pomegranate

ದಾಳಿಂಬೆಯ ಹೊಸ ಹೈಬ್ರೀಡ್ ತಳಿ.

ದಾಳಿಂಬೆ ಬೆಳೆಗಾರರಿಗೆ ಅಧಿಕ ಇಳುವರಿ ನೀಡಬಲ್ಲ, ಆಕರ್ಷಕ ಬಣ್ಣದ ತಳಿಯಾಗಿ ಪರಿಚಯಿಸಲ್ಪಟ್ಟದ್ದು ಸೋಲಾಪುರ ಲಾಲ್. ಭಾರತ ಸರಕಾರದ ಕೃಷಿ ಅನುಸಂಧಾನ ಪರಿಷತ್ತು ದಾಳಿಂಬೆ ಬೆಳೆ  ಕುರಿತಂತೆ  ಸಂಶೋಧನೆ ನಡೆಸುವುದಕ್ಕಾಗಿ ಮಹಾರಾಷ್ಟ್ರದ ಸೋಲಾಪುರದಲ್ಲಿ  ರಾಷ್ಟ್ರೀಯ  ದಾಳಿಂಬೆ ಸಂಶೋಧನಾ ಸಂಸ್ಥೆಯನ್ನು  ಸ್ಥಾಪಿಸಿದೆ. ಇಲ್ಲಿಂದ ಬಿಡುಗಡೆಯಾದ ಅಧಿಕ ಪೋಷಕಾಂಶ ಒಳಗೊಂಡ ಹೈಬ್ರೀಡ್ ದಾಳಿಂಬೆ ಸೋಲಾಪುರ ಲಾಲ್. ಈ ಸಂಸ್ಥೆಯು ದಾಳಿಂಬೆ  ಬೆಳೆಗಾರರಿಗೆ, ಬೇಸಾಯಕ್ಕೆ  ಸೂಕ್ತವಾಗುವ ಬೇರೆ  ಬೇರೆ ದಾಳಿಂಬೆ  ತಳಿಗಳನ್ನು  ಪರಿಚಯಿಸಿದೆ. ಮೊದಲಾಗಿ ಗಣೇಶ ತಳಿಯನ್ನು   ಪರಿಚಯಿಸಿ ನಂತರ 2003 -04…

Read more
ಟಿ ಸೊಳ್ಳೆ ಬಾಧಿಸದ ಗೇರು ಮಿಡಿ

ಗೇರು ಬೆಳೆಯಲ್ಲಿ ಹೆಚ್ಚು ಫಸಲು ಪಡೆಯಲು ಈ ಕ್ರಮ ಅನುಸರಿಸಿ.

ಗೇರು ಬೆಳೆಗೆ ಅಗತ್ಯವಾಗಿ ಬೇಕಾದ ಆರೈಕೆ ಎಂದರೆ ಚಿಗುರು ಮತ್ತು ಹೂವು ಬರುವಾಗ ಕೀಟ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದು. ಇಲ್ಲಿ ಉದಾಸೀನ ಮಾಡಿದರೆ ಫಸಲು ಭಾರೀ ಕಡಿಮೆಯಾಗುತ್ತದೆ. ಈ ಸಮಯದಲ್ಲಿ ಟಿ. ಸೊಳ್ಳೆ ಫಸಲಿನ ನಶ್ಟವನ್ನು ಉಂಟು ಮಾಡುತ್ತದೆ. ಗೋಡಂಬಿ ಬೆಳೆಯಲ್ಲಿ ಟಿ- ಸೊಳ್ಳೆ ಕೀಟವನ್ನು  ನಿಯಂತ್ರಿಸಿಕೊಂಡಲ್ಲಿ ಬೆಳೆ ಬಂಪರ್. ಆದಾಯವೂ ಸೂಪರ್. ಟಿ ಸೊಳ್ಳೆ ಕೀಟವನ್ನು ಸುರಕ್ಷಿತವಾಗಿ ನಿಯಂತ್ರಣ ಮಾಡುವುದು ಹೀಗೆ. ರಸ್ತೆ ಬದಿಯಲ್ಲಿರುವ ಗೇರು ಮರಗಳಿಗೆ ಯಾವ ಟಿ- ಸೊಳ್ಳೆಯ ಕಾಟವೂ ಇಲ್ಲ….

