ಟ್ರಯಾಂಡ್ರಾ ಅಡಿಕೆ ಗೊಂಚಲು

ಟ್ರಯಾಂಡ್ರಾ ಅಡಿಕೆ – ಇದು ಕಿಲೋ ರೂ. 300-350

ಅಡಿಕೆಯಲ್ಲಿ  ನಮಗೆ ಗೊತ್ತಿರುವಂತದ್ದದ್ದು ಒಂದೇ ಪ್ರಭೇದ. ಅಡಿಕೆಯಲ್ಲಿ  ಹಲವಾರು ಪ್ರಭೇದಗಳಿವೆ. ಅಂತದ್ದರಲ್ಲಿ ಒಂದು ಈ ಒಂದು ಸಣ್ಣ ಅಡಿಕೆ. ಇದನ್ನು  ಒಂದು  ರೀತಿಯಲ್ಲಿ ಕಾಡು ಅಡಿಕೆ ಎನ್ನಲೂ ಬಹುದು.  ನಾವೆಲ್ಲಾ ಬೆಳೆಯುವ ಅಡಿಕೆ ಅರೆಕಾ ಕಟೆಚು Areca catechu ಎಂಬ ವರ್ಗಕ್ಕೆ ಸೇರಿದ್ದು.   Arecaceae ಎಂಬ ಕುಟುಂಬದಲ್ಲಿ ಹಲವಾರು ಪ್ರಭೇಧಗಳಿವೆ. ಕರಾವಳಿ ಮಲೆನಾಡಿನ  ಜನ ಕಂಡಿರುವ ರಾಮ ಅಡಿಕೆ ಎಂಬ ಪ್ರಭೇಧ ಇದರಲ್ಲಿ ಒಂದು. ಹಾಗೆಯೇ ಇಲ್ಲಿ ಪರಿಚಯಿಸಲಾಗುತ್ತಿರುವ  “ಅರೆಕಾ ಟ್ರಯಾಂಡ್ರಾ” Areca triandra ಎಂಬುದು ಅಡಿಕೆಯ…

Read more
Jack Anil grafting specialist

ಹಲಸು- ಇವರಲ್ಲಿ ಇಲ್ಲದ್ದು ಬೇರೆ ಎಲ್ಲೂ ಇಲ್ಲ.

ಹಲಸಿನ ತಳಿಯ ಎಲೆಯನ್ನು ನೋಡಿ ಇದ್ದು ಇಂತದ್ದೇ ಹಲಸು, ಅದೇ ರೀತಿ ಯಾವುದೇ ಹಣ್ಣಿನ ಗಿಡದ ಎಲೆ ನೊಡಿಯೇ ಇದು ಇಂತದ್ದು ಎಂದು ಹೇಳುವವರು.  ಇದರ ಕಾಯಿ ಹೀಗೆಯೇ ಇರುತ್ತದೆ ಎಂದು ಹೇಳಬಲ್ಲರು. ಇದೆಲ್ಲಾ  ಅನುಭವ.  ಕೇರಳದಿಂದ ಬಂದ ಜಾಕ್ ಅನಿಲ್ ಈಗ ಹಲಸಿನ ಸಸ್ಯಾಭಿವೃದ್ದಿ ವಿಷಯದಲ್ಲಿ  ಬಹಳ ಪ್ರಸಿದ್ದಿ. ಕೇರಳದ ಜನ ಎಲ್ಲೇ ಹೋಗಲಿ ಗೆದ್ದು ಬರುತ್ತಾರೆ,ಅದಕ್ಕೆ ಖುಷಿ ಪಡಬೇಕು. ಕೇರಳದ ಜನ ಇಲ್ಲಿಗೆ ಬಂದು ನಮಗೆ ಶುಂಠಿ ಬೆಳೆಸಲು ಹೇಳಿ ಕೊಟ್ಟರು. ಹಾಗೆಯೇ ರಬ್ಬರ್…

Read more
ಸೂಕ್ಷ್ಮ ಪೋಷಕಾಂಶಗಳ ಸಿಂಪರಣೆ ಮತ್ತು ಬಳಕೆಯಿಂದ ಬೆಳೆದ ಅಡಿಕೆ ಸಸಿಗಳು.

ಸೂಕ್ಷ್ಮ ಪೋಷಕಾಂಶಗಳಿಂದ ಬೆಳೆಗಳು ನಳನಳಿಸುತ್ತದೆ- ಯಾಕೆ?

