ಗೋಬರ್ ಗ್ಯಾಸ್ ಸ್ಥಾವರ

ಗೋಬರ್ ಗ್ಯಾಸ್ ಸ್ಲರಿಯಲ್ಲಿ ಸತ್ವ ಇದೆ.

ಸಗಣಿಯನ್ನು ಹಾಗೆಯೇ ಬೆಳೆಗಳಿಗೆ ಹಾಕುವುದಕ್ಕಿಂತ ಅದನ್ನು ದ್ರವೀಕರಿಸಿ ಕೊಡುವುದರಿಂದ ಅದರ ಪೂರ್ಣ ಸತ್ವಗಳು  ಬೆಳೆಗಳಿಗೆ  ದೊರೆಯುತ್ತದೆ. ಅನಿಲ ಉತ್ಪಾದನೆ ಅಗುವಾಗ ಸಗಣಿಯ ಸಾರ ಕಡಿಮೆಯಾಗುತ್ತದೆ ಎಂಬುದು ನಿಜವಲ್ಲ. ಅನಿಲ ಉತ್ಪಾದನೆಗೆ ಬೇಕಾಗುವ ಅಂಶವೇ ಬೇರೆ. ಬೆಳೆಗಳಿಗೆ ಬೇಕಾಗುವುವಂತದ್ದು ಅದರಲ್ಲೇ ಉಳಿಯುತ್ತದೆ.ಪ್ರತೀಯೊಬ್ಬ ಗೋಬರ್ ಗ್ಯಾಸ್ ಸ್ಲರಿ ಬಳಕೆದಾರ ತಿಳಿಯಬೇಕಾದ  ಮಾಹಿತಿ ಇಲ್ಲಿದೆ. ಹಳ್ಳಿಯಲ್ಲಿ ಕೃಷಿಕರ ಮನೆಯಲ್ಲಿ ಬಯೋಗ್ಯಾಸ್ ಅಥವಾ ಗೋಬರ್ ಗ್ಯಾಸ್ ಇದ್ದರೆ ಸಿದ್ದ ಗೊಬ್ಬರ ಇದ್ದಂತೆ. ಒಂದೆರಡು ದನ ಇದ್ದವರೂ ಗೋಬರ್ ಗ್ಯಾಸ್ ಮಾಡಿಕೊಳ್ಳಬಹುದು. ಹೆಚ್ಚು ದನ…

Read more
ಬೂದಿಯ ಮೂಲಕ ಕೀಟ ನಿಯಂತ್ರಣ

ಸಾವಯವ ಕೀಟ –ರೋಗ-ನಿಯಂತ್ರಣ ವಿಧಾನ.

ಸರ್ವ ರೋಗಕ್ಕೆ ಬೂದಿ ಮದ್ದು ಎಂಬುದನ್ನು ಎಲ್ಲರೂ ಕೇಳಿರಬಹುದು. ಬೂದಿ ಎಂದರೆ ಅದು ಮರವನ್ನು ಸುಟ್ಟಾಗ ಸಿಗುವ ವಸ್ತು, ಇದು ಕ್ಷಾರೀಯ. ಇದನ್ನು ಬೆಳೆಗಳ  ಮೇಲೆ ಚೆಲ್ಲಿದಾಗ ಅದು ಒಂದು ಪೊಟ್ಯಾಶಿಯಂ ಸತ್ವದ ಪೋಷಕವಾಗಿಯೂ ,  ಕೀಟ ರೋಗ ನಿಯಂತ್ರಕವಾಗಿಯೂ ಕೆಲಸ ಮಾಡುತ್ತದೆ. ಇದನ್ನು ಬಹುಸ್ತರದ ಸಾವಯವ ಕೀಟ –ರೋಗ-ನಿಯಂತ್ರ ಕ ಎಂಬುದಾಗಿ ಹಿರಿಯರು ಹೇಳುತ್ತಾ ಬಂದಿದ್ದಾರೆ. ದುರದೃಷ್ಟವೆಂದರೆ ಈಗ  ಅಡುಗೆ ಒಲೆಗೆ ಗ್ಯಾಸ್  ಬಂದಿದೆ. ಬಿಸಿ ನೀರ ಸ್ನಾನಕ್ಕೆ ಸೋಲಾರ್ ಬಂದಿದೆ. ಕಟ್ಟಿಗೆ ಸುಟ್ಟ ಬೂದಿ…

