ಸಾವಯವ ತ್ಯಾಜ್ಯ ಹುಡಿ ಮಾಡಬೇಕೇ? ಯಂತ್ರ ಬಾಡಿಗೆಗೆ ಇದೆ.

ಸಾವಯವ ತ್ಯಾಜ್ಯಗಳಾದ ತೆಂಗಿನ ಗರಿ, ಅಡಿಕೆ ಗರಿ ,ಸೊಪ್ಪು ಸದೆ ಇತ್ಯಾದಿಗಳನ್ನು  ಹುಡಿ ಮಾಡಿ ಬಳಕೆ ಮಾಡಿದರೆ ಅದು ವೇಗವಾಗಿ ಕರಗಿ ಗೊಬ್ಬರವಾಗುತ್ತದೆ. ಹೀಗೆ ಹುಡಿ ಮಾಡಲು ಯಂತ್ರಗಳು ಇವೆ. ಈ ಯಂತ್ರಗಳು ಭಾರೀಪ್ರಮಾಣದ ತ್ಯಾಜ್ಯಗಳನ್ನು  ಕೆಲವೇ ಗಂಟೆಗಳಲ್ಲಿ ಹುಡಿ ಮಾಡಿಕೊಡುತ್ತದೆ. ಪ್ರಸ್ತುತ ರೈತಾಪಿ ವರ್ಗದ ಜನರಿಗೆ ಸರ್ಕಾರವು ರಸಗೊಬ್ಬರದ ದರ ಏರಿಕೆ ಆಗಿರುವಂತಹ ಹಿನ್ನೆಲೆಯಲ್ಲಿ ದೇಶದ ಕೃಷಿ ಸಂಶೋಧನಾ ಅಧ್ಯಯನ ನಡೆಸಿ ಸಾವಯವ ಕೃಷಿಯನ್ನು ಅವಲಂಬಿಸಿದರೆ ಹೆಚ್ಚಿನ ಆದಾಯವನ್ನು ಗಳಿಸಬಹುದೆಂದು ಎಲ್ಲ ಪ್ರಗತಿಪರ ರೈತರು ಸಾವಯವ ಕೃಷಿಯನ್ನು…

Read more
ಕೆಂಪು ರಾಸಿ ಅಯದೆ ಇದ್ದದ್ದು

ಅಡಿಕೆ ಧಾರಣೆ ಸ್ಥಿತಿಗತಿ-ದಿನಾಂಕ 10-01-2022, ಚಾಲಿ ಚುರುಕು. ಕೆಂಪು ಸ್ಥಿರ.

ಹೊಸ ವರ್ಷದ ಎರಡನೇ ವಾರ 10-01-2022 ಅಡಿಕೆ ಧಾರಣೆ ಸ್ಥಿರವಾಗಿ ಮುಂದುವರಿದಿದೆ. ಚಾಲಿ ಅಡಿಕೆ ಮಾರುಕಟ್ಟೆಗೆ ಕ್ಯಾಂಪ್ಕೋ ಬೆಂಗಾವಲಾಗಿ ನಿಂತು ದರ ಕುಸಿಯದಂತೆ ಮಾಡಿದೆ. ಈ ವರ್ಷದಾದ್ಯಂತ ಅಡಿಕೆ ಧಾರಣೆ ಇದೇ ರೀತಿಯಲ್ಲಿ ಮುಂದುವರಿಯಲಿದೆ ಎನ್ನಲಾಗುತ್ತಿದೆ. ಕಳೆದ ವರ್ಷದ ದಾಖಲೆಯ ಬೆಲೆಯನ್ನು ಹಿಂದಿಕ್ಕಿ ಇನ್ನೂ ಏರುವ ಸಾಧ್ಯತೆ ಇದೆ ಎಂಬುದಾಗಿಯೂ  ಹೇಳುತ್ತಿದ್ದಾರೆ. ಈ ಸಮಯದ ದರ ಸ್ಥಿತಿಯನ್ನು ನೋಡಿದಾಗ ಹೊಸ ಚಾಲಿ ಧಾರಣೆ ಈ ವರ್ಷ 500 ದಾಟಬಹುದು, ಕೆಂಪು 50,000 ಮೀರಿ ಏರಿಕೆಯಾಗಬಹುದು ಎಂಬ ವದಂತಿಗಳಿವೆ….

Read more
ಅಡಿಕೆ ರಾಸಿ

ಮುಂದಿನ ತಿಂಗಳಲ್ಲಿ ಅಡಿಕೆ ಧಾರಣೆ ಹೇಗಾಗಬಹುದು?

