ಆಫ್ರಿಕನ್ ದೈತ್ಯ ಬಸವನ ಹುಳ

ಆಫ್ರಿಕನ್ ಬಸವನ ಹುಳುವಿನ ಅಪಾಯ-ನಿಯಂತ್ರಣ.

ಕೆಲವು ವರ್ಷಗಳ ಹಿಂದೆ ಶಿವಮೊಗ್ಗದ ಬಿದ್ರಳ್ಳಿಯಲ್ಲಿ ಕಂಡಿದ್ದ ಆಫ್ರಿಕನ್ ಬಸವನ ಹುಳ Giant African Snail (Lissachatina fulica) ಈಗ ಎಲ್ಲೆಡೆಯಲ್ಲೂ ಕಂಡು ಬರುತ್ತಿದೆ. ರೈತರ ಹೊಲದಲ್ಲಿ, ಮನೆ, ಶೆಡ್ ಎಲ್ಲೆಂದರಲ್ಲಿ ಈ ಹುಳ ಹರಿದಾಡುವ ಸ್ಥಿತಿ ಉಂಟಾಗಿದೆ. ಹಿಡುದು ಕೊಲ್ಲುತ್ತಾರೆ. ಮತ್ತೆ ಹುಟ್ಟುತ್ತಲೇ ಇದೆ. ಯಾವ ರೀತಿ ನಿಯಂತ್ರಣ ಎಂದೇ ಗೊತ್ತಾಗದೆ ಕಂಗಾಲಾಗಿದ್ದಾರೆ ರೈತರು ಮತ್ತು ಇತರ ಜನ ಸಮುದಾಯ. ಇವು ಮರದ ಮೇಲೆಲ್ಲಾ ಏರಿಕೊಂಡು ಕುಳಿತುಕೊಳ್ಳುತ್ತದೆ.ಹಗಲು ನಾಲ್ಕು- ಐದು ಇದ್ದರೆ, ಕತ್ತಾಲಾದರೆ ಮರದ ತುಂಬಾ,…

Read more
ಪರಿಶುದ್ಧ ತುಪ್ಪ

ಆನ್ ಲೈನ್ ಕೃಷಿ ಉತ್ಪನ್ನಗಳ ವ್ಯವಹಾರ- ಗ್ರಾಹಕರೇ ಎಚ್ಚರ!

ಇತ್ತೀಚಿನ ದಿನಗಳಲ್ಲಿ ಅಮಾಯಕ ರೈತರನ್ನು ಹಾಗೆಯೇ ಪೇಟೆ ಪಟ್ಟಣದ ಜನರನ್ನು  ಮೋಸ ಮಾಡಿ  ಹಣ ಸಂಪಾದನೆ ಮಾಡುವ ಹೈಟೆಕ್ ಆನ್ ಲೈನ್ ಕೃಷಿ ಉತ್ಪನ್ನ ಮಾರಾಟ ಜಾಲಗಳು ಹೆಚ್ಚುತ್ತಿದೆ.  ರೈತರು ಹಾಗೆಯೇ ಪೇಟೆ ಪಟ್ಟಣದ ಜನ ಕಣ್ಣಾರೆ ಕಂಡರೂ ಪರಾಂಬರಿಸಿ ನೋಡದೆ ಕೊಳ್ಳಬೇಡಿ. ಈ ರೀತಿ ಕೊರೋನಾ ಮಹಾಮಾರಿ, ಹಾಗೆಯೇ ನೆರೆ, ಬರ ಮುಂತಾದ ಅವಘಡಗಳು ಮನುಕುಲದ ಬೆನ್ನು ಹತ್ತುತ್ತಿದ್ದರೂ ಇನ್ನೂ ಪರರನ್ನು ಸುಲಿಗೆ ಮಾಡಿ ಹಣ ಮಾಡಬೇಕೆಂಬಾಸೆ ಕೆಲವರಲ್ಲಿ.  ಎಲ್ಲಿ ಇಡುತ್ತಾರೋ ಹಣವನ್ನು ಗೊತ್ತಿಲ್ಲ.  ಇವೆಲ್ಲಾ…

Read more
10:26:26 ಗೊಬ್ಬರ

10:26:26 ಗೊಬ್ಬರ ಬಳಸುವವರು ಅಗತ್ಯವಾಗಿ ಗಮನಿಸಿ.

