ಹಸು , ಕರು ಜೊತೆಯಾಗಿದ್ದ ಕಾಲವಿತ್ತು. ಈಗ ಕರು ಔಟ್

ಗೋವು ರಾಷ್ಟ್ರೀಯ ಪ್ರಾಣಿ ಎಂದು ಕೋರ್ಟು ಘೋಷಿಸಿದೆಯೇ ?

ಅಲಹಾಬಾದ್ ಹೈಕೋರ್ಟ್ ಗೋವುಗಳ ಕುರಿತಾಗಿ ಸ್ಪಷ್ಟವಾಗಿ ಹೇಳಿದೆ. ಆದರೆ ಅದನ್ನು ಕೆಲವರು ತಿರುಚಿ ತಮ್ಮ ಮನಸ್ಸಿಗೆ ತೋರಿದಂತೆ ಹೇಳುತ್ತಿದ್ದಾರೆ. ನಿಜವಾಗಿಯೂ ಕೋರ್ಟು ಹೇಳಿದ್ದೇನು?   ಗೋವನ್ನು  ಭಾರತದ ರಾಷ್ಟ್ರೀಯ ಪ್ರಾಣಿ ಎಂದು ಪರಿಗಣಿಸಬೇಕು.  ಗೋವುಗಳ  ಸಂರಕ್ಷಣೆ ಹಿಂದುಗಳ ಮೂಭೂತ ಹಕ್ಕು ಎಂದು ಘೋಷಿಸಬೇಕು.  ಗೋವುಗಳು ನಮ್ಮ ದೇಶದ ಸಂಸ್ಕೃತಿ ಮತ್ತು ಅದು ಮಾತೃ ಸಮಾನ. ವೇದ ಪುರಾಣಗಳ ಕಾಲದಿಂದಲೂ ಮಾನವನ  ಅದರಲ್ಲೂ ಹಿಂದುಗಳ  ಪೂಜನೀಯ ಸಾಕುಪ್ರಾಣಿಯಾಗಿ ಇದ್ದುದು ಗೋವು. ದೇಶದ ಸಾಂಸ್ಕೃತಿಕ ಮತ್ತು ನಂಬಿಕೆಯ ವಿಷಯದಲ್ಲಿ ನಾವು…

Read more
ಅಣಬೆ ರೋಗದ ಅಂತಿಮ ಚಿನ್ಹೆ

ಅಡಿಕೆ ಮರದ ಅಣಬೆ ರೋಗ- ನಿಯಂತ್ರಣ.

ಇತ್ತೀಚೆಗೆ ಅಡಿಕೆ ಮರಗಳು ಅಣಬೆ ರೋಗ ಎಂಬ ಖಾಯಿಲೆ ಯಿಂದಾಗಿ ಕಾಂಡದಲ್ಲಿ ರಸ ಸೋರಲು ಪ್ರಾರಂಭವಾಗಿ ನಿಧಾನವಾಗಿ ಮರದ ಗರಿ ಹಳದಿಯಾಗುತ್ತಾ ಕಾಂಡದ ಬುಡ ಭಾಗದಲ್ಲಿ ಅಣಬೆ ಬೆಳೆದು ಮರ ಸಾಯುತ್ತಿದೆ. ಇದು ಒಂದು ಶಿಲೀಂದ್ರ ಸೋಂಕು ಆಗಿದ್ದು, ಇದು ಹರಡುತ್ತದೆ. ಇಂತಹ ಚಿನ್ಹೆ ಕಂಡು ಬಂದಾಗ ಮೊದಲ ಹಂತದಲ್ಲಿ ಉಪಚಾರ  ಮಾಡಬೇಕು. ತಡವಾದರೆ ಪ್ರಯೋಜನ ಇಲ್ಲ. ಯಾವುದೇ ಒಂದು ಮರದಲ್ಲಿ ಅಣಬೆ ಬೆಳೆಯಬೇಕಾದರೆ ಅದರ ಅಂಗಾಂಶ ಸತ್ತಿರಬೇಕು. ಅಣಬೆ ಬೆಳೆಯುವುದು ಸೆಕೆಂಡರಿ( ದ್ವಿತೀಯ ಹಂತದ ಹಾನಿ)….

