ಮೆಣಸಿನ ಬೆಳೆಯ ಈ ಸಮಸ್ಯೆಗೆ ಕಾರಣ ಮತ್ತು ಪರಿಹಾರ

ಮೆಣಸು ಬೆಳೆಗೆ ಈ ಸಮಸ್ಯೆ ಯಾಕೆ ಬರುತ್ತದೆ? ಪರಿಹಾರ ಏನು?

ಮೆಣಸು ಬೆಳೆಯಲ್ಲಿ ಎಲೆ ಮುರುಟುವಿಕೆ ಒಂದು ಸಮಸ್ಯೆಯಾದರೆ ಇನ್ನೊಂದು ಸಮಸ್ಯೆ  ಕಾಯಿ ಈ ರೀತಿ ಆಗಿ ಕೊಳೆತು ಹೋಗುವುದು. ಕೆಲವು ಪ್ರದೇಶಗಳಲ್ಲಿ ಈ ಸಮಸ್ಯೆ ಬಹಳಶ್ಟು ಹೆಚಾಗುತ್ತಿದ್ದು, ಮೆಣಸು ಬೆಳೆಯನ್ನೇ ಬಿಡುವ ವರೆಗೆ ಪರಿಸ್ಥಿತಿ ಬಿಗಡಾಯಿಸಿದೆ. ಇದು ಯಾವ ಕಾರಣಕ್ಕೆ ಹೀಗೆ ಆಗುತ್ತದೆ, ಕೀಟ ಸಮಸ್ಯೆಯೇ ಅಥವಾ ರೋಗವೇ ಎಂಬುದನ್ನು ಇಲ್ಲಿ ನೋಡೋಣ. ನಮ್ಮ ದೇಶದಲ್ಲಿ ಮೆಣಸು ಒಂದು ಪ್ರಾಮುಖ್ಯ ಸಾಂಬಾರ ಬೆಳೆ. ಇಲ್ಲಿನ ಮೆಣಸಿಗೆ ಜಾಗತಿಕ ಮನ್ನಣೆ ಇದೆ. ರಪ್ತು ಸಹ ಆಗುತ್ತದೆ. ಕೆಲವೊಮ್ಮೆ ಇಲ್ಲಿಂದ…

Read more
ಎಲೆ ಚುಕ್ಕೆ ರೋಗ ಔಷದೋಪಚಾರ – ತಿಳಿದು ಮಾಡದಿದ್ದರೆ ಸಮಸ್ಯೆ ಇನ್ನೂ ಹೆಚ್ಚಾಗಬಹುದು

ಎಲೆ ಚುಕ್ಕೆ ರೋಗ ಉಪಚಾರ – ತಿಳಿದು ಮಾಡದಿದ್ದರೆ ಸಮಸ್ಯೆ ಇನ್ನೂ ಹೆಚ್ಚಾಗಬಹುದು.

ಎಲೆ ಚುಕ್ಕೆ ರೋಗಕ್ಕೆ ಸಿಕ್ಕ ಸಿಕ್ಕ ಔಷದೋಪಚಾರ ಮಾಡಬೇಡಿ. ಯಾರೋ ಹೇಳಿದರು ಎಂದು ಅದನ್ನು ಸಿಂಪಡಿಸುವುದು, ಅಥವಾ ನಾವೇ ಪ್ರಯೋಗ ಮಾಡಿ ನೋಡುವುದು ಮಾಡುವುದರ ಬದಲು ಸ್ವಲ್ಪ ಯೋಚಿಸಿ ಅಥವಾ ಈ ಬಗ್ಗೆ ಸ್ವಲ್ಪ ತಿಳಿದವರಲ್ಲಿ ಕೇಳಿಕೊಳ್ಳಿ. ರೋಗಗಳಿಗೆ ಕೆಲವು ಔಷಧಿಗಳು ನಿರೋಧಕ ಶಕ್ತಿ ಪಡೆದಿರಬಹುದು ಅಥವಾ ಅದು ಸಂಬಂಧಿಸಿದ ರೋಗಾಣುವಿಗೆ ಸೂಕ್ತ ಔಷದೋಪಚಾರ ಆಗಿರದೇ ಇರಬಹುದು. ಹಾಗಾಗಿ ಹುರುಳಿಲ್ಲದ ಸಲಹೆಗಳಿಗೆ ಮಾನ್ಯತೆ ಕೊಡುವ ಬದಲು ಸ್ವಲ್ಪ ನೀವೇ ವಿಮರ್ಶೆ ಮಾಡಿಕೊಳ್ಳಿ. ಒಬ್ಬರು ಎಲೆ ಚುಕ್ಕೆ ರೋಗ…

Read more
ಅಡಿಕೆ ಸಸಿ ಆಯ್ಕೆ ಮಾಡುವಾಗ ಈಗ ಯಾವ ಮುಂಜಾಗ್ರತೆ ವಹಿಸಬೇಕು?

