ಬೆಳೆಗಾರರೇ – ಮೈಲುತುತ್ತೆ ಖರೀದಿಸುವಾಗ ಬುದ್ದಿವಂತರಾಗಿರಿ.

ಇನ್ನೇನೋ ಮಳೆಗಾಲ ಬರಲಿದೆ. ಅಡಿಕೆಗೆ ಭಾರೀ ಬೆಲೆ ಬಂದಿದೆ. ಅಡಿಕೆ ಬೆಳೆಗಾರರಲ್ಲಿ ದುಡ್ಡು ಇದೆ. ಅದರಲ್ಲಿ ತಮ್ಮ ಹೆಚ್ಚಳವಾಗುತ್ತದೆ. ಈಗಲೇ ಖರೀದಿ ಮಾಡಿ ಎಂದು ವ್ಯಾಪಾರಿಗಳು ಹಳೆ ಸ್ಟಾಕು ಮುಗಿಸಿ ಮುಂದಿನ ಹೊಸ ಸ್ಟಾಕು ಮಾಡಲು ಬಂಡವಾಳ ಕ್ರೋಢೀಕರಣದಲ್ಲಿದ್ದಾರೆ. ಅಡಿಕೆ ಬೆಳೆಗಾರರೇ ನೀವು ಈಗ ಬುದ್ದಿವಂತರಾಗುವುದು ಅಗತ್ಯವಾಗಿದೆ. ಅಡಿಕೆ ಕೊಳೆ ರೋಗಕ್ಕೆ ಮೈಲುತುತ್ತೆ ಬೇಕು. ಹಾಗೆಂದು ಖರೀದಿಸಿದರೆ ದರ ಕಡಿಮೆ, ಮುಂದೆ ಹೆಚ್ಚು. ಇದೆಲ್ಲಾ ಯಾವ ಕ್ರಮವೋ ತಿಳಿಯದು. ಸರಕಾರದ ಸಂಬಂಧಿಸಿದ ಇಲಾಖೆ ಇದನ್ನೆಲ್ಲಾ ಗಮನಿಸಿದೆಯೋ ಇಲ್ಲವೋ…

Read more

ರಸಗೊಬ್ಬರದ ಬಳಕೆ 50% ಕಡಿಮೆ ಮಾಡಬಹುದಾದ ವಿಧಾನ.

ಕೃಷಿಗೆ ರಸಗೊಬ್ಬರ ಅನಿವಾರ್ಯವಲ್ಲ. ಇದರಿಂದ ಇಳುವರಿ ಹೆಚ್ಚಳವಾಗಲು ಅನುಕೂಲವಾಗುತ್ತದೆ. ಬುದ್ಧಿವಂತಿಕೆ ಮಾಡಿದರೆ 50% ರಸ ಗೊಬ್ಬರವನ್ನು ಉಳಿಸಬಹುದು. ನಮ್ಮ ಕೃಷಿಕರಿಗೆ ಇದು ಗೊತ್ತಿದೆಯೋ ಇಲ್ಲವೋ ತಿಳಿಯದು. ನಮ್ಮ ದೇಶದಲ್ಲಿ ಸ್ಥಳೀಯ ಕಚ್ಚಾ ವಸ್ತುಗಳನ್ನು ಬಳಸಿ ರಸ ಗೊಬ್ಬರ ತಯಾರಾಗುವುದು ತೀರಾ ಕಡಿಮೆ. ಬೇರೆ ದೇಶಗಳಿಂದ ಕಚ್ಚಾ ಸಾಮಾಗ್ರಿಯನ್ನು ತರಿಸಿ, ಇಲ್ಲಿ ಉತ್ಪಾದನೆ ಮಾಡಲಾಗುತ್ತದೆ. ಆದ ಕಾರಣ ಬೆಲೆ ನಮ್ಮ ಕೈಯಲ್ಲಿ ಇರುವುದಿಲ್ಲ. ಯಾವಾಗಲೂ ಇದು ಹೆಚ್ಚಳವಾಗುವುದೇ ಹೊರತು ಕಡಿಮೆಯಾಗಬಹುದು ಎಂಬ ಆಕಾಂಕ್ಷೆ ಕೃಷಿಕರಿಗೆ ಬೇಡ.   ರಸಗೊಬ್ಬರ …

Read more

ಡ್ರಾಗನ್ ಪ್ರೂಟ್ – ಹೆಚ್ಚು ಆದಾಯದ ಸುಲಭದ ಬೆಳೆ.

