ಅನನಾಸು ತೋಟ

ಅನನಾಸು – ಹಣ್ಣಿನ ಬೆಳೆಗಳಲ್ಲಿ ಇದು ಸುಲಭದ್ದು.

ಪರಂಗಿ ಹಣ್ಣು ಎಂಬ ಹೆಸರಿನ ಅನನಾಸು ಕರಾವಳಿ ಒಳನಾಡು ಪ್ರದೇಶದ ಬೌಗೋಳಿಕತೆಗೆ ಹೊಂದಿಕೆಯಾಗುವ ಹಣ್ಣಿನ ಬೆಳೆ. ಜನ ಪರಂಗಿ ಹಣ್ಣು ಬೆಳೆಯಲು ರೈತರು ಅದುಹಾಕುತ್ತಾರೆ , ಇದು ಹಾಕುತ್ತಾರೆ, ರಾಸಾಯನಿಕ ಎಂಬಿತ್ಯಾದಿ ಹೇಳುತ್ತಾರೆ. ಇದೆಲ್ಲಾ ಸುಳ್ಳು. ಈ ಗಿಡದ ಎಲ್ಲಾ ಶರೀರ ಪ್ರಕೃತಿ ಬರ ಸಹಿಷ್ಣು. ಇದಕ್ಕೆ ಬೇರೆ ಬೆಳೆಗೆ ಗೊಬ್ಬರ ಕೊಟ್ಟಂತೆ ಕೊಡಲಿಕ್ಕೆ ಕಷ್ಟ.ಅಷ್ಟು ಪ್ರಮಾಣದಲ್ಲಿ ಗೊಬ್ಬರವೂ ಬೇಡ. ಅದಕ್ಕಾಗಿ ಬೆಳೆಯುವವರು ಸದಾ ಪೋಶಕಾಂಶಗಳನ್ನು ಕಡಿಮೆ ತೀರಾ ಕಡಿಮೆ ಸಾಂದ್ರತೆಯಲ್ಲಿ ಎಲೆಗಳಿಗೆ ಸಿಂಪಡಿಸುತ್ತಾರೆ. ಇದನ್ನೇ ದೂರದಿಂದ…

Read more
ಅರ್ಕಾ ರಕ್ಶಕ್ ಟೊಮಾಟೋ

ರೋಗರಹಿತ ಟೊಮಾಟೋ ತಳಿ ಬೆಳೆಸಿ – ನಿಶ್ಚಿಂತರಾಗಿರಿ.

ಟೊಮಾಟೋ ಬೆಳೆಗಾರರ ನಿದ್ದೆಗೆಡಿಸುವ ರೋಗವಾದ ಎಲೆ ಮುರುಟು ರೋಗ, ಸೊರಗು ರೋಗ, ಹಾಗೂ ಎಲೆ ಚುಕ್ಕೆ ರೋಗಕ್ಕೆ ಔಷದೋಪಾಚಾರ ಮಾಡುವುದಕ್ಕಿಂತ ರೋಗ ನಿರೋಧಕ ತಳಿ ಬೆಳೆಯುವುದೇ ಲೇಸು. ಟೊಮೆಟೋ ನಮ್ಮ ರಾಜ್ಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಬೆಳೆಸಲಾಗುವ ತರಕಾರಿಯಾಗಿದ್ದು, ಎಲ್ಲಾ ಬೆಳೆಗಾರರೂ  ಈ ಬೆಳೆಯನ್ನು ಉಳಿಸಿಕೊಳ್ಳಲಿಕ್ಕಾಗಿ ಕೀಟನಾಶಕ – ರೋಗನಾಶಕಗಳಿಗಾಗಿ ಮಾಡುವ ಖರ್ಚು ಉಳಿತಾಯವಾದರೆ ಬೆಳೆಗಾರರಿಗೆ ಖಂಡಿತವಾಗಿಯೂ ಲಾಭವಾಗುತ್ತದೆ. ಕೀಟ ರೋಗಗಳನ್ನು ಬಾರದಂತೆ ಮಾಡಲಿಕ್ಕೂ ಕೀಟ ನಾಶಕ – ರೋಗ ನಾಶಕ ಬೇಕು. ಬಂದ ನಂತರ ಓಡಿಸಲಿಕ್ಕೂ ಇದು…

Read more
ಒಣ ದ್ರಾಕ್ಷಿ

ದ್ರಾಕ್ಷಿ ಬೆಳೆಗಾರ ಸಂಕಷ್ಟಕ್ಕೆ ಉತ್ತರ – ಒಣ ದ್ರಾಕ್ಷಿ.

