Municipal Waste as Good Organic Manure

Municipal Waste as Good Organic Manure

Our farmland requires a maximum quantity of organic matter. Bio degradeble Municipal waste or city waste is the most important and cheap organic material available in the present situation. The lifestyle of our generation is changing. For different purposes, people are migrating to cities. Now, household waste in the city area is systematically collected and…

Read more
ಅಡಿಕೆ

ಇದು ಅಡಿಕೆಯ ಭಾರೀ ಹೆಸರುವಾಸಿ ತಳಿ.

ಅಡಿಕೆ ಬೆಳೆಸುವವರು ಪ್ರಥಮತಹ  ಆಯ್ಕೆ  ಮಾಡಬೇಕಾದ ತಳಿ. ಉತ್ತಮ ತಳಿಯನ್ನು ಆಯ್ಕೆ ಮಾಡಿದ್ದೇ ಆದರೆ ಮುಂದಿನ ಬಹುತೇಕ ಕೆಲಸ ಸುಲಭ. ಇದು ಮನೆ ಕಟ್ಟುವುದಕ್ಕೆ ಪಂಚಾಂಗ ಹಾಕಿದಂತೆ. ಅಡಿಕೆ ತೆಂಗು ಬೆಳೆ ಮುಂತಾದ ಧೀರ್ಘಾವಧಿ ಬೆಳೆಗಳಲ್ಲಿ ಸೂಕ್ತ ತಳಿಯ ಬೀಜ ಆಯ್ಕೆ ಮಾಡಿಕೊಳ್ಳದೆ ಇದ್ದರೆ ಮುಂದೆ ಅದನ್ನು ಸರಿಪಡಿಸಲಿಕ್ಕೆ ಆಗುವುದಿಲ್ಲ. ಯಾವಾಗಲೂ  ತಳಿ ಆಯ್ಕೆ ಮಾಡುವಾಗ ತಳಿ ಮಿಶ್ರಣ ಆಗದಂತ ಜಾಗದಿಂದ, ಸೂಕ್ತ ವಿಧಾನದಿಂದ ಬೀಜವನ್ನು ಆಯ್ಕೆ ಮಾಡಿ ಅವರವರೇ ಸಸಿ ತಯಾರಿಸಿಕೊಂಡರೆ ಬಹಳ ಉತ್ತಮ.  ಕರ್ನಾಟಕದಲ್ಲಿ…

Read more

ಹೀಗೆ ಮಾಡಿದರೆ ನೀರು ತುಂಬಾ ಕಡಿಮೆ ಸಾಕು.

ಕೆಲವು ಮಣ್ಣಿನಲ್ಲಿ  ಮಳೆ ಬಂದರೆ  ನೀರು ವಾರಗಟ್ಟಲೆ  ಆರುವುದೇ ಇಲ್ಲ. ಬಿಸಿಲು ಬಂದರೆ  ನೆಲ ಟಾರು ರಸ್ತೆ  ತರಹ. ಇಂತಲ್ಲಿ   ಇಬ್ಬನಿ ರೂಪದಲ್ಲಿ ಬಿದ್ದ ನೀರೂ ಸಹ ಪೋಲಾಗದೆ ಬೆಳೆಗೆ ದೊರೆಯುವಂತಾಗಲು ರೈತರು ಕಂಡುಕೊಂಡ ವಿಧಾನ ಉಸುಕು ಹಾಕುವಿಕೆ.   ಕಪ್ಪು ಹತ್ತಿ ಮಣ್ಣು  ಒಂದು ಮಳೆ ಬಂದರೆ ಅಂಟು ಅಂಟಾಗುತ್ತದೆ. ಇದಕ್ಕೆ ಮಳೆ ಹನಿ ಬಿದ್ದಾಗ ಮಣ್ಣು ಕರಗಿ ಹೋಗುತ್ತದೆ. ನೀರು ಕಡಿಮೆಯಾದಾಗ ಮಣ್ಣು ಒಡೆದು ಹೂಗುತ್ತದೆ. ರಾಜ್ಯದಲ್ಲಿ  ಬಿಜಾಪುರ, ಗದಗ, ನರಗುಂದ ಧಾರವಾಡದ ಕೆಲ…

Read more
ಶ್ರೀಗಂಧದ ಸಸಿಗಳು

ಶ್ರೀಗಂಧ ಬೆಳೆಯಿಂದ ಕೋಟಿ ಗಳಿಕೆ ಸಾಧ್ಯವೇ?

