ಕಡ್ಡಾಯವಾಗಿ ತೆರಿಗೆ ಪಾವತಿಸುವ ಏಕೈಕ ನಾಗರೀಕರು -ರೈತರು

ಎಲ್ಲರ ದೃಷಿಯಲ್ಲಿ ರೈತರು  ಸರಕಾರದ ಸವಲತ್ತು ಪಡೆಯುವವರು ಎಂದು ಗುರುತಿಸಲ್ಪಟ್ಟವರು. ಆದರೆ ವಾಸ್ತವ ಇವರು ಟ್ಯಾಕ್ಸ್ ಕಟ್ಟುವವರು. ಸಮಾಜ ರೈತ ಎಂದರೆ ಸರಕಾರದ ಕಡಿಮೆ ಬಡ್ಡಿ ದರದ ಸಾಲಪಡೆಯುವವ. ಕೇಂದ್ರ ಸರಕಾರದ ಬಳುವಳಿಯಾದ ಕಿಸಾನ್ ಸಮ್ಮಾನ್ ಯೋಜನೆಯ ಹಣ ಪಡೆಯುವವ. ಸಬ್ಸಿಡಿ, ಸವಲತ್ತು  ಪಡೆಯುವ. ಎಂದು ತಿಳಿದಿದ್ದಾರೆ. ವಾಸ್ತವವಾಗಿ ಸರಕಾರ ಇವರಿಗೆ ಕೊಡುವುದೇನಿದ್ದರೂ ಕಿತ್ತುಕೊಂಡದ್ದರ 10%  ಮಾತ್ರ.  ರೈತ ಎಂದರೆ ಸರಕಾರವನ್ನು ಸಾಕುವವ. ದೇಶದ ಆರ್ಥಿಕತೆಗೆ ರೈತನ ಕೊಡುಗೆ ಸಣ್ಣದಲ್ಲ. ಇದನ್ನು ಎಲ್ಲರಿಗೂ ತಿಳಿಸಿ. ರೈತನನ್ನು ಮೊದಲ…

Read more
Lighting effected coconut palm

ತೆಂಗಿನ ಮರಗಳಿಗೆ ಸಿಡಿಲು ಬಡಿದರೆ ಏನು ಮಾಡಬೇಕು?

ಈಗಾಗಲೇ ಮುಂಗಾರು ಪೂರ್ವ ಮಳೆ ಬರಲಾರಂಭಿಸಿದೆ. ಮಿಂಚು ಸಿಡಿಲಿನ ಅಬ್ಬರದಲ್ಲಿ ಬಹಳಷ್ಟು ಕಡೆ ಅಡಿಕೆ, ತೆಂಗಿನ ಮರಗಳು ಬಲಿಯಾಗುತ್ತಿವೆ. ಮಳೆಗಾಲ ಪ್ರಾರಂಭದಲ್ಲಿ ಮತ್ತು ಮಳೆಗಾಲ ಕೊನೆಯಲ್ಲಿ ಮಿಂಚು ಸಿಡಿಲಿನ ಆರ್ಭಟ ಅಧಿಕ. ಮಳೆ ಬಾರದಿದ್ದರೂ ಪ್ರಭಲವಾದ ಈ ಗುಡುಗು ಸಿಡಿಲಿನ ಆರ್ಭಟ ಇದ್ದೇ ಇರುತ್ತದೆ. ಈ ಸಿಡಿಲು ಮೋಡಗಳ ಅಪ್ಪಳಿಸುವಿಕೆಯಿಂದ ಉತ್ಪಾದನೆಯಾಗುವ ಒಂದು ವಿದ್ಯುತ್ ಶಕ್ತಿ. ಇದು ಉತ್ಪಾದನೆಯಾಗಿ  ಅರ್ಥಿಂಗ್ ಆಗಬೇಕು. ಅದು ಎತ್ತರದ ಮರಗಳು, ಅಥವಾ ಕೆಲವು ಮಿಂಚು ಆಕರ್ಶಕಗಳ ಕಡೆಗೆ ಹೆಚ್ಚಿನ ಪ್ರಮಾಣದಲ್ಲಿ  ತಲುಪುತ್ತದೆ….

