ಝಿಂಕ್ ಬಳಸಿದರೆ ಸಸ್ಯ ಆರೋಗ್ಯ ಮತ್ತು ಫಸಲು ಹೆಚ್ಚುತ್ತದೆ.
ಬೆಳೆಗಳು ಆರೋಗ್ಯವಾಗಿದ್ದು, ಫಲಧಾರಣಾ ಶಕ್ತಿ ಉತ್ತಮವಾಗಿ, ಪೌಷ್ಟಿಕ ಫಲ ಕೊಡಲು ಸತು ಎಂಬ ಸೂಕ್ಷ್ಮ ಪೊಷಕಾಂಶ ಅಗತ್ಯವಾಗಿ ಬೇಕು ಎನ್ನುತ್ತಾರೆ ಬೆಳೆ ತಜ್ಞರು. ಇತ್ತೀಚೆಗೆ ಬೆಳೆ ತಜ್ಞರುಗಳು ಸತುವಿನ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಕೆಲವು ಗೊಬ್ಬರ ತಯಾರಕರು ತಮ್ಮ ಕೆಲವು ಗೊಬ್ಬರಗಳನ್ನು (ವಿಶೇಷವಾಗಿ ಡಿಎಪಿ) ಸತುವಿನ ಮೂಲಕ ಬ್ಲೆಂಡ್ ಮಾಡಿ ಕೊಡುತ್ತಾರೆ. ಕರ್ನಾಟಕ ಸರಕಾರದ ಕೃಷಿ ನಿಯಮಾವಳಿ ಪ್ರಕಾರ ಇಲ್ಲಿನ ಮಣ್ಣಿಗೆ ಸೂಕ್ಷ್ಮ ಪೋಷಕಾಂಶಗಳ ಜೊತೆಗೆ ಗರಿಷ್ಟ ಪ್ರಮಾಣ (3%) ದಲ್ಲಿ ಸತು ಸೇರಿಸಿರಬೇಕು. ಕರ್ನಾಟಕದ…