ವಿಪರೀತ ಬಿಸಿಲಿನ ವಾತಾವರಣದ ಬಳ್ಳಾರಿ ಜಿಲ್ಲೆಯಲ್ಲಿ ಡ್ರ್ಯಾಗನ್ ಹಣ್ಣಿನ ಬೇಸಾಯ  ಮಾಡಬಹುದು ಎಂಬುದನ್ನು ಹೊಸಪೇಟೆಯ ರೈತರೊಬ್ಬರು ತೋರಿಸಿಕೊಟ್ಟಿದ್ದಾರೆ. ಹೊಸಪೇಟೆ ತಾಲೂಕಿನ ಜಂಬುನಾಥನಹಳ್ಳಿಯಲ್ಲಿನ 57 ವರ್ಷದ ಇಂಜಿನಿಯರ್ ರಾಜಶೇಖರ್ ದ್ರೋಣವಲ್ಲಿ  ಎಂಬವರು, ತಮ್ಮ ಆರು ಎಕರೆ ಜಮೀನಿನಲ್ಲಿ ಡ್ರ್ಯಾಗನ್ ಹಣ್ಣಿನ ಬೇಸಾಯವನ್ನು ಮಾಡಿ ಅದರಲ್ಲಿ ಉತ್ತಮ ಆದಾಯ ಕಂಡುಕೊಂಡಿದ್ದಾರೆ. ಮೂಲ ಕೃಷಿಕ ಕುಟುಂಬದವರಾಗಿದ್ದರೂ ಹೈದರಾಬಾದಿನಲ್ಲಿ ಇಂಜಿನಿಯರ್ ವೃತ್ತಿಯಲ್ಲಿ ತೊಡಗಿದ್ದರು. ಮೂರು ವರ್ಷದ ನಂತರ ಈ ವೃತ್ತಿಗೆ ವಿದಾಯ ಹೇಳಿ ಆರಿಸಿಕೊಂಡದ್ದು, ಕೃಷಿ ಮತ್ತು ಕೋಳಿ ಸಾಕಾಣಿಕೆ ವೃತ್ತಿಯನ್ನು. ಇವೆರಡರಲ್ಲೂ…

Read more

ಹಿರಿಯ ಕೃಷಿ ವಿಜ್ಞಾನಿ ಪದ್ಮಭೂಷಣ ಡಾ. ಎಂ. ಮಹದೇವಪ್ಪ ನಮ್ಮನ್ನಗಲಿದ್ದಾರೆ.

ಅಂತರ ರಾಷ್ಟ್ರೀಯ ಖ್ಯಾತಿಯ ಕನ್ನಡ ನಾಡಿನ ಹಿರಿಯ ಕೃಷಿ ವಿಜ್ಞಾನಿ ಡಾ. ಎಂ. ಮಹದೇವಪ್ಪನವರು ಕೃಷಿ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅನನ್ಯ. ಕಳೆದ 60 ವರ್ಷಗಳಿಂದ ಕೃಷಿ ಕ್ಷೇತ್ರಕ್ಕೆ ತನ್ನ ಜೀವನವನ್ನು ಮುಡುಪಾಗಿಟ್ಟ ನಮ್ಮೆಲ್ಲರ ಗುರುಗಳು ಆಗಿದ್ದ ಡಾ. ಮಹಾದೇವಪ್ಪ ಇಂದು ನಮ್ಮನ್ನಗಲಿದರು. ನಾವು ಉಣ್ಣುವ ಅನ್ನದ ಜೊತೆಗೆ ಅವರ ಹೆಸರು ಇದೆ ಎಂಬುದು ಎಲ್ಲಾ ಕೃಷಿಕರಿಗೂ ತಿಳಿದಿರಬೇಕು. ಮೈಸೂರಿನವರಾದ  ಮಾದಾಪುರ ಮಹದೇವಪ್ಪ ಇವರು ಓರ್ವ ತಳಿ ವಿಜ್ಞಾನಿ.Genetics and Plant breeder ಇವರನ್ನು ಅನ್ನದ ವಿಜ್ಞಾನಿ…

Read more

ತೆಂಗಿನ ಕಾಯಿಯ ನೀರಿನಲ್ಲಿದೆ ಅಸಾಧಾರಣ ಶಕ್ತಿ.

