ಅಡಿಕೆ ಮಾರಾಟ

ಅಡಿಕೆಗೆ ದರ ಎರಿಕೆಯಾಗುತ್ತಿದೆ- ಬೆಳೆಗಾರರು ಎಚ್ಚರವಹಿಸಿ. 30-11- 2021ರಂದು ಧಾರಣೆ.

ಇಷ್ಟೊಂದು ಅಡಿಕೆ ಉತ್ಪಾದನೆ ಇದೆ. ಬೆಳೆ ಕಡಿಮೆ ಇದ್ದರೂ ಹೊಸ ತೋಟಗಳು ಹೆಚ್ಚಾಗಿ ಉತ್ಪಾದನೆ ಕಡಿಮೆ ಆಗಿಲ್ಲ. ಒಂದೇ ಒಂದು ಎಂದರೆ  ಅಡಿಕೆ ಆಮದು ಇಲ್ಲ ಎಂಬುದು. ಈ ಕಾರಣಕ್ಕೆ  ಅಡಿಕೆಗೆ ಭಾರೀ ಬೇಡಿಕೆ ಉಂಟಾಗಿದೆ. ನವೆಂಬರ್ ತಿಂಗಳು ಅಡಿಕೆ ಬೆಳೆಗಾರರಿಗೆ ಎಲ್ಲೂ ನಿರಾಸೆ ಕೊಡಲಿಲ್ಲ. ಚಾಲಿ ಅಡಿಕೆ, ಕೆಂಪಡಿಕೆ ಎರಡೂ ಏರಿಕೆಯ ಯಲ್ಲೇ ಮುಂದುವರಿದಿದೆ. ಕರಿಮೆಣಸು ಮೊದಲು ಏರಿಕೆಯ ಗತಿಯಲ್ಲಿ ಇತ್ತಾದರೂ ನಂತರ ಇಳಿಕೆ ಹಾದಿ ಹಿಡಿಯಿತು. ಕೊಬ್ಬರಿ ಸಹ ಒಮ್ಮೆ ಏರಿಕೆ ಆಗಿ ಸ್ವಲ್ಪ…

Read more
ಬಟರ್ ಫ್ರೂಟ್ ಸ್ಥಳೀಯ

ಬಟರ್ ಫ್ರೂಟ್ ಹೇಗೆ ಬೆಳೆದರೆ ಉತ್ತಮ ಇಳುವರಿ ಪಡೆಯಬಹುದು?– ಇಲ್ಲಿದೆ ಮಾಹಿತಿ.

ಒಂದು ಬೆಳೆಗೆ ಹೆಚ್ಚಿನ ಬೆಲೆ, ಬೇಡಿಕೆ ಇದೆ ಎಂದಾಕ್ಷಣ ಎಲ್ಲರೂ ಆ ಬೆಳೆ ಬೆಳೆಸಬೇಕು ಎಂದು ಉತ್ಸುಕರಾಗುತ್ತಾರೆ. ಅದಕ್ಕನುಗುಣವಾಗಿ ಪ್ರಚಾರಗಳೂ ಜನರನ್ನು  ಗೊಂದಲಕ್ಕೀಡು ಮಾಡುತ್ತವೆ. ಸಸ್ಯೋತ್ಪಾದಕರೂ ಹೆಚ್ಚಾಗುತ್ತಾರೆ. ಎಲ್ಲವೂ ಎಷ್ಟು ಉತ್ತಮವೋ ಅಷ್ಟೇ ಅಪಾಯಕಾರಿಯೂ ಅಗಿರುತ್ತದೆ. ಈ ಸಂದರ್ಭದಲ್ಲಿ ರೈತರಿಗೆ ಬಟರ್ ಫ್ರೂಟ್ ಹೇಗೆ ಬೆಳೆದರೆ ಉತ್ತಮ ಇಳುವರಿ ಪಡೆಯಬಹುದು ಎಂಬ ಮಾರ್ಗದರ್ಶನ ಅತ್ಯಗತ್ಯವಾಗಿ ಬೇಕಾಗುತ್ತದೆ. ಯಾವುದೇ ಬೆಳೆ ಇರಲಿ. ಅದನ್ನು ಬೆಳೆಸುವ ಮುಂಚೆ ಅದರ ಪೂರ್ವಾಪರ ವನ್ನು ಕೂಲಂಕುಶವಾಗಿ ತಿಳಿದುಕೊಳ್ಳಬೇಕು. ಆ ಬೆಳೆಯ ಬಗ್ಗೆ ಸ್ಥಳೀಯವಾಗಿ…

Read more
ಬೆಂಗಳೂರು ಸ್ಥಳೀಯ ಬೆಣ್ಣೆ ಹಣ್ಣು

ಭಾರೀ ಮಹತ್ವ ಪಡೆಯುತ್ತಿರುವ ಬೆಣ್ಣೆ ಹಣ್ಣು ಬೇಸಾಯ.

