ಅಡಿಕೆ ಹರಾಜು ಪ್ರದೇಶ

ಕೆಂಪಡಿಕೆ- ಕರಿಮೆಣಸು ಏರಿಕೆ:ದಿನಾಂಕ:21-10-2021 ರ ಧಾರಣೆ.

ಕೆಲವು ಮೂಲಗಳ ಮಾಹಿತಿಯಂತೆ ಕೆಂಪಡಿಕೆ -ಕರಿಮೆಣಸು ದರ ಸ್ವಲ್ಪ ಏರಿಕೆ ಆಗಬಹುದು ಎಂಬ ಹಿಂದಿನ ಸುದ್ದಿ ಪ್ರಕಟಣೆ ನಿಜವಾಗುತ್ತಿದೆ. ಆದರೆ ಇದು ಇನ್ನೂ ಭಾರೀ ಮೇಲೆ ಹೋಗಬಹುದು ಎಂಬ ಯಾವ ಮುನ್ಸೂಚನೆಯೂ ಇಲ್ಲ. ಸ್ವಲ್ಪ ಏರಿಕೆ ಸ್ವಲ್ಪ ಇಳಿಕೆ ಆಗುತ್ತಾ 2-3 ತಿಂಗಳ ತನಕವು ಮುಂದುವರಿಯುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಚಾಲಿ ಅಡಿಕೆ ಧಾರಣೆ ಏರಿಕೆಯೂ ಆಗದೆ ಇಳಿಕೆಯೂ ಅಗದೆ ಮುಂದುವರಿದಿದೆ. ಖಾಸಗಿಯವರ ಖರೀದಿ ಭರ ಸ್ವಲ್ಪ ಕುಗ್ಗಿದೆ. ಕ್ಯಾಂಪ್ಕೋ ಗೆ ಅಡಿಕೆ ಬರುವಿಕೆ ಕಡಿಮೆ ಇದೆ….

Read more
ವಿಯೆಟ್ನಾಂ ಸೂಪರ್ ಅರ್ಲಿ ತಳಿಯ ಕಾಯಿ ಹಲಸು ಮತ್ತು ಹಣ್ಣು

1 ವರ್ಷಕ್ಕೆ ಕಾಯಿ ಬಿಡುವ ವಿಶೇಷ ಹಲಸು ಇದು!

ಹಲಸಿನಲ್ಲಿ 1 ವರ್ಷಕ್ಕೆ ಕಾಯಿ ಬರುತ್ತದೆ ಎಂದರೆ ಯಾರಾದರೂ ನಂಬುವುದುಂಟೇ? ಬಹುಷಃ ಹಳೆ ತಲೆಗಳು ಇದನ್ನು ನಂಬಲಿಕ್ಕಿಲ್ಲ. ಈಗ ಹಲಸಿನಲ್ಲಿ ಕಸಿ ಮಾಡಿದ ಸಸಿಗಳನ್ನು ಉತ್ಪಾದಿಸುವ ಕಾರಣದಿಂದ ಸಾಂಪ್ರದಾಯಿಕವಾಗಿ ನಾವು 7-8 ವರ್ಷ ಕಾದು ಇಳುವರಿ ಪಡೆಯುವಂತಹ ಪ್ರಮೇಯ ಇಲ್ಲ. ನೆಟ್ಟು ಗಿಡದ ಬೆಳೆವಣಿಗೆ ಹೊಂದಿ 3-4 ವರ್ಷಕ್ಕೆ ಫಲ ಕೊಡಲು ಪ್ರಾರಂಭವಾಗುತ್ತದೆ. ಆದರೆ ಇದೊಂದು ತಳಿ ಮಾತ್ರ ಕಸಿ ಗಿಡ ನೆಟ್ಟು 1 ವರ್ಷಕ್ಕೆ ಕಾಯಿ ಬಿಡುತ್ತದೆ. ವಿಯೆಟ್ನಾಂ ಸೂಪರ್ ಅರ್ಲಿ (Vietnam super early)…

Read more
ಮಾರುಕಟ್ಟೆ ಪ್ರಾಂಗಣದಲ್ಲಿ ಅಡಿಕೆ ಚೀಲಕ್ಕೆ ತುಂಬುವುದು

ಅಡಿಕೆ ಮಾರುಕಟ್ಟೆ ಧಾರಣೆ ದಿನಾಂಕ 18-10-2021-ಕೆಂಪು ಸ್ವಲ್ಪ ಏರಿಕೆ.