Read more
leaf yellowing

ಅಡಿಕೆ ಗರಿ ಒಣಗುತ್ತಿದೆಯೇ – ಇದು ಉತ್ತಮ ಸುರಕ್ಷಿತ ಪರಿಹಾರ.

ಬಿಸಿಲಿನ ಝಳ ಹೆಚ್ಚಾದಾಗ, ಶುಷ್ಕ ವಾತಾವರಣ  ಸ್ಥಿತಿ ಇರುವಾಗ ಅಡಿಕೆ, ತೆಂಗಿನ ಗರಿಗಳು ಹಳದಿಯಾಗಿ ಭಾಗಶಃ ಒಣಗುವುದಕ್ಕೆ ಸರಳ ಪರಿಹಾರ ಇಲ್ಲಿದೆ. ಯಾವಾಗಲೂ ಸಸ್ಯಗಳ ಎಲೆಗಳು ಹಸುರಾಗಿರಬೇಕು. ಆಗ ಅದರ ಉಸಿರಾಟ ನಡೆಸುವ ಅಂಗಗಳು (Stomata) ಚೆನ್ನಾಗಿ ಕೆಲಸ ಮಾಡುತ್ತದೆ. ಎಲೆಗಳ ಹಸುರು ಭಾಗ (ಪತ್ರ ಹರಿತ್ತು)ದಲ್ಲಿ ಈ ಸ್ಟೊಮಟಾ ಇರುತ್ತದೆ. ಹರಿತ್ತು ಕಡಿಮೆ ಅದಂತೆ ಸಸ್ಯ  ಬೆಳವಣಿಗೆ ಕುಂಠಿತವಾಗುತ್ತದೆ. ಬಹುತೇಕ ಎಲೆಗಳು ಹಳದಿಯಾಗಿ ಒಣಗಿದರೆ ಮರ ಸಾಯಲೂ ಬಹುದು.  ಇದಕ್ಕೆ ಕಾರಣ ಒಂದು ಬಿಸಿಲು. ಬಿಸಿಲಿನ…

Read more
pest problem

ಅಡಿಕೆ ಹೂಗೊಂಚಲು ಒಣಗುತ್ತಿದೆಯೇ ? ಯಾವ ಕಾರಣ- ಪರಿಹಾರ.

ಅಧಿಕ ಆದಾಯದ ಅಡಿಕೆ ಬೆಳೆಯಲ್ಲಿ ಹೂಗೊಂಚಲು ಒಣಗುವ ಸಮಸ್ಯೆ ಅತೀ ದೊಡ್ಡದು. ಇದಕ್ಕೆ ಪರಿಹಾರ ಸಿಂಗಾರಕ್ಕೆ ಸಿಂಪರಣೆ ಒಂದೇ.ರಾಸಾಯನಿಕ ಸಿಂಪರಣೆ ಇಷ್ಟವಿಲ್ಲದವರು ಮರದಲ್ಲಿ ಒಣಗಿದ ಹೂಗೊಂಚಲು ಶೇಷವನ್ನು ಸಂಪೂರ್ಣವಾಗಿ ತೆಗೆದು ಸ್ವಲ್ಪ ಮಟ್ಟಿಗೆ ನಷ್ಟದಿಂದ ಪಾರಾಗಬಹುದು. ಕಳೆದ ವರ್ಷ ಅಡಿಕೆ ಬೆಳೆಗಾರರು ಭಾರೀ ಪ್ರಮಾಣದಲ್ಲಿ ಬೆಳೆ ನಷ್ಟ ಮಾಡಿಕೊಂಡಿದ್ದಾರೆ. ಕಾರಣ ಉತ್ತಮ ಹೂ ಗೊಂಚಲು ಇತ್ತು. ಆದರೆ ಹೂ ಗೋಂಚಲೆಲ್ಲಾ ಒಣಗಿ ಹಾಳಾಗಿದೆ. ಇದರಿಂದಾಗಿ ಬೆಳೆ ಸುಮಾರು 30% ನಷ್ಟವಾಗಿದೆ. ಈ ವರ್ಷ ಹಾಗಾಗಬಾರದು ಎಂದು ಬೆಳೆಗಾರರು…

Read more
betel leaf

ವೀಳ್ಯದೆಲೆ ಬೆಳೆಗಾರರೇ ನಿಮ್ಮ ಸಮಸ್ಯೆಗೆ ಇಲ್ಲಿದೆ ಉತ್ತರ.

