ಹೂ ಬಿಟ್ಟದ್ದೆಲ್ಲಾ ಕಾಯಿಯಾಗುವ ಉತ್ತಮ ತರಕಾರಿ ತೊಂಡೆ

ಮಂಗಗಳ ಕಾಟ ಇಲ್ಲದ ಲಾಭದ ತರಕಾರಿ ಬೆಳೆ ಇದು.

ಬಹುತೇಕ ತರಕಾರಿಗಳಲ್ಲಿ ಗಂಡು ಹೂವು, ಹೆಣ್ಣು ಹೂವು ಗಳಿರುತ್ತವೆ. ಗಂಡಿನ ಮೂಲಕ ಪರಾಗಸ್ಪರ್ಶ ಆಗಿ ಕಾಯಿ ಕಚ್ಚಬೇಕು. ಆದರೆ ತೊಂಡೆ ಕಾಯಿ ಹಾಗಲ್ಲ. ಎಲ್ಲಾ ಹೂವುಗಳೂ ಕಾಯಿಯಾಗುತ್ತದೆ. ತೊಂಡೆ ಕಾಯಿ ಬೇಡಿಕೆಯ ತರಕಾರಿ. ರಾಜ್ಯದ ಎಲ್ಲಾ ಕಡೆ  ಬೆಳೆಸಬಹುದು. ಒಮ್ಮೆ ತೊಂಡೆ ಬೆಳೆಸಿದವರು ಮತ್ತೆ  ಆ ಕೃಷಿ ಬಿಡುವುದಿಲ್ಲ. ಮಳೆ ಕಡಿಮೆ ಇರುವ ಕಡೆ ಇದನ್ನು ವರ್ಷದುದ್ದಕ್ಕೂ ಬೆಳೆಸಬಹುದು.  ಮಳೆ ಹೆಚ್ಚು ಇರುವಲ್ಲಿ ನವೆಂಬರ್ ತಿಂಗಳ ನಂತರ ಜೂನ್  ತನಕ ಬೆಳೆ  ಬೆಳೆಸಬಹುದು. 100 ಚದರ ಅಡಿಯ…

Read more
ಪರಭಕ್ಷಕ ಇರುವೆ

ಇರುವೆಗಳಿಂದ ಬೆಳೆಗೆ ತೊಂದರೆ ಇದೆಯೇ?

ಇರುವೆಗಳು ನಮ್ಮ ಹೊಲದಲ್ಲಿ ಅಲ್ಲಲ್ಲಿ ನೆಲದ ಮಣ್ಣನ್ನು ತಿರುವಿ ಹಾಕುವ  ಕೆಲಸವನ್ನು ಮಾಡುತ್ತವೆ. ಕೆಲವೊಮ್ಮೆ  ಹಣ್ಣು ಹಂಪಲುಗಳ ಮೇಲೆಯೂ ವಾಸಿಸುತ್ತವೆ. ಎಲೆಯಲ್ಲಿ ಗೂಡುಕಟ್ಟಿ ಕುಳಿತಿರುತ್ತವೆ. ಇವುಗಳಿಂದ ರೈತನಿಗೆ ಯಾವ ಹಾನಿಯೂ ಇಲ್ಲ. ಇವು ಒಂದು ದೃಷ್ಟಿಯಲ್ಲಿ  ಮಣ್ಣನ್ನು ಸುಸ್ಥಿತಿಯಲ್ಲಿಡುವ ಜೀವಿಗಳು. ಯಾರ ಮಣ್ಣಿನಲ್ಲಿ ಇರುವೆಗಳು ಚಟುವಟಿಕೆಯಲ್ಲಿ ಇರುತ್ತವೆಯೋ ಆ ಮಣ್ಣು ಫಲವತ್ತಾದ ಮಣ್ಣಾಗಿರುತ್ತದೆ. ಇರುವೆಗಳಲ್ಲಿ ಪ್ರಕಾರಗಳು: ನೆಲದಲ್ಲಿ ಹಲವಾರು ಬಗೆಯ ಇರುವೆಗಳು ವಾಸವಾಗಿರುತ್ತವೆ. ಸಾಮಾನ್ಯವಾಗಿ ನೆಲದಲ್ಲಿ  ಹರಿದಾಡುವ ಇರುವೆಗಳು ಬೇರೆ ಕಡೆ ವಾಸಿಸುವುದು ಅಪರೂಪ. ಕೆಲವು ಇರುವೆಗಳು…

Read more
ಭತ್ತದ ಬೆಳೆ ಹೊಲದಲ್ಲಿ ನವೀನ್ ಚಂದ್ರ ಜೈನ್ -Naveen chandra jain

ಭತ್ತ ಬೆಳೆಯುವವರು ಒಮ್ಮೆ ಇವರ ಅನುಭವವನ್ನು ಕೇಳಿ.

