ಒಣ ನೆಲದಲ್ಲಿ ಕಾಯಿ ಕಚ್ಚುವಿಕೆ ಹೆಚ್ಚು

ಸಿಂಗಾರಕ್ಕೆ ಸಿಂಪರಣೆ ಅಗತ್ಯ ಇದೆಯೇ?. ಮರಕ್ಕೆ ಶಕ್ತಿ ಕೊಟ್ಟರೆ ಸಾಲದೆ?.

ಅಡಿಕೆ ಬೆಳೆಗಾರರ ಕೊಯಿಲಿನ ತಲೆಬಿಸಿ ಕಡಿಮೆಯಾಗಿದೆ. ಈಗ ಮುಂದಿನ ಬೆಳೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಸಿಂಪರಣೆ. ಹೇಗಾದರೂ ಮಾಡಿ ಬಿಡುವ ಹೂ ಗೊಂಚಲಿನ ಕಾಯಿಗಳನ್ನು ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಸಿಂಗಾರಕ್ಕೆ ಸಿಂಪರಣೆ ಪ್ರಾರಂಭಿಸಿದ್ದಾರೆ. ಕೆಲವರು 2 ಸಿಂಪರಣೆ ಮುಗಿಸಿದ್ದೂ ಆಗಿದೆ. ನಿಜವಾಗಿ ಹೇಳಬೇಕೆಂದರೆ ನಾವು ಮಾಡುವಷ್ಟು ಸಿಂಪರಣೆಯ ಅಗತ್ಯ ಅಡಿಕೆಗೆ ಇಲ್ಲ. ಮರಕ್ಕೆ ಶಕ್ತಿ ಕೊಟ್ಟರೆ ಸಾಕಾಗುತ್ತದೆ. ಫಸಲು ಹೆಚ್ಚಾಗಬೇಕು ಎಂದು ತರಹೇವಾರು  ಕೀಟ,ರೋಗನಾಶಕಗಳನ್ನು ಪ್ರತೀ ಹೂ ಗೊಂಚಲಿಗೆ ಸಿಂಪಡಿಸುವುದು, ಸಿಕ್ಕ ಸಿಕ್ಕವರೊಂದಿಗೆ  ಈ ಬಗ್ಗೆ  ಸಲಹೆ ಕೇಳಿ ಅದರಂತೆ …

Read more
2 ನೇ ಹಸುರು ಕ್ರಾಂತಿಯ ಅಶಯ

ಭಾರತದಲ್ಲಿ 2 ನೇ ಹಸುರು ಕ್ರಾಂತಿ ನೈಸರ್ಗಿಕ ಕೃಷಿಗೆ ಒತ್ತು.

ನಮ್ಮ ದೇಶಕ್ಕೆ 2 ನೇ ಹಸುರು ಕ್ರಾಂತಿಯ ಅವಶ್ಯಕತೆ ಇದೆ. ಈ ಕ್ರಾಂತಿ ಮುಂದಿನ ತಲೆಮಾರಿನ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು next-generation reform ಸುಸ್ಥಿರ ಮತ್ತು ಪರಿಸರ ಸ್ನೇಹಿಯಾಗಿ  ಹವಾಮಾನ ವೈಪರೀತ್ಯಗಳಿಗೆ ಹೊಂದಾಣಿಕೆಯಾಗುವಂತಿರಬೇಕು ಎಂಬ ಧ್ಯೇಯೋದ್ದೇಶಗಳಿವೆ. ನಮ್ಮ ದೇಶದ ಪ್ರಧಾನಿಗಳು, ರಕ್ಷಣಾ ಮಂತ್ರಿಗಳು ಹಾಗೂ ಕೃಷಿ ಮಂತ್ರಿಗಳ ಹಲವು ಹೇಳಿಕೆಗಳ ಪ್ರಕಾರ ಈ 2 ನೇ ಹಸಿರು ಕ್ರಾಂತಿಯಲ್ಲಿ ನೈಸರ್ಗಿಕ ಕೃಷಿಗೆ ಮಹತ್ವ ಬರಲಿದೆ ಎಂದು ಕಾಣಿಸುತ್ತದೆ. ನೈಸರ್ಗಿಕ ಕೃಷಿ ವಿಧಾನವನ್ನು ಅನುಸರಿಸುವ ಮೂಲಕ ನಮ್ಮ ದೇಶದ ರೈತರು…

Read more
ಅಡಿಕೆ ಚೀಲ

ಅಡಿಕೆ ಆಮದು ಅಂಕುಶ ಸಡಿಲಿಕೆ- ಮಿಜೋರಾಂ ಸರಕಾರದ ಕ್ರಮ.