ಒಂದು ಕಾಲದಲ್ಲಿ ವೆನಿಲ್ಲಾ ಎಂಬ ಬೆಳೆ ಎಲ್ಲರ ಗಮನಸೆಳಿದಿತ್ತು. ಅದು ಹಾಗೆಯೇ ಅಳಿಸಿಹೋಯಿತು. ಈಗ ಮತ್ತೊಂದು ಹಣ್ಣಿನ ಬೆಳೆ ಬಹುತೇಕ ಎಲ್ಲರ ಗಮನ ಸೆಳೆಯಲಾರಂಭಿಸಿದೆ. ಅದುವೇ ಕಿಲೋಗೆ 200 ರೂ. ತನಕ ಬೆಲೆ ಇರುವ ಬಟರ್ ಫ್ರೂಟ್ ಹಣ್ಣು. ಇದು ಮರ ಬೆಳೆ. ಮರಕ್ಕೆ 2-3 ಕ್ವಿಂಟಾಲಿಗೂ ಹೆಚ್ಚು ಇಳುವರಿ ಕೊಡಬಲ್ಲ ಜಗತ್ತಿನಾದ್ಯಂತ ಬೇಡಿಕೆ ಇರುವ ಹಣ್ಣು ಇದು. ಬೆಣ್ಣೆ ಹಣ್ಣು (AVOCADO OR BUTTER FRUIT) ಒಂದು ಮೈನರ್ ಫ್ರೂಟ್ ಆಗಿ ನಮ್ಮ ಸುತ್ತಮುತ್ತ ಶತಮಾನಗಳಿಂದಲೂ…

Read more
ಬೂದಿಯ ಮೂಲಕ ಕೀಟ ನಿಯಂತ್ರಣ

ಸಾವಯವ ಕೀಟ –ರೋಗ-ನಿಯಂತ್ರಣ ವಿಧಾನ.

ಸರ್ವ ರೋಗಕ್ಕೆ ಬೂದಿ ಮದ್ದು ಎಂಬುದನ್ನು ಎಲ್ಲರೂ ಕೇಳಿರಬಹುದು. ಬೂದಿ ಎಂದರೆ ಅದು ಮರವನ್ನು ಸುಟ್ಟಾಗ ಸಿಗುವ ವಸ್ತು, ಇದು ಕ್ಷಾರೀಯ. ಇದನ್ನು ಬೆಳೆಗಳ  ಮೇಲೆ ಚೆಲ್ಲಿದಾಗ ಅದು ಒಂದು ಪೊಟ್ಯಾಶಿಯಂ ಸತ್ವದ ಪೋಷಕವಾಗಿಯೂ ,  ಕೀಟ ರೋಗ ನಿಯಂತ್ರಕವಾಗಿಯೂ ಕೆಲಸ ಮಾಡುತ್ತದೆ. ಇದನ್ನು ಬಹುಸ್ತರದ ಸಾವಯವ ಕೀಟ –ರೋಗ-ನಿಯಂತ್ರ ಕ ಎಂಬುದಾಗಿ ಹಿರಿಯರು ಹೇಳುತ್ತಾ ಬಂದಿದ್ದಾರೆ. ದುರದೃಷ್ಟವೆಂದರೆ ಈಗ  ಅಡುಗೆ ಒಲೆಗೆ ಗ್ಯಾಸ್  ಬಂದಿದೆ. ಬಿಸಿ ನೀರ ಸ್ನಾನಕ್ಕೆ ಸೋಲಾರ್ ಬಂದಿದೆ. ಕಟ್ಟಿಗೆ ಸುಟ್ಟ ಬೂದಿ…

Read more
ರಾಸಿ ಅಡಿಕೆ ರಾಶಿ

ಈಗ ಚಾಲಿ – ಮುಂದೆ ಕೆಂಪು – ಅಡಿಕೆ ಮಾರುಕಟ್ಟೆ ಸ್ಥಿತಿ. 26/11/2021 ಶುಕ್ರವಾರದ ಧಾರಣೆ.