ಜನವರಿ 2022 ಅಡಿಕೆ ಬೆಳೆಗಾರರು ಹೊಸ ಚಾಲಿ ಅದೂ ಸಾಧಾರಣ ಗುಣಮಟ್ಟದ ಅಡಿಕೆಗೆ ಕಿಲೋ 430-440  ತನಕ ಪೆಡೆದಿದ್ದರು. ಫೆಬ್ರವರಿಯಲ್ಲಿ ಧಾರಣೆ ಕುಂಟುತ್ತಾ  ಸಾಗಿದೆ.  ಕ್ಯಾಂಪ್ಕೋ ಬೆಂಬಲದಲ್ಲಿ ದರ ಬೀಳಲಿಲ್ಲ ಎನ್ನಲಾಗುತ್ತಿದೆ. ಖಾಸಗಿಯವರು ದರ ಇಳಿಸಿ, ನಾವು ಸ್ಪರ್ಧೆಗೆ ಇಲ್ಲ ಎಂದು ಹಿಂದೆ ಸರಿದಿದ್ದಾರೆ. ಈ ಎಲ್ಲಾ ಕಾರಣಗಳಿಂದ ಮುಂದಿನ ತಿಂಗಳು ಚಾಲಿ ಅಡಿಕೆ ದರ ಸ್ವಲ್ಪ ಹಿಂದೆ ಬರುವ ಸಾಧ್ಯತೆ ಕಂಡು ಬರುತ್ತಿದೆ. ಆದಾಗ್ಯೂ ಸ್ವಲ್ಪ ಪ್ರಮಾಣದಲ್ಲಿ  ಆಮದು ಆಗಿದೆಯಾದರೂ, ಇದನ್ನು ಸರಕಾರದ ಗಮನಕ್ಕೆ ತಂದು…

Read more
ಮಣ್ಣಿನ pH ಎಂದರೇನು? ಕಡಿಮೆ-ಹೆಚ್ಚು ಆದಾಗ ಏನಾಗುತ್ತದೆ?

 ಮಣ್ಣಿನ pH ಎಂದರೇನು? ಕಡಿಮೆ-ಹೆಚ್ಚು ಆದಾಗ ಏನಾಗುತ್ತದೆ?    

ಮಣ್ಣಿನ ಸಮಸ್ಥಿತಿಯನ್ನು ವೈಜ್ಞಾನಿಕ ಭಾಷೆಯಲ್ಲಿ pH (Potentila hydrogen) ಎಂಬುದಾಗಿ ಕರೆಯುತ್ತಾರೆ. ಇದನ್ನು ಕನ್ನಡದಲ್ಲಿ ರಸ ಸಾರ ಎಂಬುದಾಗಿ ಕರೆಯುತ್ತಾರೆ. ಹುಳಿ ಹೆಚ್ಚಾದರೆ  ಅದು  ಆಮ್ಲ,  ಸುಡುವಿಕೆ  ಆದರೆ ಅದು ಕ್ಷಾರ. ಇವೆರಡೂ ಆಗದಿದ್ದರೆ ಅದು ಸಮಸ್ಥಿತಿ. ಇದನ್ನು  ಸಹನಾ ಸ್ಥಿತಿ ಎಂಬುದಾಗಿ  ಹೇಳಬಹುದು.ಇದು ಮಣ್ಣಿಗೆ ಮಾತ್ರವಲ್ಲ. ಪ್ರತೀಯೊಂದು ಜೀವಿಗೂ ಇರುವಂತದ್ದು. ಮನುಷ್ಯನ ಶರೀರದಲ್ಲಿ ಜೊಲ್ಲು, ರಕ್ತ ಇವುಗಳಲ್ಲೂ ಆಮ್ಲ, ಕ್ಷಾರ, ಮತ್ತು ತಟಸ್ಥ ಎಂಬುದಿದೆ. ಮಣ್ಣು ಎಂಬುದು ಸಮಸ್ಥಿತಿಯಲ್ಲಿದ್ದರೆ ( nutral) ಅಲ್ಲಿ ಬೆಳೆಯುವ ಬೆಳೆಗೆ…

Read more
ಹೂ ಬೆಳೆದವರಿಗೂ ನಷ್ಟ ಮಾರುವವರಿಗೂ ನಷ್ಟ

ಕೃಷಿ ಕ್ಷೇತ್ರವನ್ನು ಬಗ್ಗು ಬಡಿಯಲಿದೆ ಕೊರೋನಾ ಮಹಾಮಾರಿ.