ಮಣಕ ಅಥವಾ ಒಣ ದ್ರಾಕ್ಷಿ  ಮಾಡಿದರೆ ಅದನ್ನು ಹೆಚ್ಚು ಸಮಯದ ತನಕ ದಾಸ್ತಾನು ಇಟ್ಟು ಮಾರಾಟ ಮಾಡಬಹುದು. ಇದಕ್ಕೆ ಮಧ್ಯವರ್ತಿಗಳು, ದಾಸ್ತಾನುಗಾರರು, ಚಿಲ್ಲರೆ ಮಾರಾಟಗಾರರು ಬೇಕಾಗಿಲ್ಲ. ನೀವು  ಬುದ್ದಿವಂತರಾಗಿದ್ದರೆ ಆನ್ ಲೈನ್ ಮೂಲಕ ನೇರವಾಗಿ ಗ್ರಾಹಕರಿಗೆ  ಮಾರಾಟ ಮಾಡಬಹುದು. ಸರಕಾರ ದ್ರಾಕ್ಷಿ ಬೆಳೆಗಾರರ ಸಮಸ್ಯೆ ನಿವಾರಣೆಗೆ ವೈನರಿಯನ್ನು ಎಲ್ಲಾ ತೆರೆಯುವಂತೆ ಸೂಚಿಸಿದೆಯಂತೆ. ಈ ವೈನರಿಗಳು ಕೊಡುವ ಬೆಲೆ ಬರೇ ಜುಜುಬಿ. ಅದರ ಬದಲು ಮಣಕ ಮಾಡಿದರೆ ಲಾಭ ಹೆಚ್ಚು. ಉತ್ತರ ಕರ್ನಾಟಕದ ಬಿಜಾಪುರ, ಬಾಗಲಕೊಟೆಯ ದ್ರಾಕ್ಷಿ ಬೆಳೆಗಾರರು…

Read more
ಮಂಗಳ ಆಡಿಕೆ

ಜಲ್ಲಿ ಮಂಗಳ ಎಂಬ ಹೊಸ ತಳಿ ಇದೆಯೇ?

ಮಂಗಳ ಎಂಬ ತಳಿಯನ್ನು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯು 1972 ರಲ್ಲಿ ಚೀನಾ ದಿಂದ ಮೂಲ ತಂದು ಇಲ್ಲಿ ಅಭಿವೃದ್ದಿಪಡಿಸಿದ್ದು ಬಿಟ್ಟರೆ, ಈ ತನಕ ಬೇರೆ ಮಂಗಳ ತಳಿಯನ್ನು ಬಿಡುಗಡೆ ಮಾಡಿಲ್ಲ. ಅದರ ಮೂಲ ಗುಣ ಕ್ಷೀಣವಾದುದಕ್ಕೆ ಅದರಲ್ಲೇ ಆಂತರಿಕ ಕ್ರಾಸಿಂಗ್  ಮಾಡಿ ಇಂಟರ್ ಮಂಗಳವನ್ನು 1984 ರಲ್ಲಿ ಪಡೆಯಯಲಾಗಿದೆ.  ಚೀನಾದಲ್ಲಿ ಇದಕ್ಕೆ ಯಾವ ಹೆಸರಿತ್ತೋ ಗೊತ್ತಿಲ್ಲ. ಇಲ್ಲಿ ಅಭಿವೃದ್ದಿಪಡಿಸಿ ಬಿಡುಗಡೆ ಮಾಡುವಾಗ ಮಂಗಳ ಹೆಸರನ್ನು ನೀಡಲಾಗಿದೆ. ಹಾಗೆ ನೋಡಿದರೆ ಕೆಲವು ಚಾಲಿ ಅಡಿಕೆಗೆ ಹೊಂದುವ…

Read more

ಪ್ರಗತಿಪರ ಕೃಷಿಕ- ಹರಿಶ್ಚಂದ್ರ ಶೆಟ್ಟಿಯವರು ನಮ್ಮನ್ನು ಅಗಲಿದ್ದಾರೆ.

