇಳಿಕೆ ಆಗಿಯೇ ಆಗುತ್ತದೆ. ಈಗ ಸ್ವಲ್ಪ ಇಳಿಕೆ ಸಾಧ್ಯತೆ ಕಾಣಿಸುತ್ತಿದೆ. ದರ ಏರಿಕೆಯಾಗುವಾಗ ಮಾಲು ಕೊಡಲು ಯಾವ ರೈತನಿಗೂ  ಮನಸ್ಸು ಬರುವುದಿಲ್ಲ. ಕೊನೆಗೆ ಇಳಿಕೆಯಾಗುವಾಗ ಮಾರಾಟ ಮಾಡುವುದು ಅನಿವಾರ್ಯವಾಗುತ್ತದೆ. ಇದುವೇ…

Read more
ತೆಂಗಿನ ಮರಗಳಿಗೆ ಯಾವಾಗ ಹೇಗೆ ಗೊಬ್ಬರ ಹಾಕಬೇಕು?

ತೆಂಗಿನ ಮರಗಳಿಗೆ ಯಾವಾಗ ಹೇಗೆ ಗೊಬ್ಬರ ಹಾಕಬೇಕು?

ತೆಂಗಿನ ಮರ ತೋಟಗಾರಿಕಾ ಬೆಳೆಗಳಲ್ಲಿ ಅತೀ ಹೆಚ್ಚು  ಪೋಷಕಾಂಶಗಳನ್ನು ಬಯಸುವ ಬೆಳೆ. ವರ್ಷವಿಡೀ ಬೆಳವಣಿಗೆ ಇರುವ ಇದು ಎಲ್ಲಾ ಋತುಮಾನದಲ್ಲೂ ಏಕಪ್ರಕಾರ ಪೋಷಕಗಳನ್ನು ಬಯಸುತ್ತದೆ. ಬಹಳಷ್ಟು ರೈತರು ತೆಂಗಿಗೆ ಗೊಬ್ಬರ ಕೊಡುವ ವಿಚಾರದಲ್ಲಿ ಸಾಕಷ್ಟು ತಪ್ಪುಗಳನ್ನು ಮಾಡುತ್ತಾರೆ. ಮರದ ಉತ್ತಮ ಬೆಳವಣಿಗೆ ಮತ್ತು ಉತ್ತಮ ಇಳುವರಿಗೆ ಯಾವ ರೀತಿಯಲ್ಲಿ ಗೊಬ್ಬರ ಹಾಕಬೇಕು ಎಂಬ ಪೂರ್ಣ ಮಾಹಿತಿ ಇಲ್ಲಿದೆ. ತೆಂಗಿನ ಮರದ ಶಿರ ಭಾಗ ಲಕ್ಷಣ ಅದರ ಆರೋಗ್ಯವನ್ನು ತಿಳಿಸುತ್ತದೆ. ಮರದ ಗರಿಗಳು ಚತ್ರಿಯಂತೆ ಬಿಡಿಸಿರಬೇಕು.  ಮರದಲ್ಲಿ 35…

Read more
ತೆಂಗು ಬೆಳೆಗಾರರನ್ನು ಉಳಿಸಿ- ಇಲ್ಲವಾದರೆ ತೆಂಗು ಬೆಳೆಯೇ ಕ್ಷೀಣಿಸಬಹುದು!

ತೆಂಗು ಬೆಳೆಗಾರರನ್ನು ಉಳಿಸಿ- ಇಲ್ಲವಾದರೆ ತೆಂಗು ಬೆಳೆಯೇ ಕ್ಷೀಣಿಸಬಹುದು!