ಈಗಾಗಾಲೇ ಹಣ್ಣು ಹಂಪಲು, ಹೂವು, ತರಕಾರಿ ಬೆಳೆದ ರೈತರು ಭಾರೀ ನಷ್ಟ ಅನುಭವಿಸಿದ್ದಾರೆ. ಸದ್ಯವೇ ಹಾಲಿಗೆ ಬೇಡಿಕೆ ಕಡಿಮೆಯಾದ ಕಾರಣ ಹಾಲಿನ ಬೆಲೆಯೂ ಇಳಿಮುಖವಾಗುವ ಸೂಚನೆ ಇದೆ. ನಷ್ಟ ಭರ್ತಿಗಾಗಿ ಮತ್ತೆ ಅದೇ ಬೆಳೆ ಬೆಳೆಯುವ ಬದಲು ಆಹಾರ ಬೆಳೆಗಳ ಕಡೆಗೆ ಗಮನಹರಿಸುವುದು ಉತ್ತಮ. ಪರಿಸ್ಥಿತಿ ಸುಧಾರಣೆಯಾದ ನಂತರ ಇಂತಹ ಬೆಳೆಗಳನ್ನು ಬೆಳೆಸುವುದು ಸೂಕ್ತ.  ಕೊರೋನಾ ಮಹಾಮಾರಿ ಪ್ರಾರಂಭವಾಗಿ 3 ತಿಂಗಳು ಕಳೆದಿದೆ ಅಷ್ಟೇ . ಈ ತನಕ ಕೆಲವು ಬೆಳೆಗಾರರಿಗೆ ನಷ್ಟವಾಯಿತು. ಅದು ಮುಗಿದ ಸುದ್ದಿಯಾಯಿತು….

Read more

ಅಡಿಕೆ- ಬೆಲೆ ಏರಿಕೆಗೆ ಕಾಲ ಕೂಡಿಬಂದಿದೆ.

ಸಿದ್ದನಿಗೆ ಯಾವುದೇ ಕೆಲಸ ಇಲ್ಲ. ಮನೆಯಲ್ಲೇ ಠಿಖಾಣಿ. ಉದ್ಯೋಗಕ್ಕೆ ಹೋಗುವುದಕ್ಕೂ ಅವಕಾಶ ಇಲ್ಲ. ಮನೆಯಲ್ಲಿ ಕುಳಿತು ಬೋರು ಹೊಡೆಯುತ್ತಿದೆ. ಸರಕಾರ ಅಕ್ಕಿ ದಿನಸಿ ಮನೆಗೇ ಸರಬರಾಜು ಮಾಡಬಹುದು. ಇನ್ನು ಖರ್ಚಿಗೆ ಸಾಲವನ್ನೂ ಕೊಡಬಹುದು. ಕಾಲಹರಣ ಮಾಡುವ ಹೊತ್ತಿನಲ್ಲಿ ದಿನಕ್ಕೆ ಒಂದು ಗುಟ್ಕಾ ತಿನ್ನುವವ 2- 4  ತಿಂದರೂ ಅಚ್ಚರಿ ಇಲ್ಲ. ಮನುಷ್ಯನ ಮನಶಾಸ್ತ್ರ ಪ್ರಕಾರ ಚಟಕ್ಕೆ ಸಂಬಂಧಿಸಿದ ವಸ್ತುಗಳ ಬಳಕೆ ಹೆಚ್ಚಾಗುವುದು ಅವನಿಗೆ ಮಾಡಲು ಕೆಲಸ ಕಡಿಮೆ ಇದ್ದಾಗ. ಕೆಲಸದ ಒತ್ತಡಗಳ ಮಧ್ಯೆ ಚಟದ ನೆನಪಾಗುವುದಿಲ್ಲ. ಚಟದ…

Read more
ಅ ಸಾಮಾನ್ಯ ಮಳೆ

ಈಗ ಬಂದದ್ದು  ಸಾಮಾನ್ಯ ಮಳೆಯೇ? ಆಮ್ಲ ಮಳೆಯೇ?

ಮಳೆ ಎಂದರೆ ಮಳೆ ಅದರಲ್ಲಿ ವಿಶೇಷ ಏನಿದೆ? ಖಂಡಿತವಾಗಿಯೂ ಇದೆ. ಮಳೆ ನೀರು ಸಾಮಾನ್ಯ ನೀರಿನಂತೆ ಕಂಡರೂ ಅದರ ಗುಣ ವ್ಯತ್ಯಾಸಗಳು ಸಸ್ಯಗಳು , ಮನುಷ್ಯರು, ಪ್ರಾಣಿ ಪಕ್ಷಿಗಳು ಮತ್ತು ಸೂಕ್ಷ್ಮಾಣು ಜೀವಿಗಳ ಮೇಲೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತವೆ. ಈ ವರ್ಷದ ಮಳೆ ಅಂತಹ ಸನ್ನಿವೇಶವನ್ನು ಉಂಟು ಮಾಡಿದೆ. ಮಳೆ ಎಂಬುದು ಮೇಘ ಸ್ಪೋಟ ಆದಂತೆ ಬರುತ್ತಿದ್ದು, ಕಣ್ಣಿಗೆ ಕಾಣುವಂತ ಕೆಲವು ತೊಂದರೆಗಳು ಮತ್ತು ಕಣ್ಣಿಗೆ ಕಾಣದ ಕೆಲವು ತೊಂದರೆಗಳು ಉಂಟಾಗಿವೆ. ಈ ವರ್ಷದ…

