ನೆಲಕ್ಕೆ ಸುಣ್ಣ ಎರಚುವುದು

ಹೊಲಕ್ಕೆ ಸುಣ್ಣ ಹಾಕುವ ಕ್ರಮ ಮತ್ತು ಅದರ ಫಲ.

ಸಸ್ಯ ಬೆಳವಣಿಗೆಗೆ ಸಹಾಯಕವಾಗುವ ದ್ವಿತೀಯ ಪೋಷಕಗಳಲ್ಲಿ  ಸುಣ್ಣ ಒಂದನ್ನೇ ಕೊಟ್ಟರೆ ಸಾಲದು. ವರ್ಷಂಪ್ರತೀ ನಷ್ಟವಾಗುವ ಸುಣ್ಣ ಮತ್ತು ಮೆಗ್ನೀಶಿಯಂ ಎರಡನ್ನೂ ಕೊಡಬೇಕು. ಆಗಲೇ ಅದರ ಪೂರ್ಣ ಪ್ರಯೋಜನ. ಈ ಎರಡೂ ಪೋಷಕಗಳೂ ಮಳೆಗೆ ಕೊಚ್ಚಿಕೊಂಡು ಮತ್ತು ಬೆಳೆ ಬೆಳೆದಾಗ ಪಡೆಯುವ ಫಸಲು ಮತ್ತು ಉದುರಿದ ಎಲೆಗಳಿಂದ  ನಷ್ಟವಾಗುವ ಪೋಷಕಗಳು. ಸುಣ್ಣವನ್ನು ಮಣ್ಣಿಗೆ ಕೊಡುವುದರಿಂದ ಭೌತಿಕ, ರಾಸಾಯನಿಕ ಮತ್ತು ಜೈವಿಕ ಮೂರೂ   ಪರಿಣಾಮಗಳೂ ಉನ್ನತ ಮಟ್ಟಕ್ಕೆ ಏರಿ ಮಣ್ಣಿನ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ ಮಣ್ಣು ಗುಳಿಗೆಯಾಕಾರಕ್ಕೆ ಪರಿವರ್ತನೆಯಾಗುತ್ತದೆ. ಪೋಷಕಗಳು ಲಭ್ಯ…

Read more
paddy

ಭತ್ತದ ಬೆಳೆಯ ಮಹಾ ಶತ್ರು –ಬಂಬು ಕೀಟ ನಿಯಂತ್ರಣ

ಬಂಬು  ಅಥವಾ ಗುಂಧೀ ಬಗ್  (Gundhi bug Leptocorisa oratorius Fabr) ಹೆಸರಿನ ಈ ಕೀಟ ಭತ್ತ ತೆನೆಬಿಡುವ ಹಂತದಲ್ಲಿ ಎಲ್ಲಿದ್ದರೂ ಹಾಜರಾಗುತ್ತದೆ. ತೆನೆಯಲ್ಲಿ ಹಾಲು ಕೂಡುವ ಸಮಯದಲ್ಲಿ ಅದರ  ರಸ ಕುಡಿದು ಭಾರೀ ಬೆಳೆ ನಷ್ಟವನ್ನು ಉಂಟು ಮಾಡುತ್ತದೆ.  ಇದನ್ನು ಯಾವ ಬೆಳೆಗಾರರೂ ನಿರ್ಲಕ್ಷ್ಯ ಮಾಡುವಂತಿಲ್ಲ. ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಬಂದರೆ ತಕ್ಷಣ ನಿಯಂತ್ರಣೋಪಾಯ ಕೈಗೊಳ್ಳಬೇಕು. ಯಾರಾದರೂ ರಾಸಾಯನಿಕ ಕೀಟನಾಶಕ ಬಳಸದೆ ಭತ್ತ ಬೆಳೆಯುತ್ತಾರೆಂದರೆ ಅವರ ಶ್ರಮವನ್ನು ಭಂಗ ಮಾಡುವ ಕೀಟ ಇದ್ದರೆ ಅದು ಬಂಬು….

Read more
method of green leaf mulching

ಹೊಲಕ್ಕೆ ಈ ಸೊಪ್ಪುಗಳನ್ನು ಹಾಕಿದರೆ ಗೊಬ್ಬರ ಉಳಿಸಬಹುದು.

