ಕೀಟನಾಶಕ- ರೋಗನಾಶಕವನ್ನು ಪ್ರಮಾಣಕ್ಕಿಂತ ಹೆಚ್ಚು ಬಳಸಿದರೆ ಏನಾಗುತ್ತದೆ

ಕೀಟನಾಶಕ- ರೋಗನಾಶಕವನ್ನು ಪ್ರಮಾಣಕ್ಕಿಂತ ಹೆಚ್ಚು ಬಳಸಿದರೆ ಏನಾಗುತ್ತದೆ?   

ಕೃಷಿಕರಾದವರೆಲ್ಲರೂ ಒಂದಿಲ್ಲೊಂದು ಉದ್ದೇಶಕ್ಕೆ ಕೀಟನಾಶಕ- ರೋಗನಾಶಕ ಸಿಂಪಡಿಸಿರಬಹುದು. ಇವುಗಳನ್ನು ಸಿಂಪಡಿಸುವಾಗ ನಾವು ಅನುಸರಿಸಿದ ಕ್ರಮ ಎಷ್ಟು ಸರಿ- ಎಷ್ಟು ತಪ್ಪು  ಎಂಬುದನ್ನು ಒಮ್ಮೆ ಯೋಚನೆ ಮಾಡಲೇಬೇಕು.  ಪ್ರತೀಯೊಂದು ಸಸ್ಯ ಸಂರಕ್ಷಣಾ ಔಷಧಿಗಳ ಬಳಕೆಗೆ ನಿರ್ದಿಷ್ಟ ಪ್ರಮಾಣ ಎಂಬುದಿದೆ. ಅದಕ್ಕಿಂತ ಹೆಚ್ಚು ಬಳಕೆ ಮಾಡಿದಾಗ ಆಗುವ ಅನಾಹುತಗಳೇನು? ಈಗಾಗಲೇ ಆದದ್ದು ಏನು ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ವೈಧ್ಯರು ರೋಗಿಗೆ ಒಂದು ಔಷಧಿ ಕೊಡುತ್ತಾರೆ, ಯಾವ ವೈಧ್ಯರೂ ಕೊಡುವಾಗ ಇದನ್ನು ಇಂತಹ (ಬೆಳಿಗ್ಗೆ+ ಮಧ್ಯಾನ್ಹ+ ರಾತ್ರೆ) ಹೊತ್ತಿನಲ್ಲಿ, ಇಂತಹ ಸಮಯದಲ್ಲಿ…

Read more
ಅಲೋಪತಿಯಲ್ಲೂ ಸಿಗಲಾರದ ಉಪಶಮನ ಈ ಸಸ್ಯದ ಎಲೆ ಕೊಡುತ್ತದೆ

ಅಲೋಪತಿಯಲ್ಲೂ ಸಿಗಲಾರದ ಉಪಶಮನ ಈ ಸಸ್ಯದ ಎಲೆ ಕೊಡುತ್ತದೆ.

ಈ ಸಸ್ಯದ ಸೊಪ್ಪಿಗೆ ಒಂದು ವಿಶೇಷ ಶಕ್ತಿ ಇದ್ದು, ಅಲರ್ಜಿಗೆ ಇದು ನೀಡುವ ತಕ್ಷಣದ ಉಪಶಮನ ಆಧುನಿಕ ಅಲೋಪತಿ ಔಷದೋಪಚಾರದಲ್ಲೂ ಇಲ್ಲ. ಅನಾದಿ ಕಾಲದಿಂದಲೂ ನಮ್ಮ ಹಿರಿಯರು ಇದನ್ನು ಬಳಸುತ್ತಾ ಬಂದಿದ್ದಾರೆ, ಕಿರಿಯ ತಲೆಮಾರಿನವರಿಗೆ ಈ ಜ್ಞಾನ ವರ್ಗಾವಣೆಯಾಗದೆ  ಅಲರ್ಜಿಯಂತಹ Alarge healing herb ಸಮಸ್ಯೆಗೆ ತಕ್ಷಣ ವೈದ್ಯರಲ್ಲಿಗೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ನಾವು ಯಾವುದೇ ಕೃಷಿ ಕೆಲಸ ಮಾಡುವಾಗ ತೀರಾ ಜಾಗರೂಕರಾಗಿ ಇರುವುದಿಲ್ಲ. ಒಮ್ಮೊಮ್ಮೆ ನೆಲದಲ್ಲಿ ಬೆಳೆಯುವ  ತುರಿಕೆ ಉಂಟುಮಾಡುವ ಸಸ್ಯಗಳಾದ ಗಿಡ ತುರುಚೆ (Choriyanam…

Read more
ಒಂದೆಲಗ

ಒಂದೆಲಗಕ್ಕೆ ಭಾರಿ ಬೇಡಿಕೆ ಮತ್ತು ಬೆಲೆ ಇದೆ.