ತೆಂಗು ಬೆಳೆಗಾರರ ನೆರವಿಗೆ ಸರಕಾರ ಮತ್ತು ತೆಂಗಿನ ಉತ್ಪನ್ನ ಬಳಕೆದಾರರು ಬಾರದೆ ಇದ್ದರೆ ಕೆಲವೇ ಸಮಯದಲ್ಲಿ ತೆಂಗಿನ ಬೆಳೆಯನ್ನೇ ರೈತರು ಬಿಡುವ ಸ್ಥಿತಿ ಬರಬಹುದು. ಕಲ್ಪವೃಕ್ಷ ತೆಂಗು, ಯಾವತ್ತೂ ಭವಿಷ್ಯವಿರುವ ಬೆಳೆ ಎಂದು ನಂಬಿದ್ದ ಬೆಳೆಗಾರರಿಗೆ ಯಾವತ್ತೂ  ಆಕರ್ಷಕ ಬೆಲೆ ಬರಲೇ ಇಲ್ಲ. ತೆಂಗಿನ ಬೆಳೆ ಕಡಿಮೆ ಇದ್ದ 30-40 ವರ್ಷಗಳ ಹಿಂದೆ ಇದ್ದ ಬೆಲೆಗಿಂತಲೂ ಕಡಿಮೆ ಬೆಲೆ ಈಗ ತೆಂಗಿನ ಕಾಯಿಯದ್ದು. ಈ ಬೆಲೆಯಲ್ಲಿ ತೆಂಗು ಬೆಳೆಗಾರರು ಉಳಿಯುವುದು ಸಾಧ್ಯವೇ? ಖಂಡಿತವಾಗಿಯೂ ಇಲ್ಲ. ಸರಕಾರ ತೆಂಗು…

Read more
ಬೆಳೆಗಾರರು ತಪ್ಪದೆ ಗಮನಿಸಿ – ಈ ಸಸಿಗಳು ಚೆನ್ನಾಗಿ ಬೆಳೆಯುತ್ತವೆ?.

ಬೆಳೆಗಾರರು ತಪ್ಪದೆ ಗಮನಿಸಿ – ಈ ಸಸಿಗಳು ಚೆನ್ನಾಗಿ ಬೆಳೆಯುತ್ತವೆ?.

ಅಡಿಕೆ ತೆಂಗು ಹಾಗೆಯೇ ಇನ್ನೂ ಕೆಲವು ಬೆಳೆ ಬೆಳೆಯುವ ಬೆಳೆಗಾರರು ತಮ್ಮ ತೋಟದ ಒಳಗೆ ಒಮ್ಮೆ ಎಲ್ಲಾ ಮರ, ಸಸಿಗಳನ್ನು ಗಮನಿಸುತ್ತಾ ತಿರುಗಾಡಿ. ಅಲ್ಲಿ ನಮ್ಮ ಗಮನಕ್ಕೆ ಬರುವುದು ಬಿದ್ದ ಬೀಜ ನಮ್ಮ ಕಣ್ಣು ತಪ್ಪಿಸಿ ಅಲ್ಲೇ ಉಳಿದು ಮೊಳೆತು ಸಸಿಯಾಗಿರುವ “ಉರಲು ಹುಟ್ಟಿದ ಸಸಿ” ಎಷ್ಟೊಂದು ಚೆನ್ನಾಗಿ ಬೆಳೆಯುತ್ತದೆ, ಮತ್ತು ಅದರಲ್ಲಿ ಎಷ್ಟು ಚೆನ್ನಾಗಿ ಫಲ ಬರುತ್ತದೆ ಎಂಬ ಅಂಶ. ಇದು ಪ್ರತೀಯೊಬ್ಬ ಬೆಳೆಗಾರನ ತೋಟದಲ್ಲೂ ಕಾಣಲು ಸಿಗುತ್ತದೆ. ಮನಸ್ಸು ಹೇಳುತ್ತದೆ, ಊರಲು ಹುಟ್ಟಿದ ಸಸಿ…

Read more
ಚೇತರಿಕೆಯತ್ತ ಕೆಂಪಡಿಕೆ ಮಾರುಕಟ್ಟೆ – ಚಾಲಿಯನ್ನೂ ಮೇಲೆತ್ತಬಹುದು!

ಚೇತರಿಕೆಯತ್ತ ಕೆಂಪಡಿಕೆ ಮಾರುಕಟ್ಟೆ – ಚಾಲಿಯೂ ಮೇಲೆ.