ಮೆದು ಸ್ವರೂಪದ ಹಸುರು ಸೊಪ್ಪು ಅಧಿಕ ಸಾರಗಳನ್ನು ಒಳಗೊಂಡಿರುತ್ತದೆ. ಹೆಚ್ಚಾಗಿ ದ್ವಿದಳ ಜಾತಿಯವು ಉತ್ಕೃಷ್ಟ. ಇಂತಹ ಸಸ್ಯಗಳಲ್ಲಿ ಕೆಲವು ಅಲ್ಪಾವಧಿಯ ಸಸ್ಯಗಳು  ಮತ್ತು ಕೆಲವು ಧೀರ್ಗಾವಧಿಯ ಮರಮಟ್ಟುಗಳು. ಇದನ್ನು ನಾವು ಗುರುತಿಸಿ ಬೆಳೆಸಿ ಬಳಸಬೇಕು. ಇವು ಮಣ್ಣಿಗೆ ಹೊಸ ಜೀವ ಚೈತನ್ಯವನ್ನು ಕೊಡುತ್ತವೆ. ಬೆಳೆ ಉತ್ತಮವಾಗುತ್ತದೆ. ಬಹಳ ಜನ ತಮ್ಮ ಹೊಲಕ್ಕೆ ಬೇರೆ ಬೇರೆ ಸಾವಯವ ಗೊಬ್ಬರಗಳನ್ನು ಬಳಕೆ ಮಾಡುತ್ತಾರೆ. ಕೆಲವರು ಒಣ ತರೆಗೆಲೆ ಹಾಗೂ ಒಣ ತ್ಯಾಜ್ಯಗಳನ್ನು ಬಳಕೆ ಮಾಡುತ್ತಾರೆ. ಇದರಲ್ಲಿ ಹಾನಿ ಏನೂ ಇಲ್ಲವಾದರೂ…

Read more
areca garden with out tilling

ಅಡಿಕೆ- ಬುಡ ಬಿಡಿಸಿ ಗೊಬ್ಬರ ಕೊಡಬೇಕಾಗಿಲ್ಲ.

ಬಹಳ ಜನ ಅಡಿಕೆ , ತೆಂಗಿನ ಮರಗಳಿಗೆ ಗೊಬ್ಬರ ಇತ್ಯಾದಿ ಹಾಕುವಾಗ ಮರದ ಬುಡ ಭಾಗವನ್ನು ಕೆರೆದು ಆ ಅವಕಾಶದ ಒಳಗೆ  ರಾಸಾಯನಿಕ ಗೊಬ್ಬರ, ಕೊಟ್ಟಿಗೆ ಗೊಬ್ಬರ ಕೊಟ್ಟು ಮತ್ತೆ ಮುಚ್ಚುತ್ತಾರೆ.  ಇದಕ್ಕೆ ತಗಲುವ ಖರ್ಚು ಗೊಬ್ಬರಕ್ಕಿಂತ ಹೆಚ್ಚು. ಅದನ್ನು ಉಳಿಸಿದರೆ ಗೊಬ್ಬರ ಜಾಸ್ತಿ ಕೊಟ್ಟು ಇಳುವರಿ ಹೆಚ್ಚು ಪಡೆಯಬಹುದು. ಇಲ್ಲಿ ತೋರಿಸಿರುವ ಚಿತ್ರ ಓರ್ವ ಅಡಿಕೆ  ಬೆಳೆಗಾರ ತನ್ನ ಅಡಿಕೆ  ತೋಟದಲ್ಲಿ ನೆಟ್ಟ ನಂತರ ಗುದ್ದಲಿ ಮುಟ್ಟಿಸಿಲ್ಲ. ಇಲ್ಲಿನ  ಇಳುವರಿ  ಮತ್ತು ಮರದ ಆರೋಗ್ಯ ಬೇರೆಲ್ಲೂ…

Read more
ಗೋಲ್ಡನ್ ಫ಼್ಹಿಶ್ ಅಕ್ವೇರಿಯಂ ಮೀನು

ಬಣ್ಣದ ಮೀನು ಸಾಕಾಣಿಕೆ -ಅದಾಯ ಕೊಡುವ ವೃತ್ತಿ.