Read more
tasty vegetable grown with out manure

ನಾವು ತಿನ್ನುವ ಆಹಾರ ರುಚಿ ಇರುವುದಿಲ್ಲ ಕಾರಣ ಇಷ್ಟೇ

ಮಣ್ಣು ಫಲವತ್ತಾಗಿದ್ದರೆ ಅದರಲ್ಲಿ ಬೆಳೆದ ಬೆಳೆಯ ಗುಣಮಟ್ಟ ಉತ್ತಮವಾಗಿರುತ್ತದೆ. ಅದಕ್ಕೆ ರುಚಿಯೂ ಇರುತ್ತದೆ. ಆರೋಗ್ಯಕ್ಕೂ ಉತ್ತಮ. ಮಣ್ಣಿಗೆ ಜೀವ ಇದೆ.ಇದು ಕೃಷಿಗೆ ಜೀವ ಕೊಡುತ್ತದೆ . ಮಣ್ಣಿನಲ್ಲಿ ಅನೇಕ ಪೋಷಕಾಂಶಗಳು ಮತ್ತು ಕಣ್ಣಿಗೆ ಕಾಣದ ಸೂಕ್ಷ್ಮ ಜೀವಿಗಳು ಸೇರಿಕೊಂಡಿವೆ . ಮಣ್ಣು ಇಲ್ಲದೆ ಯಾವುದೇ ಜೀವಿ ಬದುಕಲು ಸಾಧ್ಯವಿಲ್ಲ. ಅದೇ ರೀತಿ ಯಾವುದೇ ಜೀವಿ ಇಲ್ಲದೇ ಮಣ್ಣು ಆಗಲು ಸಾಧ್ಯವಿಲ್ಲ. ಒಂದು ಇಂಚು ಮಣ್ಣು ಆಗಬೇಕಾದರೆ ಸಾವಿರಾರು ವರ್ಷಗಳೇ ಬೇಕಾಗುತ್ತದೆ. ಇಂದು ಅವೈಜ್ಞಾನಿಕ ರಾಸಾಯನಿಕಗಳ ಬಳಕೆಯಿಂದ ಮಣ್ಣು,…

Read more

ಸಾವಯವ ಕೃಷಿಗೆ ದೊಣ್ಣೆ ನಾಯಕರ ಸಲಹೆ ಬೇಕಾಗಿಲ್ಲ.

ಸಾವಯವ ಕೃಷಿ ಎಂಬುದು ನಮ್ಮ ಪರಂಪರೆಯಿಂದ ನಡೆದು ಬಂದ ಕೃಷಿ ಪದ್ದತಿ. ಇತ್ತೀಚೆಗೆ ಕೆಲವು ಜನರಿಗೆ ಸಾವಯವ  ಹೆಸರೇ  ಮೈಮೇಲೆ ದೆವ್ವ ಬಂದಂತೆ  ಬರುತ್ತಿರುವುದು ವಿಪರ್ಯಾಸ. ಸಾವಯವ ಕೃಷಿ ಎಂದರೆ ಮಣ್ಣನ್ನು ಫಲವತ್ತಾಗಿಸಿಕೊಂಡು ಅದನ್ನೇ ಪೊಷಕಾಂಶ ಭರಿತವಾದ ಬೆಳೆ ಮಾಧ್ಯಮವಾಗಿ ಮಾಡಿ ಕೃಷಿ ಮಾಡುವುದು.  ಮಣ್ಣು ಫಲವತ್ತಾಗಿದ್ದರೆ ಅದರಲ್ಲಿ ಬೆಳೆಯುವ ಬೆಳೆಗೆ ಬೇರೆ ಪೋಷಕಾಂಶಗಳು ಬೇಕಾಗುವುದಿಲ್ಲ. ಬೆಳೆ ಬೆಳೆದಂತೆ ಫಲವತ್ತಾದ ಮಣ್ಣಿನ ಪೋಷಕಗಳು ಉಪಯೋಗವಾಗಿ ಕಡಿಮೆಯಾಗುತ್ತಾ ಬರುತ್ತದೆ. ಅದನ್ನು ಮತ್ತೆ ಮತ್ತೆ ನವೀಕರಿಸುತ್ತಾ ಬೆಳೆ ಬೆಳೆಯಬಹುದು. ಈ…

Read more

ಜೈವಿಕ ಬೆಳೆ ಪೋಷಕಗಳನ್ನು ಬಳಸುವಾಗ ಎಚ್ಚರವಿರಲಿ.

ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳ ಬಗ್ಗೆ ಹೇಳುವುದೇ ಆದರೆ ಅವುಗಳ ಅಸಮತೋಲನ ಉಂಟಾದರೆ ಅದೂ ಸಹ ತೊಂದರೆದಾಯಕ. ಇದು ಜೈವಿಕ ಉತ್ಪನ್ನಗಳ ಪ್ರಚಾರದ ಕಾಲ. ಸಾವಯವ , ಹಾನಿ ರಹಿತ, ಪರಿಸರ ಸ್ನೇಹಿ, ಎಂದೆಲ್ಲಾ ಪ್ರಚಾರಗಳ ಮೂಲಕ ರೈತರಿಗೆ ಜೈವಿಕ ಉತ್ಪನ್ನಗಳನ್ನು ಪರಿಚಯಿಸಲಾಗುತ್ತದೆ. ಜೈವಿಕ ಉತ್ಪನ್ನ್ಗಗಳ ಬಗ್ಗೆ ಹೇಳುವುದೆಲ್ಲಾ ನಿಜವಲ್ಲ. ಇದೂ ಸಹ ಅತಿಯಾದರೆ ತೊಂದರೆ ಉಂಟು. ಕೃಷಿಕರಲ್ಲಿ ಕೆಲವರಿಗೆ ಕಾಲು ಹಿಮ್ಮಡಿ ಒಡೆಯುವ ಸಮಸ್ಯೆ ಇದೆ. ಹೆಚ್ಚಾಗಿ ಇದು ತೋಟದಲ್ಲಿ ಒಡಾಡುವಾಗ, ಧೂಳು ಇರುವ ಸ್ಥಳದಲ್ಲಿ ಹೋಗುವಾಗ…

Read more

ರಸಗೊಬ್ಬರದ ಬಳಕೆ 50% ಕಡಿಮೆ ಮಾಡಬಹುದಾದ ವಿಧಾನ.

ಕೃಷಿಗೆ ರಸಗೊಬ್ಬರ ಅನಿವಾರ್ಯವಲ್ಲ. ಇದರಿಂದ ಇಳುವರಿ ಹೆಚ್ಚಳವಾಗಲು ಅನುಕೂಲವಾಗುತ್ತದೆ. ಬುದ್ಧಿವಂತಿಕೆ ಮಾಡಿದರೆ 50% ರಸ ಗೊಬ್ಬರವನ್ನು ಉಳಿಸಬಹುದು. ನಮ್ಮ ಕೃಷಿಕರಿಗೆ ಇದು ಗೊತ್ತಿದೆಯೋ ಇಲ್ಲವೋ ತಿಳಿಯದು. ನಮ್ಮ ದೇಶದಲ್ಲಿ ಸ್ಥಳೀಯ ಕಚ್ಚಾ ವಸ್ತುಗಳನ್ನು ಬಳಸಿ ರಸ ಗೊಬ್ಬರ ತಯಾರಾಗುವುದು ತೀರಾ ಕಡಿಮೆ. ಬೇರೆ ದೇಶಗಳಿಂದ ಕಚ್ಚಾ ಸಾಮಾಗ್ರಿಯನ್ನು ತರಿಸಿ, ಇಲ್ಲಿ ಉತ್ಪಾದನೆ ಮಾಡಲಾಗುತ್ತದೆ. ಆದ ಕಾರಣ ಬೆಲೆ ನಮ್ಮ ಕೈಯಲ್ಲಿ ಇರುವುದಿಲ್ಲ. ಯಾವಾಗಲೂ ಇದು ಹೆಚ್ಚಳವಾಗುವುದೇ ಹೊರತು ಕಡಿಮೆಯಾಗಬಹುದು ಎಂಬ ಆಕಾಂಕ್ಷೆ ಕೃಷಿಕರಿಗೆ ಬೇಡ.   ರಸಗೊಬ್ಬರ …

Read more
border crops to pest attraction

ಕೀಟಗಳ ನಿಯಂತ್ರಣಕ್ಕೆ ಇದು ಸುರಕ್ಷಿತ ವಿಧಾನ.