ಶ್ರೀಗಂದ ಬೆಳೆದರೆ ರೈತರು ಕೋಟಿಯಲ್ಲಿ ಮಾತಾಡಬಹುದಂತೆ. ರೈತರೇ ಕೋಟಿಯ ಆಶೆಗಾಗಿ ಗಂಧ ಬೆಳೆಸಬೇಡಿ. ಆದರೆ ಹೋದರೆ ಬಂದರೆ ಕೊಟಿ ಅಷ್ಟೇ.    ಶ್ರೀಗಂಧದ ಬೆಳೆ ಎಲ್ಲದಕ್ಕಿಂತ ಸುಲಭ,ನಿರ್ವಹಣೆ ಇಲ್ಲ, ಬಂಡವಾಳದ ಅವಶ್ಯಕತೆ ಇಲ್ಲ, ಕಡಿಮೆ ಪರಿಶ್ರಮದಲ್ಲಿ ಕೋಟಿ ಲೆಕ್ಕದ ಆದಾಯ ಎಂದೆಲ್ಲಾ ಸಲಹೆ ಕೊಡುವವರು ಸಾಕಷ್ಟು ಜನ ಇದ್ದಾರೆ. ಮಾಡುವುದು ಯಾರೋ, ಬಂಡವಾಳ ಯಾರದ್ದೋ , ಹೇಳುವವರಿಗೆ ಪರೋಕ್ಷವಾಗಿ ತಕ್ಷಣದ ಲಾಭ ಇರುತ್ತದೆ. ಹಿತ್ತಾಳೆಯನ್ನು ಅಪ್ಪಟ ಚಿನ್ನವೆಂದೇ ವಾದ ಮಾಡುವವರಿರುತ್ತಾರೆ. ರೈತರೇ ಕೋಟಿ ಮಾಡಲಾಗುವುದಿದ್ದರೆ ನಿಮಗೆ ಯಾರೂ…

Read more

ಬೆಳೆಗಾರರೇ – ಮೈಲುತುತ್ತೆ ಖರೀದಿಸುವಾಗ ಬುದ್ದಿವಂತರಾಗಿರಿ.

ಇನ್ನೇನೋ ಮಳೆಗಾಲ ಬರಲಿದೆ. ಅಡಿಕೆಗೆ ಭಾರೀ ಬೆಲೆ ಬಂದಿದೆ. ಅಡಿಕೆ ಬೆಳೆಗಾರರಲ್ಲಿ ದುಡ್ಡು ಇದೆ. ಅದರಲ್ಲಿ ತಮ್ಮ ಹೆಚ್ಚಳವಾಗುತ್ತದೆ. ಈಗಲೇ ಖರೀದಿ ಮಾಡಿ ಎಂದು ವ್ಯಾಪಾರಿಗಳು ಹಳೆ ಸ್ಟಾಕು ಮುಗಿಸಿ ಮುಂದಿನ ಹೊಸ ಸ್ಟಾಕು ಮಾಡಲು ಬಂಡವಾಳ ಕ್ರೋಢೀಕರಣದಲ್ಲಿದ್ದಾರೆ. ಅಡಿಕೆ ಬೆಳೆಗಾರರೇ ನೀವು ಈಗ ಬುದ್ದಿವಂತರಾಗುವುದು ಅಗತ್ಯವಾಗಿದೆ. ಅಡಿಕೆ ಕೊಳೆ ರೋಗಕ್ಕೆ ಮೈಲುತುತ್ತೆ ಬೇಕು. ಹಾಗೆಂದು ಖರೀದಿಸಿದರೆ ದರ ಕಡಿಮೆ, ಮುಂದೆ ಹೆಚ್ಚು. ಇದೆಲ್ಲಾ ಯಾವ ಕ್ರಮವೋ ತಿಳಿಯದು. ಸರಕಾರದ ಸಂಬಂಧಿಸಿದ ಇಲಾಖೆ ಇದನ್ನೆಲ್ಲಾ ಗಮನಿಸಿದೆಯೋ ಇಲ್ಲವೋ…

Read more
ಕೃಷಿ ಸಹಕಾರಿ ಬ್ಯಾಂಕುಗಳ ಮೂಲಕ ಪೆಟ್ರೋಲ್ ಉತ್ಪನ್ನ ಮಾರಾಟ

ಕೃಷಿ ಸಹಕಾರಿ ಬ್ಯಾಂಕುಗಳ ಮೂಲಕ ಪೆಟ್ರೋಲ್ ಉತ್ಪನ್ನ ಮಾರಾಟ- ನಮಗೆಷ್ಟು ಲಾಭ?