ಬಹಳ ಸಮಯದ ತನಕ ಅಲ್ಲಾಡದೆ ಅಸ್ಥಿರವಾಗಿದ್ದ ಕೆಂಪಡಿಕೆ ಧಾರಣೆ ಜೂನ್ ಎರಡನೇ ವಾರ ಮತ್ತೆ ಚೇತರಿಕೆ ಕಾಣಲಾರಂಭಿಸಿದೆ. ಪ್ರತೀ ವರ್ಷದ ಮಾರುಕಟ್ಟೆ ಲಯವನ್ನು ಗಮನಿಸಿದರೆ ಸಾಮಾನ್ಯವಾಗಿ ಜೂನ್ ತಿಂಗಳಿಗೆ ಏರಿಕೆ ಪ್ರಾರಂಭವಾಗುತ್ತದೆ. ನಿಧಾನವಾಗಿ ಏರುತ್ತಾ ಆಗಸ್ಟ್ ಸಪ್ಟೆಂಬರ್ ತಿಂಗಳಿಗೆ ಮತ್ತೆ ಹಿಮ್ಮುಖವಾಗುತ್ತದೆ. ಈ ವರ್ಷವೂ ಅದೇ ಆಗಿದೆ. ಕೆಂಪಡಿಕೆ ದರ ಏರಿದ ಪರಿಣಾಮ ಚಾಲಿ ದರ ಚೇತರಿಕೆ ಆಗಲಾರಂಭಿಸಿದೆ. ಕರಿಕೋಕಾ, ಪಟೋರಾ, ಉಳ್ಳಿಗಡ್ಡೆ ಸಹ ಏರಿಕೆ ಕಂಡಿದೆ. ಇಂದು ಖಾಸಗಿ ವ್ಯಾಪಾರಿಗಳು ಹೊಸ ಅಡಿಕೆ ರೂ.405-410 ಕ್ಕೆ…

Read more
ರಾಸಾಯನಿಕ ಕೀಟ-ರೋಗ ನಾಶಕಗಳ ಬದಲಿಗೆ ಇರುವ ತಯಾರಿಕೆಗ

ರಾಸಾಯನಿಕ ಕೀಟ-ರೋಗ ನಾಶಕಗಳ ಬದಲಿಗೆ ಇರುವ ತಯಾರಿಕೆಗಳು.

ಬೆಳೆಗಳಿಗೆ ಹಾನಿ ಮಾಡುವ ಕೀಟ – ರೋಗ ನಿಯಂತ್ರಣಕ್ಕೆ ವಿಷ ರಾಸಾಯನಿಕಗಳೇ ಅಂತಿಮ ಅಲ್ಲ. ಅದರ ಬದಲಿಗೆ ಜೈವಿಕ ಕೀಟ –ರೋಗ ನಿಯಂತ್ರಕಗಳು ಇವೆ. ಇವು ಉತ್ತಮವಾಗಿ ಕೆಲಸ ಮಾಡುತ್ತವೆ. ರಾಸಾಯನಿಕ ಕೀಟ ರೋಗ ನಿಯಂತ್ರಗಳಿಗೆ ಇವು ಪರ್ಯಾಯ.ಗುಡ್ಡಕ್ಕೆ ಗುಡ್ಡ ಅಡ್ದ ಇದ್ದೇ ಇದೆ. ಸ್ವಲ್ಪ ಯೋಚನೆ ಮಾಡಿದರೆ ಕೆಲವು ಸರಳ , ಸುರಕ್ಷಿತ ಉಪಾಯಗಳು ಗೊತ್ತಾಗುತ್ತವೆ. ಇದೇ ಸಿದ್ದಾಂತದಲ್ಲಿ, ಕೃಷಿ ಬೆಳೆಗಳ ಕೆಲವು ರೋಗ ಮತ್ತು ಕೀಟಗಳನ್ನು ನೈಸರ್ಗಿಕ ಉಪಾಯಗಳಿಂದಲೇ ನಿಯಂತ್ರಿಸಬಹುದು ಎಂದು ಕಂಡುಕೊಳ್ಳಲಾಗಿದೆ. ಇದನ್ನು…

Read more
ಕಳೆನಾಶಕ ಬಳಕೆಯಿಂದ ಮಣ್ಣಿಗೆ ತೊಂದರೆ ಹೆಚ್ಚೋ, ಮಾನವನಿಗೋ?