ವೀಳ್ಯದೆಲೆ ಬೇಸಾಯ  ವಾರದ ಆದಾಯದ  ಬೆಳೆಯಾಗಿದ್ದು ಸಾಕಷ್ಟು ರೈತರು ನಿತ್ಯ ಖರ್ಚಿನ ಬೆಳೆಯಾಗಿ ಇದನ್ನು ಬೆಳೆಸುತ್ತಾರೆ. ಕರ್ನಾಟಕದಲ್ಲಿಇದರ ವಿಸ್ತೀರ್ಣ 8288 ಹೆಕ್ಟರ್ ಹಾಗೂ ಇಳುವರಿ 153600 ಮೆ.ಟನ್. ಎಲೆಗಳು ಉತ್ಪತ್ತಿಯಾಗುತ್ತಿದೆ.ಈ ಬೆಳೆಯಲ್ಲಿ ಇತ್ತೀಚೆಗೆ  ಕೆಲವು ರೋಗಗಳು ಬೆಳೆಗಾರರನ್ನು ಸೋಲಿಸುತ್ತಿದೆ. ಎಲೆ ಚುಕ್ಕೆ ರೋಗ, ಎಲೆ ಮುರುಟು ರೋಗ, ಹಾಗೆಯೇ ಎಲೆಯ ಸೊರಗು ರೋಗ, ಜೊತೆಗೆ ಬುಡ ಕೊಳೆಯುವ ರೋಗ ಹೆಚ್ಚಿನ ವೀಲ್ಯದೆಲೆ ಬೇಸಾಯಗಾರರು ಅನುಭವಿಸುತ್ತಿರುವ ಸಮಸ್ಯೆ. ಇಂತಹ ವೀಳ್ಯದೆಲೆಗೆ ಮಾರುಕಟ್ಟೆ ಮೌಲ್ಯ ಇರುವುದಿಲ್ಲ. ಕರ್ನಾಟಕದ ಪ್ರಮುಖ  ವೀಳ್ಯದೆಲೆ…

Read more

ಕರಿಮೆಣಸಿನ ಕಾಳಿನ ತೂಕ ಹೆಚ್ಚಿಸುವುದು ಹೇಗೆ.

ಇನ್ನೇನು ಕರಿಮೆಣಸಿನ ಕಾಳುಗಳು ಬೆಳೆಯುತ್ತಿವೆ. ಕೊಯಿಲು ತಡ ಮಾಡಿದಷ್ಟು ತೂಕ ಹೆಚ್ಚಾಗುತ್ತದೆ. ಒಂದು ಕಿಲೋ ಕರಿಮೆಣಸು ಆಗಲು ಎಷ್ಟು ಒಣ ಕಾಳುಗಳು ಬೇಕು. ಕೆಲವರು 2 ಸೇರು ಬೇಕು ಎನ್ನುತ್ತಾರೆ. ಮತ್ತೆ ಕೆಲವರು  1.75 ಸೇರು ಬೇಕು ಎನ್ನುತ್ತಾರೆ. ಮತ್ತೆ ಕೆಲವರು 1.5ಕಿಲೋ ಸಾಕು ಎನ್ನುತ್ತಾರೆ. ವಾಸ್ತವವಾಗಿ ಚೆನ್ನಾಗಿ ಬೆಳೆದ ಲೀಟರಿನ ಪಾತ್ರೆ (Liter waight)ತುಂಬ ಹಾಕಿದರೆ 750-800 ಗ್ರಾಂ  ಒಣ ತೂಕ ಬರುತ್ತದೆ. ಇದು ಹೇಗೆ ಇಲ್ಲಿದೆ ಮಾಹಿತಿ. ಮೆಣಸಿನ ಬಳ್ಳಿಗೆ ಆಹಾರ ನೀರು ದೊರೆತರೆ…

Read more
inline drip

ಅಧಿಕ ಫಸಲಿಗೆ ನೆರವಾಗುವ ಹೊಸ ಹನಿ ನೀರಾವರಿ ವ್ಯವಸ್ಥೆ.

