ಗೇರು - ಹೆಚ್ಚಿನ ಆದಾಯಕ್ಕೆ- ಇದನ್ನು ತಪ್ಪದೆ ಮಾಡಿ

ಗೇರು – ಹೆಚ್ಚಿನ ಆದಾಯಕ್ಕೆ- ಇದನ್ನು ತಪ್ಪದೆ ಮಾಡಿ.

ಗೇರು ಬೆಳೆ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ನವೆಂಬರ್ ತಿಂಗಳಿನಿಂದ ಪ್ರಾರಂಭವಾಗಿ  ಫೆಬ್ರವರಿ – ಮಾರ್ಚ್  ತನಕ ಸ್ವಲ್ಪ ಆರೈಕೆ  ಮಾಡಿದರೆ ಮರವೊಂದರ ಸರಾಸರಿ 1000 ರೂ. ಗಳಷ್ಟು ಆದಾಯ ತಂದು ಕೊಡಬಲ್ಲ ನಿರಾಯಾಸದ ಬೆಳೆ. ಈ ಬೆಳೆ ಈಗ ಕರಾವಳಿಯಲ್ಲಿ ಸ್ಥಳ ಇಲ್ಲದೆ ಮಲೆನಾಡು, ಅರೆಮಲೆನಾಡು, ಬಯಲು ಸೀಮೆಯ ತನಕ ವಿಸ್ತಾರವಾಗಿದೆ. ಇದು ಈಗಿನ ಜ್ವಲಂತ ಸಮಸ್ಯೆಯಾದ  ನೀರಿನ ಕೊರೆತೆಯನ್ನು ತಡೆದುಕೊಂಡು ಬೆಳೆಯಬಲ್ಲ ಬೆಳೆ. ಮಳೆ ಕಳೆದು ಚಳಿ ಬಂದಾಕ್ಷಣ  ಗೇರು ಮರ ಚಿಗುರಿ ಹೂ ಮೊಗ್ಗು…

Read more
cashew

ಗೇರು – ಈಗ ಮರಗಳ ಮೇಲೆ ಒಮ್ಮೆ ದೃಷ್ಟಿ ಹರಿಸುತ್ತಿರಿ

ಈ ಸಮಯದಲ್ಲಿ ಗೇರು ಮರಗಳಲ್ಲಿ ಗೇರು ಬೀಜದ ಕೊಯಿಲು ನಡೆಯುತ್ತಿರುತ್ತದೆ. ಗೇರು ಬೀಜ ಕೊಯಿಲಿಗೆ ಹೋಗುವ ಸಮಯದಲ್ಲಿ ಬುಡ ಭಾಗವನ್ನು ತಪ್ಪದೇ ಗಮನಿಸಿರಿ. ಈ ಸಮಯದಲ್ಲಿ ಬುಡದ ಕಾಂಡಕ್ಕೆ ಕಾಂಡ ಕೊರಕ ಹುಳು ಬಾಧಿಸುತ್ತದೆ. ಈ ಹುಳು ಬಾಧಿಸಿದ ಸಮಯದಲ್ಲಿ ಉಪಚಾರ ಮಾಡಿದರೆ  ಮಾತ್ರ ಅದನ್ನು ಬದುಕಿಸಲು ಸಾಧ್ಯ.  ಪತ್ತೆ ಕ್ರಮ: ಗೇರು ಮರಕ್ಕೆ ಮಾರಣಾಂತಿಕವಾಗಿ ಹಾನಿ ಮಾಡುವ ಕೀಟ ಕಾಂಡ ಕೊರಕ (Stem borer of cashew). ಈ ಸಮಯದಲ್ಲಿ ಕಾಂಡ ಕೊರಕ ಕೀಟ ಕಾಡದ…