Read more
silk cocoon decoration item

ಕೃಷಿಕರಿಗೆ ಇದು ಲಾಭದ ಸ್ವ ಉದ್ಯೊಗದ ಅವಕಾಶ

ಕೃಷಿಯ ವ್ಯವಸ್ಥೆಯೊಳಗೆ ಆದಾಯ ಹೆಚ್ಚಿಸಿಕೊಳ್ಳಲು ಎಷ್ಟೊಂದು ಅವಕಾಶಗಳಿವೆ.  ಇದನ್ನು ಬಳಸಿಕೊಂಡು ರೈತರು ತಮ್ಮ ಈಗಿನ ಆದಾಯವನ್ನು ದುಪ್ಪಟ್ಟು ಮಾಡಿಕೊಳ್ಳಲು ಸಾಧ್ಯವಿದೆ.  ಕೃಷಿ ಬರೇ ಕೃಷಿಕರನ್ನು ಮಾತ್ರ  ಬದುಕಿಸುವುದಲ್ಲ.  ಸಮಾಜದಲ್ಲಿ ಬಹಳಷ್ಟು ಜನರಿಗೆ  ಬದುಕು ನೀಡುವಂತದ್ದು ! ರೇಶ್ಮೆ ವ್ಯವಸಾಯ  ನಮ್ಮ ದೇಶದ ಅಸಂಖ್ಯಾತ ರೈತರಿಗೆ ಬದುಕು ನೀಡಿದ ಬೆಳೆ. ಹಿಪ್ಪು ನೇರಳೆ ಬೆಳೆ ಬೆಳೆಸಿ, ಅದರಲ್ಲಿ ಹುಳು ಸಾಕಿ ಅದರ ಗೂಡುಗಳನ್ನು  ಮಾರುಕಟ್ಟೆಗೆ  ಒಯ್ದು ಮಾರಾಟ ಮಾಡಿ ಸಂಪಾದನೆ  ಮಾಡುವುದು ಒಂದಾದರೆ, ಇದೇ ಗೂಡುಗಳಿಂದ ಬೇರೆ ಬೇರೆ…

Read more
ಹುಳ ತಿಂದು ಸತ್ತ ತೆಂಗಿನ ಮರ

ತೆಂಗಿನ ಮರಗಳು ಸಾಯುತ್ತಿರುವುದಕ್ಕೆ ಕಾರಣ ಏನು?

ಸಿಡಿಲು, ಸುಳಿ ಕೊಳೆ, ಅಥವಾ ಇನ್ನೇನಾದರೂ ಕೀಟ ಬಾಧೆಯಿಂದ ತೆಂಗಿನ ಮರ ಸತ್ತರೆ ಅದನ್ನು ತಕ್ಷಣ ಕಡಿದು ಏನಿಲ್ಲವಾದರೂ ಸೌದೆ ಮಾಡಿಯಾದರೂ ವಿಲೇವಾರಿ ಮಾಡಿ. ಹೆಚ್ಚಿನ ರೈತರು  ತೆಂಗಿನ ಮರ ಸತ್ತು ಹೋದರೆ ಅದರಿಂದ ನಮಗೇನು ನಷ್ಟ ಎಂದು ಅದನ್ನು ಹಾಗೆ  ಬಿಡುತ್ತಾರೆ. ಸತ್ತು ಒಣಗಿ ಶಿಥಿಲವಾದ ಮೇಲೆ ವಿಲೇವಾರಿ ಸುಲಭ ಎಂಬ ಕಾರಣಕ್ಕೆ ಹೀಗೆ ಮಾಡುತ್ತಾರೆ. ಆದರೆ ಸತ್ತ ಮರವನ್ನು ಹಾಗೇ ಬಿಟ್ಟರೆ ಮತ್ತೆ ಒಂದೆರಡು ಮರ ಸಸಿ ಸಾಯುತ್ತದೆ ಏಕೆ ಗೊತ್ತೇ? ನಮ್ಮಲ್ಲಿ ಹಿರಿಯರು…

Read more
error: Content is protected !!