ಪುತ್ತೂರು ತಾಲೂಕು ಇಚಿಲಂಪಾಡಿಯಲ್ಲಿ ಹಲವಾರು ವರ್ಷಗಳಿಂದ ಕೃಷಿ ಮಾಡುತ್ತಿದ್ದು, ಆಧುನಿಕ ಚಿಂತನೆಯ ಕೃಷಿ ಮೂಲಕ ಹೆಸರು ಮಾಡಿದ್ದ ಹಿರಿಯ ಕೃಷಿಕ, ಹರಿಶ್ಚಂದ್ರ ಶೆಟ್ಟಿ ಇವರು ನಮ್ಮನ್ನು ಅಗಲಿದ್ದಾರೆ. ಕೃಷಿ ವೃತ್ತಿಯನ್ನು  ಲಾಭದಾಯಕವಾಗಿ  ಹೇಗೆ ಮುನ್ನಡೆಸಬಹುದು ಎಂಬುದಕ್ಕೆ ಮಾದರಿಯಾಗಿದ್ದ ಶ್ರೀಯುತರು ತಮ್ಮ ಕೃಷಿ ಭೂಮಿಯಲ್ಲಿ ವೈವಿದ್ಯಮಯ ಬೆಳೆಗಳನ್ನು ಬೆಳೆಯುವ ಮೂಲಕ ಕೃಷಿಯ ಆದಾಯವನ್ನು  ಹೆಚ್ಚಿಸಿಕೊಂಡು ಎಲ್ಲರಿಗೂ ಮಾದರಿಯಾಗಿದ್ದವರು. ಇವರು ಕೈಯಾಡಿಸದ ಕೃಷಿಯೇ ಇಲ್ಲ. ಜನೋಪಾಕಾರಿಯಾಗಿದ್ದವರು, ಎಲ್ಲರಿಗೂ ಮಾರ್ಗದರ್ಶಕರಾಗಿದ್ದ ಇವರು ಅಲ್ಪ ಕಾಲದ ಅನಾರೋಗ್ಯದಿಂದ ಇಂದು ಬೆಳಗ್ಗೆ (23-03-2021 ಮಂಗಳವಾರ) …

Read more
ಉತ್ತಮ ಲಕ್ಷಣದ ಹಸು

ಉತ್ತಮ ಹಸುವಿನ ಆಯ್ಕೆಗೆ ಸೂಕ್ಷ್ಮ ಪರೀಕ್ಷೆಗಳು.

ಕೊಳ್ಳುವ ಹಸು ಮಾಲಕರು ಹೇಳಿದಂತೆ ಹಾಲು ಕೊಡುತ್ತದೆಯೇ, ಅವರು ಹೇಳುವುದರಲ್ಲಿ ಸತ್ಯ ಇದೆಯೇ ಎಂಬುದನ್ನು ಕೊಳ್ಳುವವರು ಪರೀಕ್ಷೆ ಮಾಡುವುದು ಅವನ ಹಕ್ಕು. ಇದಕ್ಕೆ ಕೊಡುವವರು ಆಕ್ಷೇಪ ಮಾಡಬಾರದು. ಹಾಲಿನ ಪರೀಕ್ಷೆ ಮತ್ತು ಹಾಲು ಹಿಂಡುವಾಗಿನ ಕೆಲವು ಪರೀಕ್ಷೆಗಳನ್ನು ಮಾಡಿ ಹಸುಕೊಂಡರೆ ಒಳ್ಳೆಯದು. ಹಾಲು ಇಳುವರಿ ಪರೀಕ್ಷೆ : ಹಸುವಿನಿಂದ ಒಂದೂವರೆ ದಿನದಲ್ಲಿ 3 ಬಾರಿ ಹಾಲನ್ನು ಕರೆದು, ದಿನಕ್ಕೆ ಎಷ್ಟು ಹಾಲು ಕೊಡುತ್ತದೆಂದು ತಿಳಿದುಕೊಳ್ಳಬಹುದು. ಹಸು ಬೇಗ ಹಾಲು ತೊರೆ ಬಿಡಬೇಕು. ಮೊಲೆಗಳು ಗಟ್ಟಿಯಾಗಿರಬಾರದು. ನಾಲ್ಕು ಮೊಲೆಗಳಿಂದ…

Read more
ಬೇರು ಮೇಲೆ ಬಂದ ಅಡಿಕೆ ಗಿಡ

ಅಡಿಕೆ ಮರದ ಬೇರುಗಳು ಮೇಲೆ ಬರುವುದಕ್ಕೆ ಕಾರಣ ಇದು.