ಒಂದೆಲಗ ಇನ್ನೊಂದು ದಿನ ಕಾಣುವುದಕ್ಕೇ ಸಿಗದ ಸ್ಥಿತಿ ಉಂಟಾದರೂ ಅಚ್ಚರಿ ಇಲ್ಲ. ಈಗ ಹಿಂದಿನಂತೆ ಇದು ಕಾಣಸಿಗುತ್ತಿಲ್ಲ. ಬೆಳೆಸಿ ಉಳಿಸದಿದ್ದರೆ ಇನ್ನು ಕೆಲವೇ ವರ್ಷ . ಕಳೆ ನಾಶಕಗಳು, ಮಣ್ಣು ಅಗೆಯುವ ಯಂತ್ರಗಳು ಇದನ್ನು  ಬಲಿ ತೆಗೆದುಕೊಂಡಾವು. ಇದು ಇಂದಿನ ಅತೀ ದೊಡ್ಡ ಸಮಸ್ಯೆಯಾದ  ಬೊಜ್ಜು ಕರಗಳು ಉತ್ತಮ ಔಷಧಿ. ಜೊತೆಗೆ  ಬೇಡಿಕೆ. ಒಂದೆಲಗ  ಒಂದು ಅತ್ಯುತ್ತಮ ಮೂಲಿಕಾ ಸಸ್ಯ. ಇದು ಎಲ್ಲರ ಹೊಲಗಳಲ್ಲಿ ಕಂಡು ಬರುವ ಒಂದು ನೆಲದಲ್ಲಿ ಹಬ್ಬಿ ಬೆಳೆಯುವ  ಬಳ್ಳಿ ಸಸ್ಯ. ಇದರ…

Read more
ನೋನಿ-ಆರೋಗ್ಯ ಸಂಜೀವಿನಿಯಾದರೂ ಬೆಳೆದವನಿಗಿಲ್ಲ ಬೆಲೆ

ನೋನಿ-ಆರೋಗ್ಯ ಸಂಜೀವಿನಿಯಾದರೂ ಬೆಳೆದವನಿಗಿಲ್ಲ ಬೆಲೆ

ನೋನಿ ಎಲ್ಲಾ ಕಡೆ ಬೆಳೆಯಬಹುದಾದ ಬೆಳೆ. ಇದರ ಇದಕ್ಕಿರುವ ಔಷಧೀಯ ಗುಣ ಅಪಾರ. ಇದರ ಆರೋಗ್ಯವರ್ಧಕ ಉತ್ಪನ್ನಗಳ ಬೆಲೆ ಭಾರೀ ದುಬಾರಿ. ಹಾಗೆಂದು ಬೆಳೆದವನಿಗೆ ಈ ಹಣ್ಣಿಗೆ ಕಿಲೋ 25 ರೂ ಸಹ ಸಿಗುತ್ತಿಲ್ಲ.  ಹಣ್ಣಿಗೆ ಬೆಲೆ ಇಲ್ಲದಿದ್ದರೂ ಹಣ್ಣಿನ ಉತ್ಪನ್ನಗಳಿಗೆ ಭಾರೀ ಬೆಲೆ ಇದೆ. ಮೌಲ್ಯವರ್ಧನೆ ಮಾಡುವವರಿಗೆ ಬೆಳೆಸುವುದು ಸುಲಭ. ಉತ್ತಮ ಲಾಭವೂ ಇದೆ. ನೋನಿ ಹಣ್ಣು ಬಗ್ಗೆ ಇತ್ತೀಚೆಗೆ  ಜನರಲ್ಲಿ  ಅರಿವು ಮೂಡಿದೆ. ಇದು ಹೊಸ ಹಣ್ಣು ಏನೂ ಅಲ್ಲ.  ನಮ್ಮಲ್ಲಿ  ಅಲ್ಲಲ್ಲಿ  ಇದು…

Read more
ಹಳ್ಳಿಯ ಮನೆಗಳಲ್ಲಿ ರಾಶಿ ರಾಶಿ ದುಂಬಿ

ಹಳ್ಳಿಯ ಮನೆಗಳಿಗೆಲ್ಲಾ ನುಗ್ಗಿದೆ- ‘ಕೆಲ್ಲು’ ಎಂಬ ಈ ಅನಾಹುತಕಾರಿ ದುಂಬಿ.