ಅಡಿಕೆ ಸಸಿ ಆಯ್ಕೆ ಮಾಡುವಾಗ ಈಗ ಯಾವ ಮುಂಜಾಗ್ರತೆ ವಹಿಸಬೇಕು?

ಅಡಿಕೆ ತೋಟ ಮಾಡುವವರು  ಹಿಂದೆ ಇಂತಹ ಸಸಿ ಒಳ್ಳೆಯಯದು, ಇದನ್ನು ಆಯ್ಕೆ ಮಾಡಬೇಕು ಎಂದೆಲ್ಲಾ ಮುಂಜಾಗ್ರತಾ ಕ್ರಮ ಅನುಸರಿಸುತ್ತಿದ್ದರು. ಈಗಿನ ಪರಿಸ್ಥಿತಿಯಲ್ಲಿ ಗಮನಿಸಬೇಕಾದದ್ದು ಗಿಡದ ತಳಿ, ಬೆಳವಣಿಗೆ ಲಕ್ಷಣ ಮಾತ್ರವಲ್ಲದೆ ಗಿಡದ ಆರೋಗ್ಯವೂ ಸಹ. ಎಳೆ ಗಿಡಗಳ ಆರೋಗ್ಯ ಹೇಗಿದೆ ಎಂಬುದನ್ನು ಕೂಲಂಕುಶವಾಗಿ ನೋಡಿ ನಂತರ ಆಯ್ಕೆ ಮಾಡಿ ನೆಡಬೇಕು. ಬರೇ ಅಡಿಕೆ ಮಾತ್ರವಲ್ಲ ತೆಂಗಿನ ಸಸಿಯೂ ಹಾಗೆಯೇ.  ಅಡಿಕೆ ಸಸಿ ನೆಡುವವರು ಅದು ಅವರೇ ಮಾಡಿದ ಗಿಡ ಇರಬಹುದು ಅಥವಾ ನರ್ಸರಿಯಿಂದ ಖರೀದಿ ಮಾಡಿ ನೆಡುವುದೇ…

Read more
ಅಡಿಕೆ ತೋಟ ಮಾಡಬೇಡಿ – ಸದ್ಯಕ್ಕೆ ಮುಂದೂಡಿ

ಅಡಿಕೆ ತೋಟ ಮಾಡಬೇಡಿ – ಸದ್ಯಕ್ಕೆ ಮುಂದೂಡಿ – ಪರಿಸ್ಥಿತಿ ಅನುಕೂಲಕರವಾಗಿ ಇಲ್ಲ.

ಅಡಿಕೆ ಎಂದರೆ ಚಿನ್ನದ ಬೆಳೆ ಎಂದು ತೋಟ ಮಾಡುವವರು ಅಪರಿಮಿತ ಸಂಖ್ಯೆಯಲ್ಲಿ ಹೆಚ್ಚುತ್ತಿದ್ದಾರೆ. ಆದರೆ ಕಳವಳದ ಸಂಗತಿ ಎಂದರೆ ಪ್ರಕೃತಿ ಅಡಿಕೆ ಬೆಳೆಗೆ ಸ್ವಲ್ಪ ಮಟ್ಟಿಗೆ ಮುನಿಸಿಕೊಂಡಂತೆ ಕಾಣಿಸುತ್ತಿದೆ. ಆದ ಕಾರಣ ಸ್ವಲ್ಪ ಸಮಯದ ವರೆಗೆ ಅಡಿಕೆ ಬೆಳೆ ವಿಸ್ತರಣೆ, ಹೊಸ ತೋಟ ಮಾಡುವುದನ್ನು ನಿಲ್ಲಿಸಿ. ಇರುವ ತೋಟದ ಆರೈಕೆಯನ್ನು ಉತ್ತಮಪಡಿಸಿ ಹೆಚ್ಚಿನ ಇಳುವರಿ ತೆಗೆಯುವ ಬಗ್ಗೆ ಗಮನಹರಿಸಿ. ಅಡಿಕೆ ಬೆಳೆಗೆ ಅದರಲ್ಲೂ ಸಸಿಗಳಿಗೆ ವಿಪರೀತವಾಗಿ ಎಲೆ ಚುಕ್ಕೆ ರೋಗ  ಬಾಧಿಸುತ್ತಿದ್ದು, ಏನೇ ಸಾಹಸ ಮಾಡಿದರೂ ಇದರನ್ನು…