ಅಡಿಕೆಯ ಬೆಲೆ ಗಗನಕೇರುವಾಗ ಯಾರಾದರೂ ಅದಕ್ಕೊಂದು ತಡೆ ಹಾಕಲು  ಕಲ್ಲು ಎಸೆಯಲು ಸಿದ್ದತೆ ನಡೆಸುತ್ತಾರೆ.ಇಂದು ಅಡಿಕೆಯ ಬೆಲೆ ಗಗನಕ್ಕೆ ಏರಲು ಬಲವಾದ ಕಾರಣ ಅಡಿಕೆ ಆಮದು ತಡೆ. ಈಗ ಈ ತಡೆಯ ಮೇಲೆ ಅಂಕುಶ ಸಡಿಲವಾದಂತೆ ಕಾಣಿಸುತ್ತಿದೆ. ಮಿಜೋರಾಂ ಸರಕಾರ ಈ ತನಕ ಅಡಿಕೆಯನ್ನು ತನ್ನೊಳಗೆ ಬಾರದಂತೆ ತಡೆದಿದ್ದ ಅಧಿಕಾರಿಗಳನ್ನು ಸರಕು ಸಾಗಾಣಿಕೆ ಸಂಘದ ಒತ್ತಾಯದ ಮೇರೆಗೆ ವರ್ಗಾವಣೆ ಮಾಡಿದೆ. ಈ ಕಾರಣದಿಂದ ಮುಂದೆ ಅಡಿಕೆ ಆಮದಿನ ಮೇಲೆ ಅಂಕುಶ ಸಡಿಲವಾದರೂ ಅಚ್ಚರಿ ಇಲ್ಲ. ಮಿಜೋರಾಂ ಮೂಲಕ…

Read more
ಒಣಗಲು ಹರಡಿದ ಅಡಿಕೆ

ಗುಣಮಟ್ಟದ ಅಡಿಕೆ ಉತ್ಪಾದನೆ ತಾಂತ್ರಿಕತೆ.

ಅಡಿಕೆ ಬೆಳೆಗಾರರು ಕೆಂಪಡಿಕೆ ಮಾಡುವವರು ಆಗಲಿ, ಚಾಲಿ ಮಾಡುವವರೇ ಆಗಲಿ, ಗುಣಮಟ್ಟದ  ಅಡಿಕೆ ಉತ್ಪಾದನೆ ಕಡೆಗೆ ಅದ್ಯ ಗಮನಹರಿಸಲೇ ಬೇಕು. ಇದು ನಮ ಸುರಕ್ಷತೆಗಾಗಿ ನಾವು ಮಾಡಬೇಕಾದ ಅಗತ್ಯ ಕೆಲಸ. ಗುಣಮಟ್ಟ ಉಳ್ಳ ಅಡಿಕೆಗೆ ಗರಿಷ್ಟ ಬೆಲೆ. ಅಡಿಕೆಯ ಮಾನ ಉಳಿಯುವುದೂ ಗುಣಮಟ್ಟ ಪಾಲನೆಯಲ್ಲಿ. ಹೀಗಿರುವಾಗ ಅಡಿಕೆ ಬೆಳೆಗಾರರು ತಮ್ಮ ಭವಿಷ್ಯದ ಹಿತ ದೃಷ್ಟಿಯಿಂದ ಗುಣಮಟ್ಟಕ್ಕೆ ಆದ್ಯ ಗಮನ ಕೊಡಲೇ ಬೇಕು. ಅಡಿಕೆಯ ಕುರಿತಾಗಿ ಯಾವಾಗಲೂ ನ್ಯಾಯಾಲಯ  ಬೆಳೆಗಾರರ ಮೇಲೆ ತಿರುಗಿ ಬೀಳಬಹುದು. ಯಾರಾದರೂ ಅಡಿಕೆಯಲ್ಲಿ ಆರೋಗ್ಯಕ್ಕೆ…

Read more
ಅತ್ಯುತ್ತಮ ಕರಿಮೆಣಸು

ಕರಿಮೆಣಸು –ಧೀರ್ಘ ಕಾಲ ದಾಸ್ತಾನು ಇಡಲು ಹೇಗೆ ಸಂಸ್ಕರಿಸಬೇಕು?