Read more
ಕಹಿ ಮುಳ್ಳು ಸೌತೆ

ಕಹಿಯಾಗುತ್ತಿರುವ ಸೌತೇ ಕಾಯಿ- ಆತಂಕದಲ್ಲಿ ರೈತರು.

ಸಿಹಿ ಸೌತೇ ಕಾಯಿ ಈಗ ಕಹಿ ಸೌತೇ ಆಗಲಾರಂಭಿಸಿದೆ. ಅದು ಬರೇ ಮುಳ್ಳು ಸೌತೆ ಮಾತ್ರವಲ್ಲ, ಸಾಂಬಾರ್ ಸೌತೆಗೂ  ಪ್ರಾರಂಭವಾಗಿದೆ. ಸುಮಾರು 10 ವರ್ಷಕ್ಕೆ ಹಿಂದೆ ಮುಳ್ಳು ಸೌತೆ ಬೆಳೆಯುವವರಿಗೆ ಈ ಸಮಸ್ಯೆ ಇರಲಿಲ್ಲ. ಯಾರೇ ಬೀಜ ಕೊಡಲಿ, ಅವರದ್ದೇ ಬೀಜ ಹಾಕಿದರೂ ಮುಳ್ಳು ಸೌತೆ ಎಂದರೆ ಅದನ್ನು ಹಸಿಯಾಗಿ ತಿನ್ನಬಹುದುದಿತ್ತು.  ಈಗಿತ್ತಲಾಗಿ ಬೀಜ ಹಾಕಿ ಮುಳ್ಳು ಸೌತೆ  ಆದ ನಂತರ ಅದನ್ನು ಕೊರೆದು ಅದರ ಒಳ ತಿರುಳಿನ ಒಂದು ತುಂಡನ್ನು ಬಾಯಿಗಿಟ್ಟು ಪರೀಕ್ಷಿಸಿದ ನಂತರ  ರುಚಿ…

Read more
ನೆಲದ ಮೇಲೆ ಹುಲುಸಾಗಿ ಬೆಳೆದ ಹಾವಸೆ

ನೆಲದಲ್ಲಿ ಹಾವಸೆ ಬೆಳೆದರೆ ತೆಗೆಯಬೇಡಿ- ಇದರಿಂದ ಭಾರೀ ಲಾಭವಿದೆ.

ಕೆಲವು ರೈತರ ತೋಟದ ನೆಲದಲ್ಲಿ  ಹಾವಸೆ  ಸಸ್ಯ ಬೆಳೆಯುತ್ತದೆ. ಈ ಸಸ್ಯ ಬೆಳೆಯುವುದು ಯಾಕೆ ಮತ್ತು ಇದರ ಅನುಕೂಲ ಏನು? ನಿಮ್ಮ ತೋಟದಲ್ಲಿ, ಮನೆಯ ಕಂಪೌಂಡ್ ಗೊಡೆಯಲ್ಲಿ, ಅಡಿಕೆ, ತೆಂಗಿನ ಮರದ ಕಾಂಡದಲ್ಲಿ ಅಂಟಿಕೊಂಡಿರುವ ಒಂದು ಹಾವಸೆ ಸಸ್ಯ ನಮಗೆಷ್ಟು ಉಪಕಾರಿ ಎಂಬುದನ್ನು ಪ್ರತೀಯೊಬ್ಬರೂ ತಿಳಿದಿರಬೇಕು. ಮಳೆಗಾಲ ಬಂತೆಂದರೆ ಸಾಕು ಹಾವಸೆ ಸಸ್ಯಗಳು ಜೀವತುಂಬಿಕೊಂಡು ಎಲ್ಲೆಡೆ ಆವರಿಸುತ್ತವೆ. ಬೇಸಿಗೆಯಲ್ಲಿ ಸಾಕಷ್ಟು ತೇವಾಂಶ ಲಭ್ಯವಿರುವಲ್ಲಿ ಬೆಳೆಯುತ್ತದೆ. ಒಟ್ಟಿನಲ್ಲಿ ತೇವಾಂಶವನ್ನು ಬಳಸಿ ಬದುಕುವ ಈ ಸಸ್ಯ ವರ್ಗ ಕೃಷಿಕನ ಮಿತ್ರ…

Read more
Grafted jack plant

ಹಲಸು ಬೆಳೆಸುವವರು ಹೀಗೊಮ್ಮೆ ಯೋಚಿಸಿ- ಸಸಿ ನೆಡಿ.