ಅಲಂಕಾರಕ್ಕಾಗಿ ಮೀನು ಸಾಕುವುದೇ ಅಕ್ವೇರಿಯಂ. ಇದು ಕೃಷಿಕರಿಗೆ  ಹೊಂದುವ ಉಪ ವೃತ್ತಿ. ಪುರಾತನ ಕಾಲದಿಂದಲೂ ಜನ ಆನಂದಕ್ಕಾಗಿ ಮೀನು ಸಾಕಣೆ ಮಾಡುತ್ತಿದ್ದರು. ರಾಜ ಮಹಾರಾಜರ ಕಾಲದಿದಲೂ ಇದು ಇತ್ತು ಎನುತ್ತಾರೆ. ಈಗ ಅಕ್ವೇರಿಯಂ ಮನೆಗೆ ಒಂದು ವಾಸ್ತು ಜೊತೆಗೆ ಪ್ರತಿಷ್ಟೆಯ ವಿಚಾರ. ಅಕ್ವೇರಿಯಂ ಅಥವಾ ಬಣ್ಣದ ಮೀನಿನ ವ್ಯವಹಾರ ಎಂದರೆ  ಸಣ್ಣದೇನಲ್ಲ. ಪ್ರಪಂಚದಲ್ಲಿ ಇದು  30,000 ಕೋಟಿಯ ವ್ಯವಹಾರ. ಇದರಲ್ಲಿ ಭಾರತದ ಪಾಲು 0.008 % ಮಾತ್ರ.  ಅವಕಾಶ ಮಾತ್ರ. ನಮ್ಮ ದೇಶದಲ್ಲಿ  ಅಕ್ವೇರಿಯಂ ಒಳಗೆ ಸಾಕಬಹುದಾದ…

Read more

ಸಾವಯವ ಇಂಗಾಲ- ಇದು ಇದ್ದರೆ ಮಣ್ಣಿಗೆ ಬೇರೆ ಹೆಚ್ಚೇನೂ ಬೇಡ.

ಮಣ್ಣು ವಿಜ್ಞಾನಿಗಳು ಮಣ್ಣು ನೋಡಿ ಮೊದಲು ಹೇಳುವುದು ಈ ಮಣ್ಣಿನಲ್ಲಿ ಸಾವಯವ ಇಂಗಾಲ ಎಷ್ಟು ಇದೆ ಎಂಬುದನ್ನು. ಇದನ್ನು ಅನುಸರಿಸಿ ನಂತರದ ಸಲಹೆಗಳು. ಮಣ್ಣು ಯಾವ ಪೋಷಕಾಂಶ  ಹಾಕಿದರೂ ಅದು ಸಸ್ಯ ಸ್ವೀಕರಿಸಬೇಕಾದರೆ ಆದರಲ್ಲಿ ಇಂಗಾಲದ ಅಂಶ ಹೆಚ್ಚಿನ ಪ್ರಮಾಣದಲ್ಲಿ  ಇರಬೇಕು. ಈಗ ನಮ್ಮ ಸುತ್ತಮುತ್ತ ಮಾರಾಟವಾಗುತ್ತಿರುವ ವಿವಿಧ ಹೆಸರಿನ ಜೈವಿಕ ಗೊಬ್ಬರಗಳೂ ಕೆಲಸ ಮಾಡಿ ನಮಗೆ ತೃಪ್ತಿಕರ ಫಲಿತಾಂಶ ಕೊಡಬೇಕಿದ್ದರೆ ಮಣ್ಣಿನಲ್ಲಿ  ಕಾರ್ಬನ್ ( ಇಂಗಾಲ) ಅಂಶ ಹೇರಳವಾಗಿ ಇರಬೇಕು. ಹೀಗಿರುವಾಗ ನಾವು ಗೊಬ್ಬರ ಹಾಕುವುದಕ್ಕಿಂತ…

Read more
ತೋಟದಲ್ಲಿ ಫಸಲು ಕಡಿಮೆ- ರೋಗ ಹೆಚ್ಚಾಗಲು ಕಾರಣ

ತೋಟದಲ್ಲಿ ಫಸಲು ಕಡಿಮೆ- ರೋಗ ಹೆಚ್ಚಾಗಲು ಕಾರಣ ಏನು? .