ಯಾವುದೇ ಬೆಳೆ ನಷ್ಟದ ಬೆಳೆ ಅಲ್ಲ. ಬೆಳೆಯ ಪೂರ್ವಾಪರವನ್ನು ಅರಿತುಕೊಳ್ಳಬೇಕು. ಆಯಾ ಬೆಳೆಗೆ ಏನು ಬೇಕು, ಹೇಗೆ ಬೆಳೆಯಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ಸಂದೇಹಗಳನ್ನು ಸಂಕೋಚ ಇಲ್ಲದೆ ತಜ್ಞರ ಮೂಲಕ ತಿಳಿದುಕೊಳ್ಳಬೇಕು. ಆಗ ಬೆಳೆ ಕಷ್ಟವಾಗುವುದಿಲ್ಲ. ನಷ್ಟವೂ ಆಗುವುದಿಲ್ಲ. ಯಾವುದರಲ್ಲೂ ಅದು ಕೃಷಿ ಇರಲಿ, ಉದ್ದಿಮೆ ಇರಲಿ, ನಷ್ಟ  ಆಗುವುದಲ್ಲ. ನಾವು ಮಾಡಿಕೊಳ್ಳುವುದು. ಇದು ನಿಟ್ಟೆ ಗುತ್ತು ನವೀನ್ ಚಂದ್ರ ಜೈನ್ ಅವರ ಅನುಭವ. ಇವರು ಎಲ್ ಎಲ್ ಬಿ ವ್ಯಾಸಂಗ ಮಾಡಿ ಆಯ್ಕೆ ಮಾಡಿಕೊಂಡದ್ದು ಕೃಷಿ ವೃತ್ತಿಯನ್ನು….

Read more
flower

ಸಾವಿರಗಟ್ಟಲೆ ಉಳಿಸುವ ಉಚಿತ ಔಷಧಿ ಸಸ್ಯ ಇದು.

ಸಾವಿರಗಟ್ಟಲೆ ಸಂದರ್ಶನ ಫೀಸ್ ಮತ್ತು ಸಾವಿರ ಲೆಕ್ಕದ ಮುಲಾಮು ಮಾತ್ರೆಗೆ ಖರ್ಚು ಮಾಡುವ ಬದಲು ಉಚಿತವಾಗಿ ಅ ಫಲವನ್ನು ಈ ಸಸ್ಯದ ಮೂಲಕ ಪಡೆಯಬಹುದು. ಇದು ಒಂದು ಸುಂದರ ಹೂ ಬಿಡುವ ಸಸ್ಯ. ಸಾಮಾನ್ಯವಾಗಿ ಹೊಳೆ ದಂಡೆ ಹಾಗೂ ರಸ್ತೆ ಬದಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದನ್ನು ಕರಾವಳಿಯ ಜನ ಆನೆ ಸಜಂಕು ( ದೊಡ್ದ ಚಗಚೆ) ಎಂದು ಕರೆಯುತ್ತಾರೆ. ಇದು ಅಸಾಮಾನ್ಯ ಔಷಧೀಯ ಸಸ್ಯವಾಗಿದ್ದು, ಮಹತ್ವ ಗೊತ್ತಿದ್ದವರು ಇದನ್ನು ತಮ್ಮ ಹೊಲದ ಬದಿಯಲ್ಲಿ ನೆಟ್ಟು ಬೆಳೆಸಿರುತ್ತಾರೆ….

Read more
ಉತ್ತಮ ಲಕ್ಷಣದ ಹಸು

ಉತ್ತಮ ಹಸುವಿನ ಆಯ್ಕೆಗೆ ಸೂಕ್ಷ್ಮ ಪರೀಕ್ಷೆಗಳು.