ದಿನಾಂಕ  18-10-2021 ರ ಸೋಮವಾರ ರಾಜ್ಯದ ಬಹುತೇಕ ಎಲ್ಲಾ ಮಾರುಕಟ್ಟೆಯಲ್ಲೂ ಅಡಿಕೆ ವ್ಯವಹಾರ ನಡೆದಿದೆ. ಹೆಚ್ಚು ಏರಿಕೆ ಆಗದೆ,ಇಳಿಕೆಯೂ ಆಗದೆ ಸ್ಥಿರತೆಯನ್ನು ಕಾಯ್ದುಕೊಡಿದೆ. ಕರಾವಳಿಯಲ್ಲಿ ಖಾಸಗಿ ವ್ಯಾಪಾರಿಗಳು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ತಾವು ಖರೀದಿಸಿದ ಮಾಲನ್ನು ಸಹಕಾರಿ ಮಾರುಕಟ್ಟೆಗೆ  ಹಾಕಿ ತಕ್ಷಣ ನಗದೀಕರಣದಲ್ಲಿದ್ದಾರೆ. ಕ್ಯಾಂಪ್ಕೋ ತನ್ನ ಗಟ್ಟಿ ನಿಲುವಿನ ಮೂಲಕ ಬೆಲೆ ಕುಸಿಯಲು ಬಿಟ್ಟಿಲ್ಲ ಎನ್ನಬಹುದು. ಚಾಲಿ ಅಡಿಕೆಗೆ ಬೇಡಿಕೆ ಇದೆ. ಅಸೇ ರೀತಿಯಲ್ಲೂ ಸಿಪ್ಪೆ ಗೋಟು ಬೇಡಿಕೆ ಕಂಡು ಬರುತ್ತಿದೆ. ಚಾಲಿಯ ಬೇಡಿಕೆ ಕೆಲವೇ ಸಮಯದಲ್ಲಿ…

Read more
ಕೊಡಬೇಕಾದ ಪೋಷಕಾಂಶಗಳನ್ನು ಪೂರೈಸಿದಾಗ ಇಂಥಃ ಇಳುವರಿ ಸಾಧ್ಯ.

ಅಕ್ಟೋಬರ್ ತಿಂಗಳಲ್ಲಿ ಅಡಿಕೆ ,ತೆಂಗು ಬೆಳೆಗೆ ಕೊಡಬೇಕಾದ ಪೋಷಕಾಂಶಗಳು.

ತೋಟಗಾರಿಕಾ ಬೆಳೆಗಳಾದ ಅಡಿಕೆ, ತೆಂಗು ಬೆಳೆಗಳಿಗೆ ಕನಿಷ್ಟ ವರ್ಷದಲ್ಲಿ 3-4  ಕಂತುಗಳಲ್ಲಿ ಗೊಬ್ಬರಗಳನ್ನು ಕೊಡಬೇಕು. ಅದು ರಾಸಾಯನಿಕವೇ ಇರಲಿ, ಸಾವಯವವೇ ಇರಲಿ, ಬೆಳೆಗಳ  ಹಸಿವಿಗೆ ಅನುಗುಣವಾಗಿ ಜೂನ್, ಅಕ್ಟೋಬರ್, ಜನವರಿ ಮತ್ತು ಎಪ್ರೀಲ್ ನಲ್ಲಿ ಪೋಷಕಾಂಶಗಳನ್ನು ಕೊಡುವುದು ತುಂಬಾ ಪರಿಣಾಮಕಾರಿ. ಅಡಿಕೆ ,ತೆಂಗಿನ ಬೆಳೆಗಳಿಗೆ ಸಾಮಾನ್ಯವಾಗಿ ಮೊದಲ ಕಂತು ಗೊಬ್ಬರವನ್ನು ಮಳೆಗಾಲ ಪ್ರಾರಂಭದ ಸಮಯದಲ್ಲಿ ಕೊಡುವುದು ವಾಡಿಕೆ. ನಂತರದ ಕಂತನ್ನು ಮಳೆ ಅವಲಂಭಿಸಿ ಅಕ್ಟೋಬರ್ ತಿಂಗಳ ಒಳಗೆ ಕೊಡಬೇಕು.  ಅಡಿಕೆಗೆ ಶಿಫಾರಿತ ಪ್ರಮಾಣವಾದ 100:40:120  ಅನ್ನು ಸರಿಯಾಗಿ…

Read more
ಗೋಬರ್ ಗ್ಯಾಸ್ ಡ್ರಮ್

ಗೋಬರ್ ಗ್ಯಾಸ್ ಇರುವವರು ಪ್ರಾಮಾಣಿಕರು ಮತ್ತು ಸಜ್ಜನರು.