ಕೆಲವು ಬೆಳೆಗಳನ್ನು  ಬೆಳೆಯುವಾಗ ನೆಲಕ್ಕೆ ಬಿಸಿಲು ಬೀಳುವುದಿಲ್ಲ. ಜೊತೆಗೆ ಈಗ ಹಿಂದಿನಂತೆ ನಾವು ಬೇರೆ ಬೇರೆ ಹಸುರು ಸೊಪ್ಪು ಸದೆಗಳನ್ನೂ ಮಣ್ಣಿಗೆ ಸೇರಿಸುವುದಿಲ್ಲ. ಕೊಟ್ಟಿಗೆ ಗೊಬ್ಬರವನ್ನೂ ಕೊಡುವುದಿಲ್ಲ. ಕೆಲವರು ಕುರಿ ಹಿಕ್ಕೆ, ಮತ್ತೆ ಕೆಲವರು ಕೋಳಿ  ಹಿಕ್ಕೆ ಬಳಸುತ್ತಾರೆ. ಇದರಿಂದಾಗಿ ಮಣ್ಣಿನಲ್ಲಿ ಸೂಕ್ಷ್ಮ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಇದನ್ನು ಪೂರೈಸಲು ಬೇರೆ ಮೂಲಗಳಿಂದ ಈ ಪೋಷಕಗಳನ್ನು ಬಳಸುವುದು ಸೂಕ್ತ. ಅಡಿಕೆ ನಮ್ಮ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆ. ಇತ್ತೀಚಿನ  ಕೆಲವು ವರ್ಷಗಳಿಂದ ಅಡಿಕೆ ಧಾರಣೆ ಏರಿಕೆಯ ಗತಿಯಲ್ಲಿದ್ದು,…

Read more
ಅಡಿಕೆ ಮಾರುಕಟ್ಟೆ- ಕೆಂಪಡಿಕೆ ಹಿಂದೆ- ಚಾಲಿ ಮುಂದೆ.

 ಅಡಿಕೆ ಮಾರುಕಟ್ಟೆ- ಕೆಂಪಡಿಕೆ ಹಿಂದೆ- ಚಾಲಿ ಮುಂದೆ.   

ರಾಜ್ಯದ ಅಡಿಕೆ ಮಾರುಕಟ್ಟೆಯಲ್ಲಿ ದಿನಾಂಕ 11-08-2023ರ ಶುಕ್ರವಾರ ಒಟ್ಟು ಸುಮಾರು 425 ಟನ್  ಅಡಿಕೆ ವ್ಯವಹಾರ ನಡೆದಿದೆ. ಕಳೆದ ವಾರ ಯಾವುದೋ  ಸುದ್ದಿಯ ಕಾರಣಕ್ಕೆ ಕೆಂಪಡಿಕೆ ಧಾರಣೆಯಲ್ಲಿ  ಇಳಿಕೆ ಕಂಡು ಬಂತು. ಚಾಲಿ ಅಡಿಕೆಯ ಧಾರಣೆಯಲ್ಲಿ ಏರಿಕೆ ಆಗುತ್ತಾ ಇದೆ. ಆಗಸ್ಟ್  ತಿಂಗಳು ಸಪ್ಟೆಂಬರ್ ತಿಂಗಳಲ್ಲಿ ಇನ್ನೂ ಸ್ವಲ್ಪ ಏರಿಕೆ ಆಗಬಹುದು ಎಂಬ ಆಶಾಭಾವನೆ  ಮಾರಾಟಗಾರರ ಮಾಹಿತಿಯಿಂದ ಕೇಳಿ ಬರುತ್ತಿದೆ. ಕೆಂಪಡಿಕೆ ಧಾರಣೆ ಇಳಿಕೆ ತಾತ್ಕಾಲಿಕವಾಗಿದ್ದು, ತಿಂಗಳಾಂತ್ಯಕ್ಕೆ  ಇದೆ. ಕ್ವಿಂಟಾಲಿಗೆ ರೂ.1000 ದಷ್ಟಾದರೂ ಏರಬಹುದು ಎನ್ನುತ್ತಾರೆ. ಕಳೆದ…

Read more

ರೈತರ ಆದಾಯಕ್ಕೆ ಬ್ಲೇಡ್ ಹಾಕದಿದ್ದರೆ ಅದಾಯ ತಕ್ಷಣ ದ್ವಿಗುಣ.