ಕೊಳ್ಳುವ ಹಸು ಮಾಲಕರು ಹೇಳಿದಂತೆ ಹಾಲು ಕೊಡುತ್ತದೆಯೇ, ಅವರು ಹೇಳುವುದರಲ್ಲಿ ಸತ್ಯ ಇದೆಯೇ ಎಂಬುದನ್ನು ಕೊಳ್ಳುವವರು ಪರೀಕ್ಷೆ ಮಾಡುವುದು ಅವನ ಹಕ್ಕು. ಇದಕ್ಕೆ ಕೊಡುವವರು ಆಕ್ಷೇಪ ಮಾಡಬಾರದು. ಹಾಲಿನ ಪರೀಕ್ಷೆ ಮತ್ತು ಹಾಲು ಹಿಂಡುವಾಗಿನ ಕೆಲವು ಪರೀಕ್ಷೆಗಳನ್ನು ಮಾಡಿ ಹಸುಕೊಂಡರೆ ಒಳ್ಳೆಯದು. ಹಾಲು ಇಳುವರಿ ಪರೀಕ್ಷೆ : ಹಸುವಿನಿಂದ ಒಂದೂವರೆ ದಿನದಲ್ಲಿ 3 ಬಾರಿ ಹಾಲನ್ನು ಕರೆದು, ದಿನಕ್ಕೆ ಎಷ್ಟು ಹಾಲು ಕೊಡುತ್ತದೆಂದು ತಿಳಿದುಕೊಳ್ಳಬಹುದು. ಹಸು ಬೇಗ ಹಾಲು ತೊರೆ ಬಿಡಬೇಕು. ಮೊಲೆಗಳು ಗಟ್ಟಿಯಾಗಿರಬಾರದು. ನಾಲ್ಕು ಮೊಲೆಗಳಿಂದ…

Read more
ಶುಂಠಿ ತಳಿ ರೆಯೋಡಿಜೆನೆರಾ

ಶುಂಠಿ ಬೆಳೆಯುವ ರೈತರೆಲ್ಲರೂ ತಿಳಿದಿರಬೇಕಾದ ತಳಿ ಪರಿಚಯ.

ಶುಂಠಿ ಬೆಳೆಯುವ ರೈತರು ಬರೇ ಇಳುವರಿ ಒಂದನ್ನೇ ನೋಡುವುದಲ್ಲ. ಇಳುವರಿಯ ಜೊತೆಗೆ ಒಣ ತೂಕದ ಪ್ರಮಾಣ, ಅದರಲ್ಲಿ ನಾರಿನ ಅಂಶ ಹಾಗೆಯೇ ಅದರ ಓಲಿಯೋರೈಸಿನ್  ಎಣ್ಣೆ ಅಂಶ ಇವುಗಳನ್ನೂ ನೊಡಬೇಕು. ಮಾರುಕಟ್ಟೆಯಲ್ಲಿ  ಇಂತಹ ಆಯ್ಕೆ ತಳಿಗಳಿಗೆ ಬೇಡಿಕೆಯೇ ಬೇರೆ ಇರುತ್ತದೆ. ಬೆಲೆಯೂ ಹೆಚ್ಚು ದೊರೆಯುತ್ತದೆ. ಶುಂಠಿ (ಜಿಂಜಿಬರ್ ಆಪಿಸಿನೇಲ್) ಜಿಂಜಿಬರೆಸಿ ಕುಟುಂಬಕ್ಕೆ ಸೇರಿದ ಬಹುವಾರ್ಷಿಕ ವಾಣಿಜ್ಯ ಬೆಳೆ.   ಇದಕ್ಕೆ ಇರುವ ಬೇಡಿಕೆ ಮತ್ತು ಬೆಲೆ ಬಹಳಷ್ಟು ಪ್ರದೇಶ ವಿಸ್ತರಣೆಗೆ ಕಾರಣವಾಗಿದೆ. ರಾಜ್ಯದ ಕರಾವಳಿ, ಮಲೆನಾಡು, ಅರೆ…

Read more
fruit

ಇದು ಆರೋಗ್ಯ ರಕ್ಷಕ ಹಣ್ಣು ಗೊತ್ತೇ?