ಕರಿಮೆಣಸು ಎಂಬ ಸಾಂಬಾರ ಬೆಳೆ ವರ್ಷವೂ ಒಂದೇ ರೀತಿ ಇಳುವರಿ ಕೊಡುವುದಿಲ್ಲ. ಬೆಲೆಯೂ  ಆಗಾಗ ಭಾರೀ ಏರಿಕೆ – ಇಳಿಕೆ ಆಗುತ್ತಾ ಇರುತ್ತದೆ. ರೋಗಗಳೂ ಹೆಚ್ಚು. ಈ ಬೆಳೆಯನ್ನು  ಎಲ್ಲಾ ಬೆಳೆಗಾರರೂ ಆಪತ್ಕಾಲದ ನಿಧಿಯಾಗಿ ಉಳಿಸಿಕೊಂಡು ಉತ್ತಮ ಬೆಲೆ ಬಂದಾಗ ಮಾರಾಟ ಮಾಡಬೇಕು. ಧೀರ್ಘ ಕಾಲ ದಾಸ್ತಾನು ಇಟ್ಟರೂ ಹಾಳಾಗಲಾರದ ಏಕೈಕ ಕೃಷಿ ಉತ್ಪನ್ನ ಇದು. ಧೀರ್ಘ ಕಾಲ ದಾಸ್ತಾನು ಇಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಹೀಗೆ ಸಂಸ್ಕರಿಸಬೇಕು. ಕರಿಮೆಣಸು ಕೊಯಿಲು ಪ್ರಾರಂಭವಾಗಿದೆ. ದಾಸ್ತಾನು ಇಡುವವರು…

Read more
ಕೆಂಪು ರಾಸಿ ಅಯದೆ ಇದ್ದದ್ದು

ಅಡಿಕೆ ಧಾರಣೆ ಸ್ಥಿತಿಗತಿ-ದಿನಾಂಕ 10-01-2022, ಚಾಲಿ ಚುರುಕು. ಕೆಂಪು ಸ್ಥಿರ.

ಹೊಸ ವರ್ಷದ ಎರಡನೇ ವಾರ 10-01-2022 ಅಡಿಕೆ ಧಾರಣೆ ಸ್ಥಿರವಾಗಿ ಮುಂದುವರಿದಿದೆ. ಚಾಲಿ ಅಡಿಕೆ ಮಾರುಕಟ್ಟೆಗೆ ಕ್ಯಾಂಪ್ಕೋ ಬೆಂಗಾವಲಾಗಿ ನಿಂತು ದರ ಕುಸಿಯದಂತೆ ಮಾಡಿದೆ. ಈ ವರ್ಷದಾದ್ಯಂತ ಅಡಿಕೆ ಧಾರಣೆ ಇದೇ ರೀತಿಯಲ್ಲಿ ಮುಂದುವರಿಯಲಿದೆ ಎನ್ನಲಾಗುತ್ತಿದೆ. ಕಳೆದ ವರ್ಷದ ದಾಖಲೆಯ ಬೆಲೆಯನ್ನು ಹಿಂದಿಕ್ಕಿ ಇನ್ನೂ ಏರುವ ಸಾಧ್ಯತೆ ಇದೆ ಎಂಬುದಾಗಿಯೂ  ಹೇಳುತ್ತಿದ್ದಾರೆ. ಈ ಸಮಯದ ದರ ಸ್ಥಿತಿಯನ್ನು ನೋಡಿದಾಗ ಹೊಸ ಚಾಲಿ ಧಾರಣೆ ಈ ವರ್ಷ 500 ದಾಟಬಹುದು, ಕೆಂಪು 50,000 ಮೀರಿ ಏರಿಕೆಯಾಗಬಹುದು ಎಂಬ ವದಂತಿಗಳಿವೆ….