Read more
ಗೇರು ಹಣ್ಣುಗಳನ್ನು ಸ್ವಚ್ಚ ಮಾಡುತ್ತಿರುವುದು

ಗೇರು ಕೃಷಿಗೆ  ರೈತರಿಂದ ಗುಡ್ ಭೈ – ತೀರಾ ನಷ್ಟದ ಬೆಳೆ

ಒಂದು ಕಾಲದಲ್ಲಿ ಕರಾವಳಿಯ ಎಲ್ಲಾ ಭಾಗಗಳಲ್ಲಿ ಗೇರು ಬೆಳೆ ನಳನಳಿಸುತ್ತಿತ್ತು.  ಎಂತೆಂತಹ ಮರಗಳು, ಬುಟ್ಟಿ ಬುಟ್ಟಿ ಗೇರು ಹಣ್ಣುಗಳು. ಇಂದು ಆ ವೈಭವ ಇಲ್ಲ.ಗೇರು ಮರದಲ್ಲಿ ಹಣ್ಣು ಆದರೂ ಕೊಯ್ಯುವ ಗೋಜಿಗೇ ಹೋಗದ ಜನ, ಕೊಯ್ದ ಮಜೂರಿ ಹುಟ್ಟದ ನಷ್ಟದ ಬೆಳೆಯಾಗಿ, ಗೇರು ಕೃಷಿಗೆ ರೈತರು ಈಗಾಗಲೇಗುಡ್ ಭೈ ಹೇಳುತ್ತಿದ್ದಾರೆ.. ಸದ್ಯವೇ  ಗೇರು ಬೆಳೆ ಎಂಬುದು ನಮ್ಮಲ್ಲಿ ಗತ ವೈಭವವಾದರೂ ಅಚ್ಚರಿ ಇಲ್ಲ.   ಗೇರು ಮರಗಳಿಂದ (Cashew) ಕೊಕ್ಕೆ ಹಾಕಿ ಹಣ್ಣು ಕೊಯ್ಯುವುದು, ಹೆಕ್ಕುವುದು, ಬೀಜ ಪ್ರತ್ಯೇಕಿಸುವುದು,…

Read more
Cashew Dwarf release

ಗೋಡಂಬಿಯಲ್ಲಿ ಹೊಸ ಕುಬ್ಜ ತಳಿ ಈಗ ಲಭ್ಯ.

ಕುಬ್ಜ ತಳಿ ಇಂದಿನ ಅಗತ್ಯತೆಗಳಲ್ಲಿ ಒಂದು. ಮರ ಹತ್ತುವ ಅಭ್ಯಾಸವೇ ಬಿಟ್ಟು ಹೋಗುತ್ತಿರುವ ಈ ಸಮಯದಲ್ಲಿ ಇದು ಅಗತ್ಯವಾಗಿದೆ. ಮಾವಿನಲ್ಲಿ ಕುಬ್ಜ ತಳಿ ಬಂದಿದೆ. ಅಡಿಕೆಯಲ್ಲಿ ಇದೆ. ತೆಂಗಿನಲ್ಲೂ  ಕೆಲವು ಗಿಡ್ದ  ತಳಿಗಳಿವೆ. ಹೈಬ್ರೀಡ್ ಮಾಡುವವರೂ ಕುಬ್ಜ ತನಕ್ಕೆ ಹೆಚ್ಚು ಒತ್ತುಕೊಡುತ್ತಿದ್ದಾರೆ.  ಎತ್ತರ ಬೆಳೆಯುವ ಮರ ಎಂದರೆ ಕಾಯಿ ಕೀಳುವ ಸಮಸ್ಯೆ. ಕುಬ್ಜ ಆದರೆ ಎಲ್ಲವೂ ಸುಲಭ. ಇಳುವರಿ ಕಡಿಮೆಯಾದರೂ ಆಗಬಹುದು, ಪರರನ್ನು ಅವಲಂಭಿಸಿ ಮಾಡುವುದಕ್ಕಿಂತ ನಾವೇ ಮಾಡಬಹುದು ಎಂಬುದೇ ಇದಕ್ಕೆ ಕಾರಣ. ಕರಾವಳಿ ಕರ್ನಾಟಕದಲ್ಲಿ  ದಕ್ಷಿಣ…

Read more
cashew un productive

ಗೇರು ಮರದ ಚಿಗುರು ಹೀಗೆ ಆಗುವುದಕ್ಕೆ ಕಾರಣ.