Read more
ಸಿಂಗಾರ ತಿನ್ನುವ ಹುಳ ಮುಟ್ಟಿದ ಹೂ ಗೊಂಚಲು

ಅಡಿಕೆ – ಹೂ ಗೊಂಚಲು ಒಣಗಲು ಯಾವ ಕೀಟ ಕಾರಣ ಮತ್ತು ಪರಿಹಾರ ಏನು?.

ಶುಷ್ಕ ವಾತಾವರಣದ ವ್ಯತ್ಯಾಸವೋ ಏನೋ , ಈಗೀಗ ಅಡಿಕೆ -ಹೂ ಗೊಂಚಲು ಬಹಳ ಪ್ರಮಾಣದಲ್ಲಿ  ಒಣಗಿ ಹಾಳಾಗುತ್ತಿದೆ. ಒಂದು ಕಾಲದಲ್ಲಿ  ಮೈನರ್ ಪೆಸ್ಟ್ ಆಗಿದ್ದ ಈ ಕೀಟ, (ಹುಳ) ಈಗ ಮೇಜರ್ ಪೆಸ್ಟ್ ಆಗುತ್ತಿದೆ. ಇತ್ತೀಚೆಗೆ ಎಲ್ಲಾ ಅಡಿಕೆ ಬೆಳೆಗಾರರಲ್ಲಿಯೂ ಈ ಸಮಸ್ಯೆ ಹೆಚ್ಚಾಗುತ್ತಿದ್ದು, ಅಪಾರ ಬೆಳೆ ನಷ್ಟ ಉಂಟಾಗುತ್ತಿದೆ. ಮಳೆಗಾಲ ಕಳೆದ ತಕ್ಷಣ ಅಡಿಕೆ ಮರದಲ್ಲಿ ಗೊಂಚಲು ಬಿಡಲು ಪ್ರಾರಂಭವಾಗುತ್ತದೆ. ಹೊಸತಾಗಿ ಬರುವ ಬಹುತೇಕ ಹೂ ಗೊಂಚಲುಗಳಲ್ಲಿ ಈ ಹುಳದ  ಬಾಧೆ ಇದೆ. ಮಳೆಗಾಲದಲ್ಲಿ ಸಂಖ್ಯಾಭಿವೃದ್ದಿಯಾದ ಕೀಟ ಅಡಿಕೆಯಲ್ಲಿ…

Read more
ಒಣಗುತ್ತಿರುವ ಚಿನ್ನ- ರಾಶಿ ಅಡಿಕೆ

ಅಡಿಕೆ ಧಾರಣೆ ಏರಿಕೆಯಾಗುತ್ತಿರುವಾಗ ಬೆಳೆಗಾರರ ನಡೆ ಹೇಗಿರಬೇಕು?

 ಒಂದು ವಾರದ ಅವಧಿಯಲ್ಲಿ ನಾಗಾಲೋಟದಲ್ಲಿ ಏರಿಕೆಯಾಗುತ್ತಿರುವ ಕೆಂಪಡಿಕೆ ಧಾರಣೆ, ಚಾಲೀ ಧಾರಣೆಯಿಂದ ರೈತರಿಗೆ ಒಂದೆಡೆ ಖುಷಿ ಮತ್ತೊಂದೆಡೆ ಆತಂಕ. ಕಡಿಮೆ ಬೆಲೆಗೆ ಕೊಟ್ಟೆ ಎಂಬ ಪಶ್ಚಾತ್ತಾಪ ಇಲ್ಲದೆ  ಉತ್ತಮ ದರ ಪಡೆಯುವ ತಂತ್ರ ಯಾವುದು? ಬೆಳೆಗಾರ ಅಡಿಕೆ ಮಾರಿದ ಮರುದಿನ ಬೆಲೆ ಏರಿಕೆಯಗುತ್ತದೆ. ಅಡಿಕೆ ನಾಳೆ ಮಾರೋಣ ಎಂದು ಇಟ್ಟರೆ ಮರುದಿನ ಬೆಲೆ ಇಳಿಕೆಯಾಗುತ್ತದೆ.  ಯಾರಿಗೂ ತಿಳಿಯದ ಈ ಮಾರುಕಟ್ಟೆ ಇಷ್ಟೊಂದು ಜಟಿಲವೇ?ಹೌದು. ಅಡಿಕೆ ಮಾರುಕಟ್ಟೆಯ  ಯಾವ ಲಯವನ್ನೂ ಕೆಲವೇ ಕೆಲವರನ್ನು ಬಿಟ್ಟು ಉಳಿದವರಿಗೆ ಅಂದಾಜು ಮಾಡುವುದು…

Read more
ಸಾವಯವ ಬೆಲ್ಲ

ಬೆಲ್ಲ – ಯಾವುದರಲ್ಲಿ ರಾಸಾಯನಿಕ ಇದೆ – ಇಲ್ಲ.