ಚಾಲಿ ಅಡಿಕೆಗೆ ಭಾರೀ ಬೇಡಿಕೆ ಉಂಟಾಗಿದ್ದು, ಇದರ ಮುನ್ಸೂಚನೆ ಶಿರಸಿ, ಸಿದ್ದಾಪುರ, ಸಾಗರ ಮಾರುಕಟ್ಟೆಯ ಮೂಲಕ ಕಾಣಿಸುತ್ತಿದೆ. ಇಲ್ಲಿನ ಅಡಿಕೆಗೆ ದರ ಹೆಚ್ಚಳವಾದರೆ ಸಧ್ಯವೇ ಉಳಿದೆದೆ ದರ ಏರುವುದು ಹಿಂದಿನಿಂದಲೂ ಬಂದ ವಾಡಿಕೆ. ಇಂದು ಶಿವಮೊಗ್ಗ, ಉತ್ತರಕನ್ನಡದ ಮಾರುಕಟ್ಟೆಯಲ್ಲಿ ಚಾಲಿ ಕ್ವಿಂಟಾಲಿಗೆ  51000 ರೂ.ತಲುಪಿದೆ. ಕರಾವಳಿಯಲ್ಲೂ ಸಧ್ಯವೇ 53,000 ದಾಟುವ ಮುನ್ಸೂಚನೆ ಕಾಣಿಸುತ್ತಿದೆ. ಮಾರುಕಟ್ಟೆಯಲ್ಲಿ ಚಾಲಿ ಅಡಿಕೆ ಕೊರತೆ ಇದೆ. ಈ ವರ್ಷ ದರ ಏರಿಕೆಯಲ್ಲೇ ಇದ್ದ ಕಾರಣ ಹಾಗೆಯೇ ಅನಿಶ್ಚಿತತೆ ವಾತಾವರಣ ಇದ್ದ ಕಾರಣ  ಬಹುತೇಕ…

Read more
ಮಾವಿನ ಮರ ಕಾಂಡ ಕೊರಕಕ್ಕೆ ಬಲಿ

ಮರಮಟ್ಟುಗಳ ಕೊಲೆಗಾರ ಕೀಟ. ಇದು ನಿಮ್ಮಲ್ಲೂ ಇದೆ.

ನಾವೆಲ್ಲಾ ಮಾವು, ಹಲಸು, ರಾಂಬುಟಾನ್, ಬಟರ್ ಫ್ರೂಟ್, ಲವಂಗ, ಜಾಯಿ ಕಾಯಿ ಹೀಗೆಲ್ಲಾ ಹಣ್ಣಿನ, ಮತ್ತು ಸಾಂಬಾರ ಮರಗಳನ್ನು ಬೆಳೆಸುತ್ತೇವೆ. ಕೆಲವೊಮ್ಮೆ ಈ ಸಸಿಗಳ/ ಮರಗಳ ಗೆಲ್ಲುಗಳು ಅಥವಾ ಮರವೇ  ಕಾಣು ಕಾಣುತ್ತಿದ್ದಂತೆ ಒಣಗಿ ಸಾಯುತ್ತವೆ. ಇದನ್ನು ಕೆಲವರು ಯಾವುದೋ ರೋಗ ಎಂದು ಭಾವಿಸುತ್ತಾರೆ. ಇದು ರೋಗ ಅಲ್ಲ. ಇದೊಂದು ಕೀಟ. ಈ ಕೀಟಕ್ಕೆ ಮರಮಟ್ಟುಗಳ ಕೊಲೆಗಾರ ಕೀಟ ಎಂದು ಕರೆಯುತ್ತಾರೆ. ಒಮ್ಮೆ ನಿಮ್ಮ   ಹೊಲಕ್ಕೆ ಪ್ರವೇಶವಾದರೆ ಅದಕ್ಕೆ ಸೂಕ್ತ ನಿರ್ವಹಣೆ ಅಥವಾ ಅದರ ಪರಭಕ್ಷಕಗಳು…

Read more
ಕರಿಮೆಣಸು ಉತ್ತಮ ಕ್ವಾಲಿಟಿ

ರೂ. 615 ದಾಟಿದ ಕರಿಮೆಣಸು ಧಾರಣೆ- ಶಿರಸಿಯ ದಾಖಲೆ.