ಹಳ್ಳಿಗಳಲ್ಲಿ, ಹಳ್ಳಿಗೆ ತಾಗಿದ ಪಟ್ಟಣಗಳಲ್ಲಿ ಈಗ ಬೆಳಕಿನ ದೀಪವನ್ನು ಹುಡುಕಿ ಬರುವ ಹಿಂಡು ಹಿಂಡು ದುಂಬಿಗಳು (ಕೆಲ್ಲು) ಜನರಲ್ಲಿ ಆತಂಕವನ್ನು ಉಂಟು ಮಾಡಿದೆ. ಕೆಲವು ಜನ ಇದು ಯಾವುದೋ ಮಾರಿ. ದೆವ್ವದ ಉಪಟಳ ಎಂದು ಮಾತಾಡುತ್ತಿದ್ದಾರೆ. ವಾಸ್ತವವಾಗಿ ಇದು ನಾವೇ ಮಾಡಿಕೊಂಡ ಆವಾಂತರ. ಬಹುತೇಕ ಎಲ್ಲಾ ಮನೆಗಳಲ್ಲೂ ಇದು ಇದೆ. ರಸ್ತೆ ಸಂಚರಿಸುವಾಗ ಮೈಗೆ ತಾಗಿ ಮನೆ ಮನೆಗೆ ಪ್ರಸಾರವಾಗುತ್ತಿದೆ.ಮನೆಯ ಕಿಟಕಿ ಬಾಗಿಲು ಸಂದು, ಬಟ್ಟೆ ಬರೆ, ಪುಸ್ತಕಗಳು, ಹಂಚಿನ ಛಾವಣಿಯ ರೀಪು ಪಕ್ಕಾಸುಗಳಲ್ಲಿ, ಗೊಡೆ ಸಂದುಗಳಲ್ಲಿ,…

Read more
ನೇರಳೆ ಹಣ್ಣು

ನೇರಳೆ ಹಣ್ಣು – ಡಯಾಬಿಟಿಸ್ ಉಳ್ಳವರಿಗೆ ರಾಮಬಾಣ

ನಮ್ಮ ದೇಶದ ಒಟ್ಟು ಜನಸಂಖ್ಯೆಯಲ್ಲಿ  50% ಜನರಿಗೆ ಸಕ್ಕರೆ ಖಾಯಿಲೆ (ಡಯಾಬಿಟಿಸ್) ಇದೆ ಎಂಬ ವರದಿ ಇದೆ. ಯಾಕೆ  ಹೀಗಾಯಿತೋ  ಗೊತ್ತಿಲ್ಲ. ಸಕ್ಕರೆ  ಖಾಯಿಲೆ ಎಂಬುದು ಬೇರೆ ರೋಗಗಳ ಪ್ರವೇಶಕ್ಕೆ ತೆರೆದ ಹೆಬ್ಬಾಗಿಲು. ಇದರ  ಉಪಶಮನಕ್ಕೆ ತಾತ್ಕಾಲಿಕವಾಗಿ ರಾಸಾಯನಿಕ ಔಷಧೋಪಚಾರಗಳಿವೆ. ಎಡೆ ತೊಂದರೆ  ಇಲ್ಲದ ಔಷಧಿ ಎಂದರೆ ನೇರಳೆ ಹಣ್ಣು ಜಾವಾ ಪ್ಲಮ್  ಮತ್ತು ಮರದ ಭಾಗ. ಆಧುನಿಕ ಔಷಧೋಪಚಾರಗಳು ಈ ಸಮಸ್ಯೆಯನ್ನು  ಸ್ವಲ್ಪ ಮಟ್ಟಿಗೆ ಹದ್ದುಬಸ್ತಿನಲ್ಲಿಡುತ್ತದೆ. ನಮ್ಮ ಗುಡ್ದ ಬೆಟ್ಟಗಳ ಹಣ್ಣು  ಹಂಪಲುಗಳು ಹಲವು ರೋಗ…

Read more
ಕೀಟ-ರೋಗನಾಶಕ ಸಿಂಪರಣೆ

ಕೀಟನಾಶಕಗಳು ಮೈಗೆ ಕೈಗೆ ತಾಗಿದರೆ ಏನು ಮಾಡಬೇಕು?