Read more
ಕೊಳೆರೋಗ ಹೆಚ್ಚಳಕ್ಕೂ ಸಸ್ಯ ಆರೋಗ್ಯ

ಕೊಳೆ ರೋಗ ಹೆಚ್ಚಳಕ್ಕೂ ಸಸ್ಯ ಆರೋಗ್ಯಕ್ಕೂ  ಸಂಬಂಧಗಳಿರಬಹುದೇ ಯೋಚಿಸಿ.

ಈ ವರ್ಷ ಬಹಳಷ್ಟು ಅಡಿಕೆ ಬೆಳೆಗಾರರು ಅಡಿಕೆ ಕಾಯಿಗಳಿಗೆ ಕೊಳೆ ರೋಗ ಬಂದಿದೆ ಎಂದು ಹೇಳುತ್ತಿದ್ದಾರೆ.  ಹೆಚ್ಚಿನ ಕಡೆ ಕೊಳೆ ರೋಗ ಬಂದಿದೆ. ಇದಕ್ಕೆ ಸಸ್ಯ ಆರೋಗ್ಯ  ಕಾರಣ ಇರಬಹುದೇ? ಕೆಲವು ದೃಷ್ಟಿಕೋನದಲ್ಲಿ ಇದು ನಿಜ ಎನ್ನಿಸುತ್ತದೆ. ಅಡಿಕೆಯ ಕೊಳೆ ರೋಗ ಬಂದಂತೆ ಅಡಿಕೆ ಸಸಿ/ ಮರಗಳಿಗೆ , ತೆಂಗಿನ ಮರಗಳಿಗೆ ಸುಳಿ ಕೊಳೆ ರೋಗವೂ  ಇತ್ತೀಚೆಗೆ ಬಹಳಷ್ಟು ಹೆಚ್ಚಾಗುತ್ತಿದೆ. ಪೋಷಕಾಂಶಗಳು ಅಸಮತೋಲನವಾಗಿ ಸಸ್ಯಕ್ಕೆ ಲಭ್ಯವಾಗದಿರುವುದೇ ಇದಕ್ಕೆ ಒಂದು ಕಾರಣ ಇರಬಹುದೇ ಎಂಬ ಬಗ್ಗೆ ಸಂಶಯವಿದೆ.  ನಾವೆಲ್ಲಾ…

Read more
ಅಡಿಕೆ ಬೆಳೆಗಾರರನ್ನು ಬೆನ್ನತ್ತಿದೆ ಕೊಳೆರೋಗ

ಅಡಿಕೆ ಬೆಳೆಗಾರರನ್ನು ಬೆನ್ನತ್ತಿದೆ ಕೊಳೆರೋಗ – ಕಾರಣ ಏನು ಗೊತ್ತೇ?

ಕೊಳೆರೋಗ ಅಡಿಕೆ ಬೆಳೆಗೆ, ಕರಿಮೆಣಸು, ಕೊಕ್ಕೋ, ಹಾಗೆಯೇ ಇನ್ನಿತರ ಬೆಳೆಗಳಿಗೆ ಮಳೆಗಾಲದಲ್ಲಿ ಕಾಡುವ ಅತೀ ದೊಡ್ಡ ಸಮಸ್ಯೆಯಾಗಿದ್ದು, ಈ ರೋಗವು ಬರೇ ಬೆಳೆ ಮಾತ್ರವಲ್ಲದೆ ಮರವನ್ನೂ ನಿತ್ರಾಣಗೊಳಿಸುತ್ತದೆ. ರೋಗ ಹೆಚ್ಚಳಕ್ಕೆ ವಾತಾವರಣದ ಜೊತೆಗೆ ನಾವು ತೆಗೆದುಕೊಳ್ಳುವ ಮುನ್ನೆಚ್ಚರಿಕಾ ವಿಧಾನವೂ ಒಂದು ಕಾರಣವಾಗಿದೆ. ಈ ವರ್ಷ ಜುಲೈ ತಿಂಗಳಲ್ಲಿ ಬಂದ ಮಳೆಯ ಕಾರಣ ಹೆಚ್ಚಿನವರ ತೋಟದಲ್ಲಿ ಕೊಳೆ ರೋಗ ಪ್ರಾರಂಭವಾಗಿದೆ. ಅಡಿಕೆಗೆ ಕಾಯಿಗೆ ಕೊಳೆ ಬಂದು ಉದುರುವುದು, ಅದು  ಉಲ್ಬಣವಾದರೆ ಗೊನೆ ಬುಡದ ಮೃದು ಭಾಗದ ಮೂಲಕ  ಸುಳಿಗೆ…