ಕೃಷಿ ಸಹಕಾರಿ ಬ್ಯಾಂಕುಗಳು ಪೆಟ್ರೋಲ್ ಉತ್ಪನ್ನ ಮಾರಾಟ ಮಾಡಿ ಹೆಚ್ಚಿನ ಲಾಭ ಮಾಡಿಕೊಂಡರೆ ನಮಗೆ ಈಗ ಸಿಗುತ್ತಿರುವ ಪಾಲು ಬಂಡವಾಳದ ಮೊತ್ತ ಇನ್ನೂ ಹೆಚ್ಚಾಗಲಿದೆ. ನಾವು ಯಾವುದೇ ಕಡೆ ಹೂಡಿಕೆ ಮಾಡಿದರೂ ಸಿಗದಷ್ಟು ಲಾಭ ನಮ್ಮದೇ ಬ್ಯಾಂಕಿನ ಶೇರು ಬಂಡವಾಳದ ಮೂಲಕ ಸಿಗಲಿದೆ. ನಮ್ಮೂರಿನ ಸೊಸೈಟಿಯಲ್ಲಿ ಲಾಭ ಹೆಚ್ಚಾದರೆ ಅದರಿಂದ ನಮಗೇ ಭಾರೀ ಲಾಭ. ಭಾರತ ಸರಕಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರೀ ಸಂಘಗಳು (PACS Primary agriculture co operative society) ತಮ್ಮ ವ್ಯವಹಾರ ಕ್ಷೇತ್ರ…

Read more

ಅಧಿಕ ಇಳುವರಿಗೆ ಸಹಾಯಕವಾಗುವ ಸಾವಯವ ಗೊಬ್ಬರಗಳು.

ರಾಸಾಯನಿಕ ಗೊಬ್ಬರಗಳು ಒಮ್ಮೆಗೆ  ಉತ್ತಮ ಫಲಿತಾಂಶ ಕೊಡಬಹುದು. ಆದರೆ ಅದು ಧೀರ್ಘ ಕಾಲದ ತನಕ ಕಷ್ಟ. ಮಣ್ಣಿನ ಫಲವತ್ತತೆಯಿಂದ ಮಾತ್ರ ಧೀರ್ಘಕಾಲಿಕ ಫಲಿತಾಂಶ ಪಡೆಯಲು ಸಾಧ್ಯ. ಧೀರ್ಘಾವಧಿ ಬೆಳೆಗಳಿಗೆ ಮಣ್ಣಿನ ಫಲವತ್ತತೆ ಪ್ರಾಮುಖ್ಯ. ಸಾವಯವ ಅಥವಾ ನೈಸರ್ಗಿಕ ಮೂಲವಸ್ತುಗಳಿಂದ ಮಾತ್ರ ಮಣ್ಣಿನ ಫಲವತ್ತತೆ ವೃದ್ದಿಯಾಗಲು ಸಾಧ್ಯ. ರಾಸಾಯನಿಕ ಗೊಬ್ಬರಗಳು ಎಲ್ಲವೂ ಆಮ್ಲೀಯ ಗುಣದವು. ಇದನ್ನು ಮಣ್ಣಿಗೆ ಹಾಕುವುದರಿಂದ ಮಣ್ಣು ಸ್ವಲ್ಪ ಮಟ್ಟಿಗೆ ಅಜೀರ್ಣಕ್ಕೊಳಗಾಗುತ್ತದೆ. ರಾಸಾಯನಿಕ ಗೊಬ್ಬರಗಳನ್ನು ಬಳಸುವುದರ ಜೊತೆಗೆ  ಸಾವಯವ ವಸ್ತುಗಳನ್ನೂ ಸೇರಿಸುತ್ತಿದ್ದರೆ ಮಣ್ಣು ಆರೋಗ್ಯವಾಗಿರುತ್ತದೆ. ಮಣ್ಣು…

Read more
ತೆಂಗಿನ ಮರದ ಕಾಂಡದಿಂದ ರಸ ಸೋರುವ ರೋಗ

ತೆಂಗಿನ ಮರದ ಕಾಂಡದಿಂದ ರಸ ಸೋರುವ ರೋಗಕ್ಕೆ ಸರಳ ಔಷಧಿ.