ಗೋಬರ್ ಗ್ಯಾಸ್ ಹೊಂದಿರುವ  ಮನೆಯವರು ಸ್ವಾವಲಂಬಿ  ಬದುಕಿನಲ್ಲಿ ವಿಶ್ವಾಸ ಇಟ್ಟುಕೊಂಡವರು. ತಾವು ಬದುಕುವ ಜೊತೆಗೆ ಮನುಷ್ಯರನ್ನೇ ನಂಬಿ ಬದುಕುವ ಜಾನುವಾರುಗಳಲ್ಲಿ ಪ್ರೀತಿ ಹೊಂದಿದವರು. ಮನುಷ್ಯ ಸಾಕಿದರೆ ಮಾತ್ರ ಜಾನುವಾರುಗಳು ಉಳಿಯುತ್ತವೆ.  ಮನುಷ್ಯನಿಗೆ ಉಪಕಾರ ಮಾಡುತ್ತಾ ತನ್ನ  ಜೀವನ ಸವೆಸುವ ಈ ಜೀವಿಯ  ಉಳಿವಿಗೆ ಗೋಬರ್ ಗ್ಯಾಸ್ ಹೊಂದಿದವರ ಕೊಡುಗೆ ಅಪಾರ. ಅದೇ ಕಾರಣಕ್ಕೆ ಅವರು ಪ್ರಾಮಾಣಿಕರು. ಸಜ್ಜನರು. ಈ ಮಾತನ್ನು ಹೇಳಿದವರು ಮಂಗಳೂರಿನ  ಕೇಂದ್ರ ಮಾರುಕಟ್ಟೆಯ ಒಂದು ಬದಿಯಲ್ಲಿ ( ಸೌರಾಷ್ಟ್ರ  ಕ್ಲೋಥ್ ಸ್ಟೋರ್‍ ಪಕ್ಕ) ಒಬ್ಬರು…

Read more
ಕೆಂಫು ಅಡಿಕೆ 11

16/17-10-2021 ಶನಿವಾರ ಮತ್ತು ಭಾನುವಾರದ ಅಡಿಕೆ ಧಾರಣೆ.

ಶನಿವಾರ 16/17-10-2021 ವಿಜಯದಶಮಿ ಹಬ್ಬದ  ಮರುದಿನದ ಮಾರುಕಟ್ಟೆ ಹೆಸರಿಗೆ ಮಾತ್ರ ಎನ್ನಬಹುದು. ಈ ದಿನ ಅಡಿಕೆ ತರುವವರು ತುಂಬಾ ಕಡಿಮೆ. ಬಂರುವ ಅಡಿಕೆಗೆ ಟೆಂಡರ್ ನಡೆಯುತ್ತದೆ. ಅಂತಹ ಯಾವ ದರ ವ್ಯತ್ಯಾಸಗಳು ಈ ದಿನ ಆಗುವುದು ಕಡಿಮೆ. ಭಾನುವಾರ ತೀರ್ಥಹಳ್ಳಿ, ಕೊಪ್ಪ ಮುಂತಾದ ಕಡೆ ಮಾರುಕಟ್ಟೆ ಇರುತ್ತದೆ. ತೀರ್ಥಹಳ್ಳಿಯಲ್ಲೂ ಮಾರುಕಟ್ಟೆ ಯಾವ ಬದಲಾವಣೆಯೂ ಇರಲಿಲ್ಲ. ಈ ವಾರ ಮಾರುಕಟ್ಟೆಯಲ್ಲಿ ಯಾವ ಸ್ಥಿತಿ ನಿಲ್ಲುತ್ತದೆ ಎಂಬುದು ನೋಡಲಿಕ್ಕೆ ಇರುವಂತದ್ದು.  ಮುಂದೆ  ದೀಪಾವಳಿ ಬರಲಿದೆ. ಈಗಾಗಲೇ ಕರ್ನಾಟಕದ ಅಡಿಕೆ ಬೆಳೆಯುವ…

Read more
ಮ್ಯುರೇಟ್ ಆಫ್ ಪೊಟ್ಯಾಶ್ ಎಲ್ಲಾ ಕಡೆ ಸಿಗುವಂತದ್ದು

ಪೊಟ್ಯಾಶ್ ಇಲ್ಲವೇ? ಚಿಂತಿಸಬೇಡಿ. ಪೊಟ್ಯಾಶ್ ಇಲ್ಲದೆಯೂ ಬೆಳೆ ತೆಗೆಯಬಹುದು!