ಭಾರತ ಸರಕಾರವು 2022 ವೇಳೆಗೆ  ದೇಶದ ರೈತರ ಆದಾಯ ದ್ವಿಗುಣಗೊಳಿಸುವ ಗುರಿಯನ್ನು ಹೊಂದಿರುವುದು ನಮೆಗೆಲ್ಲಾ ಗೊತ್ತಿದೆ. ಇದಕ್ಕೆ ಸಾಕಷ್ಟು ತಯಾರಿಗಳು ಆಗುತ್ತಿದೆ. ಈಗ ನಡೆಯುತ್ತಿರುವ ಪೂರ್ವ ತಯಾರಿಯಲ್ಲಿ ಯಾಕೋ ಭಾರತ ರೈತರ ಆದಾಯವು ದ್ವಿಗುಣಗೊಂಡರೂ ಸಹ ಅದು ಅವನಿಗೆ ಉಳಿಯಲಿಕ್ಕಿಲ್ಲವೇನೋ ಅನ್ನಿಸುತ್ತಿದೆ. ರೈತರ ಆದಾಯ ದ್ವಿಗುಣವಾಗುವುದು (doubling farmers‘ income) ಅನಿವಾರ್ಯ. ಅದರ ಅಗತ್ಯ ಆಡಳಿತ ನಡೆಸುವ ನಮ್ಮ ಮುಖಂಡರಿಗೆ ತಿಳುವಳಿಕೆಗ ಬಂದುದೂ ಸಹ ಸ್ವಾಗತಾರ್ಹ. ಯಾವಾಗಲೋ  ಅದನ್ನು ಸರಕಾರ  ಗಮನಿಸಿ ಅದಕ್ಕೆ ಬೇಕಾದ ಕಾರ್ಯಕ್ರಮಗಳನ್ನು  ಹಾಕಿಕೊಳ್ಳಬೇಕಿತ್ತು. ಈಗಲಾದರೂ…

Read more

ಕಾಡು ಪ್ರಾಣಿಗಳಿಗೆ ಇನ್ನು ಹೊಲವೇ ಖಾಯಂ ವಾಸ್ತವ್ಯ!

ಸರಕಾರ ಈಗ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದ್ದ ಸುಮಾರು 23 ಲಕ್ಷ ಎಕ್ರೆ ಅರಣ್ಯ ( ಡೀಮ್ದ್ ಫೋರೆಸ್ಟ್ )ನಲ್ಲಿ 15 ಲಕ್ಷ ಎಕರೆ  ಭೂಮಿಯನ್ನು ಸರಕಾರ ಕಂದಾಯ ಇಲಾಖೆಗೆ ವರ್ಗಾಯಿಸಲು ನಿರ್ಧರಿಸಿದೆ. ಈಗಲೇ ಅರಣ್ಯ ನಾಶದಿಂದ  ಕೃಷಿಕರ 10- 20 % ದಷ್ಟು ಬೆಳೆ ಕಾಡು ಪ್ರಾಣಿಗಳ ಪಾಲಾಗುತ್ತಿದೆ. ಒಂದು ವೇಳೆ ಇನ್ನೂ ಕಾಡು ಕಡಿಮೆಯಾದರೆ  ಕೃಷಿಕರ ಹೊಲದಲ್ಲೇ ಕಾಡು ಪ್ರಾಣಿಗಳು ವಾಸಮಾಡಬಹುದು. ಬೆಳೆಗಳು ಕೋತಿ, ಆನೆ ಕಾಡೆಮ್ಮೆಗಳ ಪಾಲಾಗಬಹುದು. ಹಟ್ಟಿಯಲ್ಲಿರುವ ಹಸುಗಳು ಹುಲಿ, ಚಿರತೆಯ ಪಾಲಾದರೂ…

Read more
ಕರಿಮೆಣಸು ಬಳ್ಳಿ ಸಾಯುತ್ತಿದೆಯೇ? ಈ ಕೀಟ ಇರಬಹುದು ಗಮನಿಸಿ.

ಕರಿಮೆಣಸು ಬಳ್ಳಿ ಸಾಯುತ್ತಿದೆಯೇ? ಈ  ಕೀಟ ಇರಬಹುದು ಗಮನಿಸಿ.