ಬೆಳೆ ರಕ್ಷಣೆಯಲ್ಲಿ ರೈತರು ಕೀಟನಾಶಕಗಳನ್ನು ಬಳಸಿದಾಗ ಕೆಲವೊಮ್ಮೆ ಅಪ್ಪಿ ತಪ್ಪಿ ಅದು ಚರ್ಮ, ಕಣ್ಣು, ಬಾಯಿ ಮುಂತಾದ ಭಾಗಗಳಿಗೆ ತಾಗುತ್ತದೆ. ಅದರ ವಾಸನೆ ಉಸಿರಾಟದ ಮೂಲಕ ದೇಹದ ಒಳಗೆ ಸೇರುತ್ತದೆ.  ಹೀಗಾದಾಗ ಅದನ್ನು ನಿರ್ಲಕ್ಷ್ಯ ಮಾಡಬಾರದು.ಪ್ರಥಮ ಚಿಕಿತ್ಸೆ ಅಥವಾ ಹೆಚ್ಚು ತೊಂದರೆಗಳಿದ್ದರೆ ತಜ್ಞ ವೈದ್ಯರಲ್ಲಿಗೆ ಹೋಗಿ ಚಿಕಿತ್ಸೆ ಮಾಡಿಸಿಕೊಳ್ಳಬೇಕು. ಇದು ನಮ್ಮ ದೇಹವನ್ನು ನಿಧಾನ ವಿಷಕ್ಕೆ ಬಲಿಯಾಗುವಂತೆ ಮಾಡುತ್ತದೆ.  ರೈತರ ಮತ್ತು ಕೃಷಿಕಾರ್ಮಿಕರು ಕೀಟನಾಶಕಗಳನ್ನು ಮತ್ತು ಸಿಂಪರಣೆ ಯಂತ್ರಗಳನ್ನು ಸಮರ್ಪಕವಾಗಿ ಉಪಯೋಗ ಮಾಡಿದಾಗ ಮಾತ್ರ ಅದು ಸುರಕ್ಷಿತ….

Read more
ಪ್ರತೀ ಮನೆಯಲ್ಲೂ ಇರಬೇಕಾದ ಔಷಧೀಯ ಸಸ್ಯ.

ಇದು ಪ್ರತೀ ಮನೆಯಲ್ಲೂ ಇರಬೇಕಾದ ಔಷಧೀಯ ಸಸ್ಯ.

ಇದು ಒಂದು ಅಧ್ಬುತ ಔಷಧೀಯ  ಗುಣದ  ಸಸ್ಯ. ನಿಮ್ಮ ಮನೆ ಹಿತ್ತಲಲ್ಲಿ ಒಂದೆರಡಾದರೂ ಇರಲಿ.  ಅಲೋಪತಿಯಲ್ಲಿ ಗುಣಪಡಿಸಲಾಗದ ಖಾಯಿಲೆಯನ್ನು ಈ ಮೂಲಿಕಾ ಗಿಡ ಕೆಲವೇ ಗಂಟೆಗಳಲ್ಲಿ ಗುಣ ಮಾಡುತ್ತದೆ.  ಸಮಸ್ಯೆ ಬಂದಾಗ ಇದನ್ನು ಹುಡುಕುವ ಬದಲು ಎಲ್ಲಾದರೂ ಸಿಕ್ಕಿದರೆ ಒಂದು ಎರಡು ಗಿಡ ನೆಡಿ. ಹಿರಿಯ ನಿವೃತ್ತ  ವೈದ್ಯರೊಬ್ಬರು ಹೇಳುತ್ತಿರುತ್ತಾರೆ. ಅಲೋಪತಿಯ ಬಹುತೇಕ ಔಷಧಿಗಳಿಗೆ  ನಮ್ಮ ಸುತ್ತ ಮುತ್ತ ಇರುವ ಸಸ್ಯಗಳೇ ಮೂಲ ಎಂದು. ಕಾಲಮೇಘ ಗಿಡದ  (ಕಿರಾತ ಕಡ್ಡಿ) ಸಸ್ಯ ಸಾರದಲ್ಲಿ ಜ್ವರ ನಿವಾರಕ ಗುಣ…

Read more
ಹಾಡೆ ಬಳ್ಳಿ ಎಲೆ

ಹಾಡೆಬಳ್ಳಿಗೂ ಬಂತು ನೋಡಿ ರಾಜಯೋಗ- ಇದು ಕ್ಯಾನ್ಸರ್ ಗೆ ಔಷಧಿಯಂತೆ.