ಬಹಳ ಜನ  ರೈತರು ತಮ್ಮ ಬೆಳೆಗಳಿಗೆ 10:26:26 ರಸಗೊಬ್ಬರ ಬಳಸುತ್ತಿದ್ದು, ಅದನ್ನೊಂದೇ  ಬಳಕೆ ಮಾಡಿದರೆ ಏನಾಗುತ್ತದೆ ಎಂಬುದರ  ವಿಸ್ತೃತ ಮಾಹಿತಿ ಇಲ್ಲಿದೆ. ಅಡಿಕೆ ಬೆಳೆಗಾರರ ನೆಚ್ಚಿನ ಪೋಷಕಾಂಶಗಳ ಆಯ್ಕೆಯಲ್ಲಿ 10:26:26 ಎಂಬ ರಸಗೊಬ್ಬರವೂ ಒಂದು. ಸೊಸೈಟಿಗಳಲ್ಲಿ, ಗೊಬ್ಬರ ಮಾರಾಟದ ಅಂಗಡಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ದಾಸ್ತಾನು ಇರುವ ಗೊಬ್ಬರವೂ ಇದೇ. ಅಡಿಕೆ ಬೆಳೆಗಾರರು ಇರುವ ಪ್ರದೇಶಗಳಲ್ಲಿ ಇದರಷ್ಟು ಅಧಿಕ ಪ್ರಮಾಣದಲ್ಲಿ ಮಾರಾಟವಾಗುವ ರಸ ಗೊಬ್ಬರ ಬೇರೊಂದಿರಲಿಕ್ಕಿಲ್ಲ. ಈ ಗೊಬ್ಬರದ ಬಳಕೆಯಿಂದ ತೊಂದರೆ ಇಲ್ಲ. ಆದರೆ ಇದನ್ನೊಂದೇ ಬಳಕೆ ಮಾಡಿದರೆ …

Read more

ಸಾವಯವ ತ್ಯಾಜ್ಯ ಹುಡಿ ಮಾಡಬೇಕೇ? ಯಂತ್ರ ಬಾಡಿಗೆಗೆ ಇದೆ.

ಸಾವಯವ ತ್ಯಾಜ್ಯಗಳಾದ ತೆಂಗಿನ ಗರಿ, ಅಡಿಕೆ ಗರಿ ,ಸೊಪ್ಪು ಸದೆ ಇತ್ಯಾದಿಗಳನ್ನು  ಹುಡಿ ಮಾಡಿ ಬಳಕೆ ಮಾಡಿದರೆ ಅದು ವೇಗವಾಗಿ ಕರಗಿ ಗೊಬ್ಬರವಾಗುತ್ತದೆ. ಹೀಗೆ ಹುಡಿ ಮಾಡಲು ಯಂತ್ರಗಳು ಇವೆ. ಈ ಯಂತ್ರಗಳು ಭಾರೀಪ್ರಮಾಣದ ತ್ಯಾಜ್ಯಗಳನ್ನು  ಕೆಲವೇ ಗಂಟೆಗಳಲ್ಲಿ ಹುಡಿ ಮಾಡಿಕೊಡುತ್ತದೆ. ಪ್ರಸ್ತುತ ರೈತಾಪಿ ವರ್ಗದ ಜನರಿಗೆ ಸರ್ಕಾರವು ರಸಗೊಬ್ಬರದ ದರ ಏರಿಕೆ ಆಗಿರುವಂತಹ ಹಿನ್ನೆಲೆಯಲ್ಲಿ ದೇಶದ ಕೃಷಿ ಸಂಶೋಧನಾ ಅಧ್ಯಯನ ನಡೆಸಿ ಸಾವಯವ ಕೃಷಿಯನ್ನು ಅವಲಂಬಿಸಿದರೆ ಹೆಚ್ಚಿನ ಆದಾಯವನ್ನು ಗಳಿಸಬಹುದೆಂದು ಎಲ್ಲ ಪ್ರಗತಿಪರ ರೈತರು ಸಾವಯವ ಕೃಷಿಯನ್ನು…

Read more
ಉತ್ತಮ ಅಡಿಕೆ ಸಸಿಗಳು

ಅಡಿಕೆ ಬೆಳೆಗಾರರು ಸ್ವಲ್ಪ ಚಾಲಿ ಅಡಿಕೆ ತಳಿಗಳನ್ನೂ ಬೆಳೆಸಿ.