ಕರಿಮೆಣಸಿನ ಬಳ್ಳಿಗೆ ರೋಗ ಬರುತ್ತದೆ. ಇದರಿಂದಾಗಿ ಬಳ್ಳಿ ಸಾಯುತ್ತದೆ ಎಂಬುದು ನಮಗೆಲ್ಲಾ ಗೊತ್ತಿರುವ ವಿಚಾರ. ಆದರೆ ರೋಗ ಬಂದು ಬಳ್ಳಿ ಸಾಯುವುದಲ್ಲದೆ ಕೀಟದ ಕಾರಣದಿಂದಲೂ ಬಳ್ಳಿ ಸಾಯುತ್ತದೆ. ಇದು ಹರಡುವ ಕೀಟವಾಗಿದ್ದು, ರೋಗದಿಂದ ಬಳ್ಳಿ ಒಣಗಿದಂತೆ ಇದರಿಂದಲೂ ಒಣಗುತ್ತದೆ. ಕರೆಗಳೂ ಉದುರುತ್ತದೆ. ಎಲೆಗಳೂ ಉದುರುತ್ತದೆ. ಈ ಬಗ್ಗೆ ಮಾಹಿತಿ ಇಲ್ಲಿದೆ. ಗದ್ದೆ ಬೇಸಾಯ ಮಾಡುವವರಿಗೆ ಬೇಸಾಯ ಕೈ ಹಿಡಿಯಬೇಕಿದ್ದರೆ ದಿನಾ ಗದ್ದೆಗೆ ಸುತ್ತು ಬರಬೇಕಂತೆ. ಅದಕ್ಕಾಗಿಯೇ ಗದ್ದೆಗೆ ಹುಣಿಯೂ ಇರುತ್ತದೆ. ಉತ್ತಮ ಬೇಸಾಯಗಾರರು ಬೆಳಗ್ಗಿನ ಹೊತ್ತು ಗದ್ದೆಗೆ…

Read more
farmers grow but price fixed by others

ಕೃಷಿಕರ ಆದಾಯ ದ್ವಿಗುಣವಾಗಲೇ ಇಲ್ಲ –ಯಾಕೆ?

ಸರಕಾರ ಕೃಷಿಕರ ಆದಾಯ ದುಪ್ಪಟ್ಟಾಗಬೇಕು ಎಂದು ಕಾರ್ಯಕ್ರಮಗಳನ್ನು ಹಾಕಿಕೊಂದಂತೆ ದೇಶದಲ್ಲಿ ರೈತರ ಆದಾಯ ಕುಂಠಿತವಾಗುತ್ತಲೇ  ಬರುತ್ತಿದೆ. ಇತ್ತೀಚೆಗೆ ಎಲ್ಲೋ ಖ್ಯಾತ ರೈತ ಪರ ಹೋರಾಟಗಾರರಾದ ಶ್ರೀ ದೇವೇಂದ್ರ ಶರ್ಮ ಇವರು ಹೇಳಿಕೆಕೊಟ್ಟದ್ದು ಗಮನಿಸಿದ್ದೆ. ಇವರು ಹೇಳುತ್ತಾರೆ ಸರಕಾರ ಗ್ರಹಿಸಿದಂತೆ ಆದಾಯ ಹೆಚ್ಚಳವಾಗುವ ಬದಲಿಗೆ ಕಡಿಮೆಯೇ ಆಗುತ್ತಿದೆಯಂತೆ. ಅಷ್ಟೇ ಅಲ್ಲ. ಕೃಷಿಕರ ಆದಾಯವನ್ನು ಕೃಷಿ ನಿರ್ವಹಣೆಯೇ ತಿಂದು ಹಾಕುತ್ತಿದೆಯಂತೆ. ಈ ಬಗ್ಗೆ ಅವರು ಕೊಡುವ ಕೆಲವು ಲೆಕ್ಕಾಚಾರಗಳು ಹೀಗಿವೆ. ನಮ್ಮ ದೇಶದಲ್ಲಿ ಕೃಷಿ ಹೊಲದ ಮಾಲಿಕನಿಗಿಂತ ಕೃಷಿ ಕೂಲಿ…

Read more

ಸಾವಯವ ಅಂಶ ಇಲ್ಲದಿದ್ದರೆ ಬೆಳೆ ಬರಲಾರದು.