Read more
ಸುಣ್ಣ ಮತ್ತು ಮೈಲುತುತ್ತೆ ಸೇರಿಸಿ ತಯಾರಿಸಿದ ಬೋರ್ಡೋ ದ್ರಾವಣ

ಬೋರ್ಡೋ ದ್ರಾವಣದ ಸುಣ್ಣ – ರೈತರ ಸಂದೇಹಗಳಿಗೆ ಉತ್ತರ.

ಕೆಲವು ದಿನಗಳಿಂದ ಅಡಿಕೆ , ಕಾಫಿ, ಕರಿಮೆಣಸು ಮುಂತಾದ ಬೆಳೆಗಾರರು ಬೋರ್ಡೋ ದ್ರಾವಣ ಸಿಂಪರಣೆಗಾಗಿ ಬಳಕೆ ಮಾಡುವ ಹುಡಿ ಸುಣ್ಣದ ಬಗ್ಗೆ ಕೆಲವು ಸಂದೇಹಗಳು ಉಧ್ಬವವಾಗಿದೆ. ಕೆಲವು ಬ್ರಾಂಡ್ ನ ಸುಣ್ಣ ಬಳಕೆ ಮಾಡದಂತೆ ಕೃಷಿ ಇಲಾಖೆ ಆದೇಶ ಹೊರಡಿಸಿದ ಪ್ರತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದೆಲ್ಲದರ ನಡುವಿನಲ್ಲಿ ಎಲ್ಲಾ ಸುಣ್ಣದ ಮೇಲೂ ರೈತರು ಸಂದೇಹ ಪಡುವಂತಾಗಿದೆ. ಈ ಕುರಿತಂತೆ ರೈತರ ಸಂದೇಹಗಳಿಗೆ ಉತ್ತರ ಇಲ್ಲಿದೆ. ಸುಣ್ಣವನ್ನು ಸಿಂಪರಣೆಗೆ ಕ್ಯಾಲ್ಸಿಯಂ ಮೂಲಕ್ಕಾಗಿ ಬಳಕೆ ಮಾಡಲಾಗುತ್ತದೆ. ಕ್ಯಾಲ್ಸಿಯಂ ಮೂಲವಸ್ತುಗಳನ್ನು…

Read more
ಬೋರ್ಡೋ ದ್ರಾವಣ ಸಿಂಪರಣೆ

ಬೋರ್ಡೋ ದ್ರಾವಣ ಸಿಂಪರಣೆ ಮತ್ತು ಕೆಲವು ಸೂಕ್ಷ್ಮಗಳು.

ಅಡಿಕೆಯ ಕೊಳೆ ರೋಗ ನಿಯಂತ್ರಿಸುವ ಉಪಚಾರವಾಗಿ ಬೋರ್ಡೋ ದ್ರಾವಣದ ಸಿಂಪರಣೆಯನ್ನು ಮಾಡಲಾಗುತ್ತದೆ. ವಿವಿಧ ನಮೂನೆಯ ತುತ್ತೆ, ಸುಣ್ಣ, ಗಮ್ ಗಳು ಇರುವಾಗ ರೈತರಿಗೆ ದ್ವಂದ್ವ ಉಂಟಾಗುವುದು ಸಹಜ. ಈ ನಿಟ್ಟಿನಲ್ಲಿ ಕೆಲವು ಸೂಕ್ಷ್ಮ ವಿಚಾರಗಳೊಳಗೊಂಡ ಮಾಹಿತಿ ಇಲ್ಲಿದೆ. ಬೊರ್ಡೋ ದ್ರಾವಣವನ್ನು ಪ್ರಪ್ರಥಮವಾಗಿ,  ಪ್ರಾನ್ಸ್ ದೇಶದ ಬೋರ್ಡೋ ಎಂಬ ಪ್ರಾಂತದಲ್ಲಿ ದ್ರಾಕ್ಷಿ ಬೆಳೆಗೆ ಶಿಲೀಂದ್ರಗಳಿಂದ ಉಂಟಾಗುವ ರೋಗ ನಿಯಂತ್ರಣಕ್ಕೆ ಬಳಸುತ್ತಿದ್ದರಂತೆ. ಅದನ್ನು ಬ್ರಿಟೀಷರ ಕಾಲದಲ್ಲಿ ಆಗಿನ ಮೈಸೂರು ಸರಕಾರದ ಕೃಷಿ ಅಧಿಕಾರಿಯಾಗಿದ್ದ ಲೆಸ್ಲಿ ಸಿ ಕೋಲ್ಮನ್ ಇವರು  ನಮ್ಮ…