ಇಡೀ ಹೊಲವನ್ನೇ ಅತ್ಯಂತ ಕಡಿಮೆ ಪ್ರಮಾಣದ ನೀರಿನಲ್ಲಿ ಒದ್ದೆ ಮಾಡುವ ಮಿತ ನೀರಾವರಿ ವ್ಯವಸ್ಥೆ ಎಂದರೆ ಇನ್ ಲೈನ್ ಡ್ರಿಪ್. ನೀರಾವರಿ ಮಾಡಿದ್ದು, ಸಸ್ಯದ ಎಲ್ಲಾ ಬೇರು ವಲಯಕ್ಕೂ ದೊರೆಯುವಂತೆ ಮಾಡಲು ಇನ್ ಲೈನ್ ಡ್ರಿಪ್ ಸೂಕ್ತ. ಇದು ಇಂಚು  ಇಂಚೂ ಭೂಮಿಯನ್ನು ಒದ್ದೆ ಮಾಡುತ್ತದೆ. ಅಲ್ಲೆಲ್ಲಾ ಬೇರುಗಳು ಚಟುವಟಿಕೆಯಿಂದ ಇರುತ್ತದೆ. ಹಾಗೆಂದು ಹನಿ ನೀರವಾರಿಯಷ್ಟೇ ನೀರಿನ ಬಳಕೆ ಆಗುತ್ತದೆ. ಇಂತಹ ನೀರಾವರಿ ವ್ಯವಸ್ಥೆಯಿಂದ ಬೆಳೆಯಲ್ಲಿ ಫಸಲು ಗಣನೀಯ ಹೆಚ್ಚಳವಾಗುತ್ತದೆ.ಹನಿ ನೀರಾವರಿ ಎಂದರೆ ಅದಕ್ಕೆ ಇನ್ನೊಂದು ಹೆಸರು…

Read more
border crops to pest attraction

ಕೀಟಗಳ ನಿಯಂತ್ರಣಕ್ಕೆ ಇದು ಸುರಕ್ಷಿತ ವಿಧಾನ.

ಕೀಟನಾಶಕ ಬಳಕೆಯಿಂದ ತಿನ್ನುವವರಿಗಿಂತ ಬಳಸುವವರಿಗೆ ತೊಂದರೆ ಜಾಸ್ತಿ. ಅದ ಕಾರಣ ಸಾಧ್ಯವಾದಷ್ಟು ಅದರ ಬಳಕೆ ಕಡಿಮೆ ಮಾಡಿ.  ಬಲೆ ಬೆಳೆ ಎಂದರೆ ಒಂದು ಬೆಳೆಗೆ ಬರುವ ಕೀಟವನ್ನು ಮತ್ತೊಂದು ಬೆಳೆಯ ಮೂಲಕ ಆಕರ್ಷಿಸುವುದು. ಮತ್ತು ಮುಖ್ಯ ಬೆಳೆಯನ್ನು ರಕ್ಷಿಸುವುದು.ಎಲ್ಲದಕ್ಕೂ ಕೀಟ  ನಾಶಕ ಪರಿಹಾರ ಅಲ್ಲ. ಅದು ಸಮಂಜಸ ಪರಿಹಾರವೂ ಅಲ್ಲ.  ಸುಲಭದಲ್ಲಿ  ಕೊಯ್ಯುವುದು ಸಾಧ್ಯವಿದ್ದರೆ ಅದರಿಂದಲೇ  ಕೊಯಿಲು ಮಾಡಬೇಕು. ಅಲ್ಲಿಗೆ ಕೊಕ್ಕೆ ಬೇಡ. ನಾವು ಈಗ ಕೊಕ್ಕೆ ಅನಿವಾರ್ಯವಾದಂತೆ  ವರ್ತಿಸುತ್ತೇವೆ. ಹುಳ ಬಿದ್ದಿದೆ ಯಾವ ಕೀಟ ನಾಶಕ…

Read more
Black rice

ಈ ಔಷಧೀಯ ಅಕ್ಕಿಗೆ ಮಾರುಕಟ್ಟೆಯಲ್ಲಿ ರೂ.150 ಬೆಲೆ.