ದಾರೆ ಹುಳಿ ಎಂದು ಸಾಮಾನ್ಯ ಆಡು ಭಾಷೆಯಲ್ಲಿ ಕರೆಯಲ್ಪಡುವ  ಈ ಹಣ್ಣು ಹುಳಿ ಮತ್ತು ಸಿಹಿ ರುಚಿಯಲ್ಲಿ  ಇರುತ್ತದೆ. ಸಾಮಾನ್ಯವಾಗಿ ಇದನ್ನು ಹಳ್ಳಿಗಳಲ್ಲಿ  ಬೆಳೆಸಿ ಅದನ್ನು ಹುಳಿಯ ಬದಲಿಗೆ  ಉಪಯೋಗ ಮಾಡುತ್ತಾರೆ. ಇದು ಆರೋಗ್ಯಕ್ಕೆ ಉತ್ತಮ ಹಣ್ಣು.  ಬಹಳಷ್ಟು ಔಷಧೀಯ ಗುಣಗಳನ್ನು  ಹೊಂದಿದೆ.ನಾವು ಸಣ್ಣವರಿದ್ದಾಗ ಲಿಂಬೆ ಹುಳಿ ಶರಬತ್ತಿನ ಬದಲು ಇದನ್ನು ಹಿಚುಕಿ ಬೆಲ್ಲ ಹಾಕಿ ಕುಡಿಯುತ್ತಿದ್ದ ನೆನಪು ಈಗಲೂ ಇದೆ. ಸಸ್ಯ ಮೂಲ:  ಕನ್ನಡದಲ್ಲಿ ಇದನ್ನು ಕರಿಮಾದಲ,  ದಾರೆ ಹುಳಿ,  ಕಮ್ರ  ದ್ರಾಕ್ಷಿ,  ಕೊಮರಿಕೆ  ಆಂಗ್ಲ…

Read more
ಹೊಲಕ್ಕೆ ಯೂರಿಯಾ ಎಸೆಯುತ್ತಿರುವ ರೈತ

ಯೂರಿಯಾ ಗೊಬ್ಬರ –ಖರೀದಿ ಇನ್ನು ಕಷ್ಟವಾಗಲಿದೆ!

ರೈತರ ಬೆಳೆ ಪೋಷಣೆಗೆ ಬೇಕಾಗುವ ರಾಸಾಯನಿಕ ಗೊಬ್ಬರಗಳಿಗೆ ಭಾರತ ಸರಕಾರ ಸಬ್ಸಿಡಿ ನೀಡುತ್ತದೆ. ಆದ ಕಾರಣ ಅದು ನಮಗೆ ಮಿತ ದರದಲ್ಲಿ ಲಭ್ಯವಾಗುತ್ತದೆ. ಈ ಸಬ್ಸಿಡಿ  ದುರುಪಯೋಗವಾಗುತ್ತಿದೆ. ಮನಬಂದಂತೆ ಯೂರಿಯಾ ಗೊಬ್ಬರ ಖರೀದಿ ಮಾಡಿ, ಅದನ್ನು ಬೇರೆ ಉದ್ದೇಶಗಳಿಗೂ ಬಳಕೆ ಮಾಡುತ್ತಾರೆ ಎಂಬ ಕಾರಣಕ್ಕೆ ಇನ್ನು ಆಯಾ ಹಂಗಾಮಿನಲ್ಲಿ ಮಾತ್ರ ನಿಗದಿಪಡಿಸಿದ ಪ್ರಮಾಣದ ಗೊಬ್ಬರ ಮಾತ್ರ ಖರೀದಿಗೆ ಅವಕಾಶ ಕಲ್ಪಿಸಲಾಗುತ್ತದೆ. ಈ ನಿಬಂಧನೆ ಜ್ಯಾರಿಯಾಗಿ ಎರಡು ವರ್ಷಗಳೇ ಆಗಿದ್ದರೂ ಈಗ ಎಲ್ಲಾ ರಸಗೊಬ್ಬರ ಮಾರಾಟ ಮಾಡುವ ಅಂಗಡಿಗಳವರೂ ಇದನ್ನು ಕಡ್ದಾಯವಾಗಿ…

Read more
ಬಾಳೆ ಗೊನೆಗೆ ಕವರ್ ಹಾಕಿರುವುದು- Covering for banana bunch

ಬಾಳೆ ಗೊನೆಗೆ ಕವರ್ ಹಾಕಿದರೆ ಹೆಚ್ಚು ಬೆಲೆ.