ಎಲ್ಲರೂ ಕೆಂಪಡಿಕೆಗೆ ಹೊಂದುವ ತಳಿಗಳನ್ನೇ ಬೆಳೆಸಿದರೆ ಒಂದಿಲ್ಲೊಂದು ದಿನ  ಕೆಂಪಡಿಕೆ ಮಾರುಕಟ್ಟೆ ಏನಾಗಬಹುದು  ಯೋಚಿಸಿ? ಅಂತಹ ಕಷ್ಟದ ದಿನ ಬಂದರೆ  ರೈತರಿಗೆ ಚಾಲಿ ನೆರವಿಗೆ ಬರಲೂಬಹುದು. ಎಲ್ಲಾ ಅಡಿಕೆ ಚಾಲಿಗೆ ಹೊಂದುವುದಿಲ್ಲ. ಇದಕ್ಕೆ ಕರಾವಳಿಯ ತಳಿಗಳೇ ಸೂಕ್ತ. ಕಳೆದ ವರ್ಷ ಅಡಿಕೆ ಗಿಡಗಳಿಗೆ ಬಂದ ಬೇಡಿಕೆಯನ್ನು ನೋಡಿ ಈ ವರ್ಷ  ನರ್ಸರಿಗಳು ಮಾಡಿದ ಸಸಿ  ಅಷ್ಟಿಷ್ಟಲ್ಲ. ಆದರೆ  ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಈ ವರ್ಷ ಅಡಿಕೆ ಗಿಡ ಕೇಳುವವರಿಲ್ಲ.  ಹಾಗೆಂದು ಮಲೆನಾಡು, ಅರೆಮಲೆನಾಡು ಮುಂತಾದ ಕಡೆಯ ನರ್ಸರಿಗಳಲ್ಲಿ…

Read more
ಸೂಜಿ ಮೆಣಸಿನ ಇಳುವರಿ

ಅಧಿಕ ಲಾಭದ ಮಿಶ್ರ ಬೆಳೆ – ಸೂಜಿ ಮೆಣಸು

ಸೂಜಿ ಮೆಣಸಿನ ಬೆಳೆಯಲ್ಲೂ ಲಾಭವಿದೆಯೇ ಎಂದು ಹುಬ್ಬೇರಿಸಬೇಡಿ. ಇದಕ್ಕೆ ಒಣ ಮೆಣಸಿಗೆ ಕಿಲೋ 800 ರೂ. ತನಕ ಬೆಲೆ ಇದೆ. ಖರೀದಿ ಮಾಡುವವರೂ ಇದ್ದಾರೆ. ಮಲ್ಲಿಗೆ ಬೇಸಾಯಕ್ಕಿಂತ ಇದು ಸುಲಭ. ಮಲೆನಾಡಿನಲ್ಲಿ ಇದನ್ನು  ಬೆಳೆಸಿಯೇ ವರ್ಷಕ್ಕೆ 50,000 ಕ್ಕೂ ಮಿಕ್ಕಿ ಆದಾಯ ಮಾಡಿಕೊಳ್ಳುವವರು ತುಂಬಾ ಜನ ಇದ್ದಾರೆ. ಕಾಗೆ ಮೆಣಸು, ಜೀರಿಗೆ  ಮೆಣಸು, ಸೂಜಿ ಮೆಣಸು ಇದೆಲ್ಲಾ ಒಂದೇ. ಬಹುತೇಕ ಎಲ್ಲರ ತೋಟದಲ್ಲೂ  ಇದರ ಸಸಿ ಇದೆ. ಅದು ನೆಟ್ಟು ಬೆಳೆಸಿದ್ದಲ್ಲ. ಅದರಷ್ಟಕ್ಕೇ ಹುಟ್ಟಿದ್ದು. ಅನುಕೂಲ ಇದ್ದರೆ …

Read more
ವಿದ್ಯುತ್ ಸರಬರಾಜು ವ್ಯವಸ್ಥೆ

ಕೇಂದ್ರ ವಿದ್ಯುತ್ ಕಾಯಿದೆ – ರೈತರಿಗೆ ತೊಂದರೆ ಇದೆಯೇ?

