
ದನಗಳು ಇನ್ನು ಹಾಲು ಕೊಡಲಾರವು!
ಕೆಲ ದಿನಗಳ ಹಿಂದೆ ಶ್ರೀ ರಮೇಶ್ ದೇಲಂಪಾಡಿಯವರು ಅನಿಲ್ ಕುಮಾರ್ ಜಿ ಅವರ ಒಂದು ಪೋಸ್ಟ್ ಹಂಚಿಕೊಂಡಿದ್ದರು. ದನಗಳು ಹಾಲು ಕೊಡುವುದಿಲ್ಲ ಎಂಬ ವಿಚಾರವನ್ನು ಮಕ್ಕಳಿಗೆ ತಿಳಿಸುವ ಒಂದು ಅರ್ಥಗರ್ಭಿತ ಬರಹ. ಇದಕ್ಕೆ ಪೂರಕವಾಗಿ ಇಂದಿನ ಹಸು ಸಾಕಾಣೆ ಮತ್ತು ಅದನ್ನು ಮುಂದುವರಿಸುವ ಕಷ್ಟದ ಬಗ್ಗೆ ಇಲ್ಲಿ ಕೆಲವು ವಿಚಾರಗಳನ್ನು ಹಂಚಿಕೊಳ್ಳಲಿದ್ದೇವೆ. ಅನಾದಿ ಕಾಲದಿಂದಲೂ ಹಸು ಸಾಕುವುದು ಮಾನವನ ಒಂದು ಉಪಕಸುಬಾಗಿತ್ತು. ಹಸುಗಳನ್ನು ಸಾಕಿದರೆ ಮಾತ್ರ ಅದು ಉಳಿಯುತ್ತದೆ. ಇದು ಅನ್ಯರ ಆಶ್ರಯದಲ್ಲಿ ಬೆಳೆಯಬೇಕಾದ ಪ್ರಾಣಿ. ಅದಕ್ಕಾಗಿಯೇ…