ಹೆಚ್ಚಿನವರು ತೆಂಗಿನ ಕಾಯಿ ಒಡೆದು ಆ ನೀರನ್ನು ಚೆಲ್ಲುತ್ತಾರೆ. ಅದನ್ನೇ ಕುಡಿದಿರೆಂದಾದರೆ ನಿಮಗೆ ಯಾವ ರೋಗಗಳೂ ಬಾರದು. ತೆಂಗಿನ ಕಾಯಿಯ ಒಳಗೆ ಇರುವ ನೀರು ಸಾಧಾರಣ ನೀರು ಎಂದು ಭಾವಿಸದಿರಿ. ಇದರಲ್ಲಿ ಬಹಳಷ್ಟು  ಸತ್ವಗಳು ಅಡಗಿವೆ. ನಾವು ಕಾಲಬುಡದಲ್ಲಿರುವ ನೈಸರ್ಗಿಕ ಸತ್ವವನ್ನು ಬಿಸಾಡಿ, ಕೃತಕ ವಿಟಮಿನ್ ಮಿನರಲ್ ಮಾತ್ರೆಗಳನ್ನು ಸೇವಿಸುತ್ತೇವೆ. ತೆಂಗಿನ ಕಾಯಿಯನ್ನು ಒಡೆಯುವಾಗ ಅದರ ನೀರನ್ನು ಒಂದು ಬೊಟ್ಟೂ ವ್ಯಯ ಮಾಡದೆ ಕುಡಿಯುತ್ತಿದ್ದರೆ ನಿಮ್ಮ ದೇಹಾರೋಗ್ಯಕ್ಕೆ ಬೇಕಾಗುವ ಬಹುತೇಕ ಪೋಶಕಾಂಶಗಳು ಅದರಲ್ಲೇ ದೊರೆಯುತ್ತದೆ. ತೆಂಗಿನ ಕಾಯಿ…

Read more

ಗುಲಾಬಿ ಬೆಳೆದು, ಸಾಪ್ಟ್ ವೇರ್ ಉದ್ಯೋಗದ ಸಂಪಾದನೆ.

ಕೆಲವು ಬೆಳೆಗಳು ನಮಗೆ ಉತ್ತಮ ವರಮಾನ ತಂದು ಕೊಡುತ್ತವೆ. ಸೂಕ್ತ ಮಾರ್ಗದರ್ಶನ ಇಲ್ಲದೆ ನಾವು ಯಾವ್ಯಾವುದೋ ಬೆಳೆಗಳ ಹಿಂದೆ ಹೋಗುತ್ತೇವೆ. ಮಲೆನಾಡಿನಲ್ಲಿ ಏನು ಬೆಳೆ ಬೆಳೆಯಬಹುದು. ಅಡಿಕೆ, ತೆಂಗು, ತಪ್ಪಿದರೆ ಇನ್ನೇನಾದರೂ ವಾರ್ಷಿಕ ಬೆಳೆಗಳನ್ನು ಬೆಳೆಯಬಹುದು ಎಂಬುದು ಎಲ್ಲರ ತಿಳುವಳಿಕೆ. ಆದರೆ ಇಲ್ಲೊಬ್ಬರು ಇದಕ್ಕಿಂತೆಲ್ಲಾ ಭಿನ್ನವಾದ ಪುಷ್ಪ ಬೆಳೆಯನ್ನು ಬೆಳೆದು ಉತ್ತಮ ವರಮಾನ ಪಡೆಯುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕಿನ ನಾಡಕಲಸಿ ಊರಿನಲ್ಲಿ ಶ್ರಿಯುತ ಹುಚ್ಚಪ್ಪ ಎಂಬವರೇ ಈ ಚಾಲೆಂಜಿಂಗ್ ಕೃಷಿಕ. ಇವರು ತಮ್ಮ ಇತರ ಬೆಳೆಗಳ…

Read more

ನಿಮ್ಮ ಬೋರ್ ವೆಲ್ ನಲ್ಲಿ ನೀರು ಎಷ್ಟು ಇದೆ ಎಂದು ತಿಳಿಯುವುದು ಹೇಗೆ?