ನಾವೆಲ್ಲಾ ಅಂಗಡಿಯಿಂದ ಕೊಳ್ಳುವ ಆಕರ್ಷಕ ಹಳದಿ ಮಡಿ ಬಣ್ಣದ ಬೆಲ್ಲಕ್ಕೂ, ನೈಜ ಬೆಲ್ಲದ ಬಣ್ಣಕ್ಕೂ ಅಜಗಜಾಂತರ ವೆತ್ಯಾಸ ಇದ್ದು, ಅಂಗಡಿಯ ಈ ಬೆಲ್ಲದಲ್ಲಿ ಏನಿದೆ ಎಂಬುದನ್ನು ಆಹಾರ ಇಲಾಖೆ  ಪರಿಶೀಲಿಸುವುದು ಅಗತ್ಯ. ಆದರೂ ಕಡಿಮೆ ರಾಸಾಯನಿಕ ಬಳಸಿ ತಯಾರದ ಬೆಲ್ಲವನ್ನು ಗುರುತಿಸುವುದು ಕಷ್ಟವಲ್ಲ. ಬೆಲ್ಲ ಎಂಬುದು ಕಬ್ಬಿನ ರಸವನ್ನು ಕುದಿಸಿ ಅದರ ನೀರಿನ ಅಂಶವನ್ನು ತೆಗೆದು ಸಿಹಿ ಅಂಶವನ್ನು ಉಳಿಸಿ ಪಡೆಯುವ ವಸ್ತು. ಇದರ ನೈಜ ಸ್ಥಿತಿ ದ್ರವ ರೂಪ. ಇದನ್ನು ಗ್ರಾಹಕರ ಇಷ್ಟಕ್ಕೆ ಮತ್ತು ದಾಸ್ತಾನು,…

Read more

ಹಬ್ಬದ ದಿನಗಳು ಮತ್ತು ಅದರ ಮಹತ್ವ

ಪ್ರಪಂಚದಾದ್ಯಂತ ಹಬ್ಬಗಳನ್ನು ಆಚರಿಸುತ್ತಾರೆ. ಭಾರತದಲ್ಲಿ ಸಹ ಹಲವಾರು ಹಬ್ಬಗಳನ್ನು ಆಚರಿಸುತ್ತಾರೆ. ಹೆಚ್ಚಿನೆಲ್ಲಾ ಹಬ್ಬ ಹರಿದಿನಗಳು  ವಿಶೇಷ ಸಂದೇಶವನ್ನು ದ್ವನ್ಯಾರ್ಥದಲ್ಲಿ ಕೊಡುವಂತವುಗಳು. ಇಂತಹ ಹಬ್ಬಗಳ ಮಹತ್ವ ಅರಿತು ಅವುಗಳನ್ನು ಆಚರಿಸಿದರೆ ಅದಕ್ಕೆ ಗೌರವ ಹೆಚ್ಚುತ್ತದೆ. ನಮ್ಮ ಮಕ್ಕಳಿಗೆ ಹಬ್ಬ ಹರಿದಿನಗಳಾದರೂ ಒಂದೆ ಶೋಕದ ದಿನಗಳಾದರೂ ಒಂದೇ. ಒಂದು ಮೊಬೈಲ್  ಫೋನು ಹಿಡಿದುಕೊಂಡು ತಮ್ಮಷ್ಟಕ್ಕೇ ತಾವೇ ಏನೋ ವಿಚಾರದಲ್ಲಿ ಮಗ್ನರಾಗಿರುತ್ತಾರೆ. ಇವರಿಗೆ ಹಿರಿಯರು ಆಚರಿಸುವ ಶುಭ ದಿನಗಳ ಬಗ್ಗೆ ಒಂದು ರೀತಿಯಲ್ಲಿ ತಾತ್ಸಾರ. ಇದಕೆಲ್ಲಾ ಕಾರಣ ಅವರಿಗೆ ಆ ಶುಭ…

Read more
ರೋಗ ನಿರೋಧಕ ಅಡಿಕೆ ಮರ

ರೋಗ-ಕೀಟ ನಿರೋಧಕ ತಳಿಗಳು ನಿಮ್ಮ ಬಳಿಯಲ್ಲೇ ಇರಬಹುದು. ಹೇಗೆ ಹುಡುಕುವುದು?