ಕಳೆನಾಶಕ ಬಳಕೆಯಿಂದ ಮಣ್ಣಿಗೆ ತೊಂದರೆ ಹೆಚ್ಚೋ, ಮಾನವನಿಗೋ?

ಕಳೆನಾಶಕದ ಬಳಕೆಯಿಂದ ಮಣ್ಣು ಹಾಗಾಗುತ್ತದೆ, ಹೀಗಾಗುತ್ತದೆ ಎಂದೆಲ್ಲಾ ಹೇಳುವವರೇ ಹೊರತು ಇದನ್ನು ಬಳಸಿದ ಮಾನವನಿಗೆ ಏನಾಗುತ್ತದೆ ಎಂದು ಹೇಳುವವರು ಬಲು ಅಪರೂಪ. ಕಳೆನಾಶಕಗಳಿಂದ ಮಣ್ಣಿಗೆ ಹಾಳು ಎಂಬ ವಿಚಾರ ಒತ್ತಟ್ಟಿಗಿರಲಿ. ಬಳಕೆ ಮಾಡುವ ನಮಗೆಷ್ಟು ಹಾನಿಕರ ಎಂಬುದನ್ನು ತಿಳಿದುಕೊಳ್ಳುವ.ಕಳೆ ನಿಯಂತ್ರಣ ಬೆಳೆಗಾರರಿಗೆ ಈಗ ಅತೀ ದೊಡ್ಡ ಖರ್ಚಿನ ಬಾಬ್ತು ಆಗಿದೆ. ಹಿಂದೆ ಕಳೆಗಳನ್ನು ಕತ್ತಿ, ಕೈಯಿಂದ ಕೀಳಿ ತೆಗೆಯುತ್ತಿದ್ದೆವು. ಈಗ ಅದನ್ನು ಮಾಡಿದರೆ ಕೃಷಿ ಉತ್ಪತ್ತಿ ಆ ಕೆಲಸದವರ ಮಜೂರಿಗೆ ಸಾಲದು. ಆ ಸಮಸ್ಯೆ ನಿವಾರಣೆಗಾಗಿ ಈಗ…

Read more
ಅಂತರ್ಜಲ ಯಾಕೆ ಬರಿದಾಯಿತು? ಮುಂದಿನ ಸ್ಥಿತಿ ಏನಾಗಬಹುದು?

ಅಂತರ್ಜಲ ಯಾಕೆ ಬರಿದಾಯಿತು? ಮುಂದಿನ ಸ್ಥಿತಿ ಏನಾಗಬಹುದು?

ಈ ವರ್ಷ ಕರಾವಳಿ ಮಲೆನಾಡಿನಲ್ಲಿ ಅಂತರ್ಜಲ ಬರಿದಾಗಲಾರಂಭಿಸಿದೆ. ಕೆಲವು ಮೂಲಗಳ ಪ್ರಕಾರ ಸುಮಾರು 25% ಕೊಳವೆ ಬಾವಿಗಳು ಬರಿದಾಗಿವೆ. ಈ ವರ್ಷ ಕೊರೆದಷ್ಟು ಕೊಳವೆ ಬಾವಿ ಈ ಹಿಂದೆ ಯಾವ ವರ್ಷದಲ್ಲೂ ಆದದ್ದಿಲ್ಲ ಎನ್ನುತಾರೆ ಜಲ ಶೋಧಕರು ಮತ್ತು ರಿಗ್ ಏಜೆಂಟರು. ಯಾಕೆ ಇಷ್ಟೊಂದು ಕೊಳವೆ ಬಾವಿ ಬರಿದಾಯಿತು? ಮುಂದೆ ಕೊಳವೆ ಬಾವಿ ನೀರಿನ ಮೂಲವನ್ನು ಆಶ್ರಯಿಸಿ ಕೃಷಿ ಮಾಡುವವರ ಸ್ಥಿತಿ ಏನಾಗಬಹುದು? ಯಾವ ಮುನ್ನೆಚ್ಚರಿಕೆ ವಹಿಸಬೇಕು ಈ ಬಗ್ಗೆ ಮಾಹಿತಿ ಇಲ್ಲಿದೆ. ಕರಾವಳಿ ಮತ್ತು ಮಲೆನಾಡಿನ…

Read more
error: Content is protected !!