Read more
ಈ ರೋಗ ಬಂದರೆ ಉಪಚಾರಕ್ಕೆ ಅದರ ಫಸಲು ಸಾಲದು

ಸ್ಥಳೀಯ ತಳಿಗಳಿಗೆ ಆದ್ಯತೆ ನೀಡಿ-ಇದುವೇ ಶಾಶ್ವತ.

ಸ್ಥಳೀಯ ತಳಿಗಳು ಅನಾದಿ ಕಾಲದಿಂದಲೂ ನಮ್ಮ ಸ್ಥಳಕ್ಕೆ ಹೊಂದಿಕೊಂಡ ತಳಿಗಳಾದ ಕಾರಣ ಇವು ಎಲ್ಲಾ ದೃಷ್ಟಿಯಲ್ಲೂ ಸುರಕ್ಷಿತ ಮತ್ತು ಶಾಶ್ವತ. ಅಧಿಕ ಇಳುವರಿ ಇಲ್ಲ ಎಂಬ ಕಾರಣಕ್ಕೆ ನಾವು ಸ್ಥಳೀಯ ತಳಿಗಳನ್ನು ದೂರ ಇಡುವುದು ಸೂಕ್ತವಲ್ಲ. ಅದನ್ನು ಉಳಿಸಿಕೊಳ್ಳಲೇ ಬೇಕು. ಬೇರೆ ತಳಿಗಳು ಇರಲಿ, ಆದರೆ ಸ್ಥಳೀಯ ತಳಿಗಳನ್ನು ಮಾತ್ರ ಬಿಡಬೇಡಿ. ಯಾಕೆ ಇಲ್ಲಿ ಈ ಪ್ರಸ್ತಾಪ ಎನ್ನುತ್ತೀರಾ? ಬಹುತೇಕ ರೋಗ ರುಜಿನಗಳು, ಕೀಟ ಕಸಾಲೆಗಳು ಮೊದಲಾಗಿ ಧಾಳಿ ಮಾಡುವುದು ಇದೇ ಅಧಿಕ ಇಳುವರಿಯ ಅಥವಾ ವಿಶಿಷ್ಟ…

Read more

ಕೊಳೆ ರೋಗ ಬಂದಿದೆಯೇ?ಹಾಗಿದ್ದರೆ ನೀವು ಮಾಡಬೇಕಾದ ಅಗತ್ಯ ಕೆಲಸ ಏನು?

ಈ ವರ್ಷ ಮಳೆಯ ಅರ್ಭಟ ಸ್ವಲ್ಪ ಕಡಿಮೆಯಾದ ಕಾರಣ ಕೊಳೆ ರೋಗ ಬಂದ ಪ್ರಮಾಣ ತುಂಬಾ ಕಡಿಮೆ. ಒಂದು ವೇಳೆ ಕೊಳೆ ರೋಗ ಬಂದಿದ್ದರೆ ನೀವು ತೋಟದಲ್ಲಿ ಏನು ಮಾಡಬೇಕು. ಇದರ ಪ್ರತಿಫಲ ಏನು ಇಲ್ಲಿದೆ ಮಾಹಿತಿ. ಅಡಿಕೆ ಮರಗಳಲ್ಲಿ ಕಾಯಿಗಳು ಬಲಿಯುತ್ತಿರುವಾಗ ಒಂದು ಶಿಲೀಂದ್ರ ಕಾಯಿಯ ಒಳಗೆ ಹೋಗಿ ಅದನ್ನು ಹಾನಿ ಮಾಡಿ ಕೊಳೆಯುವಂತೆ ಮಾಡುತ್ತದೆ. ಈ ಶಿಲೀಂದ್ರವು ಒಂದು ಪರಾವಲಂಭಿ ಜೀವಿಯಾಗಿದ್ದು, ಅಡಿಕೆಯ ಕಾಯಿಯ ಒಳಗೆ ಅದು ಸಂಖ್ಯಾಭಿವೃದ್ದಿಯಾಗಿ  ಅಲ್ಲಿಂದ ಹೊರ ಬರುವ ಸಮಯಕ್ಕೆ…

Read more
error: Content is protected !!