ಅತೀ ದೊಡ್ಡ ಗಾತ್ರದ ನೇಂದ್ರ ಬಾಳೆ ಕಾಯಿ

ಅತೀ ದೊಡ್ಡ ಗಾತ್ರದ ನೇಂದ್ರ ಬಾಳೆ ಕಾಯಿ

ನೇಂದ್ರ   ಬಾಳೆಯ ಬಹು ಉಪಯೋಗದ ಕಾರಣ ಇದಕ್ಕೆ ಉಳಿದೆಲ್ಲಾ ಬಾಳೆಗಳಿಗಿಂತ ಅಧಿಕ ಬೆಲೆ. ಮತ್ತು ನಿರಂತರ ಬೇಡಿಕೆ. ಇದರಲ್ಲಿ ಒಂದು ಕಾಯಿ ¾ ಕಿಲೋಗೂ ಹೆಚ್ಚು ತೂಗುವ ಅತೀ ದೊಡ್ಡ ಗಾತ್ರದ  ಬಾಳೆ ಕಾಯಿ ಇದೆ.ಇದನ್ನು ಎಲ್ಲರೂ ಬೆಳೆಸಬಹುದು. ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಒಂದು  ಬಾಳೆಗೊನೆಯಲ್ಲಿ ಸರಾಸರಿ 3 ಹೆಣಿಗೆಗಳು, 30  ಕಾಯಿಗಳು ಸರಾಸರಿ 15  ಕಿಲೋ ತೂಕ, (20 ಕಿಲೋ ತನಕವೂ ಬರುತ್ತದೆ)ಇರುವ ಬಹು ಉಪಯೋಗಿ ಬಾಳೆ ಎಂಬುದು ಇದ್ದರೆ ಅದು ನೇಂದ್ರ ಬಾಳೆಯಲ್ಲಿ….

Read more
ಕರಿಮೆಣಸು ಬೆಳೆಗೆ ಭಾರೀ ರೋಗ- ತಕ್ಷಣದ ಪರಿಹಾರಗಳು

ಕರಿಮೆಣಸು ಬೆಳೆಗೆ ಭಾರೀ ರೋಗ- ತಕ್ಷಣದ ಪರಿಹಾರಗಳು ಏನು?

ಕರಿಮೆಣಸಿಗೂ ಅತಿಯಾದ ಮಳೆಗೂ  ಬಾರೀ ವಿರೋಧ. ನೀರು ಮೆಣಸಿಗೆ ಆಗದೆಂದಲ್ಲ. ಬಳ್ಳಿಯ ಬುಡದಲ್ಲಿ ನೀರು ಹರಿದು ಹೋದರೂ ಬಳ್ಳಿ ಸಾಯಲಾರದು. ಆದರೆ ನೀರು ಬಳ್ಳಿ ಬುಡದಲ್ಲಿ 20 ನಿಮಿಷಕ್ಕಿಂತ ಹೆಚ್ಚು ಸಮಯ ನಿಂತಿರಬಾರದು. ಮಳೆಗೆ ನೀರು ಸರಿಯಾಗಿ ಬಸಿಯಲಾರದ ಕಡೆಗಳಲ್ಲಿ ರೋಗ ಬರುವುದು ಗ್ಯಾರಂಟಿ. ಈಗಾಗಲೇ ಬಹಳಷ್ಟು ಕಡೆಗಳಲ್ಲಿ ರೋಗ ಬಂದಿದ್ದು, ಬಳ್ಳಿಯಲ್ಲಿ ಎಲೆ ಹಳದಿಯಾಗಿದೆ. ಕೆಲವು ರೋಗದ ಅಮಲಿನಲ್ಲಿವೆ. ಈ ಸಮಯದಲ್ಲಿ ತಕ್ಷಣ ಯಾವ ಪರಿಹಾರ ಕ್ರಮ ಕೈಗೊಂಡರೆ ಅಲ್ಪ ಸ್ವಲ್ಪ ರೋಗ ರೋಗ ಸೋಂಕು ತಗಲಿದ…

Read more
ಮರಕೆಸುವಿನ ಸೇವನೆಯಿಂದ ಪ್ರಯೋಜನಗಳು.

ಮರಕೆಸುವಿನ ಸೇವನೆಯಿಂದ ಪ್ರಯೋಜನಗಳು.