ಗೇರು ಮರಗಳ ಎಲ್ಲಾ  ಎಳೆ ಚಿಗುರು ಒಣಗುವ ಈ ಸಮಸ್ಯೆ ಯಾಕೆ ಆಗುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಇತ್ತೀಚೆಗಿನ ಗೇರು ತೋಟಗಳಲ್ಲಿ ಇಂತಹ ಸಸ್ಯಗಳ ಸಂಖ್ಯೆ ಹೆಚ್ಚುತ್ತಿದ್ದು, ಇದಕ್ಕೆ ಕಾರಣ ಸಸ್ಯಾಭಿವೃದ್ದಿ ಮಾಡುವಾಗ ಸೂಕ್ತ ಸಸ್ಯ ಮೂಲದಿಂದ ಕಸಿ ಕಡ್ಡಿಗಳನ್ನು ಆಯ್ಕೆ ಮಾಡದೆ ಇರುವುದು. ಸಸಿಗಳಿಗೆ ಬೇಡಿಕೆ ಇದೆ ಎಂದು ಬೆಳೆಗಾರರ ಶ್ರಮದ ಮೇಲೆ ಆಟ ಆಡುವ ಮನೋಸ್ಥಿತಿ ಇದು ಎಂದರೂ ತಪ್ಪಾಗಲಾರದು. ಗೇರು ಮರದ ವಿಶೇಷ ಎಂದರೆ ಅದು ಚಿಗುರಿದಾಗ ಹೂವಾಗುತ್ತದೆ. ಚಿಗುರು ಬಂದು…

Read more
ಟಿ ಸೊಳ್ಳೆ ಬಾಧಿಸದ ಗೇರು ಮಿಡಿ

ಗೇರು ಬೆಳೆಯಲ್ಲಿ ಹೆಚ್ಚು ಫಸಲು ಪಡೆಯಲು ಈ ಕ್ರಮ ಅನುಸರಿಸಿ.

ಗೇರು ಬೆಳೆಗೆ ಅಗತ್ಯವಾಗಿ ಬೇಕಾದ ಆರೈಕೆ ಎಂದರೆ ಚಿಗುರು ಮತ್ತು ಹೂವು ಬರುವಾಗ ಕೀಟ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದು. ಇಲ್ಲಿ ಉದಾಸೀನ ಮಾಡಿದರೆ ಫಸಲು ಭಾರೀ ಕಡಿಮೆಯಾಗುತ್ತದೆ. ಈ ಸಮಯದಲ್ಲಿ ಟಿ. ಸೊಳ್ಳೆ ಫಸಲಿನ ನಶ್ಟವನ್ನು ಉಂಟು ಮಾಡುತ್ತದೆ. ಗೋಡಂಬಿ ಬೆಳೆಯಲ್ಲಿ ಟಿ- ಸೊಳ್ಳೆ ಕೀಟವನ್ನು  ನಿಯಂತ್ರಿಸಿಕೊಂಡಲ್ಲಿ ಬೆಳೆ ಬಂಪರ್. ಆದಾಯವೂ ಸೂಪರ್. ಟಿ ಸೊಳ್ಳೆ ಕೀಟವನ್ನು ಸುರಕ್ಷಿತವಾಗಿ ನಿಯಂತ್ರಣ ಮಾಡುವುದು ಹೀಗೆ. ರಸ್ತೆ ಬದಿಯಲ್ಲಿರುವ ಗೇರು ಮರಗಳಿಗೆ ಯಾವ ಟಿ- ಸೊಳ್ಳೆಯ ಕಾಟವೂ ಇಲ್ಲ….

Read more
ಗೇರು ಮರಕ್ಕೆ ಗೊಬ್ಬರ ಕೊಡುವ ವಿಧಾನ

ಗೇರು – ಗೊಬ್ಬರ ಕೊಟ್ಟರೆ ಬಂಪರ್ ಇಳುವರಿ ಪಡೆಯಬಹುದು.