ಕೀಟನಾಶಕ ಬಳಕೆಯಿಂದ ತಿನ್ನುವವರಿಗಿಂತ ಬಳಸುವವರಿಗೆ ತೊಂದರೆ ಜಾಸ್ತಿ. ಅದ ಕಾರಣ ಸಾಧ್ಯವಾದಷ್ಟು ಅದರ ಬಳಕೆ ಕಡಿಮೆ ಮಾಡಿ.  ಬಲೆ ಬೆಳೆ ಎಂದರೆ ಒಂದು ಬೆಳೆಗೆ ಬರುವ ಕೀಟವನ್ನು ಮತ್ತೊಂದು ಬೆಳೆಯ ಮೂಲಕ ಆಕರ್ಷಿಸುವುದು. ಮತ್ತು ಮುಖ್ಯ ಬೆಳೆಯನ್ನು ರಕ್ಷಿಸುವುದು.ಎಲ್ಲದಕ್ಕೂ ಕೀಟ  ನಾಶಕ ಪರಿಹಾರ ಅಲ್ಲ. ಅದು ಸಮಂಜಸ ಪರಿಹಾರವೂ ಅಲ್ಲ.  ಸುಲಭದಲ್ಲಿ  ಕೊಯ್ಯುವುದು ಸಾಧ್ಯವಿದ್ದರೆ ಅದರಿಂದಲೇ  ಕೊಯಿಲು ಮಾಡಬೇಕು. ಅಲ್ಲಿಗೆ ಕೊಕ್ಕೆ ಬೇಡ. ನಾವು ಈಗ ಕೊಕ್ಕೆ ಅನಿವಾರ್ಯವಾದಂತೆ  ವರ್ತಿಸುತ್ತೇವೆ. ಹುಳ ಬಿದ್ದಿದೆ ಯಾವ ಕೀಟ ನಾಶಕ…

Read more

ಅಧಿಕಇಳುವರಿಗೆ ನೆರವಾಗುವ ರಾಸಾಯನಿಕ ಇಲ್ಲದ NPK ಪೋಷಕ.

ಕೆಲವು ರೈತರು ಬೆಳೆಗಳಿಗೆ ಎಲ್ಲಾ ರೀತಿಯ ಗೊಬ್ಬರಗಳನ್ನು ಕೊಡುತ್ತಾರೆ. ವರ್ಷದಿಂದ ವರ್ಷಕ್ಕೆ ಗೊಬ್ಬರ ಕೊಡುವ ಪ್ರಮಾಣವನ್ನೂ ಹೆಚ್ಚಿಸುತ್ತಾರೆ. ಆದರೆ ವರ್ಷದಿಂದ ವರ್ಷಕ್ಕೆ ಫಸಲು ಕಡಿಮೆಯಾಗುತ್ತದೆ. ಸಸ್ಯ ದ ಆರೋಗ್ಯವೂ ಹಾಳಾಗುತ್ತದೆ. ಇದಕ್ಕೆ ಕಾರಣ ಮಣ್ಣಿನ ಜೈವಿಕತೆ ಕ್ಷೀಣಿಸುವುದು. ಪರಿಸ್ಥಿತಿಗೆ ಸಹಜವಾಗಿ ಮಣ್ಣಿಗೆ ಸಾವಯವ ವಸ್ತುಗಳನ್ನು ಹೇರಳವಾಗಿ ಪೂರೈಕೆ ಮಾಡಲು ಆಗುತ್ತಿಲ್ಲ. ಇದರಿಂದಾಗಿ ಮಣ್ಣಿನ ಜೈವಿಕ ಗುಣ ಕ್ಷೀಣವಾಗುತ್ತಾ ಬರುತ್ತದೆ. ಹಾಕಿದ ಗೊಬ್ಬರವನ್ನು ಲಭ್ಯಸ್ಥಿತಿಗೆ ತಂದು ಅಧಿಕಇಳುವರಿ ಪಡೆಯಲು ಈ ಜೈವಿಕ ಸಮ್ಮಿಶ್ರಣ ನೆರವಾಗುತ್ತದೆ. ನಾವು ತಿನ್ನುವ ಆಹಾರ ದೇಹದಲ್ಲಿ…

Read more
ಸಗಣಿ ಗೊಬ್ಬರ

ಸಗಣಿ ಗೊಬ್ಬರ – ಪರಿಪೂರ್ಣ ಸಾವಯವ ಪೋಷಕವಲ್ಲ.

