ಹೊಲದಲ್ಲಿ ಅಣಬೆ ಯಾಕೆ ಬೆಳೆಯುತ್ತದೆ? ಕೃಷಿಗೆ ಇದರ ಲಾಭ ಏನು?
ನಾವೆಲ್ಲ ಮಳೆಗಾಲದಲ್ಲಿ ನೆಲದಲ್ಲಿ, ಮರದ ದಿಮ್ಮಿಗಳಲ್ಲಿ, ಗೊಬ್ಬರದಲ್ಲಿ ಹಾಗೆಯೇ ಎಲ್ಲಾ ನಮೂನೆಯ ಸಾವಯವ ವಸ್ತುಗಳಲ್ಲಿ ಅಣಬೆ ಬೆಳೆಯುವುದನ್ನು ಕಂಡಿದ್ದೇವೆ. ಈ ಅಣಬೆಗಳು ರೈತನಗೆ ಹೇಗೆ ಆಪ್ತ ಮಿತ್ರಗೊತ್ತೇ? ಎಲ್ಲರೂ ಎರೆಹುಳು ರೈತನ ಮಿತ್ರ ಎನ್ನುತ್ತೇವೆ. ಎರೆಹುಳುವಿಗಿಂತಲೂ ಪ್ರಾಮುಖ್ಯವಾದ ಆಪ್ತಮಿತ್ರ ಎಂದರೆ ಅಣಬೆಗಳು. ಇವು ರೈತನ ಕೃಷಿಗೆ ಏನೆಲ್ಲಾ ನೆರವನ್ನು ನೀಡುತ್ತವೆ. ಇವುಗಳ ಅಸ್ತಿತ್ವ ಇಲ್ಲದಿದ್ದರೆ ಏನಾಗಬಹುದು ಎಂಬುದರ ಬಗ್ಗೆ ಇಲ್ಲಿ ಚರ್ಚಿಸೋಣ. ಶಿಲೀಂದ್ರಗಳು ,ಅಣಬೆಗಳು ಏಕಕೋಶ ಮತ್ತು ಸಂಕೀರ್ಣವಾದ ಬಹುಕೋಶೀಯ ಜೀವಿಗಳು. ಇವುಗಳಲ್ಲಿ ಪತ್ತೆ ಹಚ್ಚಿದ ಜಾತಿಗಳಿಗಿಂತ…