ಕರಿಮೆಣಸು ಧಾರಣೆ ಕಳೆದ ಕೆಲವು ವರ್ಷಗಳಿಂದ ನೆಲಕಚ್ಚಿತ್ತು. ಅಡಿಕೆಯ ಮಿಶ್ರ ಬೆಳೆಯಾಗಿದ್ದರೂ ಸಹ ಅಡಿಕೆಗಿಂತ ಕಡಿಮೆ ದರದಲ್ಲಿ ಇತ್ತು. ಈ ವರ್ಷ ಅಕ್ಟೋಬರ್ ತಿಂಗಳು ಇದಕ್ಕೆ ಅಂಟಿದ ಗ್ರಹಣ ಬಿಡುಗಡೆಯಾದಂತಾಗಿದೆ. ಮೆಣಸಿನ ಬೆಲೆ ಬಹುಷಃ ಮುಂದಿನ ವರ್ಷಕ್ಕೆ 800 ಆದರೂ ಅಚ್ಚರಿ ಇಲ್ಲ ಎಂಬ ವರದಿಗಳಿವೆ. ದಿನಾಂಕ 24-11-2021 ರ ಬುಧವಾರ  ಶಿರಸಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ  ಕರಿಮೆಣಸಿನ ಬೆಲೆ 615.99 ಗರಿಷ್ಟ ದರ ದಾಖಲಾಗಿದೆ.ಉಳಿದೆಡೆ ಏರಿಕೆ ಆಗಿಲ್ಲ. ಪ್ರಪಂಚದ ಎಲ್ಲಾ ಮೆಣಸು ಬೆಳೆಯುವ ದೇಶಗಳಲ್ಲೂ ಉತ್ಪಾದನೆ…

Read more
ಆಡಿಕೆ- ರಾಶೀ ಕೆಂಪು

ಅಡಿಕೆ, ಕರಿಮೆಣಸು, ಕೊಬ್ಬರಿ, ರಬ್ಬರ್ ದರ ಏರಿಕೆ-ದಿನಾಂಕ:23-11-2021.

ಕಳೆದ ವಾರದಲ್ಲಿಯೂ ಅಡಿಕೆ ಧಾರಣೆ ತುಸು ಏರಿಕೆ ಕಂಡಿತ್ತು. ಈಗ ಮತ್ತೆ ಸ್ವಲ್ಪ ಏರಿಕೆ ಕಂಡಿದೆ. ಕೊಬ್ಬರಿ ಧಾರಣೆ  ಜನವರಿ ಸುಮಾರಿಗೆ 18,000 ದಾಟಬಹುದು ಎಂಬ ಲೆಕ್ಕಾಚಾರ ಇತ್ತಾದರೂ ಅದು ನವೆಂಬರ್ ನಲ್ಲಿಯೇ ಆಗಿದೆ. ರಬ್ಬರ್ ಸಹ ಏರಿಕೆಯಾಗುತ್ತಿದೆ. ಕಳೆದ ವಾರ ಹಿಮ್ಮುಖವಾಗಿದ್ದ ಕರಿಮೆಣಸಿನ ದರ ಈ ವಾರ ಮತ್ತೆ ಏರಿಕೆಯತ್ತ  ಸಾಗಿದೆ. ದಿನಾಂಕ 23-11-2021 ನೇ ಮಂಗಳವಾರ ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಪ್ರಮುಖ ಕೃಷಿ ಉತ್ಪನ್ನಗಳ ಧಾರಣೆ ಹೀಗಿದೆ. ಅಡಿಕೆ ಆಮದು ಆಗುತ್ತಿಲ್ಲ. ಪರಿಸ್ಥಿತಿ ಅನುಕೂಲಕರವಾಗಿಯೇ…

Read more
ಕೀಟ-ರೋಗನಾಶಕ ಸಿಂಪರಣೆ

ಕೀಟನಾಶಕಗಳು ಮೈಗೆ ಕೈಗೆ ತಾಗಿದರೆ ಏನು ಮಾಡಬೇಕು?