ಸರಕಾರ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಿದರೆ ರೈತರಿಗೆ ವಿದ್ಯುತ್ ಉಚಿತವಾಗಿ ಸಿಗುವುದಿಲ್ಲ. ಅದನ್ನು ನಾವು ವಿರೋಧಿಸಬೇಕು. ಖಾಸಗೀಕರಣ ಹಾಗೆ ಹೀಗೆ ಎಂದೆಲ್ಲಾ ರೈತರ ಕಿವಿ ತುಂಬಿ ಅವರನ್ನೂ ತಮ್ಮ ಬೆಂಬಲಕ್ಕೆ ಸೇರಿಸಿಕೊಳ್ಳಲು ಹವಣಿಕೆ ನಡೆಯುತ್ತಿದೆ. ಸರಕಾರ ಹಂತ ಹಂತವಾಗಿ ಎಲ್ಲಾ ಸರಕಾರೀ ವ್ಯವಸ್ಥೆಗಳನ್ನು ಖಾಸಗೀಕರಣ ಮಾಡುವ ತಯಾರಿಯಲ್ಲಿದೆ. ನಮ್ಮ ಪ್ರತಿನಿಧಿಗಳು ಯೋಗ್ಯರೇ ಆಗಿದ್ದರೆ  ಇದರಿಂದ  ಸಾರ್ವಜನಿಕರಿಗೆ ಅನುಕೂಲವೇ ಆಗುವುದು. ಕೇಂದ್ರ ಸರಕಾರ ನಾಳೆ ನಡೆಯಲಿರುವ ಮುಂಗಾರು ಅಧಿವೇಶನದಲ್ಲಿ ವಿದ್ಯುತ್ ಸರಬರಾಜು ವ್ಯವಸ್ಥೆಯ Electricity Amendment Bill 2021…

Read more
ಅಡಿಕೆಯ ಬಳಕೆಯ ಚೂರುಗಳು

ನಾವು ಬೆಳೆಯುವ ಅಡಿಕೆ ಯಾವುದಕ್ಕೆ ಬಳಕೆಯಾಗುತ್ತದೆ ಗೊತ್ತೇ?

ನಾವೆಲ್ಲಾ ಅಡಿಕೆ ಬೆಳೆಗಾರರು. ಆದರೆ ನಮಗೆ ಇನ್ನೂ ಸ್ಪಷ್ಟವಾಗಿ  ನಾವು ಬೆಳೆದ ಅಡಿಕೆ ಯಾವುದಕ್ಕೆ ಬಳಕೆಯಾಗುತ್ತದೆ ಎಂದು ಗೊತ್ತೇ ಇಲ್ಲ.ನಾವು ಬೆಳೆಯುವ ಅಡಿಕೆ ಸಧ್ಯದ ಮಟ್ಟಿಗೆ ಬಳಕೆಯಾಗುವುದು ಈ ಎಲ್ಲಾ ರೂಪಗಳಲ್ಲಿ ಜಗಿದು ಉಗುಳುವುದಕ್ಕೆ ಮಾತ್ರ. ಅಡಿಕೆ ಎಂದರೆ ಅದು ಟ್ಯಾನಿನ್ (ಚೊಗರು) ಒಳಗೊಂಡ ಒಂದು ಬೀಜ ಎಂದು ವ್ಯಾಖ್ಯಾನಿಸಬಹುದು. ಅಡಿಕೆ ಕಾಯಿ  ಬೆಳೆದು ಹಣ್ಣಾದ ಮೇಲೆ ಕೊಯಿಲು ಮಾಡಿ  ನಿರ್ದಿಷ್ಟ ದಿನಗಳ ವರೆಗೆ  ಸೂರ್ಯನ ಬೆಳಕಿನಲ್ಲಿ ಒಣಗಿಸಿ, ಸಿಪ್ಪೆ ಸುಲಿದಾಗ  ದೊರೆಯುವುದು ಚಾಲಿ ಅಥವಾ ಸುಪಾರಿ…

Read more
ಕಾಯಿ ಒಡೆಯುವ ತೊಂದರೆ

ಅಡಿಕೆ ಕಾಯಿ ಒಡೆಯುವುದಕ್ಕೆ ಕಾರಣ ಮತ್ತು ಪರಿಹಾರ .