Remusatia vivipara ಎಂಬ ಸಸ್ಯ ಶಾಸ್ತ್ರೀಯ ಹೆಸರಿನ ಮರಕೆಸು ಕೆಸು ತನ್ನದೇ ಆದ ವಿಶೇಷತೆಯನ್ನು ಹೊಂದಿದ್ದು, ಇದು ಮಳೆ ಬಂದ ನಂತರ ಹುಟ್ಟಿಕೊಂಡು ಬೆಳೆದು ಮಳೆ ಮುಗಿಯುವಾಗ ಮರೆಯಾಗುತ್ತದೆ. ಈ ಅವಧಿಯಲ್ಲಿ ಎಲೆಗಳು ದೊಡ್ಡದಾಗಿ ಬೆಳೆಯುವ ಆಷಾಢ ಮಾಸದಲ್ಲಿ ಇದರ ಖಾದ್ಯ ಮಾಡಿ ಸೇವಿಸಿದರೆ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ. ಮರ ಕೆಸು, ಕಾಡುಗಡ್ಡೆ ( ತುಳುವಿನಲ್ಲಿ ಮರಚೇವು, ಕೊಂಕಣಿಯಲ್ಲಿ ರುಕಾಲುಮ್,ಮಲಯಾಳಂ ಮರಚೆಂಬು, ಮರಾಠಿ ಲಾಲ್ಖಂಡ್, ಸಂಸ್ಕೃತದಲ್ಲಿ ಲಕ್ಷ್ಮಣ ) ನೆಲ ಕೆಸುವಿನ ಜಾತಿಯದ್ದೇ. ಇದು ಮರಗಳನ್ನು  ಆಶ್ರಯಿಸಿ…

Read more
ಕೃಷಿ ಗಣತಿ 2022

ಕೃಷಿ ಗಣತಿ 2022 ನೇ ಇಸವಿಯಲ್ಲಿ ಇದೆ.

ಭಾರತ ಸರಕಾರವು  ಪ್ರತೀ 5 –ವರ್ಷಕ್ಕೊಮ್ಮೆ ಕೃಷಿ ಗಣತಿಯನ್ನು ಮಾಡುತ್ತಾ ಬಂದಿದೆ. ಈ ಹಿಂದೆ 2015-16 ರಲ್ಲಿ 10 ನೇ ಕೃಷಿ ಗಣತಿ ನಡೆದಿದ್ದು, ಈ ವರ್ಷ 2022-23 ರಲ್ಲಿ 11 ನೇ ಕೃಷಿ ಗಣತಿ ನಡೆಯಲಿದೆ.ಇದನ್ನು ಯಾಕೆ ಮಾಡುತ್ತಾರೆ, ಹೇಗೆ ಮಾಡಿದರೆ ಒಳ್ಳೆಯದು? ನಮ್ಮ ದೇಶದಲಿ ಇನ್ನೂ 50% ಕ್ಕಿಂತಲೂ ಹೆಚ್ಚಿನ ಜನ ಕೃಷಿಯನ್ನು  ಜೀವನೋಪಾಯಕ್ಕಾಗಿ ಅವಲಂಭಿಸಿದ್ದಾರೆ. ಹೀಗಿರುವಾಗ ಕೃಷಿ ಸಂಬಂಧಿತ ಯಾವುದೇ ಯೋಜನೆ ನೀತಿ ನಿಯಮಾವಳಿಗಳನ್ನು  ತಯಾರಿಸುವಾಗ ಈ ಗಣತಿ ಮಾರ್ಗದರ್ಶಿಯಾಗಲಿದೆ. ಈಗಾಗಲೇ ಗಣತಿಯ …

Read more
ರಸಗೊಬ್ಬರವನ್ನು ಮೀರಿಸುವ ಶಕ್ತಿ ಉಳ್ಳ ಸಾವಯವ ಗೊಬ್ಬರ – ಸಮುದ್ರ ಪಾಚಿ.

ರಸಗೊಬ್ಬರವನ್ನು ಮೀರಿಸುವ ಶಕ್ತಿ ಉಳ್ಳ ಸಾವಯವ ಗೊಬ್ಬರ – ಸಾಗರಪಾಚಿ.