ಬೆಳೆ ರಕ್ಷಣೆಯಲ್ಲಿ ರೈತರು ಕೀಟನಾಶಕಗಳನ್ನು ಬಳಸಿದಾಗ ಕೆಲವೊಮ್ಮೆ ಅಪ್ಪಿ ತಪ್ಪಿ ಅದು ಚರ್ಮ, ಕಣ್ಣು, ಬಾಯಿ ಮುಂತಾದ ಭಾಗಗಳಿಗೆ ತಾಗುತ್ತದೆ. ಅದರ ವಾಸನೆ ಉಸಿರಾಟದ ಮೂಲಕ ದೇಹದ ಒಳಗೆ ಸೇರುತ್ತದೆ.  ಹೀಗಾದಾಗ ಅದನ್ನು ನಿರ್ಲಕ್ಷ್ಯ ಮಾಡಬಾರದು.ಪ್ರಥಮ ಚಿಕಿತ್ಸೆ ಅಥವಾ ಹೆಚ್ಚು ತೊಂದರೆಗಳಿದ್ದರೆ ತಜ್ಞ ವೈದ್ಯರಲ್ಲಿಗೆ ಹೋಗಿ ಚಿಕಿತ್ಸೆ ಮಾಡಿಸಿಕೊಳ್ಳಬೇಕು. ಇದು ನಮ್ಮ ದೇಹವನ್ನು ನಿಧಾನ ವಿಷಕ್ಕೆ ಬಲಿಯಾಗುವಂತೆ ಮಾಡುತ್ತದೆ.  ರೈತರ ಮತ್ತು ಕೃಷಿಕಾರ್ಮಿಕರು ಕೀಟನಾಶಕಗಳನ್ನು ಮತ್ತು ಸಿಂಪರಣೆ ಯಂತ್ರಗಳನ್ನು ಸಮರ್ಪಕವಾಗಿ ಉಪಯೋಗ ಮಾಡಿದಾಗ ಮಾತ್ರ ಅದು ಸುರಕ್ಷಿತ….

Read more
ಎಲೆ ಹಳದಿಯಾಗಿ ಅಡಿಕೆ ಮರ ಸಾಯುವ ಕ್ರಮ

ಅಡಿಕೆ ಮರಗಳು ಸಾಯುವುದಕ್ಕೆ ಪ್ರಮುಖ ಕಾರಣ ಮತ್ತು ಪರಿಹಾರ.

ಬಹಳಷ್ಟು ಅಡಿಕೆ ಬೆಳೆಗಾರರ ತೋಟದಲ್ಲಿ ಫಲಕೊಡುತ್ತಿರುವ ಸಸಿ/ ಮರಗಳು ಸಾಯುತ್ತವೆ. ರೈತರು ಇಂತಹ ಸಮಸ್ಯೆ ಆದಾಗ ಫೇಸ್ ಬುಕ್ ನಲ್ಲಿ ವಿಷಯ ಹಾಕಿ ಪರಿಹಾರ ಅಪೇಕ್ಷಿಸುತ್ತಾರೆ. ಅಲ್ಲಿ ಒಂದಶ್ಟು ಕಮೆಂಟ್ ಗಳು ಬರುತ್ತವೆ. ಅವರಿಗೆ ಸರಿಕಂಡದ್ದನ್ನು ಸ್ವೀಕರಿಸುತ್ತಾರೆ. ವಾಸ್ತವವಾಗಿ ಅಡಿಕೆ ಸಸಿಗಳು ಸಾಯುವುದಕ್ಕೆ ಕಾರಣ ಎರಡು. ಯಾವುದೇ ಸಸಿ ಸಾಯಬೇಕಾದರೆ ಅದರ ಬೇರಿಗೆ ತೊಂದರೆ ಆಗಿರಬೇಕು ಆಥವಾ ಸಸ್ಯದ ಮೇಲಿನ  ಭಾಗಕ್ಕೆ ಯಾವುದಾದರೂ ರೋಗ ತಗಲಿ ಅದರಿಂದಾಗಿ ಸಾಯಬೇಕು. ಇವೆರಡರಲ್ಲಿ ಯಾವುದು ಆಗಿದೆ ಎಂದು ಪರಿಶೀಲಿಸಿದರೆ ಅದಕ್ಕೆ…

Read more
error: Content is protected !!