ಹೆಚ್ಚಿನ ಫಸಲು  ಪಡೆಯಲು ಕೇವಲ ಗೊಬ್ಬರ,ನೀರಾವರಿ ಮಾಡಿದರೆ ಸಾಲದು.  ಬೆಳೆಯ ಉತ್ಪಾದನೆ ಮತ್ತು ಆರೋಗ್ಯಕ್ಕಾಗಿ ಭೂಮಿಯನ್ನು ಸದಾ ಸುಸ್ಥಿತಿಯಲ್ಲಿ  ಇಟ್ಟುಕೊಳ್ಳಲೇ ಬೇಕು. ನೀರು ಹೆಚ್ಚಾಗುವುದರಿಂದ ಮಣ್ಣಿನ ಆರೋಗ್ಯ ಕೆಡುತ್ತದೆ. ಮಣ್ಣಿನ ಸ್ವಾಸ್ತ್ಥ್ಯ ಸುಧಾರಣೆಗೆ ನಾವು ಗೊಬ್ಬರ ಹಾಕುತ್ತೇವೆ, ಉಳುಮೆ ಮಾಡುತ್ತೇವೆ. ಆದರೆ ಇದರಿಂದ ಮಣ್ಣಿನ ಆರೋಗ್ಯ ಸುಧಾರಿಸುತ್ತದೆ ಎಂಬುದು ಭ್ರಮೆ. ಮಣ್ಣಿನಲ್ಲಿ ಸಮರ್ಪಕ ಹಬೆಯಾಡುವಿಕೆ, ಉಷ್ಣತೆಯ  ಸಮತೋಲನ, ಇದ್ದರೆ ಮಾತ್ರ ನಾವು ಕೊಡುವ ನೀರು, ಗೊಬ್ಬರ ಫಲ ಕೊಡುತ್ತದೆ. ಬಹಳ ಜನ ನನ್ನ ತೋಟದಲ್ಲಿ ನೀರು ನಿಲ್ಲುವುದಿಲ್ಲ,…

Read more
ಹತ್ತಿ ಕೋಡು- Cotton bulb

ಹತ್ತಿಯ ಎಲೆ ಕೆಂಪಗಾಗುವುದಕ್ಕೆ ಕಾರಣ ಮತ್ತು ಪರಿಹಾರ.

ಉತ್ತರ ಕರ್ನಾಟಕದ ಬಹುತೇಕ ಹತ್ತಿ ಬೆಳೆಯಲಾಗುವ ಪ್ರದೇಶಗಳಲ್ಲಿ ಎಲೆ ಕೆಂಪಾಗುವ ಸಮಸ್ಯೆ  ಹೆಚ್ಚುತಿದ್ದು, ರೈತರು ಇದು ರೋಗವೇ , ಯಾವ ರೋಗ ಎಂಬ ಆತಂಕದಲ್ಲಿ ಸ್ಥಳೀಯ ಬೀಜ, ಕೀಟನಾಶಕ ಮಾರಾಟಗಾರರ ಸಲಹೆ ಮೇರೆಗೆ ಅನವಶ್ಯಕ ಕೀಟ, ರೋಗನಾಶಕ ಬಳಸುತ್ತಿದ್ದಾರೆ. ವಾಸ್ತವವಾಗಿ ಇದು ರೋಗ , ಕೀಟ ಯಾವುದೂ ಅಲ್ಲ. ಬೇಸಾಯ ಕ್ರಮದಲ್ಲಿ ಇದನ್ನು ಸರಿ ಮಾಡಬಹುದು. ನಿರಂತರವಾಗಿ ಬೆಳೆ ಬೆಳೆಯುತ್ತಾ ಇರುವ ಪ್ರದೇಶಗಳಲ್ಲಿ ಸಹಜವಾಗಿ ಕೆಲವು ಪೊಷಕಾಂಶಗಳ ಕೊರತೆ ಕಂಡು ಬರುತ್ತದೆ. ಇದು ಆ ಬೆಳೆ ಈ…

Read more
ಚಾಲಿ ದರ ಸ್ವಲ್ಪ ಇಳಿಕೆ ಸಾಧ್ಯತೆ- ಕೆಂಪಡಿಕೆ ಮೆಲ್ಲಮೆಲ್ಲನೆ ಚೇತರಿಕೆ.