ಹೆಚ್ಚಿನ ರೈತರು ಕೃಷಿ ನೀರಾವರಿಗೆ  ಬೋರ್ ವೆಲ್ ನೀರಿನ ಮೂಲವನ್ನು ಆಶ್ರಯಿಸಿದ್ದಾರೆ. ಕೊಳವೆ ಬಾವಿಯಲ್ಲಿ  ನೀರು ಎಷ್ಟು ಇದೆ, ಪಂಪು ಎಷ್ಟು ಆಳಕ್ಕೆ ಇಳಿಸಬೇಕು ಎಂದು ತಿಳಿಯುವುದು ಹೀಗೆ. ಕೊಳವೆ ಬಾವಿ ಎಂದರೆ ಅದು ಶಿಲಾ ಪದರದಲ್ಲಿ ಜಿನುಗುವ ನೀರು. ಇದನ್ನು ಬರಿಗಣ್ಣಿನಿಂದ  ಎಷ್ಟು ಇದೆ ಎಂದು ನೋಡುವುದು ಅಸಾಧ್ಯ. ಕೆರೆ, ಬಾವಿಯ ನೀರನ್ನು ಎಷ್ಟು  ಇದೆ, ಎಷ್ಟು ತೆಗೆಯಬಹುದು ಎಂದು ಕರಾರುವಕ್ಕಾಗಿ ತಿಳಿಯಬಹುದು. ಆದರೆ ಕೊಳವೆ ಬಾವಿಯ ನೀರಿಗೆ ಅದು ಸಾಧ್ಯವಿಲ್ಲ. ಕೆಲವು ಪಳಗಿದವರು ಸ್ವಲ್ಪ…

Read more

ನಮ್ಮ ಕೃಷಿ ವ್ಯವಸ್ಥೆಯಲ್ಲಿ ಮಹಾನ್ ಸಂಚಲನ ಇದರಿಂದ ಮಾತ್ರ ಸಾಧ್ಯ.

ತಜ್ಞರು ಕ್ಷೇತ್ರ  ಜ್ಞಾನ ಇಲ್ಲದೆ ಏನೋನೋ ಸುಧಾರಣೆಗಳನ್ನು ಸರಕಾರಕ್ಕೆ ಶಿಫಾರಸು ಮಾಡುತ್ತಾರೆ. ಇದು ಕೃಷಿಕರ ಬದುಕನ್ನು ಉತ್ತಮಪಡಿವುದು ಅಷ್ಟಕ್ಕಷ್ಟೇ. ನಿಜವಾಗಿ ಮೂಲಭೂತ ಅಗತ್ಯ ಬೇರೆಯೇ ಇದೆ. ಭಾರತ ದೇಶದ ರೈತ ತನ್ನ ಜೀವಮಾನದಲ್ಲಿ  ನೆಮ್ಮದಿಯ ಜೀವನವನ್ನು ಕಳೆಯುವುದು ಬರೇ ಮಕ್ಕಳಾಟಿಕೆಯ ವಯಸ್ಸಿನಲ್ಲಿ ಮಾತ್ರ. ಜವಾಬ್ಧಾರಿ ಬಂದ ನಂತರ ತನ್ನ ಕೊನೇ ಉಸಿರಿನ ತನಕವೂ ರೈತ ನೆಮ್ಮದಿಯ ಜೀವನ ನಡೆಸಲಾರ. ಒಂದಿಲ್ಲೊಂದು ತಲೆಬಿಸಿಯಲ್ಲೇ (Tension)ಅವನು ಅಲ್ಪಾಯುಷಿಯಾಗಿ ಅಂತ್ಯವನ್ನು ಕಾಣುತ್ತಾನೆ. ವ್ಯಕ್ತಿಯೊಬ್ಬನಿಗೆ ಬದುಕುವ ಹಕ್ಕು ಇರುವಾಗ ನೆಮ್ಮದಿಯ ಬದುಕಿಗೆ ಬೇಕಾಗುವ…

Read more

ಎಣ್ಣೆ ತಾಳೆ ಬೆಳೆಗೆ ಮರುಳಾಗದಿರಿ. ಹೇಳುವಷ್ಟು ಸುಲಭದ ಬೆಳೆ ಅಲ್ಲ.