ಭಾರತದ ಕೃಷಿ ವ್ಯವಸ್ಥೆಯನ್ನು  ಗೊಬ್ಬರದಲ್ಲಿ ಸ್ವಾವಲಂಭಿಯಾಗಿ ಮುನ್ನಡೆಸಲು ಸಧ್ಯೋಭವಿಷ್ಯದಲ್ಲಿ ಸಮುದ್ರ ಪಾಚಿ ಎಂಬ ಸಾಗರದ ನೀರಿನಲ್ಲಿ ಬೆಳೆಯುವ ಸಸ್ಯದ ಸಾವಯವ ಗೊಬ್ಬರ ಪ್ರವೇಶಿಸಲಿದೆ.  ರಸಗೊಬ್ಬರವನ್ನು ಮೀರಿಸುವ ಶಕ್ತಿ ಉಳ್ಳ ಈ ಗೊಬ್ಬರದಲ್ಲಿ ಬಹುಬಗೆಯ ಪೋಷಕಾಂಶಗಳಿವೆ. ಕಳಕೊಳ್ಳುತ್ತಿರುವ ಮಣ್ಣಿನ ಜೈವಿಕ ಗುಣಧರ್ಮವನ್ನು ಇದು ಮರಳಿ ನೀಡಲು ಶಕ್ತ ಎನ್ನುತ್ತದೆ ವಿಜ್ಞಾನ. ಇದನ್ನು ಮಾನವ ಬಳಕೆಯ ಔಷದೋಪಚಾರಕ್ಕೆ ಬಳಸಲಾಗುತ್ತದೆ. ಹಾಗೆಯೇ ಸಸ್ಯ ಪೋಷಕವಾಗಿಯೂ ಬಳಕೆ ಮಾಡಲಾಗುತ್ತದೆ. ಭವಿಷ್ಯದಲ್ಲಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಇದು ನಮ್ಮ ಬೆಳೆಗಳನ್ನು ಮೇಲೆತ್ತಲಿದೆ. ಸಮುದ್ರ ಪಾಚಿ, ಅಥವಾ…

Read more
ಚಾಲಿ ದರ ಸ್ವಲ್ಪ ಇಳಿಕೆ ಸಾಧ್ಯತೆ- ಕೆಂಪಡಿಕೆ ಮೆಲ್ಲಮೆಲ್ಲನೆ ಚೇತರಿಕೆ.

ಚಾಲಿ ದರ ಸ್ವಲ್ಪ ಇಳಿಕೆ ಸಾಧ್ಯತೆ- ಕೆಂಪಡಿಕೆ ಮೆಲ್ಲಮೆಲ್ಲನೆ ಚೇತರಿಕೆ.

ಚಾಲಿ ದರ ಸ್ವಲ್ಪ ಇಳಿಕೆ ಮಾಡಿಯಾದರೂ  ಬೆಳೆಗಾರರಿಂದ ಅಡಿಕೆ ಮಾರುಕಟ್ಟೆಗೆ ಬಿಡುವಂತೆ ಮಾಡುವ ಸಾದ್ಯತೆ ಇದೆ.   ಕರಾವಳಿಯಲ್ಲಿ ಅಡಿಕೆ ವ್ಯಾಪಾರಿಗಳಿಗೆ ಅಡಿಕೆ ಸಿಗುವುದಿಲ್ಲ ಎನ್ನುತ್ತಾರೆ. ಸಾಂಸ್ಥಿಕ  ಖರೀದಿದರಾರು ದಿನದ ಹೆಚ್ಚಿನ ಹೊತ್ತು ಸುಮ್ಮನೆ  ಕುಳಿತು  ಲೆಕ್ಕಪತ್ರ ನೋಡುವುದು, ಬೇಜಾರಾದರೆ ಮೊಬೈಲ್ ಸುದ್ದಿ ಓದುವುದು ಮಾಡುತ್ತಾ ಸಮಯಕಳೆಯುವ ಸ್ಥಿತಿ ಉಂಟಾಗಿದೆ. ಬೆಳೆಗಾರರು 500 ಆಗಿಯೇ ಆಗುತ್ತದೆ ಎಂದು  ಅಡಿಕೆ ಒಳಗಿಟ್ಟಿದ್ದಾರೆ. ಇನ್ನು ವ್ಯಾಪಾರಿ ತಂತ್ರಗಾರಿಕೆಯಿಂದ ಅಡಿಕೆ ಹೊರ ಬರುವಂತೆ ಮಾಡಬೇಕೇ ಹೊರತು ಬೇರೆ ದಾರಿ ಇಲ್ಲ. ವ್ಯಾಪಾರಿ ತಂತ್ರ…

Read more
ಅಡಿಕೆ ತೋಟದಲ್ಲಿ ಇರಲೇಬೇಕಾದ ಮೂಲಭೂತ ಅವಶ್ಯಕತೆಗಳು

ಅಡಿಕೆ ತೋಟದಲ್ಲಿ ಇರಲೇಬೇಕಾದ  ಮೂಲಭೂತ ಅವಶ್ಯಕತೆಗಳು. 