ಗೇರು ಬೆಳೆಗೆ ವರ್ಷದಲ್ಲಿ 3 ತಿಂಗಳು ಮಾತ್ರ ಕೆಲಸ, ನೀರಾವರಿ ಬೇಡ. ಉತ್ತಮವಾಗಿ ಗೊಬ್ಬರ ಕೊಟ್ಟು ನಿಗಾ ವಹಿಸಿ ಬೆಳೆದರೆ 5-6  ವರ್ಷದ ಮರದಲ್ಲಿ 10 ಕಿಲೋ ತನಕ ಇಳುವರಿ ಪಡೆಯಬಹುದು. ಕನಿಷ್ಟ 1000 ರೂ ಆದಾಯಕ್ಕೆ ತೊಂದರೆ ಇಲ್ಲ ಎಂಬ ಕಾರಣಕ್ಕೆ ರೈತರು ತಮ್ಮಲ್ಲಿ ಖಾಲಿ ಇರುವ ಸ್ಥಳದಲ್ಲಿ ಗೇರು ಬೆಳೆ ಬೆಳೆಸಿದ್ದಾರೆ. ಬರೇ ನೆಟ್ಟರೆ ಸಾಲದು ಅದಕ್ಕೆ ಅಗತ್ಯ ಪೊಷಕಗಳನ್ನು ಕಾಲ ಕಾಲಕ್ಕೆ ಕೊಟ್ಟರೆ ಉತ್ತಮ ಇಳುವರಿ ಪಡೆಯಲು ಸಾಧ್ಯ.     ಗೇರು ಮರ ಚೆನ್ನಾಗಿ…

Read more
ಮೈದಾನ ಪ್ರದೇಶಕ್ಕೆ ಹೊಂದುವ ನೀರಾವರಿ ಬೇಕಾಗದ ಗೋಡಂಬಿ ತಳಿಗಳು.

ಮೈದಾನ ಪ್ರದೇಶಕ್ಕೆ ಹೊಂದುವ ನೀರಾವರಿ ಬೇಕಾಗದ ಗೋಡಂಬಿ ತಳಿಗಳು.

ಅರೆ ಮಲೆನಾಡು ಮತ್ತು ಬಯಲು ಸೀಮೆಗಳಾದ ತುಮಕೂರು, ಶಿರಾ, ಕೊಲಾರ, ರಾಮನಗರ, ಹಾಗೆಯೇ ಬಾಗಲಕೋಟೆ, ಬೆಳಗಾವಿಯ ಕೆಲವು ಭಾಗಗಳಲ್ಲಿ  ರೈತರು ಈಗಾಗಲೇ ಗೇರು ಬೆಳೆಸುತ್ತಿದ್ದು, ಇಲ್ಲಿನ ಹವಾಮಾನದಲ್ಲಿ ಉತ್ತಮ ಇಳುವರಿ ಬರುತ್ತಿದೆ. ಇಲ್ಲಿನ ಒಣ ಭೂಮಿಗೆ ಇದು ಚೆನ್ನಾಗಿ ಹೊಂದಿಕೊಂಡು ನೀರಾವರಿ ಮಾಡುವುದಿದ್ದರೂ ಅತೀ ಕಡಿಮೆ ನೀರಾವರಿ ಸಾಕು. ಬಾಗಲಕೋಟೆಯ ತೋಟಗಾರಿಕಾ ವಿಶ್ವವಿಧ್ಯಾನಿಲಯ, ಹುಲಕೋಟಿಯ ಕೃಷಿ ಸಂಶೋಧನಾ ಕೇಂದ್ರ, ಚಿಂತಾಮಣಿಯ ತೋಟಗಾರಿಕಾ ಸಂಶೋಧನಾ  ಕೇಂದ್ರಗಳು ಗೋಡಂಬಿ ಬೆಳೆಯನ್ನು  ಬೆಳೆಸುವ ರೈತರಿಗೆ ಮನವರಿಕೆ ಮಾಡಿಕೊಡಲು ಶ್ರಮಿಸುತ್ತಿದ್ದಾರೆ. ಮೈದಾನ ಪ್ರದೇಶಕ್ಕೆ…