ಕೆಲವು ರೈತರು ನಾನು ನನ್ನ ಬೆಳೆಗಳಿಗೆ ಹಸುವಿನ ಸಗಣಿ ಗೊಬ್ಬರವನ್ನು ಮಾತ್ರ ಕೊಡುವುದು ಎನ್ನುತ್ತಾರೆ. ಮರಗಳು ಹಚ್ಚ ಹಸುರಾಗಿ ಬೆಳೆಯುತ್ತವೆಯಾದರೂ ಪರಿಪೂರ್ಣ ಪೋಷಕಗಳು ಇಲ್ಲದ ಕಾರಣ ಫಸಲು ಅಷ್ಟಕ್ಕಷ್ಟೇ.ಯಾವುದೇ ಪ್ರಾಣಿಯ ತ್ಯಾಜ್ಯಗಳಿಂದ ಪಡೆಯುವ ಹಿಕ್ಕೆ ಅಥವಾ ಮಲದಲ್ಲಿ  ಎಷ್ಟು ಪೋಷಕಗಳಿರುತ್ತವೆ ಎಂಬುದು ಹಲವಾರು ಸಂಗತಿಗಳ ಮೇಲೆ ಅವಲಂಭಿಸಿದೆ. ಪ್ರಾಣಿಯ ದೇಹ, ಅವುಗಳ ತಳಿ, ವಯಸ್ಸು, ತೂಕ, ಆಹಾರ ಸೇವಿಸುವುದರ ಮೇಲೆ ಅವು ಮಾಡಿಕೊಡುವ ಗೊಬ್ಬರದ ಪ್ರಮಾಣ ಹೊಂದಿರುತ್ತದೆ. ಇಷ್ಟು ಮಾತ್ರವಲ್ಲ ಆ ಪ್ರಾಣಿಯ ಆರೋಗ್ಯ  ಮತ್ತು ಅದು…

Read more
ವೇಸ್ಟ್ ಡಿ ಕಂಪೊಸರ್

“ವೇಸ್ಟ್ ಡಿ ಕಂಪೋಸರ್ “ ಒಂದು ಗೊಬ್ಬರ ಅಲ್ಲ.

ಹೆಸರೇ ಹೇಳುತ್ತದೆ, ಇದು ಕೃಷಿ ತ್ಯಾಜ್ಯಗಳನ್ನು ಕಳಿಯಿಸಿ ಕೊಡುವ ಜೀವಾಣುಗಳನ್ನು ಹೊಂದಿರುವ ಉತ್ಪನ್ನ ಎಂದು. ಆದರೆ ಜನ ಇದನ್ನೇ ಗೊಬ್ಬರ ಎಂದು ಭಾವಿಸಿ, ಎಲ್ಲದಕ್ಕೂ ವೇಸ್ಟ್ ಡಿ ಕಂಪೋಸರ್ ಬಳಸಿ ಎಂದು ಸಲಹೆ ಕೊಡುತ್ತಾರೆ.  ಯಾವ ಲಾಭಕ್ಕಾಗಿ ಹೀಗೆ ಮಾಡುತ್ತಿದ್ದಾರೆಯೋ ತಿಳಿಯದು. ಬರೇ ಇದನ್ನು ಬಳಸಿ ಬೆಳೆಗಳಿಗೆ ಪೋಷಕಾಂಶದ ತೃಷೆ ತೀರಿತೆಂದಾದರೆ ಅದು ಒಂದು ಅದ್ಭುತವೇ ಸರಿ. ಗೊಬ್ಬರಗಳು ಅಥವಾ ಪೊಷಕಾಂಶಗಳಲ್ಲಿ ಸ್ಥೂಲ ಗೊಬ್ಬರಗಳು ಮತ್ತು ತೀಕ್ಷ್ಣ ಗೊಬ್ಬರಗಳು ಎಂದು ಎರಡು ವಿಧ. ಈಗ ಅದರಲ್ಲಿ ನ್ಯಾನೋ…

Read more
error: Content is protected !!