ಅಡಿಕೆ ಮರಗಳ ಬೇರು ಮೇಲೆ ಬರಬಾರದು ಎಂದು  ಕರಾವಳಿ ಮಲೆನಾಡಿನ ಬಹುತೇಕ ಬೆಳೆಗಾರರು ಹೊಂಡ ಮಾಡಿ ಸಸಿ ನೆಡುತ್ತಾರೆ. ಎಷ್ಟೇ ಹೊಂಡ ಮಾಡಿದರೂ ಮರ ಬೆಳೆದಂತೆ ಬೇರು ಮೇಲೆ ಬರಲಾರಂಭಿಸುತ್ತದೆ.  ನೆಲಮಟ್ಟದಿಂದ 1 ಅಡಿ ಮೇಲೆ ಬರುವುದೂ ಇದೆ. ಇದು ಯಾವುದೇ ರೋಗ ಅಲ್ಲ. ಇದಕ್ಕೆ ಕಾರಣ ಬೇರೆಯೇ ಇದೆ.  ಅಡಿಕೆ ಸಸ್ಯದ ಬೇರು ಮೇಲೆ ಬಂದಿದೆ ಎಂದರೆ ಮಣ್ಣಿನಲ್ಲಿ ಸಸ್ಯದ ಬೇರುಗಳ ಬೆಳವಣಿಗೆಗೆ ಏನೋ ಅಡ್ದಿ ಉಂಟಾಗಿದೆ ಎಂದರ್ಥ. ಒಮ್ಮೆ ಹುಟ್ಟಿದ ಬೇರು ಸಮರ್ಪಕವಾಗಿ ಬೆಳವಣಿಗೆ…

Read more
leaf de composing on field

ತೋಟಕ್ಕೆ ಸೊಪ್ಪು ಹಾಕಿ- ಮಣ್ಣಿನ ಆರೋಗ್ಯ ಹೆಚ್ಚಿಸಿ.

ತೋಟಕ್ಕೆ, ಗದ್ದೆಗೆ  ಹಾಗೆಯೇ ಇನ್ನಿತರ ಬೆಳೆಗಳಿಗೆ ಅನಾದಿ ಕಾಲದಿಂದಲೂ  ರೈತರು ಸೊಪ್ಪು ಹಾಕುತ್ತಿದ್ದರು. ಸೊಪ್ಪು ಹಾಕುವುದರಿಂದ ತುಂಬಾ ಪ್ರಯೋಜನ ಇದೆ. ಇದು ಉತ್ತಮ ಬೇಸಾಯ ಕ್ರಮ.ಮಣ್ಣಿನ ಸೂಕ್ಷ್ಮಾಣು ಜೀವಿಗಳ ಉತ್ತಮ ಕಾರ್ಯಚಟುವಟಿಕೆಗೆ ನೆರವಾಗಲು ಹಸುರೆಲೆ ಗೊಬ್ಬರ ಸಹಾಯಕ. ಸೊಪ್ಪು ಎಂದರೆ ಹಸುರೆಲೆ ಗೊಬ್ಬರ. ಹಸುರೆಲೆಗಳಲ್ಲಿ ಮುಖ್ಯ ಹಾಗೂ ಲಘು ಪೋಷಕಾಂಶಗಳು ಇರುವ ಕಾರಣ ಇದು ಕರಗಿ ಮಣ್ಣಿಗೆ ಸೇರಿ ಪೋಶಕಾಂಶಗಳನ್ನು ಬಿಡುಗಡೆ ಮಾಡುತ್ತದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಹಸಿ ಸೊಪ್ಪನ್ನು ಹಾಕುತ್ತಾರೆ. ಅದು ಮಳೆಗಾಲ ಕಳೆಯುವಾಗ ಕರಗಿ ಗೊಬ್ಬರವಾಗುತ್ತದೆ….