ಅಡಿಕೆ ತೋಟಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುವ ಪ್ರಮಾಣ ನೋಡಿದರೆ ಬಹುಷಃ ಜನ ಅನ್ನಕ್ಕಿಂತ ಹೆಚ್ಚು ಅಡಿಕೆ ತಿನ್ನುತ್ತಾರೆಯೋ ಅನ್ನಿಸುತ್ತದೆ. ಆದರೆ ಅಡಿಕೆ ತೋಟ ಹೆಚ್ಚಾದಷ್ಟು ಉತ್ಪಾದನೆ ಹೆಚ್ಚಾಗುವುದಿಲ್ಲ. ಕಾರಣ ಬಹುತೇಕ ಅಡಿಕೆ ತೋಟ ಮಾಡುವವರು ಮೂಲಭೂತ ಅವಶ್ಯಕತೆಯನ್ನು ಮಾಡಿಕೊಳ್ಳದೆ ತೋಟ ಮಾಡಿರುತ್ತಾರೆ. ಇದು ಬರೇ ಸಾವಿರಾರು ಮರಗಳ ತೋಟ  ಅಷ್ಟೇ. ಅಡಿಕೆ ಮರಗಳು  ಆರೋಗ್ಯವಾಗಿರಬೇಕಾದರೆ ಅದನ್ನು ಬೆಳೆಸಿದ ಜಾಗ ಸರಿ ಇರಬೇಕು. ಆಗ  ಮಾತ್ರ ನಿರ್ದಿಷ್ಟ  ವರ್ಷಕ್ಕೆ ಫಲಕೊಟ್ಟು ಇಳುವರಿ ಏಕಪ್ರಕಾರ ನೀಡುತ್ತಾ ಇರುತ್ತದೆ. ಮರಗಳ ಆರೋಗ್ಯ…

Read more
ಅಡಿಕೆ ಬೆಳೆಗಾರರನ್ನು ಬೆನ್ನತ್ತಿದೆ ಕೊಳೆರೋಗ

ಅಡಿಕೆ ಬೆಳೆಗಾರರನ್ನು ಬೆನ್ನತ್ತಿದೆ ಕೊಳೆರೋಗ – ಕಾರಣ ಏನು ಗೊತ್ತೇ?

ಕೊಳೆರೋಗ ಅಡಿಕೆ ಬೆಳೆಗೆ, ಕರಿಮೆಣಸು, ಕೊಕ್ಕೋ, ಹಾಗೆಯೇ ಇನ್ನಿತರ ಬೆಳೆಗಳಿಗೆ ಮಳೆಗಾಲದಲ್ಲಿ ಕಾಡುವ ಅತೀ ದೊಡ್ಡ ಸಮಸ್ಯೆಯಾಗಿದ್ದು, ಈ ರೋಗವು ಬರೇ ಬೆಳೆ ಮಾತ್ರವಲ್ಲದೆ ಮರವನ್ನೂ ನಿತ್ರಾಣಗೊಳಿಸುತ್ತದೆ. ರೋಗ ಹೆಚ್ಚಳಕ್ಕೆ ವಾತಾವರಣದ ಜೊತೆಗೆ ನಾವು ತೆಗೆದುಕೊಳ್ಳುವ ಮುನ್ನೆಚ್ಚರಿಕಾ ವಿಧಾನವೂ ಒಂದು ಕಾರಣವಾಗಿದೆ. ಈ ವರ್ಷ ಜುಲೈ ತಿಂಗಳಲ್ಲಿ ಬಂದ ಮಳೆಯ ಕಾರಣ ಹೆಚ್ಚಿನವರ ತೋಟದಲ್ಲಿ ಕೊಳೆ ರೋಗ ಪ್ರಾರಂಭವಾಗಿದೆ. ಅಡಿಕೆಗೆ ಕಾಯಿಗೆ ಕೊಳೆ ಬಂದು ಉದುರುವುದು, ಅದು  ಉಲ್ಬಣವಾದರೆ ಗೊನೆ ಬುಡದ ಮೃದು ಭಾಗದ ಮೂಲಕ  ಸುಳಿಗೆ…

Read more
ಆಷಾಢದಲ್ಲಿ (ಆಟಿ) ಬಾಳೆದಂಡು ಯಾವ ಉದ್ದೇಶಕ್ಕೆ ತಪ್ಪದೆ ತಿನ್ನಬೇಕು

ಆಷಾಢದಲ್ಲಿ (ಆಟಿ) ಇದನ್ನು ಯಾವ ಉದ್ದೇಶಕ್ಕೆ ತಪ್ಪದೆ ತಿನ್ನಬೇಕು?