ರೋಗ ನಿರೋಧಕ ಶಕ್ತಿ ಎಂಬುದು ಕೆಲವು ತಳಿಗಳ ವಂಶ ಗುಣ.  ಇದನ್ನು ಕೃಷಿ ವಿಜ್ಞಾನ ಅಧ್ಯಯನ ಮಾಡಿದವರೇ ಹುಡುಕಿ ಅಭಿವೃದ್ದಿಪಡಿಸಬೇಕಾಗಿಲ್ಲ. ಸಾಮಾನ್ಯ ರೈತರೂ ಅದನ್ನು ಅಭ್ಯಸಿಸಿ ತಮ್ಮ ಬಳಕೆಗಾದರೂ  ಉಪಯೋಗಿಸಿಕೊಳ್ಳಬಹುದು. ಈ ಬಗ್ಗೆ ಬೆಳಕು ಚೆಲ್ಲುವ ಒಂದು ಅಪರೂಪದ ಲೇಖನ ಇಲ್ಲಿದೆ. ಕೆಲವು ರೈತರ ಅಡಿಕೆ ತೋಟದಲ್ಲಿ ಪ್ರತೀ ವರ್ಷ ಕೊಳೆ ಬರುತ್ತದೆ. ಹಾಗೆಂದು ಎಲ್ಲಾ ಮರಗಳಿಗೂ ಕೊಳೆ ಬರುವುದಿಲ್ಲ.  ಹಾಗೆಯೇ ಕರಿಮೆಣಸು, ತೆಂಗು,  ಏಲಕ್ಕಿ, ನೆಲಕಡ್ಲೆ, ಹತ್ತಿ, ದಾಳಿಂಬೆ,  ಎಲ್ಲಾ ಕೃಷಿ, ತೋಟಗಾರಿಕೆ, ತರಕಾರಿ ,…

Read more
ಭವಿಷ್ಯದ ಅಡಿಕೆ ತೋಟ

ಅಡಿಕೆ ಬೆಳೆಯ ಭವಿಷ್ಯದ ಸ್ಥಿತಿ ಏನಾಗಬಹುದು?

ಅಡಿಕೆ ಬೆಳೆ ವಿಸ್ತರಣೆ ಆಗುತ್ತಿರುವುದನ್ನು ನೋಡಿದರೆ ಮುಂದೊಂದು ದಿನ ಅಡಿಕೆಗೆ ಬೆಲೆ ಇಲ್ಲದೆ ರೈತ ಕಂಗಾಲಾಗಬೇಕಾಗಬಹುದು ಎಂಬ ಆತಂಕ ಎಲ್ಲರಲ್ಲೂ ಇದೆ. ಆದರೆ ಅಂತದ್ದೇನೂ ಆಗುವುದಿಲ್ಲ.ಅಡಿಕೆ ಬೆಳೆ ಪ್ರದೇಶ ಹೆಚ್ಚಾದರೂ ಅದಕ್ಕನುಗುಣವಾಗಿ ಉತ್ಪಾದನೆ ಹೆಚ್ಚಳವಾಗುವುದಿಲ್ಲ. ಯಾಕೆ ಗೊತ್ತೇ? ಹಿಂದೆ ಕರಾವಳಿ ಮಲೆನಾಡಿನಲ್ಲಿ ಅಡಿಕೆ ಬೆಳೆ ಇದ್ದುದು ಕಣಿವೆಯಂತಹ ತಗ್ಗು ಭಾಗಗಳಲ್ಲಿ ಮಾತ್ರ. ಆಗ ಖುಷ್ಕಿ  ಭೂಮಿಯಲ್ಲಿ ಅಡಿಕೆ ಬೆಳೆದರೆ  ಜನ ಅದೆಲ್ಲಾ ಆಗುವ ಹೋಗವಂತದ್ದೇ ಎಂದು ಹೇಳುತ್ತಿದ್ದರು.  ಪರಿಸ್ಥಿತಿ ಬದಲಾವಣೆ ಆಯಿತು. ಒಂದೆಡೆ ಭತ್ತದ ಗದ್ದೆಗಳೂ ಅಡಿಕೆ…

Read more
ಕೆಂಪು ಮತ್ತು ಬಿಳಿ ಅಡಿಕೆ

ಚಾಲಿ ಹಿಂದೆ ಬರುವ ಸೂಚನೆ- ಕೆಂಪಡಿಕೆ ಏರಿಕೆಯ ಸರದಿ.