ತೆಂಗಿನ ಮರದ ಕಾಂಡದಲ್ಲಿ ಕೆಂಪಗಿನ ರಸ ಸೋರುವ ಸಮಸ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಹಿಂದೆ ಇದು ಬಯಲು ಸೀಮೆಯಲ್ಲಿ ಹೆಚ್ಚಾಗಿತ್ತು. ಈಗ ಕರಾವಳಿಯಲ್ಲೂ ಕಂಡುಬರುತ್ತಿದೆ. ಬಹುತೇಕ ಹೆಚ್ಚಿನವರ ತೆಂಗಿನ ತೋಟದಲ್ಲಿ ಈ ಸಮಸ್ಯೆ ಇದ್ದು, ಬಹಳಷ್ಟು ಜನ ಇದನ್ನು ಗಮನಿಸಿಯೇ ಇರುವುದಿಲ್ಲ. ಮರದ ಶಿರ ಭಾಗ  ನಿತ್ರಾಣವಾಗಿ ಗರಿಗಳು ಕಾಂಡಕ್ಕೆ ಜೋತು ಬಿದ್ದು, ಕೆಲವು ಸಮಯದ ನಂತರ ಸತ್ತು ಹೋಗುತ್ತದೆ. ಬೆಳೆಗಾರರು ಏನೋ ಆಗಿ ಸತ್ತು ಹೋಗಿದೆ ಎಂದು ಸುಮ್ಮನಿರುತ್ತಾರೆ. ತೆಂಗಿನ ಮರದ ಕಾಂಡದಲ್ಲಿ ರಸ ಸೋರುವುದು ಒಂದು…

Read more

ತುಂಟ ಹಸುಗಳನ್ನು ಸಾಧು ಮಾಡುವ ಕೆಲವು ವಿಧಾನಗಳು.

ಕೆಲವು ನಾಟಿ ಹಸುಗಳು ತುಂಟ ಸ್ವಭಾವದವುಗಳಾಗಿರುತ್ತವೆ. ಹಾಲು ಕರೆಯುವಾಗ ಹಿಂದೆ ಹೋದರೆ ಕಾಲಿನಿಂದ ಒದೆಯುವುದು, ಹಾಯುವುದು ಹಾಗೆಯೇ ಹುಚ್ಚುಕಟ್ಟುವುದು ಮಾಡುವುದು ಸಾಮಾನ್ಯ. ಇದನ್ನು  ಸಾಧು ( ಹದಕ್ಕೆ) ತರಲು ಕೆಲವು ಉಪಾಯಗಳನ್ನು ಅನುಸರಿಸಬೇಕು. ಮನೆ ಬಳಕೆಯ ಹಾಲಿಗೆ ಹಸು ಸಾಕುವವರಿಗೆ ನಾಟಿ ಅಥವಾ ನಾಟಿಯಲ್ಲಿ ಮಿಶ್ರ ತಳಿಯ ಹಸುಗಳು ಉತ್ತಮ. ಇವುಗಳನ್ನು ಸಾಕುವುದು ಸುಲಭ. ರೋಗ ರುಜಿನಗಳಿಲ್ಲ. ಕಳೆ ಗಿಡಗಳಿಂದಾದಿಯಾಗಿ ಬಹುತೇಕ ಮೇವನ್ನು ತಿನ್ನುತ್ತದೆ.  ಅಧಿಕ ಆಹಾರ ಬಯಸದ ಕಾರಣ ಸುಮಾರು 7-8  ಕರು ಹಾಕುತ್ತದೆ. ಕೆಲವೊಂದು…

Read more
error: Content is protected !!