Read more
ಹಣ್ಣು ಆದ ಕರಿಮೆಣಸು

ಕರಿಮೆಣಸು- 25% ಅಧಿಕ ಇಳುವರಿ ಪಡೆಯಲು ಏನು ಮಾಡಬೇಕು?

ನಾವು ಹೆಚ್ಚಾಗಿ ಕರಿಮೆಣಸು ಕೊಯಿಲಿನ ಸಮಯದಲ್ಲಿ ಅವಸರ ಮಾಡುತ್ತೇವೆ. ಇನ್ನೇನು ಜನವರಿ ಬಂದಿದೆ. ಕರಿಮೆಣಸು ಬೆಳೆದು ಹಣ್ಣಾದರೆ ಹಕ್ಕಿಗಳು ತಿಂದು ನಷ್ಟವಾಗುತ್ತದೆ ಎಂದು ಬಲಿಯುವ ಮುನ್ನ ಕೊಯಿಲಿಗೆ ಪ್ರಾರಂಭಿಸುತ್ತೇವೆ. ಇದರಿಂದ ನಾವು 25 % ಕ್ಕೂ ಹೆಚ್ಚು ತೂಕ ನಷ್ಟ ಮಾಡಿಕೊಳ್ಳುತ್ತೇವೆ. ಈ ನಷ್ಟವನ್ನು ಕಡಿಮೆ ಮಾಡಿಕೊಂಡರೆ 1 ಕ್ವಿಂಟಾಲು ಇಳುವರಿ ಪಡೆಯುವ ಬದಲು ಇನ್ನೂ 25 ಕಿಲೋ ಹೆಚ್ಚು ಪಡೆಯಬಹುದು ಎಂಬುದು ಕೆಲವು ಉತ್ತಮ ಮೆಣಸು ಬೆಳೆಗಾರರ ಅಭಿಪ್ರಾಯ. ಮೆಣಸಿನ ಬಳ್ಳಿಯಲ್ಲಿ ಕೆಲವು ಕರೆಗಳು ಹಣ್ಣಾದ…

Read more
ಎರಡು ವರ್ಷ ಕಳೆದ ಅಡಿಕೆ ಸಸಿ

ಎರಡು ವರ್ಷದ ಅಡಿಕೆ ಗಿಡಗಳ ಪಾಲನೆ ಪೋಷಣೆ ಹೇಗಿರಬೇಕು?

ಅಡಿಕೆ ಬೆಳೆಗಾರರು ಅಡಿಕೆ ಸಸಿಯನ್ನು ಮಕ್ಕಳಂತೆ ಸಾಕಬೇಕು. ಹಾಗಿದ್ದರೆ ಅದು ನಿರೀಕ್ಷೆಯೆ ಸಮಯಕ್ಕೆ ಫಲ ಕೊಡುತ್ತದೆ. ಧೀರ್ಘ ಕಾಲದ ತನಕವೂ ಫಲ ಕೊಡುತ್ತಾ ಇರುತ್ತದೆ. ಫಲ ಬರಲು ಪ್ರಾರಂಭವಾದ ನಂತರ ಸಾಕಿದರೆ ಏನೂ ಪ್ರಯೋಜನ ಇಲ್ಲ. ಅದಕ್ಕಾಗಿ ನೆಟ್ಟು ಮೊದಲ ವರ್ಷ ಕಳೆದು ಎರಡು ವರ್ಷಕ್ಕೆ ಕಾಲಿಡುವಾಗ ಯಾವ ಯಾವ ಪಾಲನೆ ಪೋಷಣೆ  ಮಾಡಿ ಅದನ್ನು ಸಲಹಬೇಕು ಎಂಬ ಪೂರ್ತಿ ಮಾಹಿತಿ ಇಲ್ಲಿದೆ. ನೆಟ್ಟ ಸಸಿಯನ್ನು ತಕ್ಷಣದಿಂದ ಹೇಗೆ ಸಾಕಬೇಕು ಎಂಬ ಬಗ್ಗೆ ಈ ಹಿಂದೆ ಸವಿಸ್ತಾರವಾದ…