ಅಸ್ಸಾಂ ನಲ್ಲಿ ಬೆಳೆಯುತ್ತಿದ್ದ ಕಪ್ಪು ಅಕ್ಕಿ ಈಗ ಮಲೆನಾಡಿನ ಸಕಲೇಶಪುರ ಸುತ್ತಮುತ್ತ ಬೆಳೆಯುತ್ತಿದ್ದು,  ಇದು ಔಷಧೀಯ ಅಕ್ಕಿಯಾಗಿ ಮಾರಲ್ಪಡುತ್ತದೆ. ಅಕ್ಕಿಯ ಬಣ್ಣ ಬಿಳಿ ಎಂಬುದು ಹೊಸ ತಲೆಮಾರಿನವರಿಗೆ ಗೊತ್ತಿರುವಂತದ್ದು.  ಕರಾವಳಿಯ ಜನಕ್ಕೆ ಕೆಂಪಕ್ಕಿ ( ಕಜೆ) ಗೊತ್ತು. ಉಳಿದೆಡೆ ಬಿಳಿ ಬೆಳ್ತಿಗೆ ಅಕ್ಕಿ. ಆದರೆ ಅಕ್ಕಿಯಲ್ಲಿ ಬೇರೆ ಬಣ್ಣದ ತಳಿಗಳೂ ಭಾರತವೂ ಸೇರಿದಂತೆ ಬೇರೆ ಭತ್ತ ಬೆಳೆಯುವ ಕಡೆ ಇತ್ತು. ಈಗ ಅದು ಅಳಿವಿನಂಚಿಗೆ ತಲುಪಿದೆ. ಅಕ್ಕಿಯಲ್ಲೂ  ಕೆಲವು ತಳಿಗಳಿಗೆ ಔಷಧೀಯ ಮಹತ್ವ ಇದ್ದು, ಅಂತದ್ದರಲ್ಲಿ ಕಪ್ಪಕ್ಕಿಯೂ…

Read more
tulasi tip

ತುಳಿಸಿ ಗಿಡ ಈಗ ಒಣಗುವುದೇಕೆ?

ತುಳಿಸಿ ಗಿಡಕ್ಕೆ ಸುತ್ತು ಬರಬೇಕು ಎನ್ನುತ್ತಾರೆ ಹಿರಿಯರು. ಬೆಳೆಗಳ ಬುಡಕ್ಕೆ ದಿನಾ ಹೋಗಬೇಕು ಎನ್ನುತ್ತಾರೆ  ಕೃಷಿ ವಿಜ್ಞಾನಿಗಳು. ಇದಕ್ಕೆ ಕಾರಣ ಇಲ್ಲಿದೆ. ತುಳಸಿ ಗಿಡದ ಸುತ್ತ ಒಂದು ಸುತ್ತು ಬಂದಾಗ ಎಲೆಗಳೆಲ್ಲಾ ಕಳೆಗುಂದಿರುವುದು ಕಂಡರೆ , ಎರಡನೇ ಸುತ್ತಿಗೆ ಎಲೆಯಲ್ಲಿ ಏನೋ ಇರುವುದೂ, ಮೂರನೇ ಸುತ್ತಿಗೆ ಮತ್ತೂ ಸ್ಪಷ್ಟತೆ, ಹೀಗೇ ಹತ್ತು ಸುತ್ತು ಬರುವಾಗ ಅಲ್ಲಿ ಏನಾಗಿದೆ ಎಂಬುದರ ಪೂರ್ಣ ಚಿತ್ರಣ ನಮಗೆ  ತಿಳಿಯುತ್ತದೆ. ತುಳಸಿ ಗಿಡಕ್ಕೆ ಸುತ್ತು ಬಂದಾಗ ಅದಕ್ಕೆ ಏನಾಗಿದೆ ಎಂಬುದನ್ನು ನೀವೇ ತಿಳಿದುಕೊಳ್ಳಬಹುದು. ತುಳಸಿ…

Read more
error: Content is protected !!