ಕೃಷಿ ಮಾಡುವಾಗ ರಾಸಾಯನಿಕ ಗೊಬ್ಬರ ಒಂದನ್ನೇ ಮಣ್ಣಿಗೆ ಕೊಡುತ್ತಾ ಇದ್ದರೆ, ನಿಧಾನವಾಗಿ ಮಣ್ಣಿನ ರಚನೆ ಕೆಳಮಟ್ಟಕ್ಕೆ ಇಳಿಯುತ್ತದೆ. ಮಣ್ಣಿನ ರಚನೆ ವ್ಯತ್ಯಾಸವಾದರೆ ರಸಗೊಬ್ಬರಗಳು ಕೆಲಸ ಮಾಡುವುದಿಲ್ಲ. ಯಾವುದೇ ರಸ ಗೊಬ್ಬರಗಳನ್ನು ನೇರವಾಗಿ ಸಸ್ಯಗಳು ಬಳಕೆ ಮಾಡಿಕೊಳ್ಳಲಾರವು. ಮಣ್ಣಿನ ಜೀವಾಣುಗಳ ಸಹಕಾರದಿಂದ ಅವು ಸಸ್ಯಗಳಿಗೆ ಲಭ್ಯವಾಗುತ್ತದೆ. ಮಣ್ಣಿನಲ್ಲಿ ಜೀವಾಣುಗಳು ಇದ್ದರೆ ಅದು ಜೀರ್ಣಕ್ಕೊಳಪಡುತ್ತದೆ. ಫಲವತ್ತತೆ ಕಡಿಮೆಯಾದ ಮಣ್ಣಿನಲ್ಲಿ ಜೀವಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ. ಆಗ ರಸ ಗೊಬ್ಬರಗಳ ಕ್ಷಮತೆಯೂ ಕಡಿಮೆಯಾಗುತ್ತದೆ. ಆದ ಕಾರಣ ಅಧಿಕ ಇಳುವರಿಗೆ  ಅಗತ್ಯವಿದ್ದರೆ ರಸಗೊಬ್ಬರ ಹಿತ…

Read more
ಸಾವಯವ- ನೈಸರ್ಗಿಕ ಕೃಷಿ

ಸಾವಯವ- ನೈಸರ್ಗಿಕ ಕೃಷಿಗೆ ಬನ್ನಿ- ಸರಕಾರಕ್ಕೆ 2.10 ಲಕ್ಷ ಕೋಟಿ ಉಳಿಸಿ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ವಾತಂತ್ರದ ಅಮೃತ ಮಹೋತ್ಸವದ ಸಂದರ್ಭದ  ಭಾಷಣದಲ್ಲಿ ಕೃಷಿಕರಿಗೆ ನೀಡಿದ ಸಂದೇಶ ಸಾವಯವ – ನೈಸರ್ಗಿಕ ಕೃಷಿಗೆ ಬದಲಾಗಿ ದೇಶಕ್ಕೆ ಲಕ್ಷಾಂತರ ಕೋಟಿ ಉಳಿಸಿ ಎಂದು. ಪ್ರಧಾನಿಗಳ ಆಶಯ ಸರಿ. ದೇಶ ಈಗಾಗಲೇ ಕೃಷಿಗಾಗಿ ಬಳಕೆಮಾಡುವ ರಸಗೊಬ್ಬರವನ್ನು ಆಮದು ಮಾಡಿಕೊಳ್ಳುವುದಕ್ಕಾಗಿ 2.10 ಲಕ್ಷ ಕೋಟಿ ಹಣವನ್ನು ವಿದೇಶಗಳಿಗೆ ಸಂದಾಯ ಮಾಡುತ್ತದೆ. ದೇಶದಲ್ಲಿ ಬಹುಷಃ ರಸಗೊಬ್ಬರ ತಯಾರಾಗುವುದಿಲ್ಲ. ವಿದೇಶಗಳಿಂದ ಕಚ್ಚಾ  ಸಾಮಾಗ್ರಿಗಳನ್ನು ತಂದು ಇಲ್ಲಿ ಪ್ಯಾಕಿಂಗ್ ಮಾಡಿ ರೈತರಿಗೆ ಒದಗಿಸಲಾಗುತ್ತದೆ ಎನ್ನಿಸುತ್ತದೆ. ಪ್ರಧಾನ ಮಂತ್ರಿಗಳಲ್ಲ,…

Read more
error: Content is protected !!