ರೈತರ ನೆಮ್ಮದಿ ಕೆಡಿಸುತ್ತಿರುವ ಭೂ ವ್ಯಾಜ್ಯಗಳು.
100 ಜನರಲ್ಲಿ 50% ಜನ ಭೂಮಿಗೆ ಸಂಬಂಧಿಸಿದ ತಕರಾರುಗಳನ್ನು ಹಿಡಿದುಕೊಂಡು ನ್ಯಾಯಪಡೆಯಲು ಜೀವಮಾನವನ್ನೇ ಸವೆಸುತ್ತಾರೆ. 100 ಕ್ಕೆ 99 ಜನ ನೆರೆ ಹೊರೆಯ ಕೃಷಿಕ ಸಹೋದ್ಯೋಗಿಗಳ ಜೊತೆಯಲ್ಲಿ ಮುಸುಕಿನ ಗುದ್ದಾಟದಲ್ಲಿರುತ್ತಾರೆ. ಭಾರತದ ಕೋರ್ಟು ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುವ ವಕೀಲರುಗಳು ಬದುಕುವುದೇ ಭೂ ವ್ಯಾಜ್ಯಗಳಲ್ಲಿ. ಇಂಥಹ ಭೂ ಕಾಯಿದೆ ಜನಸ್ನೇಹಿಯೇ ? ಇದರ ಜನಸ್ನೇಹೀ ತಿದ್ದುಪಡಿಗೆ ರೈತರು ಸರಕಾರವನ್ನು ಒತ್ತಾಯಪಡಿಸಬೇಕಾಗಿದೆ. ಹೆಣ್ಣು , ಹೊನ್ನು, ಮಣ್ಣು ಈ ಮೂರೂ ಮನುಕುಲವನ್ನು ಹಾಳು ಮಾಡುವುದು ನಿಶ್ಚಯ. ಇದರಲ್ಲಿ ಎರಡಕ್ಕೆ ಸ್ವಲ್ಪ…