ಮಾರುಕಟ್ಟೆಯಲ್ಲಿ ಪೊಟ್ಯಾಶ್ ಇಲ್ಲ ಎಂದು ಕಾಳಸಂತೆಯಲ್ಲಿ ಸಿಗುವ ಪೊಟ್ಯಾಶ್ ಖರೀದಿಗೆ ಹೋಗಬೇಡಿ. ಪೊಟ್ಯಾಶ್ ಗೊಬ್ಬರ ಶಾಶ್ವತವಾಗಿ  ಲಭ್ಯವಿಲ್ಲ ಎಂದು ಯಾರೂ ಹೇಳಿಲ್ಲ. ಆಮದು ಪ್ರಕ್ರಿಯೆ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಬರಲಿದೆ. ಆ ತನಕ ರೈತರು ಪೊಟ್ಯಾಶ್ ಗಾಗಿ ಏನು ಮಾಡಬೇಕು ಇಲ್ಲಿದೆ ಮಾಹಿತಿ. ಸಸ್ಯಗಳಿಗೆ ಬೆಳವಣಿಗೆಯ ವಿವಿಧ ಹಂತಕ್ಕನುಗುಣವಾಗಿ ಪೊಟ್ಯಾಶಿಯಂ ಸತ್ವ ಬೇಕಾಗುತ್ತದೆ. ಪೊಟ್ಯಾಶ್ ಬರೇ ಮ್ಯುರೇಟ್ ಆಫ್ ಪೊಟ್ಯಾಶ್ ನಲ್ಲಿ ಮಾತ್ರ ಇರುವುದಲ್ಲ. ಬೇರೆ ಗೊಬ್ಬರಗಳಲ್ಲೂ ಇದೆ. ಹೆಚ್ಚಾಗಿ ನಾವು ಬೆಳೆಗಳಿಗೆ  ಬಳಸುವ ಪೊಟ್ಯಾಶ್ ಗೊಬ್ಬರ…

Read more
ಬಾಟಲಿ, ಕ್ಯಾನುಗಳಲ್ಲಿ ಜೈವಿಕ ಗೊಬ್ಬರ

ಬಾಟಲಿ, ಕ್ಯಾನುಗಳ ಜೈವಿಕ ಗೊಬ್ಬರಗಳು ಮತ್ತು ಅದರ ಉಪಯುಕ್ತತೆ.

ಇತ್ತೀಚೆಗೆ ಸುಮಾರು 10 ವರ್ಷಗಳಾಗಿರಬಹುದು. ಬೇರೆ ಬೇರೆ ತಯಾರಕರು ಲೀಟರು ಬಾಟಲಿಗಳಲ್ಲಿ, 5 ಲೀ. ಕ್ಯಾನುಗಳಲ್ಲಿ ಜೈವಿಕ ಗೊಬ್ಬರ ತುಂಬಿಸಿ ಬೆಳೆ ಪೋಷಕ ಎಂಬ ಹೆಸರಿನಲ್ಲಿ ಮಾರಾಟ ಮಾಡಲಾರಭಿಸಿದ್ದಾರೆ. ಹಳ್ಳಿ ಹಳ್ಳಿಗಳಲ್ಲಿ ಈ ವ್ಯವಹಾರ ಭಾರೀ ಚುರುಕಾಗಿದೆ.  ಜನ ಇಷ್ಟೊಂದು ಕಡಿಮೆ ಪ್ರಮಾಣದಲ್ಲಿ ಗೊಬ್ಬರ ಹಾಕಿ ಬೆಳೆ ಬರುವುದೇ ಆದರೆ ಯಾಕೆ ಬಳಸಿ ನೊಡಬಾರದು ಎಂದು ಎಲ್ಲರೂ ಒಂದೊಂದು ಪ್ರಯತ್ನ ಮಾಡುತ್ತಲೇ ಇದ್ದಾರೆ.  ಹಳೆ ಗಿರಾಕಿ ಹೋದಂತೆ ಹೊಸ ಹೊಸ ಗಿರಾಕಿಗಳು ಸಿಗುತ್ತಾ ಇದ್ದಾರೆ. ಬಾಟಲಿ ಗೊಬ್ಬರಗಳ…

Read more
ಇಂತಹ ಬಳ್ಳಿ ಬೆಟ್ಟರೆ 2 ವರ್ಷಕ್ಕೆ ಇಳುವರಿ

ಇಂತಹ ಬಳ್ಳಿ ನೆಟ್ಟರೆ 2 ವರ್ಷಕ್ಕೇ ಕರಿಮೆಣಸು ಇಳುವರಿ.