Read more

ಕರಾವಳಿ ಮಲೆನಾಡಿಗೆ ಹೊಂದುವ ಉತ್ತಮ ಗೇರು ತಳಿಗಳು

ಗೇರು ಒಂದು ವಿದೇಶಿ ವಿನಿಮಯ ಗಳಿಸುವ ವಾಣಿಜ್ಯ ಬೆಳೆ. ನಮ್ಮ ದೇಶದಲ್ಲಿ ಇದನ್ನು ಕೇರಳ, ಮಹಾರಾಷ್ಟ್ರ, ಗೋವಾ, ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಒರಿಸ್ಸಾ ಈಶಾನ್ಯ ರಾಜ್ಯಗಳು ಹಾಗೂ ಪಶ್ಚಿಮ ಬಂಗಾಳದಲ್ಲೆಲ್ಲಾ ಬೆಳೆಯಲಾಗುತ್ತಿದೆ. ಹೆಚ್ಚು ಪ್ರೊಟೀನ್ ಹಾಗೂ ಕಡಿಮೆ ಪ್ರಮಾಣದ ಶರ್ಕರ ಹೊಂದಿರುವ ಗೇರುಬೀಜಕ್ಕೆ ಪಾಶ್ಚಿಮಾತ್ಯ ದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಇದು ನಮ್ಮ ರಾಜ್ಯದ ಕರಾವಳಿ, ಮಲೆನಾಡು ಅರೆ ಮಲೆನಾಡು ಪ್ರದೇಶಗಳಿಗೆ  ಚೆನ್ನಾಗಿ ಹೊಂದಿಕೆಯಾಗುವ ಬೆಳೆಯಾಗಿದೆ. ಕಡಿಮೆ ನೀರಿನಲ್ಲಿ ಬೆಳೆದು ಆದಾಯ ಕೊಡಬಲ್ಲ ಬೆಳೆ ಎಂದು…

Read more

ಗೇರು ಬೀಜಕ್ಕೆ ಬೇಕಾಗಿದೆ ನ್ಯಾಯ ಬೆಲೆ.

ಕರ್ನಾಟಕದಲ್ಲಿ ಕರಾವಳಿ ಮಲೆನಾಡು  ಭಾಗಗಳಲ್ಲಿ ಸುಮಾರು 750  ಮಿಕ್ಕಿ ಅತ್ಯಾಧುನಿಕ ಗೋಡಂಬಿ ಸಂಸ್ಕರಣೆ ಮತ್ತು ರಪ್ತು ಉದ್ದಿಮೆಗಳಿವೆ.  1000 ಕೂ ಮಿಕ್ಕಿ ಪೀಸ್ ವರ್ಕ್ ಮಾಡಿ ಕೊಡುವ ಸಣ್ಣ ಸಣ್ಣ ಘಟಕಗಳಿವೆ.  ಆದರೆ ಬೆಳೆಗಾರರಿಗೆ ಮಾತ್ರ ಸಿಗುವುದು ಯಾವಾಗಲೂ ಉತ್ಪಾದನಾ ವೆಚ್ಚಕ್ಕಿಂತ ಬೆಲೆ ಕಡಿಮೆ… ಒಂದು ಗೇರು ಮರದಿಂದ ಗೇರು ಹಣ್ಣುಗಳನ್ನು ಕೊಯಿಲು ಮಾಡಿ ಅದರ  ಬೀಜ ಬೇರ್ಪಡಿಸಿ ಒಣಗಿಸಿ ಅದನ್ನು ಕೊಳ್ಳುವವರಲ್ಲಿಗೆ ಒಯ್ಯುವ  ಕೆಲಸದ ಮಜೂರಿ  ಕಿಲೋಗೆ 100 ಕ್ಕೂ ಮಿಕ್ಕಿ  ತಗಲುತ್ತದೆ. ಆದರೆ ಅದರ…

Read more
error: Content is protected !!