Read more
ಭತ್ತದ ಬೆಳೆ ಹೊಲದಲ್ಲಿ ನವೀನ್ ಚಂದ್ರ ಜೈನ್ -Naveen chandra jain

ಭತ್ತ ಬೆಳೆಯುವವರು ಒಮ್ಮೆ ಇವರ ಅನುಭವವನ್ನು ಕೇಳಿ.

ಯಾವುದೇ ಬೆಳೆ ನಷ್ಟದ ಬೆಳೆ ಅಲ್ಲ. ಬೆಳೆಯ ಪೂರ್ವಾಪರವನ್ನು ಅರಿತುಕೊಳ್ಳಬೇಕು. ಆಯಾ ಬೆಳೆಗೆ ಏನು ಬೇಕು, ಹೇಗೆ ಬೆಳೆಯಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ಸಂದೇಹಗಳನ್ನು ಸಂಕೋಚ ಇಲ್ಲದೆ ತಜ್ಞರ ಮೂಲಕ ತಿಳಿದುಕೊಳ್ಳಬೇಕು. ಆಗ ಬೆಳೆ ಕಷ್ಟವಾಗುವುದಿಲ್ಲ. ನಷ್ಟವೂ ಆಗುವುದಿಲ್ಲ. ಯಾವುದರಲ್ಲೂ ಅದು ಕೃಷಿ ಇರಲಿ, ಉದ್ದಿಮೆ ಇರಲಿ, ನಷ್ಟ  ಆಗುವುದಲ್ಲ. ನಾವು ಮಾಡಿಕೊಳ್ಳುವುದು. ಇದು ನಿಟ್ಟೆ ಗುತ್ತು ನವೀನ್ ಚಂದ್ರ ಜೈನ್ ಅವರ ಅನುಭವ. ಇವರು ಎಲ್ ಎಲ್ ಬಿ ವ್ಯಾಸಂಗ ಮಾಡಿ ಆಯ್ಕೆ ಮಾಡಿಕೊಂಡದ್ದು ಕೃಷಿ ವೃತ್ತಿಯನ್ನು….

Read more
ಬೆಳೆಗಾರರು ತಪ್ಪದೆ ಗಮನಿಸಿ – ಈ ಸಸಿಗಳು ಚೆನ್ನಾಗಿ ಬೆಳೆಯುತ್ತವೆ?.

ಬೆಳೆಗಾರರು ತಪ್ಪದೆ ಗಮನಿಸಿ – ಈ ಸಸಿಗಳು ಚೆನ್ನಾಗಿ ಬೆಳೆಯುತ್ತವೆ?.

ಅಡಿಕೆ ತೆಂಗು ಹಾಗೆಯೇ ಇನ್ನೂ ಕೆಲವು ಬೆಳೆ ಬೆಳೆಯುವ ಬೆಳೆಗಾರರು ತಮ್ಮ ತೋಟದ ಒಳಗೆ ಒಮ್ಮೆ ಎಲ್ಲಾ ಮರ, ಸಸಿಗಳನ್ನು ಗಮನಿಸುತ್ತಾ ತಿರುಗಾಡಿ. ಅಲ್ಲಿ ನಮ್ಮ ಗಮನಕ್ಕೆ ಬರುವುದು ಬಿದ್ದ ಬೀಜ ನಮ್ಮ ಕಣ್ಣು ತಪ್ಪಿಸಿ ಅಲ್ಲೇ ಉಳಿದು ಮೊಳೆತು ಸಸಿಯಾಗಿರುವ “ಉರಲು ಹುಟ್ಟಿದ ಸಸಿ” ಎಷ್ಟೊಂದು ಚೆನ್ನಾಗಿ ಬೆಳೆಯುತ್ತದೆ, ಮತ್ತು ಅದರಲ್ಲಿ ಎಷ್ಟು ಚೆನ್ನಾಗಿ ಫಲ ಬರುತ್ತದೆ ಎಂಬ ಅಂಶ. ಇದು ಪ್ರತೀಯೊಬ್ಬ ಬೆಳೆಗಾರನ ತೋಟದಲ್ಲೂ ಕಾಣಲು ಸಿಗುತ್ತದೆ. ಮನಸ್ಸು ಹೇಳುತ್ತದೆ, ಊರಲು ಹುಟ್ಟಿದ ಸಸಿ…

Read more
error: Content is protected !!