ಹೆಚ್ಚಿನವರ ಅಡಿಕೆ ತೋಟದಲ್ಲಿ ಎಳೆಯ ಕಾಯಿ ಒಡೆದು ಬೀಳುವ ಸಮಸ್ಯೆ ಇದೆ. ಎಲ್ಲರೂ ಸೂಕ್ತ ಪರಿಹಾರಕ್ಕಾಗಿ ಸಿಕ್ಕ ಸಿಕ್ಕವರ ಅಭಿಪ್ರಾಯಗಳನ್ನು ಕೇಳುತ್ತಿರುತ್ತಾರೆ. ಯಾವ ಪರಿಹಾರ ಕೈಗೊಂಡರೂ  ಕಾಯಿ ಒಡೆಯುವಿಕೆ ಅಥವಾ ಅಂಡೋಡಕ ಮಾತ್ರ ಕಡಿಮೆ ಆಗುವುದೇ ಇಲ್ಲ. ಕೆಲವರ ಅಡಿಕೆ ತೋಟಗಳಲ್ಲಿ 10-15 % ಫಸಲು ಅಂಡೋಡಕದಿಂದ ಹಾಳಾಗುತ್ತದೆ. ಕಾಯಿ ಬಲಿತಂತೆ ಬುಡದಲ್ಲಿ ಉದುರಿಬಿದ್ದ ರಾಶಿ ರಾಶಿ ಹಾಳಾದ ಅಡಿಕೆ ಕಾಣಸಿಗುತ್ತದೆ. ಕೆಲವರು ಬೋರಾನ್ ಕೊರತೆಯಿಂದ ಹೀಗಾಗುತ್ತದೆ ಎನ್ನುತ್ತಾರೆ. ಇನ್ನು ಕೆಲವರು ಸತುವಿನ ಕೊರತೆಯಿಂದ ಹೀಗೆ ಆಗುತ್ತದೆ…

Read more
ಟ್ರಯಾಂಡ್ರಾ ಅಡಿಕೆ ಗೊಂಚಲು

ಟ್ರಯಾಂಡ್ರಾ ಅಡಿಕೆ – ಇದು ಕಿಲೋ ರೂ. 300-350

ಅಡಿಕೆಯಲ್ಲಿ  ನಮಗೆ ಗೊತ್ತಿರುವಂತದ್ದದ್ದು ಒಂದೇ ಪ್ರಭೇದ. ಅಡಿಕೆಯಲ್ಲಿ  ಹಲವಾರು ಪ್ರಭೇದಗಳಿವೆ. ಅಂತದ್ದರಲ್ಲಿ ಒಂದು ಈ ಒಂದು ಸಣ್ಣ ಅಡಿಕೆ. ಇದನ್ನು  ಒಂದು  ರೀತಿಯಲ್ಲಿ ಕಾಡು ಅಡಿಕೆ ಎನ್ನಲೂ ಬಹುದು.  ನಾವೆಲ್ಲಾ ಬೆಳೆಯುವ ಅಡಿಕೆ ಅರೆಕಾ ಕಟೆಚು Areca catechu ಎಂಬ ವರ್ಗಕ್ಕೆ ಸೇರಿದ್ದು.   Arecaceae ಎಂಬ ಕುಟುಂಬದಲ್ಲಿ ಹಲವಾರು ಪ್ರಭೇಧಗಳಿವೆ. ಕರಾವಳಿ ಮಲೆನಾಡಿನ  ಜನ ಕಂಡಿರುವ ರಾಮ ಅಡಿಕೆ ಎಂಬ ಪ್ರಭೇಧ ಇದರಲ್ಲಿ ಒಂದು. ಹಾಗೆಯೇ ಇಲ್ಲಿ ಪರಿಚಯಿಸಲಾಗುತ್ತಿರುವ  “ಅರೆಕಾ ಟ್ರಯಾಂಡ್ರಾ” Areca triandra ಎಂಬುದು ಅಡಿಕೆಯ…

Read more
error: Content is protected !!