ಹಲಸಿಗೆ ಭವಿಷ್ಯದಲ್ಲಿ ಭಾರೀ ಬೆಲೆ ಬರಲಿದೆ ಎಂದು ಬಹಳ ಜನ ಹಲಸಿನ ಕೃಷಿಗೆ ಮುಂದಾಗಿದ್ದಾರೆ. ಒಳ್ಳೆಯದು.ಆದರೆ ಎಲ್ಲವೂ ಕಸಿ ಗಿಡ ಬೇಡ. ಹಲಸು ಬೆಳೆಸುವುದೆಂದರೆ ಎಲ್ಲರಿಗೂ ಈಗ ಪ್ರತಿಷ್ಟೆಯ ಪ್ರಶ್ನೆ. ಇದಕ್ಕೆ ಎಲ್ಲೆಡೆಯೂ ಪ್ರೋತ್ಸಾಹ ಇದೆ. ನಮ್ಮ ರಾಜ್ಯದಲ್ಲಿ ಮಾತ್ರವಲ್ಲ. ಕೇರಳ, ಆಂದ್ರ, ತಮಿಳುನಾಡು, ಗುಜರಾತ್, ಮಹಾರಾಷ್ಟ್ರಗಳಲ್ಲಿ ಸಹ ಭಾರೀ ಪ್ರಮಾಣದಲ್ಲಿ ಹಲಸಿನ ಸಸಿ  ನೆಡಲಾಗುತ್ತಿದೆ. ವಾರ್ಷಿಕ ಕರ್ನಾಟಕ, ಕೇರಳದ ಹಲಸಿನ ಸಸಿ ಮಾಡುವ ನರ್ಸರಿಗಳಿಂದ ಕೋಟ್ಯಾಂತರ ಸಂಖ್ಯೆಯ ಹಲಸಿನ ಕಸಿ ಗಿಡಗಳು ಮಾರಾಟವಾಗುತ್ತಿದೆ. ಜನ ಬೀಜ…

Read more
ರತ್ನಗಿರಿ ಅಲ್ಫೊನ್ಸ್ ಹಣ್ಣು

ಮಾವು ಕೊಯ್ಯುವಷ್ಟು ಬೆಳೆದಿದೆಯೇ ? ಹೇಗೆ ತಿಳಿಯುವುದು?

ಮಾವಿನ ಕಾಯಿ ಕೊಯ್ಯುವಾಗ ಅದು ಸರಿಯಾಗಿ ಬೆಳೆದಿದ್ದರೆ ಅದರ ರುಚಿಯೇ ಭಿನ್ನ. ಕಾಯಿ ಕೊಯ್ಯುವಷ್ಟು ಬೆಳೆದಿದೆಯೇ ಇಲ್ಲವೇ ಎಂದು ತಿಳಿಯಲು ಸ್ವಲ್ಪ ಅನುಭವ ಬೇಕು. ಈ ಬಗ್ಗೆ ಮಾಹಿತಿ ಇಲ್ಲಿದೆ. ಈಗ ಮಾವಿನ ಕಾಯಿ ಮಾಗುವ ಸಮಯ. ಮಾವಿನ ಕಾಯಿ ಹೂ  ಬಿಟ್ಟು, ಮಾಗಿ ಹಣ್ಣಾಗಲು 3 ತಿಂಗಳು ಬೇಕು. ಈ ಅವಧಿಯನ್ನು ಕರಾರುವಕ್ಕಾಗಿ ಲೆಕ್ಕಾಚಾರ ಹಾಕಲು ಆಗದು. ಅದಕ್ಕಾಗಿ ಕೆಲವು ಕಣ್ಣಂದಾಜಿನ ಪರೀಕ್ಷೆಗಳು ಮತ್ತು ಯಾದೃಚ್ಚಿಕ ಪರೀಕ್ಷೆಗಳನ್ನು ಮಾಡಿ ಬಲಿತಿದೆಯೇ ಇಲ್ಲವೇ ಎಂದು ತಿಳಿಯಬಹುದು. ಎಳೆಯದಾದ…

Read more
ಪೌಷ್ಟಿಕ ಸೊಪ್ಪು ಕೊಡಿ

ಕುರಿ – ಮೇಕೆ ಗೊಬ್ಬರ ಯಾಕೆ ಉತ್ತಮ?