ಕರಿಮೆಣಸು ಬೆಳೆಸುವವರು ನೆಡಲು ಉಪಯೋಗಿಸುವ ಬಳ್ಳಿಯನ್ನು ಅವಲಂಭಿಸಿ ಬೇಗ ಇಳುವರಿ ಪಡೆಯಲು ಸಾಧ್ಯವಿದೆ. ಇದು ಹೇಗೆ ಎಂಬುದರ ಪೂರ್ಣ ಪರಿಚಯ  ಇಲ್ಲಿದೆ. ಕರಿಮೆಣಸು ನಾಟಿಮಾಡುವವರು  ಕೆಲವರು ನೇರವಾಗಿ ಬಳ್ಳಿ ತುಂಡುಗಳನ್ನು ನಾಟಿ ಮಾಡುತ್ತಾರೆ. ಕೆಲವರು ಬಳ್ಳಿಯನ್ನು ಪ್ಲಾಸ್ಟಿಕ್ ಕೊಟ್ಟೆಗೆ ಹಾಕಿ ಸಸಿ ಮಾಡಿ ನಾಟಿ ಮಾಡುತ್ತಾರೆ. ಇವೆಲ್ಲಾ ವಿಧಾನಗಳಲ್ಲಿ ಮೆಣಸಿನ ಬಳ್ಳಿ ಇಳುವರಿ ಪ್ರಾರಂಭವಾಗಲು 3 ವರ್ಷ ಬೇಕಾದರೆ ಈ ವಿಧಾನದಲ್ಲಿ ಮಾತ್ರ 1.5 ವರ್ಷಕ್ಕೇ ಇಳುವರಿ ಪ್ರಾರಂಭವಾಗುತ್ತದೆ. ಬುಡದಿಂದಲೇ ಇಳುವರಿ ಪ್ರಾರಂಭವಾಗಿ  ಉತ್ತಮ ಅಡ್ದ ಚಿಗುರುಗಳು…

Read more
ಟೆಂಡರ್ ನಲ್ಲಿ ಅಡಿಕೆ ಪ್ರದರ್ಶನ

12-10-2021 ರ ಅಡಿಕೆ, ಕರಿಮೆಣಸು,ಕೊಬ್ಬರಿ ಕಾಫೀ ಧಾರಣೆ.

ಕಳೆದ ಎರಡು ವಾರದಿಂದ ರಾಶಿ ಅಡಿಕೆ ಮತ್ತು ಚಾಲಿ ದರಗಳು ಇಳಿಮುಖ ಹಾದಿಯಲ್ಲಿ  ಸಾಗುತ್ತಿರುವ ಕಾರಣ, ಬೆಳೆಗಾರರು ಮಾರಾಟಕ್ಕೆ ಮುಂದಾಗಿದ್ದಾರೆ. ಸಹಜವಾಗಿ ಬೆಲೆ ಇಂದು 12-10-2021 ರಂದು ಇಳಿಕೆಯೇ. ಕರಿಮೆಣಸಿನ ಬೆಲೆ ಏರುವ ಕಾರಣ ಕೊಡುವವರು ಕಡಿಮೆ.ಬೆಳೆಗಾರರ ನಡೆಯ ಮೇಲೆ ಮಾತ್ರ ಬೆಲೆ ಸ್ಥಿತರೆ ಹಾಗೂ ಏರಿಕೆ ಆಗಲು ಸಾಧ್ಯ ಇದನ್ನು ಬೆಳೆಗಾರರು ಅರ್ಥ ಮಾಡಿಕೊಳ್ಳಬೇಕಾಗಿದೆ. ದರ ಇಳಿಕೆಯಾದ ತಕ್ಷಣ ಅಧಿಕ ಪ್ರಮಾಣದಲ್ಲಿ  ರೈತರು ಮಾರಾಟಕ್ಕೆ ಮುಂದಾಗುತ್ತಾರೆಯೋ  ತಿಳಿಯುತ್ತಿಲ್ಲ. ಯಾವ ಬೆಳೆಗಾರನಿಗೂ ಮಾರುಕಟ್ಟೆಯಲ್ಲಿ ಗರಿಷ್ಟ ಬೆಲೆ ಬಂದು…

Read more
error: Content is protected !!