ಆಷಾಢ ಮಾಸದಲ್ಲಿ ಕೆಲವು ಆಹಾರ ವಸ್ತುಗಳನ್ನು ತಪ್ಪದೆ ತಿನ್ನಬೇಕು, ಇದರಲ್ಲಿ ಸಾಕಷ್ಟು  ಆರೋಗ್ಯ ಗುಣಗಳಿವೆ ಎಂಬುದೇ ನಮ್ಮ ಹಿರಿಯರು ಹೇಳಿರುವ ಉದ್ದೇಶ. ಇದರಲ್ಲಿ ಬಾಳೆ ದಂಡು ಒಂದು. ಬಾಳೆ ದಂಡನ್ನು ಬೇರೆ ಬೇರೆ ಅಡುಗೆಗಳ ಮೂಲಕ ಬಳಸಬಹುದಾಗಿದ್ದು , ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಈ ದಂಡಿನಲ್ಲಿ ಹಲವಾರು ಪೋಷಕಾಂಶಗಳಿರುವ ಕಾರಣ  ದೇಹಕ್ಕೆ ಶಕ್ತಿ ಕೊಡುತ್ತದೆ. ಆಷಾಢ ಮಾಸದಲ್ಲಿ  ಮಳೆ ಹೆಚ್ಚು. ಹಿಂದೆಲ್ಲಾ ಈ ತಿಂಗಳಲ್ಲಿ  ವಾರಗಟ್ಟಲೆ ನಿರಂತರ ಮಳೆ ಬರುವುದು, ಮನೆಯಿಂದ ಹೊರಗೆ ತಲೆ ಹಾಕುವುದಕ್ಕೂ…

Read more
ಅಡಿಕೆ ಮಾರುಕಟ್ಟೆ ಸ್ಥಿತಿ ಮುಂದೆ ಏನಾಗಬಹುದು? ಹೊಸ ಚಾಲಿ 50000 ನಿರೀಕ್ಷೆ.

ಅಡಿಕೆ ಮಾರುಕಟ್ಟೆ ಸ್ಥಿತಿ ಮುಂದೆ ಏನಾಗಬಹುದು? ಹೊಸ ಚಾಲಿ 50000 ನಿರೀಕ್ಷೆ.

ಅಡಿಕೆ ಧಾರಣೆ ಏರಿಕೆಗೆ ಮುಹೂರ್ತ ಕೂಡಿ ಬಂದಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹೊಸ ಹುರುಪು ಪ್ರಾರಂಭವಾಗಿದೆ. ಈ ವರ್ಷ ಮತ್ತೆ ದರ ಉತ್ತುಂಗಕ್ಕೆ ಏರುವ ಸಾಧ್ಯತೆ ಇದೆ ಎಂಬುದಾಗಿ ಕೆಲವು ವ್ಯಾಪಾರಿಗಳು ಹೇಳುತ್ತಿದ್ದಾರೆ. ಈಗಿನ ಮಾರುಕಟ್ಟೆ  ದರ ಏರಿಕೆ ಗಮನಿಸಿದರೆ ಇನ್ನೂ ದರ ಏರಿಕೆಯಾಗುತ್ತಲೇ ಇರಬಹುದು ಎಂದೆನ್ನಿಸುತ್ತದೆ. ಇಂದಿನ ಅಡಿಕೆ ದಾರಣೆಯ ಕಥೆ ಕೇಳಬೇಕು. ಹಳೆ ಅಡಿಕೆ ಖಾಸಗಿ ಮಾರುಕಟ್ಟೆಯಲ್ಲಿ 57000 ತನಕ ಮುಟ್ಟಿದೆ. ಬೆಳಗ್ಗೆ ಇದ್ದ ದರಕ್ಕಿಂತ  ಸಂಜೆ ಮತ್ತೆ 500 ರೂ. ಹೆಚ್ಚು. ಹಾಗೆಯೇ ಹೊಸ…

Read more
error: Content is protected !!