ಹೆಚ್ಚಿನ ರೈತರು ಸಾವಯವ ಗೊಬ್ಬರವಾಗಿ ಬಳಸುವ  ಕುರಿ, ಮೇಕೆ ಹಿಕ್ಕೆಯಲ್ಲಿ ಏನು ಇದೆ ಎಂಬುದರ ಪೂರ್ಣ ಮಾಹಿತಿ ಇಲ್ಲಿದೆ. ಕುರಿ, ಮೇಕೆಗಳ ಹಿಕ್ಕೆ ಒಂದು ಉತ್ತಮ ಬೆಳೆ ಪೋಷಕ ಗೊಬ್ಬರ ಮಾತ್ರವಲ್ಲ ,ಮಣ್ಣಿನ ತರಗತಿಯನ್ನು  ಉತ್ತಮ ಪಡಿಸುವ ಸಾವಯವ ವಸ್ತು ಎಂದರೆ ಅತಿಶಯೋಕ್ತಿಯಲ್ಲ. ಸಾವಯವ ಗೊಬ್ಬರ ಎಂದರೆ ಅದು ದೊಡ್ದ ಪ್ರಮಾಣದ್ದಾಗಿರಬೇಕು. ಹೆಚ್ಚು ಸಮಯ ಮಣ್ಣಿನಲ್ಲಿ ಉಳಿದು, ಸೂಕ್ಷ್ಮಾಣು ಜೀವಿಗಳಿಗೆ ಆಹಾರವಾಗಿ ನಿಧಾನವಾಗಿ ಲಭ್ಯವಾಗುತ್ತಾ ಇರಬೇಕು. ಇಂತಹ ಗೊಬ್ಬರಗಳಲ್ಲಿ ಕೊಟ್ಟಿಗೆ ಗೊಬ್ಬರ, ಸೊಪ್ಪು ಸದೆಗಳನ್ನು ಒಟ್ಟು ಸೇರಿಸಿ…

Read more

ಇಳುವರಿ ಕಡಿಮೆಯಾಗಲು ಕಾರಣ ಏನು ಗೊತ್ತೇ?

ಕೆಲವು ದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮ ಯಾವುದೇ ಬೆಳೆಯ ಇಳುವರಿ 50% ಕ್ಕೂ ಕಡಿಮೆ. ಬೇಸಾಯದ ಖರ್ಚು 50% ಹೆಚ್ಚು. ಇದು ಯಾಕೆ ಹೀಗಾಗುತ್ತಿದೆ ಎಂಬುದರ ಮಾಹಿತಿ ಇಲ್ಲಿದೆ. ವಿಯೆಟ್ನಾಂ ದೇಶದ ಕೃಷಿಯ ಮುಂದೆ ನಮ್ಮ ಕೃಷಿ ಏನೂ ಅಲ್ಲ. ಮಲೇಶಿಯಾದಲ್ಲಿ ತೆಂಗಿನ ಮರದಲ್ಲಿ 200 ಕ್ಕೂ ಹೆಚ್ಚು ಕಾಯಿಗಳಾಗುತ್ತವೆ. ಬ್ರೆಝಿಲ್ ನ ಕಾಫಿಯ ಇಳುವರಿ ನಮ್ಮದಕ್ಕಿಂತ ದುಪ್ಪಟ್ಟು. ಅದೇ ರೀತಿಯಲ್ಲಿ ಚೀನಾ ದೇಶದಲ್ಲೂ ನಮ್ಮಲ್ಲಿ ಬೆಳೆಯಲಾಗುವ ಎಲ್ಲಾ ನಮೂನೆಯ ಬೆಳೆಗಳಲ್ಲಿ ಇಳುವರಿ ತುಂಬಾ ಹೆಚ್ಚಾಗಿದೆ. ಎಲ್ಲಾ…

Read more

ಅಡಿಕೆ ಬೆಳೆಗಾರರೇ ನೀವು ಇದನ್ನು ಒಪ್ಪುತ್ತೀರಾ?