ಸರಕಾರದ ಇಲಾಖೆಗಳು ದೇಶೀಯವಾಗಿ ಖಾದ್ಯ ಎಣ್ಣೆ ಉತ್ಪಾದನೆಗಾಗಿ ನಮ್ಮನ್ನು ಹುರಿದುಂಬಿಸುತ್ತಿವೆ.ಆದರೆ ಎಣ್ಣೆ ತಾಳೆ  ಬೆಳೆ ನಮಗೆಷ್ಟು ಕೈ ಹಿಡಿಯಬಹುದು ಎಂಬುದನ್ನು ಇಲ್ಲಿ ಓದಿ ನಂತರ ನಿರ್ಧರಿಸಿ. ತಾಳೆ ಎಣ್ಣೆ ಎಂಬುದು ಪ್ರಮುಖ ಖಾದ್ಯ ಮತ್ತು ಅಖಾಧ್ಯ ಎಣ್ಣೆ ಮೂಲವಾಗಿದ್ದು, ಇದನ್ನು  ರೈತರು ತಮ್ಮ ಹೊಲದಲ್ಲಿ  ಸಸಿ ನೆಟ್ಟು  ಬೆಳೆಸಿ ಅದರ  ಫಲದಿಂದ ಪಡೆಯಲಾಗುತ್ತದೆ. ಇದು ನಮ್ಮ ದೇಶದ ಮೂಲದ ಬೆಳೆಯಲ್ಲ. ಮಲೇಶಿಯಾ, ಇಂಡೋನೇಶಿಯಾ ಮುಂತಾದ ದೇಶಗಳಲ್ಲಿ ಬೆಳೆಯುತ್ತಿರುವ ಈ ತಾಳೆ ಮರ, ಈಗ ಖಾದ್ಯ ಎಣ್ಣೆ ಸ್ವಾವಲಂಭನೆ …

Read more
sugarcane seedligs

ಕಬ್ಬು ಸಸ್ಯೋತ್ಪಾದನೆ – ಉತ್ತಮ ಆದಾಯದ ವೃತ್ತಿ.

ಕಬ್ಬು ಬೆಳೆಯುವ ಪ್ರದೇಶದಲ್ಲಿ  ಕಣ್ಣು ಸಸಿಯ ನರ್ಸರಿ ಮಾಡುವರೇ ಅವಕಾಶ ಹೇರಳವಾಗಿದ್ದು, ಇದು ಉತ್ತಮ ಆದಾಯವನ್ನೂ ಕೊಡಬಲ್ಲದು. ತಂತ್ರಜ್ಞಾನ ಬಹಳ ಹಿಂದೆಯೇ ಬಂದಿದೆಯಾದರೂ ಇತ್ತೀಚಿನ ದಿನಗಳಲ್ಲಿ ರೈತರು ಇಂತಹ ಸಸಿಗಳನ್ನು ಹೆಚ್ಚು ಹೆಚ್ಚು ಬಳಸಲು ಪ್ರಾರಂಭಿಸಿದ್ದಾರೆ. ಸಸಿ ಮಾಡಿಕೊಡುವವರ ಕೊರತೆಯೂ ಇದೆ. ಆದ ಕಾರಣ ಇದು ಆಸಕ್ತರಿಗೆ ಆದಾಯದ ವೃತ್ತಿಯಾಗಬಹುದು.   ಕಬ್ಬು ನಾಟಿ ಮಾಡುವವರಿಗೆ ತಕ್ಷಣ ಉತ್ತಮ ಗುಣಮಟ್ಟದ ಸಸಿಯೇ ಲಭ್ಯವಾದರೆ ಅವರ ಖರ್ಚು ತುಂಬಾ ಉಳಿತಾಯವಾಗುತ್ತದೆ. ಬಿತ್ತನೆ ಕಡ್ಡಿಗೆ ಹುಡುಕಾಡುವ ಸಮಸ್ಯೆ ಇರುವುದಿಲ್ಲ. ಹೊಲದ ಸಿದ್ದತೆ…

Read more
error: Content is protected !!