ಚಾಲಿ ದರ ಸ್ವಲ್ಪ ಇಳಿಕೆ ಸಾಧ್ಯತೆ- ಕೆಂಪಡಿಕೆ ಮೆಲ್ಲಮೆಲ್ಲನೆ ಚೇತರಿಕೆ.

ಚಾಲಿ ದರ ಸ್ವಲ್ಪ ಇಳಿಕೆ ಮಾಡಿಯಾದರೂ  ಬೆಳೆಗಾರರಿಂದ ಅಡಿಕೆ ಮಾರುಕಟ್ಟೆಗೆ ಬಿಡುವಂತೆ ಮಾಡುವ ಸಾದ್ಯತೆ ಇದೆ.   ಕರಾವಳಿಯಲ್ಲಿ ಅಡಿಕೆ ವ್ಯಾಪಾರಿಗಳಿಗೆ ಅಡಿಕೆ ಸಿಗುವುದಿಲ್ಲ ಎನ್ನುತ್ತಾರೆ. ಸಾಂಸ್ಥಿಕ  ಖರೀದಿದರಾರು ದಿನದ ಹೆಚ್ಚಿನ ಹೊತ್ತು ಸುಮ್ಮನೆ  ಕುಳಿತು  ಲೆಕ್ಕಪತ್ರ ನೋಡುವುದು, ಬೇಜಾರಾದರೆ ಮೊಬೈಲ್ ಸುದ್ದಿ ಓದುವುದು ಮಾಡುತ್ತಾ ಸಮಯಕಳೆಯುವ ಸ್ಥಿತಿ ಉಂಟಾಗಿದೆ. ಬೆಳೆಗಾರರು 500 ಆಗಿಯೇ ಆಗುತ್ತದೆ ಎಂದು  ಅಡಿಕೆ ಒಳಗಿಟ್ಟಿದ್ದಾರೆ. ಇನ್ನು ವ್ಯಾಪಾರಿ ತಂತ್ರಗಾರಿಕೆಯಿಂದ ಅಡಿಕೆ ಹೊರ ಬರುವಂತೆ ಮಾಡಬೇಕೇ ಹೊರತು ಬೇರೆ ದಾರಿ ಇಲ್ಲ. ವ್ಯಾಪಾರಿ ತಂತ್ರ…

Read more

ಕಳೆನಾಶಕ ಬಳಸುವಾಗ ವಹಿಸಬೇಕಾದ ಜಾಗ್ರತೆ.

  ಕೆಲವು ಜನ ರೌಂಡ್‍ಅಪ್ ಎಂದ ಕೂಡಲೆ ಭಯಭೀತರಾಗುತ್ತಾರೆ. ಒಬ್ಬೊಬ್ಬ ಒಂದೊಂದು ತರಹ ಮಾತಾಡುತ್ತಾರೆ.ಕೆಲವರಿಗಂತೂ ಈ ಹೆಸರು ಕೇಳಿದಾಕ್ಷಣ ಏನೋ ಅಲರ್ಜಿಯಾಗುತ್ತದೆ. ಬೇರೆ ಕಳೆನಾಶಕ ಆಗಬಹುದು, ಇದು ಬೇಡ ಎನ್ನುವವರೂ ಇದ್ದಾರೆ. ಎಲ್ಲಾ ಕಳೆನಾಶಕಗಳೂ ಒಂದೆ. ಕೆಲವು ನೇರ ಆಳಿಯ, ಕೆಲವು ಮಗಳ ಗಂಡ ಅಳಿಯ ಅಷ್ಟೇ ವ್ಯತ್ಯಾಸ. ಬಹುಷಃ ನಮ್ಮ ಜನ ಒಂದು ಸುದ್ದಿಯನ್ನು ಎಷ್ಟರ ಮಟ್ಟಿಗೆ ನಂಬುತ್ತಾರೆ ಎಂಬುದಕ್ಕೆ ಈ ಸುದ್ದಿಯೇ ಸಾಕ್ಷಿ. ಕೃಷಿಕರು- ಕೃಷಿ ಕೂಲಿ ಕಾರ್ಮಿಕರು, ದಾರಿ ಹೋಕರೂ ಸಹ ಕಳೆನಾಶಕ…

Read more
error: Content is protected !!