ಈ ವರ್ಷದ ಅಡಿಕೆ ಕೊಯಿಲು ಪ್ರಾರಂಭವಾಗಿದ್ದು, ಬಯಲು ಸೀಮೆಯಲ್ಲಿ ಒಂದು ಕೊಯಿಲು ಆಗಿದೆ. ಚೇಣಿ ಮಾಡುವವರ ಖರೀದಿಯ ಭರ ಮತ್ತು ದಿನದಿಂದ ದಿನಕ್ಕೆ ಏರುತ್ತಿರುವ ಕೆಂಪಡಿಕೆಯ ವಹಿವಾಟನ್ನು ನೋಡಿದರೆ  ಕೆಂಪು ಈ ಸಲ ಮತ್ತೆ ಮೇಲೇರುವ ಮುನ್ಸೂಚನೆ ಕಾಣಿಸುತ್ತಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ 45,000 ದಾಟಿದ್ದ ಕೆಂಪಡಿಕೆ ಧಾರಣೆ ಮತ್ತೆ ಕೊರೋನಾ, ಲಾಕ್ ಡೌನ್ ಕಾರಣದಿಂದ  ಮತ್ತೆ ಆ ಮಟ್ಟಕ್ಕೆ ಏರಲೇ ಇಲ್ಲ. ಈಗ ಮತ್ತೆ ಕೆಂಪಡಿಕೆಯ ಸರದಿ ಕಂಡು ಬರುತ್ತಿದೆ. ಚಾಲಿ ಧಾರಣೆ ಕರಾವಳಿಯಲ್ಲಿ 46,000…

Read more
ತರಹೇವಾರು ಸೌಂದರ್ಯದಕೀಟಗಳು

ಕೀಟಗಳ ಹಾವಳಿ ಹೆಚ್ಚುತ್ತಿರುವುದಕ್ಕೆ ಕಾರಣ ಏನು ಗೊತ್ತೇ?

ಪ್ರತೀಯೊಬ್ಬ ಕೃಷಿಕನೂ ತಪ್ಪದೇ ತಿಳಿದುಕೊಳ್ಳಬೇಕಾದ ಮಹತ್ವದ ವಿಚಾರ ಇದು. ರೈತರು ಕೀಟಗಳ ವಿರುದ್ಧ ಹೋರಾಡಲು ಕೀಟನಾಶಕಗಳ ಮೊರೆ ಹೋಗಿದ್ದಾರೆ. ಕೀಟನಾಶಕ ತಯಾರಕರು ರೈತರ ನೆರವಿಗೆ ಇದ್ದಾರೆ. ಕೀಟಗಳು ಪ್ರಾಭಲ್ಯ ಸಾಧಿಸುತ್ತಿವೆ.  ಇದಕ್ಕೆಲ್ಲಾ ಕಾರಣ ಎನು ಎಂಬುದು ಇಲ್ಲಿ ಹೇಳಲಿಚ್ಚಿಸುವ  ಮಹತ್ವದ ವಿಚಾರ. ಕೀಟಗಳ ಸಂತತಿ ಹೆಚ್ಚುತ್ತಾ ಇದೆ. ಕೀಟನಾಶಕಗಳಿಗೆ ಅವು ನಿರೋಧಕ ಶಕ್ತಿ ಪಡೆಯುತ್ತಿವೆ. ಕೀಟಗಳ ನಿಯಂತ್ರಣಕ್ಕೆ ಕೀಟನಾಶಕಗಳೇ ಇಲ್ಲದಿದ್ದಾಗ ಈ ಕೀಟಗಳು ಎಲ್ಲಿದ್ದವು. ಇವು ಹೊಸತಾಗಿ ಸೃಷ್ಟಿಯಾದವುಗಳೇ ಎಂಬೆಲ್ಲಾ ಸಂದೇಹಗಳು ಬರಬಹುದು. ಕೀಟಗಳು ನಾವು ಬೆಳೆ…

Read more
error: Content is protected !!