ಒಬ್ಬ ವೈದ್ಯನ ಮಗ ವೈದ್ಯನಾದರೆ ಅವನ ವೃತ್ತಿ ಕ್ಷಮತೆಯಲ್ಲಿ ಇರುವ ಹಿಡಿತ ಬೇರೆಯವರಲ್ಲಿ ಬರಲು ಸ್ವಲ್ಪ ಕಷ್ಟವಾಗುತ್ತದೆ. ಇದನ್ನು ನೀವು ಗಮನಿಸಿರಬಹುದು.ಇದು ಬರೇ ವೈದ್ಯ ವೃತ್ತಿಗೆ ಮಾತ್ರವಲ್ಲ ಎಲ್ಲಾ ವೃತ್ತಿ ಕ್ಷೇತ್ರಕ್ಕೂ ಹುಟ್ಟು ಸಹಜವಾದ ಅನುಭವ ಅರ್ಜಿತ ಅನುಭವಕ್ಕಿಂತ ಮಿಗಿಲಾಗಿರುತ್ತದೆ. ಅಡಿಕೆ ಬೆಳೆಗೆ ಸಲಹೆ ಕೊಡುವವರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ. ಅಡಿಕೆ ಬೆಳೆಯನ್ನು ಹುಟ್ಟಿನಿಂದ ಕಂಡವರಿಗಿಂತ ಹೆಚ್ಚಿನ ಜ್ಞಾನವನ್ನು ಇವರು ಸಂಪಾದಿಸಿದವರಂತೆ ವರ್ತಿಸುತ್ತಾರೆ. ಬೆಳೆ ಬಗ್ಗೆ ಉಪದೇಶ ಮಾಡುತ್ತಾರೆ. ಒಂದು ಬದಿಯಲ್ಲಿ ಅವರ ಈ ಎಲ್ಲಾ ಸೇವೆಯ…

Read more
ತೆಂಗಿನ ಸಸಿ ಆರೋಗ್ಯವಾಗಿದ್ದರೆ ಹೀಗೆ ಇರುತ್ತದೆ.

ತೆಂಗಿನ ಸಸಿ ಬೇಗ ಫಲಕೊಡಬೇಕಾದರೆ ಮಾಡಬೇಕಾದ ಅಗತ್ಯ ಕೆಲಸ.

ತೆಂಗಿನ ಸಸಿ ಹಾಗೂ ತಾಳೆ ಜಾತಿಯ ಎಲ್ಲಾ ಮರಗಳಿಗೂ ಕುರುವಾಯಿ ದುಂಬಿ ಕಾಟ ಇಲ್ಲದಿದ್ದರೆ, ಸಸಿ ಆರೋಗ್ಯವಾಗಿ ಬೆಳೆದು ಬೇಗ ಫಲ ಕೊಡುವುದರಲ್ಲಿ ಅನುಮಾನ ಇಲ್ಲ. ತೆಂಗು ಜಾತಿಯ ಮರಗಳಲ್ಲಿ ಒಂದೇ ಮೊಳಕೆ (Bud) ಇರುವುದು. ಇವುಗಳ ತಲೆ ಕಡಿದರೆ ಅವು ಮತ್ತೆ ಇತರ ಮರಗಳಂತೆ ಚಿಗುರಿ ಬೆಳೆಯಲಾರದು. ಆದರೆ ಇತರ ಮರ ಮಟ್ಟುಗಳ  ಎಲ್ಲಾ ಎಲೆ ಗೆಲ್ಲು ಕಡಿದರೂ ಅದು ಮತ್ತೆ ಚಿಗುರಿ ಬೆಳೆಯುತ್ತದೆ. ಆದ ಕಾರಣ ತೆಂಗಿನಂತಹ ಮರಗಳಿಗೆ ಎಲೆಯೇ ಆಧಾರ. ಕೆಲವು ಸಂದರ್ಭಗಳಲ್ಲಿ…

Read more
error: Content is protected !!