ಈಗ ಮಾರುಕಟ್ಟೆಯಲ್ಲಿ ದೊರೆಯುವ ಬಾಳೆ ಹಣ್ಣುಗಳನ್ನು ಸರಿಯಾಗಿ ಗಮನಿಸಿದ್ದೀರಾ? ಅವುಗಳ ಮೇಲೆ ಒಂದೇ ಒಂದು ಕಲೆ ಕೂಡಾ ಇರುವುದಿಲ್ಲ. ಹಣ್ಣು ತಿನ್ನುವ ಮುಂಚೆ ಅದನ್ನು ತೊಳೆದು ತಿನ್ನಬೇಕು ಎನ್ನುತ್ತಾರೆ. ಆದರೆ ಇದನ್ನು ಕೈತೊಳೆದು ಮುಟ್ಟುಬೇಕು ಎಂಬಷ್ಟು ಸ್ವಚ್ಚವಾಗಿರುತ್ತದೆ. ಹಣ್ಣು ನೋಡಿದರೆ ಎಂತವನಿಗೂ  ಕೊಳ್ಳುವ ಮನಸ್ಸಾಗಬೇಕು.  ಇದು ಗಾಳೆ ಗೊನೆಗೆ ಕವರ್ ಹಾಕಿ ಬೆಳೆದ ಕಾಯಿಯಾಗಿದ್ದು, ಮಾರುಕಟ್ಟೆಯಲ್ಲಿ ಇದಕ್ಕೆ ಉತ್ತಮ ಬೇಡಿಕೆ. ಮುಂದಿನ ದಿನಗಳಲ್ಲಿ ಇದು ಮಾಮೂಲಿಯಾಗಲಿದೆ.  ಬಹಳ ಹಿಂದಿನಿಂದಲೂ ವಿದೇಶಗಳಿಗೆ ರಪ್ತು ಮಾಡುವ ಉದ್ದೇಶದ ಬಾಳೆ ಕಾಯಿಗಳಿಗೆ…

Read more
ಒಂದು ಗಿಡದಲ್ಲಿ ಬೆಳೆದ ಅರಶಿನ, ಸಾಂಗ್ಲಿ ಸ್ಥಳೀಯ ತಳಿ

ಅರಿಶಿಣ ಬೆಳೆಯುವವರು ಯೋಗ್ಯ ತಳಿಗಳ ಬಗ್ಗೆ ತಿಳಿದಿರಿ.

ಅರಶಿನ ಒಂದು ಪ್ರಮುಖ  ಸಾಂಬಾರ ಬೆಳೆಯಾಗಿದ್ದು, ಉತ್ತರ ಕರ್ನಾಟಕದ  ಬಾಗಲಕೋಟೆ,  ಬೆಳಗಾವಿ, ಬಿಜಾಪುರದ ಕೆಲ ಭಾಗಗಳಲ್ಲಿಯೂ, ದಕ್ಷಿಣ ಕರ್ನಾಟಕದ ಮಂಡ್ಯ, ಕೊಳ್ಳೇಗಾಲ ಕಡೆ ಅಧಿಕ ಪ್ರಮಾಣದಲ್ಲೂ, ಉಳಿದ ಕಡೆಗಳಲ್ಲಿ ಅಲ್ಪ ಸ್ವಲ್ಪ ಪ್ರಮಾಣದಲ್ಲಿಯೂ ಬೆಳೆಯಲಾಗುತ್ತದೆ. ಇದು ಒಂದು ಔಷಧೀಯ ಮತ್ತು ಸಾಂಬಾರ ರೂಪದಲ್ಲಿ ಬಳಸಲ್ಪಡುವ ವಸ್ತುವಾಗಿರುವುದರಿಂದ ಉತ್ತಮ ಬೇಡಿಕೆ ಇದೆ. ಉಳಿದ ಸಾಂಬಾರ ಬೆಳೆಗಳಿಗಿಂತ ಇದರ ಬೆಳೆ ಸುಲಭ. ಭಾರತದಲ್ಲಿ ಹಲವಾರು ಅರಿಶಿಣ ತಳಿಗಳು ಲಭ್ಯವಿದ್ದು, ಕೃಷಿ ಪ್ರದೇಶಕ್ಕೆ ಅನುಗುಣವಾಗಿ ಸ್ಥಾನಿಕ ಹೆಸರುಗಳನ್ನು ಕೊಡಲಾಗಿದೆ. ಮುಖ್ಯವಾಗಿ ಜನಪ್ರಿಯ…

Read more
error: Content is protected !!