ಕೆಲವೊಮ್ಮೆ ನಮ್ಮ ಕಾಲ ಬುಡದಲ್ಲೇ ಚಿನ್ನ ಇರುತ್ತದೆ. ಅದು ನಮಗೆ ಬೇರೆಯವರು ಹೇಳದ ವಿನಹ ಗೊತ್ತೇ ಆಗುವುದಿಲ್ಲ. ಹಾಗೆಯೇ ನಮ್ಮ ಕಾಲಬುಡದಲ್ಲೇ ಇರುವ ಒಂದು ಕಳೆಯಂತಿರುವ ಹಾಡೆ ಬಳ್ಳಿಗೆ ಈಗ ಕ್ಯಾನ್ಸರ್ ನಿವಾರಕ ಗುಣ ಪಡೆದ ಬಳ್ಳಿ ಎಂಬ ಮನ್ನಣೆಗೆ ಪಾತ್ರವಾಗಿದ್ದು, ಇದಕ್ಕೆ ಪೇಟೆಂಟ್ ಸಹ ದೊರೆತಿದೆ. ಇದು ಮುಂದೆ ಭಾರೀ ಮೌಲ್ಯದ ಸಸ್ಯವಾದರೂ ಅಚ್ಚರಿ ಇಲ್ಲ. ಕರಾವಳಿ ಮಲೆನಾಡಿನಲ್ಲೆಲ್ಲಾ ಕಾಡು ಬಳ್ಳಿಯಾಗಿ ಕಾಣಸಿಗುವ ಒಂದು ಬಳ್ಳಿಗೆ ಈಗ ಕ್ಯಾನ್ಸರ್ ನಿವಾರಕ ಪಟ್ಟ ಸಿಕ್ಕಿದೆ. ಸಹಸ್ರ ಮಾನಗಳಿಂದ…

Read more
ಸಾವಯವ ಬೆಲ್ಲ

ಬೆಲ್ಲ – ಯಾವುದರಲ್ಲಿ ರಾಸಾಯನಿಕ ಇದೆ – ಇಲ್ಲ.

ನಾವೆಲ್ಲಾ ಅಂಗಡಿಯಿಂದ ಕೊಳ್ಳುವ ಆಕರ್ಷಕ ಹಳದಿ ಮಡಿ ಬಣ್ಣದ ಬೆಲ್ಲಕ್ಕೂ, ನೈಜ ಬೆಲ್ಲದ ಬಣ್ಣಕ್ಕೂ ಅಜಗಜಾಂತರ ವೆತ್ಯಾಸ ಇದ್ದು, ಅಂಗಡಿಯ ಈ ಬೆಲ್ಲದಲ್ಲಿ ಏನಿದೆ ಎಂಬುದನ್ನು ಆಹಾರ ಇಲಾಖೆ  ಪರಿಶೀಲಿಸುವುದು ಅಗತ್ಯ. ಆದರೂ ಕಡಿಮೆ ರಾಸಾಯನಿಕ ಬಳಸಿ ತಯಾರದ ಬೆಲ್ಲವನ್ನು ಗುರುತಿಸುವುದು ಕಷ್ಟವಲ್ಲ. ಬೆಲ್ಲ ಎಂಬುದು ಕಬ್ಬಿನ ರಸವನ್ನು ಕುದಿಸಿ ಅದರ ನೀರಿನ ಅಂಶವನ್ನು ತೆಗೆದು ಸಿಹಿ ಅಂಶವನ್ನು ಉಳಿಸಿ ಪಡೆಯುವ ವಸ್ತು. ಇದರ ನೈಜ ಸ್ಥಿತಿ ದ್ರವ ರೂಪ. ಇದನ್ನು ಗ್ರಾಹಕರ ಇಷ್ಟಕ್ಕೆ ಮತ್ತು ದಾಸ್ತಾನು,…

Read more
error: Content is protected !!