Read more
ಕುರುವಾಯಿ ದುಂಬಿ

ಕುರುವಾಯಿ ದುಂಬಿಯ ಕಾಟ ಹೆಚ್ಚಾಗಲು ಕೊಟ್ಟಿಗೆ ಗೊಬ್ಬರ ಕಾರಣ

ಯಾವಾಗಲೂ  ಕತ್ತಲಾಗುತಲೇ ನಿಮ್ಮ ಮನೆಯ ವಿದ್ಯುತ್ ದೀಪಕ್ಕೆ  ಒಂದು ದೊಡ್ದ ದುಂಬಿ ಬಂದು ನೆಲಕ್ಕೆ  ಬೀಳುತ್ತದೆ. ಅದರಲ್ಲಿ  ಹೆಚ್ಚಿನದು ತೆಂಗಿನ ಮರದ ಸುಳಿಯನ್ನು ಕೊರೆಯುವ ಕುರುವಾಯಿ  ದುಂಬಿಯಾಗಿರುತ್ತದೆ. ಇದು ವಂಶಾಭಿವೃದ್ದಿಯಾಗುವುದು ಕೊಟ್ಟಿಗೆ ಗೊಬ್ಬರ ಅಥವಾ ಸಾವಯವ ಗೊಬ್ಬರದಲ್ಲಿ. ಕುರುವಾಯಿ ನಿಯಂತ್ರಣವಾಗಬೇಕಿದ್ದರೆ ಸಾವಯವ ಗೊಬ್ಬರವನ್ನು  ಉಪಚರಿಸಿ ಬಳಕೆ ಮಾಡಬೇಕು. ತೆಂಗಿನ ಮರವನ್ನು ಕೊಲ್ಲದೇ, ಅದನ್ನು ಏಳಿಗೆಯಾಗಲು ಬಿಡದ ಒಂದು ಸಾಮಾನ್ಯ ಕೀಟ ಕುರುವಾಯಿ. ನಮ್ಮ ಹಿರಿಯರು ಹೇಳುವುದಿದೆ, ಒಂದು ಕುರುವಾಯಿ ಕೊಂದರೆ 1 ದೇವಾಸ್ಥಾನ ಕಟ್ಟಿದ ಪುಣ್ಯವಿದೆ ಎಂದು….

Read more
ಚಾಲಿ ಮತ್ತು ಕೆಂಪು ಅಡಿಕೆ ಮಾರಾಟ

2022 ಹೊಸ ವರ್ಷದ ಮೊದಲ ದಿನ – ಚಾಲಿ- ಕರಿಮೆಣಸು ಇಳಿಕೆ. ಕೆಂಪು ಸ್ಥಿರ, ಕೊಬ್ಬರಿ ಏರಿಕೆ.

2021 ಕಳೆದು 2022 ಬಂದಾಯ್ತು. 2021 ನೇ ವರ್ಷದಲ್ಲಿ ಚಾಲಿ ಅಡಿಕೆ ಬೆಳೆಗಾರರು ತಮ್ಮ ಆನುಭವದಲ್ಲಿ ಕಂಡಿರದ ದರ ಏರಿಕೆಯನ್ನು ನೋಡಿದ್ದಾರೆ. ಸಂತೋಷ ಪಡಬೇಕಾದ ಸಂಗತಿ. ಆದರೆ ಕೆಂಪಡಿಕೆಗೆ ಮಾತ್ರ ಅಂಥಃ ಬೆಲೆ ಏರಿಕೆ ಆಗಿಲ್ಲ. ನಿರಾಸೆಯೂ ಆಗಿಲ್ಲ.  ಹೊಸ ವರ್ಷದ ಮೊದಲ ದಿನ ಚಾಲಿ ಸ್ವಲ್ಪ ಇಳಿಕೆಯೂ, ಕೆಂಪು ಸ್ಥಿರವಾಗಿಯೂ, ಕರಿಮೆಣಸಿನ ಬೆಲೆ ಕುಸಿತ ಆಗಿದೆ. ಕೊಬ್ಬರಿ ಏರಿದೆ. 2022 ನೇ ಇಸವಿಯೂ ರೈತರ ಪಾಲಿಗೆ ಅದೃಷ್ಟದ ವರ್ಷವಾಗಿಯೇ ಉಳಿಯಲಿದೆ.   ಕಳೆದ ಮೂರು ನಾಲ್ಕು…

Read more
error: Content is protected !!